ಮೊಡವೆಗಳನ್ನು ಕೈಯಲ್ಲಿ ಕಿವುಚಿ ಆದ ಕಲೆಗಳನ್ನು ತೊಲಗಿಸಲು ಇಲ್ಲಿದೆ ಸರಳ ಉಪಾಯ..!!

182

ಮೊಡವೆಗಳು ಹದಿಹರೆಯದವರಲ್ಲಿ ಕಾಣುವುದು ಹೀಗೆ ಮೊಡವೆ ಬರಲು ಕಾರಣ ಯಾವುವೆಂದರೆ ಚರ್ಮದ ಅಶುಚಿತ್ವ ಕೂದಲಲ್ಲಿ ಇರುವ ಎಣ್ಣೆ ಅಂಶಗಳು ಎಂದು ತಿಳಿದು ಬಂದಿದೆ ತಲೆಯಲ್ಲಿರುವ ಒಟ್ಟು ಮುಖದ ಮೇಲೆ ಉದುರುವುದರಿಂದ ಮೊಡವೆಗಳು ಮೊಳಕೆ ಒಡೆಯುತ್ತವೆ.

ಹೀಗೆ ಮೊಡವೆಗಳು ಬರದಂತೆ ತಡೆಯಲು ಕೆಲವು ಉಪಾಯಗಳು.

ಮುಖವನ್ನು ದಿನಕ್ಕೆ ನಾಲ್ಕೈದು ಬಾರಿ ತೊಳೆಯಬೇಕು.

ತಲೆಯಲ್ಲಿ ಹೊಟ್ಟು ಬರದಂತೆ ನೋಡಿಕೊಳ್ಳಬೇಕು.

ಕೂದಲನ್ನು ತೊಳೆಯಲು ರಾಸಾಯನಿಕ ಶಾಂಪೂಗಳನ್ನು ಬಳಸಬಾರದು.

ಮೊಡವೆಗಳನ್ನು ಕೈಯಿಂದ ಕಿವುಚಬಾರದು ಹಾಗೆಯೇ ಉಗುರಿನಿಂದ ಸ್ಪರ್ಶಿಸಬಾರದು ಹೀಗೆ ಮಾಡುವುದರಿಂದ ಮುಖದಲ್ಲಿ ಕಲೆಗಳು ಹಾಗೆಯೇ ನಿಂತು ಹೋಗುತ್ತವೆ.

ಕೊತ್ತಂಬರಿ ಸೊಪ್ಪಿನ ರಸಕ್ಕೆ ನಿಂಬೆ ರಸವನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರ ಮತ್ತು ಕಲೆಗಳು ಮಾಯವಾಗುತ್ತವೆ.

ದಾಲ್ಚಿನ್ನಿ ಚಕ್ಕೆ ಯನ್ನು ನಿಂಬೆರಸದಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುವುದರಿಂದ ಮೊಡವೆಗಳು ದೂರವಾಗುವುದು.

ನಿಂಬೆಹಣ್ಣಿನ ಸಿಪ್ಪೆ ಅಥವಾ ನಿಂಬೆ ಎಲೆಗಳನ್ನು ಅರಿಶಿಣದ ಜೊತೆ ಬೆರೆಸಿ ನುಣ್ಣಗೆ ಅರೆದು ಪೇಸ್ಟ್ ತಯಾರಿಸಿಕೊಳ್ಳಬೇಕು ನಂತರ ಮುಖಕ್ಕೆ ಹಚ್ಚಬೇಕು ಆಗ ಮೊಡವೆಗಳು ದೂರವಾಗುತ್ತವೆ.

ಶುದ್ಧವಾದ ಹಾಲನ್ನು ಕುದಿಸಿ ನಂತರ ಕೆಳಗಿಳಿಸಿ ಅದಕ್ಕೆ ಒಂದು ಚಮಚ ಗ್ಲಿಸರಿನ್ ಹಾಗೆಯೇ ಒಂದು ಚಮಚ ನಿಂಬೆರಸವನ್ನು ಬೆರೆಸಿ ಮುಖಕ್ಕೆ ಹಚ್ಚಬೇಕು ಆಗ ಮೊಡವೆ ಕಲೆಗಳು ದೂರವಾಗುತ್ತವೆ.

ಸೇಬಿನ ತಿರುಳನ್ನು ಅರೆದು ಚೆನ್ನಾಗಿ ಪೇಸ್ಟ್ ತಯಾರಿಸಿ ನಂತರ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಮಾಯವಾಗಿ ಮುಖದ ಕಾಂತಿ ಹೆಚ್ಚುವುದು ಸೇಬಿನಲ್ಲಿಉತ್ಕೃಷ್ಟವಾದ ಜೀವಸತ್ವಗಳು ಇರುವುದರಿಂದ ಮುಖ ಕಾಂತಿಯುಕ್ತವಾಗುವುದು.

ಶ್ರೀಗಂಧವನ್ನು ತೇಯ್ದು ದಾಲ್ಚಿನ್ನಿ ಚಕ್ಕೆಯ ಪುಡಿಯನ್ನು ಬೆರೆಸಿ ನಂತರ ಮುಖಕ್ಕೆ ಲೇಪಿಸುವುದರಿಂದ ಮೊಡವೆಗಳು ಅಲ್ಲಿಯೇ ನಶಿಸಿ ಹೋಗುತ್ತವೆ.

ಪ್ರತಿದಿನ ಮುಖವನ್ನು ಎಳೆ ನೀರಿನಿಂದ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ ಮೊಡವೆಗಳು ನಿವಾರಣೆಯಾಗುತ್ತದೆ.

ಕಿತ್ತಲೆ ಹಣ್ಣಿನ ರಸ ಮತ್ತು ಸಿಪ್ಪೆ ಯನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರಾಗುತ್ತವೆ ಹಾಗೆಯೇ ಮುಖದ ಮೇಲಿರುವ ಮೊಡವೆಗಳು ಅದರ ಕಲೆಗಳು ದೂರವಾಗುತ್ತವೆ.

ಸೌತೆಕಾಯಿಯ ರಸ ಅಥವಾ ಸೌತೆಕಾಯಿಯನ್ನು ಬಿಲ್ಲೆಗಳಾಗಿ ಹಚ್ಚಿಕೊಂಡು ಮುಖಕ್ಕೆ ಹಚ್ಚುವುದು ಬಿಲ್ಲೆಗಳನ್ನು ಮುಖವನ್ನು ತಿಕ್ಕುವುದರಿಂದ ಮೊಡವೆಗಳು ದೂರವಾಗುವುದು ಮುಖದ ಮೇಲಿರುವ ಕಪ್ಪು ಕಲೆಗಳು ದೂರವಾಗುತ್ತವೆ.

ಹಾಲಿನ ಕೆನೆಗೆ ಕಡಲೆಹಿಟ್ಟು ಅರಿಶಿಣ ನಿಂಬೆರಸ ಬೆರೆಸಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುವುದು ಹಾಗೆಯೇ ಮೊಡವೆಗಳು ದೂರವಾಗುತ್ತವೆ ಈ ಪೇಸ್ಟ್ ಅನ್ನು ಇಡೀ ಶರೀರಕ್ಕೆ ಸಂಪೂರ್ಣವಾಗಿ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುವುದು.

ಗಮನಿಸಿ: ಮೊಡವೆಗಳು ನಮ್ಮ ಚರ್ಮದಲ್ಲಿರುವ ಜೀವಸತ್ವಗಳ ಕೊರತೆಯಿಂದ ಬರುತ್ತದೆ ಹಾಗಾಗಿ ಅಶುಚಿ ಅಸ್ವಸ್ಥತೆಯು ಮೊಡವೆಗಳಿಗೆ ಕಾರಣವಾಗಿವೆ ಸಮತೋಲನ ಆಹಾರವನ್ನು ತೆಗೆದುಕೊಂಡು ಹಸಿ ತರಕಾರಿಗಳು ತಾಜಾ ಹಣ್ಣುಗಳು ಹಾಲು ಸೇವಿಸಬೇಕು.

ಕರಿದ ತಿಂಡಿಗಳನ್ನು ಕೊಬ್ಬು ತುಂಬಿದ ತಿನಿಸುಗಳನ್ನು ತಿನ್ನಬಾರದು ಆಗ ಮೊಡವೆಗಳು ಬರುವುದಿಲ್ಲ, ಈ ಉಪಯುಕ್ತ ಮಾಹಿತಿ ಯು ನಿಮಗೆ ಇಷ್ಟವಾದಲ್ಲಿ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಏಕೆಂದರೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಷಯ.

LEAVE A REPLY

Please enter your comment!
Please enter your name here