ಏಳು ವಾರ ಹುತ್ತಕ್ಕೆ ಅರಿಶಿನದಿಂದ ಹೀಗೆ ಮಾಡಿದರೆ ಸಂಪೂರ್ಣವಾಗಿ ನಿಮ್ಮ ನಾಗದೋಷ ಅಥವಾ ಕಾಳಸರ್ಪದೋಷ ನಿವಾರಣೆಯಾಗುತ್ತದೆ.
ಹಾಯ್ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ಕಾಳಸರ್ಪ ದೋಷ ಅಥವಾ ನಾಗದೋಷದ ಬಗ್ಗೆ ತಿಳಿಸುತ್ತೇನೆ. ಇದರ ಪರಿಹಾರಗಳನ್ನು ಕೂಡ ತಿಳಿಸುತ್ತೇನೆ. ಹಾಗಾದರೆ ಕಾಳಸರ್ಪ ದೋಷ ಅಥವಾ ನಾಗದೋಷ ಯಾರಿಗೆ ಬರುತ್ತದೆ ಮತ್ತು ಬಂದರೆ ಹೇಗೆ ತಿಳಿಯುತ್ತದೆ ಎಂದು ಮೊದಲು ನೋಡೋಣ. ಸ್ನೇಹಿತರೆ ನಿಮ್ಮ ಜಾತಕದಲ್ಲಿ ರಾಹು ಅಥವಾ ಕೇತುವಿನ ದೋಷವಿದ್ದರೆ ನಿಮಗೆ ನಾಗ ದೋಷವಿದೆಯೆಂದು ತಿಳಿಯಬಹುದು ಅದೇ ರೀತಿಯಾಗಿ ರಾಹು ಕೇತುವಿನ ಮತ್ತೆ ಇನ್ನೊಂದು ಗ್ರಹ ಬಂದರೆ ನಿಮಗೆ ಕಾಳಸರ್ಪ ದೋಷ ಇದೆ ಎಂದು ತಿಳಿಯಬಹುದು.
ಹಾಗಾದರೆ ನೀವು ಜಾತಕವನ್ನು ಯಾವಾಗ ತೋರಿಸುತ್ತೀರಾ ಮದುವೆಯ ವಿಳಂಬ ಆದಾಗ ಅಥವಾ ವ್ಯಾಪಾರದ ಸಂಬಂಧವಾಗಿ ಅಥವಾ ಸಂತಾನ ಹಾಗೂ ದಾಂಪತ್ಯ ಜೀವನದ ಸಲುವಾಗಿ ಜಾತಕವನ್ನು ನೋಡಿಕೊಳ್ಳುತ್ತೇವೆ. ನಿಮಗೇನಾದರೂ ಮದುವೆ ಕಾರ್ಯದಲ್ಲಿ ವಿಳಂಬ ಆಗಿದ್ದರೆ ನಾಗದೋಷದ ಕಾಳಸರ್ಪದೋಷ ನಿಮ್ಮ ಜಾತಕದಲ್ಲಿ ಇರುತ್ತದೆ ಹಾಗೆ ಮದುವೆಯಾದ ಮೇಲೆ ಗಂಡ-ಹೆಂಡತಿಯ ನಡುವೆ ಜಗಳಗಳು ಮತ್ತು ದಾಂಪತ್ಯ ಜೀವನದಲ್ಲಿ ತೊಂದರೆಗಳು ಹಾಗೂ ಸಂತಾನದ ವಿಳಂಬತೆ ಹೀಗೆ ತೊಂದರೆಗಳು ಉಂಟಾಗುತ್ತವೆ. ಆದರೆ ಇದಕ್ಕೆಲ್ಲ ಪರಿಹಾರ ಏನು ಎಂದು ತಿಳಿಯಬೇಕು. ಸ್ನೇಹಿತರೆ ನಾಗದೋಷ ಅಥವಾ ಕಾಳಸರ್ಪದೋಷಕ್ಕೆ ಯಾವ ದೇವರನ್ನು ಪೂಜಿಸಬೇಕು ಎಂದು ನೋಡೋಣ.
ಇಂತಹ ದೋಷಗಳಿಗೆ ನಾವು ಸುಬ್ರಹ್ಮಣ್ಯ ದೇವರ ಆರಾಧನೆ ಮಾಡಬೇಕು ಮತ್ತು ಪೂಜಿಸಬೇಕು. ಪ್ರತಿ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಭಕ್ತಾದಿಗಳಿಗೆ ಸುಬ್ರಹ್ಮಣ್ಯ ನಿತ್ಯ ಪೂಜಾ ಪುಸ್ತಕವನ್ನು ದಾನಮಾಡಬೇಕು ಹೀಗೆ ಮಾಡುವುದರಿಂದ ಕೂಡ ನಿಮ್ಮ ಜಾತಕದಲ್ಲಿರುವ ನಾಗ ದೋಷ ಅಥವಾ ಕಾಳಸರ್ಪದೋಷ ನಿವಾರಣೆ ಆಗುತ್ತದೆ. ಇನ್ನು ಎರಡನೆಯದಾಗಿ ಎಲ್ಲಿ ಹಾವಿನ ಹುತ್ತ ಇರುತ್ತದೆ ಅಲ್ಲಿಗೆ ಹೋಗಿ ಅರಿಶಿಣ ಕುಂಕುಮದಿಂದ ಪೂಜೆಯನ್ನು ಮಾಡಿ ಹಾಲನ್ನು ಎರೆದು 21 ಪ್ರದಕ್ಷಿಣೆ ಹಾಕಬೇಕು ಈ ರೀತಿಯಾಗಿ ನೀವು ಏಳು ಮಂಗಳವಾರ ಮಾಡಬೇಕು. ಸ್ನೇಹಿತರೇ ನಿಜಕ್ಕು ಇದು ಒಂದು ಒಳ್ಳೆಯ ಪರಿಹಾರ ಯಾರಿಗೆ ಇಂತಹ ದೋಷಗಳು ಇರುತ್ತವೆ ಹಾಗೂ ಯಾರು ಸಂತಾನ ಭಾಗ್ಯ ಬೇಕು ಹಾಗೂ ಮದುವೆ ಆಗಬೇಕು ಎನ್ನುವರು ಈ ರೀತಿಯಾದ ಪೂಜೆಯನ್ನು ಮಾಡಿ.
ಸ್ನೇಹಿತರೆ ಇನ್ನೂ ಒಂದು ಪರಿಹಾರ ಏನೆಂದರೆ ಅರಳಿ ಮರವನ್ನು ಪೂಜಿಸುವುದು ಅರಳಿ ಮರ ಕೂಡ ನಾಗದೋಷವನ್ನು ಕಾಳಸರ್ಪ ದೋಷವನ್ನು ನಿವಾರಣೆ ಮಾಡುತ್ತದೆ. ಸ್ನೇಹಿತರೆ ಅರಳಿ ಮರದಲ್ಲಿ ವಿಶೇಷವಾದ ಔಷಧಿ ಗುಣಗಳಿವೆ. ಇದರಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ತೊಂದರೆಗಳು ಬರದಂತೆ ಹಾಗೆ ಸಂತಾನಪ್ರಾಪ್ತಿ ಆಗುವಂತೆ ಅರಳಿ ಮರ ಆಶೀರ್ವದಿಸುತ್ತದೆ. ಅರಳಿ ವೃಕ್ಷವು ಸಾಕ್ಷಾತ್ ವಿಷ್ಣು ದೇವನ ಸ್ವರೂಪವಾಗಿದೆ. ಅರಳಿ ವೃಕ್ಷಕ್ಕೆ ಅರಿಶಿಣ ಕುಂಕುಮದಿಂದ ಪೂಜೆ ಮಾಡಿ ಹಾಲನ್ನು ಹಾಕಿ 21 ಪ್ರದಕ್ಷಿಣೆಯನ್ನು ಹಾಕಬೇಕು. ಈ ರೀತಿಯಾಗಿ 43 ದಿನ ಮಾಡಬೇಕು 44 ನೇ ದಿನ ಗೋಧಿಯಿಂದ ಏನಾದರೂ ಪ್ರಸಾದ ಮಾಡಿ ಭಕ್ತಾದಿಗಳಿಗೆ ಕೊಡಬೇಕು. ಈ ರೀತಿಯಾಗಿ ಮಾಡಿದ್ದರೆ ನಿಮ್ಮ ಸಂತಾನ ಭಾಗ್ಯ ಹಾಗೂ ಮದುವೆಯ ಭಾಗ್ಯ ಬೇಗನೇ ಕೂಡಿಬರುತ್ತದೆ.
ಸ್ನೇಹಿತರೆ ಕೊನೆಯದಾಗಿ ಇನ್ನೊಂದು ಪರಿಹಾರ ಇದೆ. ಇದು ಏನೆಂದರೆ ಪ್ರತಿ ಮಂಗಳವಾರ ಅಥವಾ ಭಾನುವಾರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಜೋಡಿಯಾಗಿರುವ ಹಾವಿನ ವಿಗ್ರಹಕ್ಕೆ ಹಾಲನೆರೆದು ಪೂಜೆ ಮಾಡಿ 21 ಪ್ರದಕ್ಷಿಣೆ ಹಾಕಬೇಕು ಹೀಗೆ ಮಾಡಿದರೆ ನಿಮಗೆ ನಾಗದೋಷ ಹಾಗೂ ಕಾಳಸರ್ಪದೋಷ ನಿವಾರಣೆ ಆಗುತ್ತದೆ. ಈ ನಾಲ್ಕು ಪರಿಹಾರಗಳಲ್ಲಿ ನೀವು ಯಾವುದೇ ಪರಿಹಾರ ಮಾಡಿಕೊಂಡರು ನಿಮಗೆ ದೋಷ ನಿವಾರಣೆ ಆಗುತ್ತದೆ. ಪರಿಹಾರಗಳನ್ನು ಮಾಡುವಾಗ ದೇವರಲ್ಲಿ ನಂಬಿಕೆ ತುಂಬಾ ಮುಖ್ಯವಾಗಿದೆ ಅರಳಿ ವೃಕ್ಷ ಹಾಗೂ ಹಾವಿನ ಹುತ್ತಕ್ಕೆ ತುಂಬಾ ಶಕ್ತಿ ಇರುವುದರಿಂದ ಹಾಗೂ ಪೂಜೆ ಮಾಡುವುದರಿಂದ ಲಾಭವನ್ನು ಹಾಗೂ ಆಶೀರ್ವಾದವನ್ನು ದೇವರಿಂದ ಪಡೆಯುತ್ತೀರಿ. ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.