ಗ್ಯಾಸ್ ಹಾಗೂ ಅಸಿಡಿಟಿ ಮತ್ತು ಎದೆ ಉರಿ ಮತ್ತು ಹುಳಿತೇಗು ಹೋಗಿಸಲು ಇಲ್ಲಿದೆ ಒಂದು ಮನೆ ಮದ್ದು ಇದನ್ನು ನೀವು ಒಂದು ಸಾರಿ ಮಾಡಿದರೆ ಗ್ಯಾಸ್ ಆಗುವುದಿಲ್ಲ.ಹಾಯ್ ಫ್ರೆಂಡ್ಸ್ ಗ್ಯಾಸ್ ಹಾಗೂ ಅಸಿಡಿಟಿ ಅಂತಹ ಸಮಸ್ಯೆಗಳು ಇತ್ತೀಚಿಗೆ ತುಂಬಾ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ ಇದಕ್ಕೆ ಕಾರಣ ನಮ್ಮ ಜೀವನ ಶೈಲಿ ಹಾಗೂ ನಮ್ಮ ಆಹಾರ ಪದ್ಧತಿ. ಆಗಿನ ಕಾಲದಲ್ಲಿ ಬೆಳೆದ ಜೋಳಗಳು ಮುತ್ತಿನಂತೆ ಹೊಳೆಯುತ್ತಿದ್ದವು ಇದನ್ನು ಚೆನ್ನಾಗಿ ಬೀಸುತ್ತಿದ್ದರು ಆದರೆ ಈಗಿನ ಕಾಲದಲ್ಲಿ ರಸಗೊಬ್ಬರಗಳನ್ನು ಹಾಕಿ ಜೋಳವನ್ನು ಬೆಳೆಯುತ್ತಾರೆ ಎಲ್ಲಾ ಬೆಳೆಗಳನ್ನು ರಸಗೊಬ್ಬರಗಳನ್ನು ಹಾಕಿ ಬೆಳೆಯುತ್ತಾರೆ.
ಈ ರೀತಿಯಾಗಿ ಬೆಳೆದ ಬೆಳೆಗಳನ್ನು ನಾವು ಆಹಾರಕ್ಕೆ ಬಳಸಿ ತುಂಬಾ ಆರೋಗ್ಯವನ್ನು ಕೆಡಿಸಿ ಕೊಳ್ಳುತ್ತಿದ್ದೇವೆ ಆದರೆ ಇದು ಅನಿವಾರ್ಯವಾಗಿದೆ. ಸಾವಯುವ ಗೊಬ್ಬರಗಳನ್ನು ಹಾಕಿ ಬೆಳೆದ ಬೆಳೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಈಗ ಸಾವಯವ ಗೊಬ್ಬರ ಸಿಗುವುದು ಕಡಿಮೆ ಇದಕ್ಕೆ ತುಂಬಾ ಹೆಚ್ಚಿನ ಬೆಲೆ ಇದೆ. ನಾವು ತಿನ್ನುವ ತರಕಾರಿಗಳಲ್ಲೂ ಕೂಡ ರಸಗೊಬ್ಬರ ಇದೆ ಅದಕ್ಕೆ ನಾವು ಎರಡು ಬಾರಿ ತೊಳೆಯುವುದು ಉತ್ತಮ. ನಾವು ಎಷ್ಟೇ ತೊಳೆದು ತಿಂದರು ಅದರಲ್ಲಿರುವ ಅಂಶ ನಮ್ಮ ದೇಹವನ್ನು ಸೇರಿ ಇಂತಹ ರೋಗಗಳನ್ನು ಸೃಷ್ಟಿ ಮಾಡುತ್ತವೆ
ಆದರೆ ನಾವು ತರಕಾರಿ ಹಾಗೂ ಜೋಳ ಗೋಧಿ ರಾಗಿ ಎಲ್ಲವನ್ನು ಬಿಟ್ಟು ಬೇರೆ ತಿನ್ನುವುದಕ್ಕೆ ಆಗುವುದಿಲ್ಲ ತಿನ್ನುವುದು ನಮಗೆ ಅನಿವಾರ್ಯವಾಗಿದೆ. ಇಂತಹ ಎಲ್ಲಾ ರೋಗಗಳಿಗೆ ನಾವು ಪರಿಹಾರವನ್ನು ಹುಡುಕುವುದು ಮಾತ್ರ ಬಿಡಬಾರದು ಹಾಗೂ ಪ್ರಯತ್ನವನ್ನು ಕೂಡ ಮಾಡಬೇಕು. ಗ್ಯಾಸ್ ಹಾಗೂ ಅಸಿಡಿಟಿ ಬಂದರೆ ಊಟ ಮಾಡಿದ್ದು ಏನು ಕರಗುವುದಿಲ್ಲ ಹಾಗೆಯೇ ಉಂಡಿದ್ದೆಲ್ಲ ಗಂಟಲಲ್ಲಿ ಸಿಕ್ಕಿಹಾಕಿಕೊಂಡಂತೆ ಆಗುತ್ತದೆ ಇದರಿಂದಾಗಿ ನಮ್ಮ ಎದೆಯಲ್ಲಿ ಹುಳಿತೇಗು ಕಾಣಿಸಿಕೊಳ್ಳುತ್ತದೆ. ಗ್ಯಾಸ್ ಇದ್ದವರಿಗೆ ಜೀರ್ಣಾಂಗ ಕ್ರಿಯೆ ಕಡಿಮೆ ಆಗುತ್ತದೆ.
ಗ್ಯಾಸ್ ಹೊಟ್ಟೆಗೆ ಮಾತ್ರ ಬರುವುದಿಲ್ಲ ನಮ್ಮ ದೇಹದ ಎಲ್ಲಾ ಭಾಗಗಳಿಗೂ ಗ್ಯಾಸ್ ಎಂಬುದು ಸೃಷ್ಟಿಯಾಗಿದೆ. ಗ್ಯಾಸ್ ಹಾಗೂ ಅಸಿಡಿಟಿ ಆಗುವವರಿಗೆ ಚಿಕ್ಕದಾಗಿ ಪ್ರತಿನಿತ್ಯ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿರುತ್ತದೆ ಇದರಿಂದಾಗಿ ಅವರು ತುಂಬಾ ಸೊರಗಿ ಬಿಡುತ್ತಾರೆ. ಇದು ದೊಡ್ಡ ರೋಗವೇನಲ್ಲ ಆದರೆ ತುಂಬಾ ಪರಿಣಾಮಕಾರಿಯಾಗಿದೆ ಇದರಿಂದ ನಾವು ಊಟವನ್ನು ಸೇವಿಸುವುದು ಸಹ ತುಂಬಾ ಕಷ್ಟವಾಗುತ್ತದೆ. ಜೀರಿಗೆಯನ್ನು ಬಳಸುವುದರಿಂದ ನಾವು ಗ್ಯಾಸ್ ಅನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗಾದರೆ ಜೀರಿಗೆಯನ್ನು ಹೇಗೆ ಉಪಯೋಗಿಸಿಕೊಂಡು ಗ್ಯಾಸ್ ಗೆ ಪರಿಹಾರ ಮಾಡಬೇಕೆಂಬುದನ್ನು ಈಗ ನಾನು ತಿಳಿಸುತ್ತೇನೆ.
ಸ್ನೇಹಿತರೆ ಜೀರಿಗೆ ಮಸಾಲೆ ಪದಾರ್ಥಗಳಲ್ಲಿ ಒಂದು ಆದರೆ ಇದು ದೇಹಕ್ಕೆ ತಂಪನ್ನು ನೀಡುತ್ತದೆ. ಪ್ರತಿನಿತ್ಯ ಜೀರಿಗೆಯನ್ನು ಅಡುಗೆಯಲ್ಲಿ ಬಳಸುವುದರಿಂದ ನಾವು ತಂಪಾಗಿ ಇರುತ್ತೇವೆ ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆಯು ಕೂಡ ಚೆನ್ನಾಗಿರುತ್ತದೆ. ಜೀರಿಗೆಗೆ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿ ಪಡಿಸುವಂತಹ ಗುಣವಿದೆ ಹಾಗೆಯೇ ನಮ್ಮ ಕರುಳಿನ ಸಮಸ್ಯೆಯನ್ನು ಕೂಡ ಜೀರಿಗೆಯ ಕೊಡುತ್ತದೆ. ಕರುಳಿನ ಗೋಡೆಯಲ್ಲಿ ಇರುವ ಎಣ್ಣೆ ಜಿಡ್ಡನ್ನು ಜೀರಿಗೆಯಲ್ಲಿರುವ ಅಂಶವು ಹೋಗಿಸುತ್ತದೆ. ನಮ್ಮ ದೇಹಕ್ಕೆ ಜೀರ್ಣಾಂಗ ವ್ಯವಸ್ಥೆಗೆ ಬೇಕಾದ ಕಿಣ್ವಗಳನ್ನು ರಚಿಸಲು ಈ ಜೀರಿಗೆ ತುಂಬಾ ಸಹಕಾರಿಯಾಗಿದೆ ಇದರಿಂದಾಗಿ ಜೀರಿಗೆಯನ್ನು ಪ್ರತಿನಿತ್ಯ ಬಳಸುವುದು ತುಂಬಾ ಉಪಯೋಗ ಕೊಡುತ್ತದೆ.
ಸ್ನೇಹಿತರೆ ಒಂದು ಪಾತ್ರೆಯಲ್ಲಿ ಒಂದು ಕಪ್ ನಷ್ಟು ನೀರನ್ನು ಹಾಕಿ ಬಿಸಿ ಮಾಡಿ ನೀರು ಸ್ವಲ್ಪ ಮೇಲೆ ಜೀರಿಗೆಯನ್ನು ಅದರಲ್ಲಿ ಹಾಕಬೇಕು 1 ಸ್ಪೂನ್ ಜೀರಿಗೆ ಒಂದು ಕಪ್ ನಷ್ಟು ನೀರಿಗೆ ಹಾಕಬೇಕು ಇದು ಐದು ನಿಮಿಷ ಕುದ್ದ ಮೇಲೆ ನೀರು ಕೆಂಪಗಾಗುತ್ತದೆ ಐದು ನಿಮಿಷ ಇದನ್ನು ಪ್ಲೇಟ್ ಮುಚ್ಚಿ ಇಡಬೇಕು ಹೀಗೆ ಮಾಡುವುದರಿಂದ ಜೀರಿಗೆಯ ಚೆನ್ನಾಗಿ ಅದರ ಅಂಶವನ್ನು ನೀರಿನಲ್ಲಿ ಬಿಡುತ್ತದೆ ನಂತರ ಈ ನೀರನ್ನು ಬೇರೆ ಕಪ್ಪಿಗೆ ಸೋಸಿಕೊಳ್ಳಿ. ಈ ಉಳಿದ ಜೀರಿಗೆ ಗಳನ್ನು ಚೆಲ್ಲುವ ಬದಲು ಆಹಾರಕ್ಕೆ ಅಥವಾ ಇನ್ನೊಂದು ಸಲ ಈ ಜೀರಿಗೆಯ ಕಷಾಯ ಮಾಡಿಕೊಳ್ಳಲು ಬಳಸಬಹುದು.
ಇದಕ್ಕೆ ಸ್ವಲ್ಪ ಚಿಟಿಕೆಯಷ್ಟು ಸೈಂಧವ ಲವಣ ಎಂಬ ಉಪ್ಪನ್ನು ಹಾಕಬೇಕು ಇದು ನಿಮ್ಮಲ್ಲಿ ಇರದಿದ್ದರೆ ಅಡುಗೆಗೆ ಬಳಸುವ ಉಪ್ಪನ್ನು ಸಹ ಹಾಕಿಕೊಳ್ಳಬಹುದು. ಹಾಗೆ ಇದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಾಕಿಕೊಳ್ಳಿ ಇದನ್ನು ಊಟದ ಮುಂಚೆ ಅಥವಾ ರಾತ್ರಿ ಮಲಗುವಾಗ ಇದನ್ನು ಕುಡಿಯಬೇಕು ಹೀಗೆ ಮಾಡಿದರೆ ನಿಮಗೆ ಗ್ಯಾಸ್ ನ ಸಮಸ್ಯೆ ಕಡಿಮೆಯಾಗುತ್ತದೆ ಹಾಗೂ ನೀವು ನಿಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಬಹುದು ಸ್ನೇಹಿತರೆ ಈ ಒಂದು ಪರಿಹಾರ ನಿಮಗೆ ಇಷ್ಟ ಆಗಿದ್ದರೆ ಬೇರೆಯವರಿಗೂ ತಿಳಿಸಿ ಧನ್ಯವಾದಗಳು.