ನೀವು ಲೈಂಗಿಕ ಅಸಮರ್ಥರಾಗಲು ಇವುಗಳೇ ನಿಜವಾದ ಕಾರಣ ಏನು ಗೊತ್ತಾ..?

172

ಲೈಂಗಿಕ ಅಸಾಮರ್ಥ್ಯ ಸಾಮಾನ್ಯವಾಗಿ ಎಲ್ಲ ವಯಸ್ಸಿನ ಪುರುಷರು ಮತ್ತು ಮಹಿಳೆಯರನ್ನು ಬಾಧಿಸುವ ಸಾಮಾನ್ಯ ಸ್ಥಿತಿ, ಆದರೂ ವಯಸ್ಸಾದಂತೆಲ್ಲ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ, ಈ ರೀತಿಯ ಹೆಚ್ಚಿನ ಸಮಸ್ಯೆಗಳಿಗೆ ಚಿಕಿತ್ಸೆಯಿದೆ ಆದರೆ ಜನರು ಈ ಸಮಸ್ಯೆಗೆ ನೆರವು ಪಡೆಯಲು ಮತ್ತು ಈ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ.

ಲೈಂಗಿಕ ಚಟುವಟಿಕೆಗಳನ್ನು ಅನುಭವಿಸುವಲ್ಲಿ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಪರಿಸ್ಥಿತಿಯ ಬಗ್ಗೆ ನಿಮ್ಮ ಸಂಗಾತಿಯ ಜತೆ ಮಾತನಾಡಬೇಕು ಮತ್ತು ವೃತ್ತಿಪರರ ನೆರವು ಪಡೆಯಬೇಕು, ಸೂಕ್ತ ಚಿಕಿತ್ಸೆಯಿಂದ ನೀವು ಆರೋಗ್ಯಕರ ಲೈಂಗಿಕ ಜೀವನವನ್ನು ನಡೆಸಬಹುದಾಗಿದೆ.

ದೈಹಿಕ ಅಂಶಗಳು: ಪುರುಷರಲ್ಲಿ ನರಕ್ಕೆ ಸಂಬಂಧಿಸಿದ ಹಾನಿ, ರಕ್ತ ಹರಿವಿನಲ್ಲಿ ಸಮಸ್ಯೆ, ಮಧುಮೇಹ, ಹಾರ್ಮೋನ್‌ ಅಸಮತೋಲನ, ನರ ಸಂಬಂಧಿ ರೋಗಗಳು, ಹೃದಯ ಅಥವಾ ಕಿಡ್ನಿ ವೈಫಲ್ಯದಂತಹ ಪರಿಸ್ಥಿತಿಗಳು ಲೈಂಗಿಕ ಅಸಾಮರ್ಥ್ಯಕ್ಕೆ ಕಾರಣವಾಗಬಹುದು, ಅಲ್ಕೋಹಾಲ್ ಮತ್ತು ನಿರ್ದಿಷ್ಟ ವಿಧದ ಔಷಧಗಳನ್ನು ಸೇವಿಸುವುದರಿಂದಲೂ ಲೈಂಗಿಕ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು.

ಮಾನಸಿಕ ಮತ್ತು ಪಾರಿಸರಿಕ ಅಂಶಗಳು: ಲೈಂಗಿಕ ಬಯಕೆ ಕಡಿಮೆಯಾಗುವುದಕ್ಕೆ ಪ್ರಮುಖವಾದ ಸಾಮಾನ್ಯ ಕಾರಣ ಕಚೇರಿಯಲ್ಲಿನ ಕೆಲಸದ ಒತ್ತಡ, ಇದರ ಹೊರತಾಗಿ ಇತರ ಅಂಶಗಳೆಂದರೆ ಸಂಭೋಗದ ಕುರಿತಾದ ಆತಂಕ, ಈಗಾಗಲೇ ಇರುವ ಖಿನ್ನತೆ ಅಥವಾ ಅತಂಕದ ಸಮಸ್ಯೆ, ಸಂಗಾತಿಯ ಜತೆಗಿನ ಸಂಬಂಧದಲ್ಲಿರಬಹುದಾದ ಸಮಸ್ಯೆ ಮತ್ತು ಈ ಹಿಂದೆ ನಡೆದ ಲೈಂಗಿಕ ಆಘಾತಗಳು.

LEAVE A REPLY

Please enter your comment!
Please enter your name here