Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಕಷ್ಟಗಳು ಹೋಗುವ ಮೊದಲು ಸಾಕ್ಷಾತ್ ಲಕ್ಷ್ಮಿ ದೇವಿಯ ವಾಹನ ಈ ಸೂಚನೆಯನ್ನು ನೀಡುತ್ತಂತೆ …!!!

ನಮಸ್ಕಾರ ವೀಕ್ಷಕರೇ ನಮ್ಮ ಅನುದಿನದ ಜೀವನದಲ್ಲಿ ನಮಗೆ ನಿಸರ್ಗದಿಂದ ಬರುವಂತಹ ಕೊಡುಗೆ ಎಷ್ಟು ಇರುತ್ತದೆ ಅಷ್ಟೇ ಕೊಡುಗೆ ಪ್ರಾಣಿ ಪಕ್ಷಿಗಳಿಂದಲೂ ನಮಗೆ ಇರುತ್ತದೆ ಹೌದು ಪ್ರತಿ ಪ್ರಾಣಿ ಪಕ್ಷಿಯು ಕೂಡ ನಿಸರ್ಗದಲ್ಲಿ ತನ್ನದೇ ಆದಂತಹ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಾ ಇರುತ್ತದೆ ಮತ್ತು ಅದಕ್ಕೆ ಯಾವುದೇ ರೀತಿಯಾದಂತಹ ಎಲ್ಲೆಗಳು ಇರುವುದಿಲ್ಲ ಮತ್ತು ನಮಗೆಲ್ಲ ತಿಳಿದಿರಲೇ ಬೇಕಾದಂತಹ ವಿಷಯ ಏನು ಎಂದರೆ ನಮ್ಮಲ್ಲಿ ಇರುವಂತಹ ಪ್ರಾಣಿ ಪಕ್ಷಿಗಳು ನಮ್ಮ ಪೂರ್ವಜರ ಪ್ರತಿರೂಪವಾಗಿದೆ ಹಾಗಾಗಿ ಪ್ರಾಣಿ ಪಕ್ಷಿಗಳನ್ನು ನಾವು ಮಾನ್ಯ ಮಾಡಬೇಕು. ಇನ್ನು ಕೆಲವೊಮ್ಮೆ ಪ್ರಾಣಿಪಕ್ಷಗಳಿಂದ ನಮಗೆ ಅನೇಕ ರೀತಿಯಾದಂತಹ ಸಂಕೇತಗಳು ದೊರಕುತ್ತ ಇರುತ್ತದೆ ಅಂತಹ ಸಂಕೇತಗಳು ಒಳ್ಳೆಯದಕ್ಕೂ ಕೆಟ್ಟದಕ್ಕೋ ಎಂಬ ಅರಿವು ನಮಗಿರಬೇಕು. ಇನ್ನು ಪ್ರಾಣಿ ಪಕ್ಷಿಗಳನ್ನು ಕೆಲವೊಮ್ಮೆ ಒಳ್ಳೆಯ ಶಕುನ ಎಂತಲೂ ಕೆಲವೊಮ್ಮೆ ಕೆಟ್ಟ ಶಕುನ ಎಂತಲೂ ವಿವಿಧ ರೂಪದಲ್ಲಿ ನಾವು ತಿಳಿಯಬಹುದಾಗಿದೆ ಹಾಗಾಗಿ ಪ್ರಾಣಿ ಪಕ್ಷಿಗಳನ್ನು ನಾವು ಮತ್ತು ಅದರ ಸಂಕೇತಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ.

ಆ ರೀತಿಯಾಗಿ ಸಿಗುವಂತಹ ಸಂಕೇತಗಳನ್ನು ತಿಳಿದುಕೊಳ್ಳುವವರ ಬಗ್ಗೆ ಭವಿಷ್ಯವೂ ಕೂಡ ಅದು ಹೇಳುತ್ತಾ ಇರುತ್ತದೆ ಪ್ರಾಣಿ ಪಕ್ಷಿಗಳ ಜೊತೆಗೆ ನಿಸರ್ಗದ ಗಿಡಮರಗಳು ಕೂಡ ನಮಗೆ ಕೆಲವೊಮ್ಮೆ ಒಳ್ಳೆಯ ಸಂಕೇತಗಳನ್ನು ಕೊಡುತ್ತಾ ಇರುತ್ತದೆ ಅದನ್ನು ಕೂಡ ತಿಳಿದುಕೊಳ್ಳಬೇಕು ಮತ್ತು ಅವು ಎಂತಹ ಅದ್ಭುತ ಶಕ್ತಿಗಳನ್ನು ಹೊಂದಿರುತ್ತದೆ .. ಅಂದರೆ ಅವು ಚಿಕ್ಕ ಚಿಕ್ಕ ಸೂರ್ಯನ ಕಿರಣಗಳನ್ನು ಕೂಡ ತಿಳಿದುಕೊಂಡಿರುತ್ತದೆ. ಮತ್ತು ಅದಕ್ಕೆ ಆ ಶಕ್ತಿಯು ಇದೆ ಮತ್ತು ಇವತ್ತಿನ ದಿನದಲ್ಲಿ ನಾವು ಅದೇ ರೀತಿಯಾಗಿ ಇರುವಂತಹ ಒಂದು ಪಕ್ಷಿಯಾದ ಅಂತಹ ಗೂಬೆಯ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ ಗೂಬೆ ಹಲವು ವಿಚಾರಗಳನ್ನು ನಮಗೆ ಸುಳಿವು ನೀಡುತ್ತದೆ ಮತ್ತು ಹಲವು ಸಂದರ್ಭಗಳಲ್ಲಿ ಅದು ನಮಗೆ ಒದಗುತ್ತದೆ ಕೆಲವೊಬ್ಬರು ಗೂಬೆಯನ್ನು ಒಳ್ಳೆಯ ಶಕುನ ಎಂದು ತಿಳಿದುಕೊಂಡರೆ ಇನ್ನೂ ಕೆಲವು ವಿಪರ್ಯಾಸವಾಗಿ ಅದನ್ನು ಕೆಟ್ಟ ಶಕುನ ಎಂದು ತಿಳಿದುಕೊಂಡಿದ್ದಾರೆ. ಹಾಗಾಗಿ ಅದರ ಬಗ್ಗೆ ಸೂಕ್ತ ಮಾಹಿತಿ ನಮಗೆ ಗೊತ್ತಿರುವುದು ಒಳ್ಳೆಯದು.

ಇನ್ನು ಗೂಬೆ ಒಂದು ನಿಶಾಚರ ಪಕ್ಷಿ. ಹಾಗಾಗಿ ಅದು ಎಲ್ಲರೂ ಎಚ್ಚರವಿರುವಂತಹ ಬೆಳಗ್ಗಿನ ಸಮಯದಲ್ಲಿ ಮಲಗಿಬಿಡುತ್ತದೆ ಮತ್ತು ರಾತ್ರಿಯ ಸಮಯದಲ್ಲಿ ಎಚ್ಚರಗೊಳ್ಳುತ್ತದೆ ಹೀಗಾಗಿ ಗೂಬೆಯು ಹಲವು ರೀತಿಯಾದಂತಹ ವಿಶಿಷ್ಟ ಗುಣಗಳನ್ನು ಹೊಂದಿದೆ. ಗೂಬೆಯ ಒಂದು ಶಬ್ದದಿಂದ ಮತ್ತು ಅದರ ಧ್ವನಿಯಿಂದ ಎಷ್ಟೋ ರಾತ್ರಿಗಳು ತುಂಬಾ ಭಯಾನಕವಾಗಿ ಬಿಡುತ್ತದೆ ಅದರಿಂದಲೇ ಅದನ್ನು ಅಪಶಕುನ ಎಂದು ಹಲವರು ತಿಳಿದಿರುತ್ತಾರೆ ಮತ್ತು ಗೂಬೆಯ ಮೈ ರಚನೆಯು ಕೂಡ ವಿಶಿಷ್ಟವಾಗಿರುತ್ತದೆ ಕಣ್ಣುಗಳು ದೊಡ್ಡದಾಗಿರುತ್ತದೆ ಮತ್ತು ಕಿವಿಗಳು ಸಹ ದೊಡ್ಡದಾಗಿರುತ್ತದೆ ಅದರ ಮುಖ ಬಂದು ಬಾದಾಮಿಯ ಆಕೃತಿಯಲ್ಲಿರುತ್ತದೆ.

ಇನ್ನು ನಮ್ಮ ಪುರಾಣಗಳಲ್ಲಿ ಒಂದು ಕಥೆ ಇದೆ, ಲಕ್ಷ್ಮಿ ದೇವಿ ಒಮ್ಮೆ ಸ್ವರ್ಗದಿಂದ ಭೂಲೋಕಕ್ಕೆ ಇಳಿದು ಬರುವಾಗ ಅವರಿಗೆ ಪ್ರಥಮವಾಗಿ ಕಂಡಂತಹ ಪ್ರಾಣಿ ಪಕ್ಷಿಗಳಲ್ಲಿ ಗೂಬೆಯ ಮೊದಲೆನೆಯದಾಗಿತ್ತು. ಯಾಕೆಂದರೆ ಅವರು ಬರುವಾಗ ರಾತ್ರಿ ವೇಳೆ ಆಗಿತ್ತು ಹಾಗಾಗಿ ಅವರು ಗೂಬೆಯನ್ನು ತಮ್ಮ ವಾಹನವನ್ನಾಗಿಸಿಕೊಂಡರು. ಹಾಗಾಗಿ ದೀಪಾವಳಿಯ ಸಮಯದಲ್ಲಿ ಅದನ್ನು ಕಾಣುವುದಾಗಲಿ ಅದರ ಧ್ವನಿಯನ್ನು ಕೇಳುವುದಾಗಲಿ ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಮತ್ತು ಗೂಬೆ ಯಾವುದಾದರು ಗರ್ಭಿಣಿ ಸ್ತ್ರೀಯರಿಗೆ ಅಥವಾ ಅಸ್ವಸ್ಥರಿಗೆ ಕಾಣಿಸಿಕೊಂಡು ಮತ್ತು ಅದರ ಸ್ಪರ್ಶವಾದರೆ ಅವರಿಗೆ ಒಳ್ಳೆಯದು ನಡೆಯುತ್ತದೆ.

ಇನ್ನು ಗೂಬೆಯ ಇಂತಹ ಸಂಕೇತಗಳು ಧನಾತ್ಮಕವಾಗಿರುತ್ತದೆ ಅಂದರೆ ಅದು ನಮಗೆ ಹಣದ ಪ್ರಾಪ್ತಿಯನ್ನು ಕೂಡ ಕೊಡುತ್ತದೆ ಮತ್ತು ಗೂಬೆ ಯಾರ ಮನೆಯ ಮೇಲೆ ಕುಳಿತುಕೊಳ್ಳುತ್ತದೆ ಅವರ ಮನೆ ಬೇಗನೆ ಒಳ್ಳೆಯ ಅಂಶಗಳಿಂದ ತುಂಬುತ್ತದೆ ಮತ್ತು ಒಳ್ಳೆಯ ಹಣ ಗಳಿಂದ ಅವರ ಮನೆ ಇರುವುದು ಎಂದು ಪರಿಗಣಿಸಲಾಗಿದೆ ಮತ್ತು ಇದನ್ನು ಕಣ್ಣಿನಲ್ಲಿ ಕಣ್ಣಿಟ್ಟು ನೋಡುವುದು ಬಹಳ ಕಷ್ಟದ ಕೆಲಸ ಆದರೂ ಕೂಡ ಅಂತಹದ್ದೇನು ನಡೆದರೆ ನಮ್ಮ ಮುಂದಿನ ಸಂತಾನದ್ದು ಮತ್ತು ನಾವುಗಳು ಬಹಳ ಸೌಭಾಗ್ಯ ಶಾಲೆಗಳಾಗುತ್ತೇವೆ. ಹಾಗಾಗಿ ಗೂಬೆಯನ್ನು ಕೇವಲ ಅಪಶಕುನ ಎಂದು ತಿಳಿಯುವ ಜನರಿಗೆ ಗೂಬೆ ಒಂದು ಒಳ್ಳೆಯ ಶಕುನ ಎಂದು ತಿಳಿದಿರಬೇಕು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ