ನಿಮ್ಮ ಮೊಬೈಲ್ ನೀರಲ್ಲಿ ಬಿದ್ದರು ಅಥವಾ ನೀರೇ ನಿಮ್ಮ ಮೊಬೈಲ್ ಮೇಲೆ ಬಿದ್ದರು ಚಿಂತೆ ಬೇಡ ನಾವು ಹೇಳಿದ ಹಾಗೆ ಮಾಡಿದರೆ ನಿಮ್ಮ ಮೊಬೈಲ್ ಗೆ ಯಾವುದೇ ಅಪಾಯವಿಲ್ಲದೆ ಮತ್ತೆ ಅದನ್ನು ಮತ್ತೆ ಎಂದಿನಂತೆ ಬಳಸ ಬಹುದು, ಈ ಕ್ರಿಯೆಯು ಯಶಸ್ವಿಯಾಗುವುದು ನೀರಲ್ಲಿ ಬಿದ್ದ ತಕ್ಷಣ ಹೀಗೆ ಮಾಡಿದರೆ ಮಾತ್ರ, ನೀರಲ್ಲಿ ಮೊಬೈಲ್ ಬಿದ್ದು ಹಲವು ದಿನಗಳು ಕಳೆದಿದ್ದರೆ ಈ ಮಾರ್ಗ ಉಪಯೋಗಕ್ಕೆ ಬರುವುದಿಲ್ಲ.
ನಿಮ್ಮ ಮೊಬೈಲ್ ನೀರಲ್ಲಿ ಬಿದ್ದ ತಕ್ಷಣ ಮೊದಲು ಅದನ್ನು ಸ್ವಿಚ್ಟ್ ಆಫ್ ಮಾಡ ಬೇಕು ಹಾಗು ಅದರ ಬಿಡಿ ಬಾಗಗಳನ್ನ ಬೇರ್ಪಡಿಸ ಬೇಕು, ಆದರೆ ಅದರ ಹಿಂಬದಿಯ ಕ್ಯಾಪ್ ಹಾಗು ಬ್ಯಾಟರಿ ಇತ್ಯಾದಿಗಳನ್ನು.
ನಂತರ ಒಣಗಿದ ಬಟ್ಟೆಯನ್ನು ಬಳಸಿ ನೀರು ಕಾಣದಂತೆ ಮೊಬೈಲ್ ಅನ್ನು ಚೆನ್ನಾಗಿ ಒರೆಸ ಬೇಕು ಹಾಗು ಸ್ವಲ್ಪ ತೇವಾಂಶ ಕಡಿಮೆ ವಾತಾವರಣದಲ್ಲಿ ಮೊಬೈಲ್ ಒರೆಸಿ.
ಅತಿ ಮುಖ್ಯವಾಗಿ ನೀರು ನಿಮ್ಮ ಹೆಡ್ ಫೋನ್ ರಂದ್ರ ಅಥವಾ ಚಾರ್ಜಿಂಗ್ ರಂಧ್ರದಲ್ಲಿ ನೀರು ಸೇರಿದ್ದರೆ ಅದನ್ನು ತೆಗೆಯಿರಿ.
ನಂತರ ಅಷ್ಟು ಬಿಡಿಬಾಗದ ಜೊತೆಯಲ್ಲಿ ನಿಮ್ಮ ಮೊಬೈಲ್ ಅನ್ನು ನಿಮ್ಮ ಮನೆಯ ಅಕ್ಕಿಯ ಮೂಟೆಯಲ್ಲಿ ಉಟುಬಿಡಿ, ಕಾರಣ ಅಕ್ಕಿಯಲ್ಲಿ ನೀರನ್ನು ಹೀರುವ ಗುಣವಿದ್ದು ನಿಮ್ಮ ಮೊಬೈಲ್ ಒಳಗೆ ಹೋದ ನೀರನ್ನ ಹಾಗು ಮದರ್ ಬೋರ್ಡ್ ತೇವವಾಗಿದ್ದರೆ ತಕ್ಷಣ ಅಕ್ಕಿ ನೀರನ್ನ ಹೀರುತ್ತದೆ.
ಎರಡು ದಿನದ ಬಳಿಕ ಅಕ್ಕಿಯಿಂದ ನಿಮ್ಮ ಮೊಬೈಲ್ ಹೊರತೆಗೆದು ಬ್ಯಾಟರಿ ಹಾಕಿ ಆನ್ ಮಾಡಿ ಶೇಕಡಾ 90 ರಷ್ಟು ಮೊಬೈಲ್ ಗಳು ಹೀಗೆ ಮಾಡುವುದರಿಂದ ಆನ್ ಆಗುತ್ತದೆ.
ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯ ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.