Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ದೆವ್ವ ಭೂತ ಪ್ರೇತಗಳ ತೊಂದರೆಯಿಂದ ಒದ್ದಾಡುತ್ತಿದ್ದೀರಾ ಹಾಗಾದ್ರೆ ಈ ಒಂದು ಶಕ್ತಿಶಾಲಿಯಾದ ಮಂತ್ರವನ್ನು ಹೇಳಿಕೊಳ್ಳಿ ಜನುಮದಲ್ಲಿ ನಿಮಗೆ ದೆವ್ವ ಪಿಶಾಚಿಗಳ ಭಯ ಇರಲ್ಲ …!!!

ಭೂತ ಪ್ರೇತ ಪಿಶಾಚಿಗಳ ಸಮಸ್ಯೆಯಿಂದ ಹೊರಗೆ ಬರಬೇಕೆನ್ನುವವರು ಹಾಗೆ ಇದರಿಂದ ದೂರ ಇರಬೇಕು ಎನ್ನುವವರು ಈ ಒಂದು ಮಂತ್ರವನ್ನು 108 ಬಾರಿ ಹೇಳಿ.ಹಾಯ್ ಸ್ನೇಹಿತರೆ ಭೂತ ಪ್ರೇತ ಪಿಶಾಚಿಗಳು ಇರುವುದು ಸತ್ಯ ಎಂದು ಹೇಳುತ್ತಾರೆ ಹೌದು ದೇವರು ಇರುವುದು ಎಷ್ಟು ಸತ್ಯವೋ ಅಷ್ಟೇ ಇದು ಕೂಡ ಸತ್ಯ ಆಗಿದೆ. ಇವುಗಳಿಂದ ನಾವು ದೂರ ಇರಬೇಕು ಮಾನಸಿಕವಾಗಿ ಯಾರು ಸದೃಢವಾಗಿ ಇರುವುದಿಲ್ಲವೋ ಅವರಿಗೆ ಭೂತಗಳ ಕಾಟ ಹೆಚ್ಚಾಗಿ ಇರುತ್ತದೆ. ಸ್ನೇಹಿತರೆ ನಾನು ಹೇಳುವ ಈ ಒಂದು ಮಂತ್ರವನ್ನು ನೀವು 108 ಬಾರಿ ಹೇಳಿದರೆ ನಿಮಗೆ ಯಾವುದೇ ಭೂತ ಪ್ರೇತ ಪಿಶಾಚಿಗಳ ಸಮಸ್ಯೆ ಬರುವುದಿಲ್ಲ. ಮೊದಲು ಈ ಒಂದು ಕಥೆಯನ್ನು ಕೇಳಿ ಯಾಕೆ ಈ ಮಂತ್ರವನ್ನು ಹೇಳಬೇಕು ಎಂಬುದನ್ನು ಈ ಕಥೆ ತಿಳಿಸುತ್ತದೆ.

ಭಗವಾನ್ ವಿಷ್ಣು ಹಿರಣ್ಯ ರಾಕ್ಷಸನನ್ನು ಕೊಂದು ಹಾಕುತ್ತಾನೆ. ಅವನ ನಂತರ ಸಹೋದರನಾದ ಹಿರಣ್ಯಕಶ್ಯಪು ವಿಷ್ಣುವಿನ ಶತ್ರು ಆಗುತ್ತಾನೆ ಇವನಿಗೆ ವಿಷ್ಣುದೇವರು ಹಾಗೂ ವಿಷ್ಣು ದೇವರ ಭಕ್ತರನ್ನು ಕಂಡರೆ ಎಂದಿಗೂ ಶತ್ರುತ್ವ ಇರುತ್ತದೆ. ಆಗ ಹಿರಣ್ಯಕಶ್ಯಪು ಬ್ರಹ್ಮ ದೇವರ ಬಳಿ ಹೋಗಿ ನನಗೆ ಸಾವು ಬರದಂತೆ ಆಶೀರ್ವಾದ ಮಾಡು ಎಂದು ಕೇಳುತ್ತಾನೆ ಆಗ ದೇವರು ಇಂತಹ ಆಶೀರ್ವಾದಗಳು ಯಾರಿಗೂ ಸಿಗುವುದಿಲ್ಲ ಎಂದು ಹೇಳುತ್ತಾನೆ. ಬದಲಾಗಿ ಹಿರಣ್ಯ ಕಶ್ಯಪು ಜಾಣತನದಿಂದ ಹಾಗಾದರೆ ನನಗೆ ಬೇರೆಯ ವರ ಕೊಡು ಎಂದು ಕೇಳುತ್ತಾನೆ. ಆ ವರವು ಹೀಗಿರುತ್ತದೆ ನನಗೆ ಸಾವು ಹಗಲು ರಾತ್ರಿ ಸೂರ್ಯ-ಚಂದ್ರ ಮತ್ತು ಮನುಷ್ಯರಿಂದ ಹಾಗೂ ಆಯುಧಗಳಿಂದ ಬರಬಾರದು ಎಂದು ಕೇಳಿಕೊಳ್ಳುತ್ತಾನೆ

ಆಗ ದೇವರು ಆಗಲಿ ಎಂದು ವರ ನೀಡುತ್ತಾನೆ. ಹಿರಣ್ಯಕಶ್ಯಪು ಎಲ್ಲರಿಗೂ ತೊಂದರೆಗಳನ್ನು ಉಂಟು ಮಾಡುತ್ತಾ ಇರುತ್ತಾನೆ ಆಗ ಎಲ್ಲರು ದೇವರ ಬಳಿ ಬಂದು ಅವನು ಸಾಯಬೇಕು ಎಂದು ಹೇಳುತ್ತಾರೆ ಆಗ ದೇವರು ಹೌದು ನಾನು ಅವನಿಗೆ ಶಿಕ್ಷೆ ಕೊಡುತ್ತೇನೆ ಎಂದು ಹೇಳುತ್ತಾನೆ. ಹಿರಣ್ಯಕಶಪುವಿಗೆ ಕಯಾದು ಎಂಬ ಮಹಿಳೆಯ ಜೊತೆಗೆ ಮದುವೆಯಾಗುತ್ತದೆ ಇವಳು ದೇವರಲ್ಲಿ ತುಂಬಾ ನಂಬಿಕೆಯನ್ನು ಇಟ್ಟಿರುತ್ತಾಳೆ ನಂತರ ಇವರಿಗೆ ಪ್ರಹಲ್ಲಾದ್ ಎಂಬ ಪುತ್ರನು ಜನಿಸುತ್ತಾನೆ ನಂತರ ಪುತ್ರನು ನಾರದಮುನಿ ಆಶೀರ್ವಾದದಲ್ಲಿ ಬೆಳೆಯುತ್ತಾನೆ ನಾರದರ ಆಶ್ರಮದಲ್ಲಿ ಬೆಳೆದ ಇವನು ನಾರಾಯಣನ ಭಕ್ತ ನಾಗಿರುತ್ತಾನೆ ಅಲ್ಲಿನ ವಿದ್ಯಾರ್ಥಿಗಳ ಜೊತೆಗೆ ನಾರಾಯಣನ ಬಗ್ಗೆ ಮಾತನಾಡುತ್ತಾ ನಾರಾಯಣನ ಕೀರ್ತಿಯನ್ನು ಹೇಳುತ್ತಿರುತ್ತಾನೆ ಇದನ್ನು ತಿಳಿದ ನಾರದರು ಹಿರಣ್ಯಕಶಿಪುವಿಗೆ ನಿಮ್ಮ ಪುತ್ರ ನಾರಾಯಣನ ಭಕ್ತನಾಗಿದ್ದಾನೆ ಎಂದು ತಿಳಿಸುತ್ತಾನೆ.

ಆಗ ಹಿರಣ್ಯಕಶಪುವಿಗೆ ದೊಡ್ಡ ಅವಮಾನವಾಗುತ್ತದೆ ನಾರಾಯಣನನ್ನು ಕಂಡರೆ ಇವನಿಗೆ ಎಲ್ಲಿಲ್ಲದ ದ್ವೇಷ ಇರುತ್ತದೆ. ಆದರೆ ನನ್ನ ಮಗನೇ ನನ್ನ ಶತ್ರುವಿನ ಭಕ್ತನಾದ ಎಂದು ಮಗನನ್ನೇ ಕೊಲ್ಲಲು ನಿರ್ಣಯಿಸುತ್ತಾರೆ. ಪ್ರಹಲ್ಲಾದನ ದೈವ ಭಕ್ತನಾಗಿದ್ದರಿಂದ ಇವನಿಗೆ ಮತ್ತೆ ಸಾವು ಬರುತ್ತಿರಲಿಲ್ಲ ನಾರಾಯಣನ ಆಶೀರ್ವಾದದಿಂದ ಅವನು ಪದೇ ಪದೇ ಜನಿಸಿದ್ದನು ಆಗ ಹಿರಣ್ಯಕಶ್ಯಪು ಎಲ್ಲಿರುವನೋ ಆ ನಿನ್ನ ಹರಿ ಕಪಟಿ ಮೋಸಗಾರ ನಾರಾಯಣ ಎಂದು ಕೇಳುತ್ತಾನೆ ಆಗ ಪ್ರಹ್ಲಾದನ ಎಲ್ಲಾ ಕಡೆ ಇರುವನು ನಾರಾಯಣನೆ ಎಂದು ಹೇಳುತ್ತಾನೆ ಆಗ ಕಂಬದಲ್ಲಿ ನಿಮ್ಮ ನಾರಾಯಣ ಇರುವವನೇ ಎಂದು ಕೇಳುತ್ತಾನೆ ಆಗ ಪ್ರಹಲ್ಲಾದ ನಂಬಿಕೆಯಿಂದ ಹೌದು ಇರುವನು ಎಂದು ಹೇಳುತ್ತಾನೆ. ಆಗ ಹಿರಣ್ಯಕಶ್ಯಪು ಕೋಪದಿಂದ ಆ ಕಂಬವನ್ನು ಒಡೆದಾಗ ದೊಡ್ಡ ಶಬ್ದ ಬರುತ್ತದೆ.

ನಂತರ ಕಂಬದ ಒಳಗಡೆ ನಾರಾಯಣನು ಉಗ್ರನರಸಿಂಹನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾನೆ ಹಿರಣ್ಯಕಶಪುವನ್ನು ಹಿಡಿದು ಕಾಲಿನ ಕೆಳಗೆ ಮಲಗಿಸಿಕೊಂಡು ತನ್ನ ಉಗುರುಗಳಿಂದ ಹಿರಣ್ಯಕಶಪುವಿನ ಹೊಟ್ಟೆಯನ್ನು ಬಗೆಯುತ್ತಾನೆ ನಂತರ ಅವನನ್ನು ಕೊಲ್ಲುತ್ತಾನೆ ಪ್ರಹಲಾದ ನಾರಾಯಣನನ್ನು ಸ್ಪರ್ಶಿಸಿದಾಗ ನಾರಾಯಣ ಶಾಂತನಾಗಿ ನಾರಾಯಣನಾಗಿ ಬದಲಾಗುತ್ತಾನೆ ಆಗ ನಾರಾಯಣ ಇರುವುದು ಸತ್ಯ ಎಂದು ಎಲ್ಲರಿಗೂ ತಿಳಿಯುತ್ತದೆ. ಸ್ನೇಹಿತರೆ ಈ ಕಥೆಯಲ್ಲಿ ನಾರಾಯಣ ನರಸಿಂಹನಾಗಿ ಹೇಗೆ ಹಿರಣ್ಯಕಶಪುವನ್ನು ಕೊಲ್ಲುತ್ತಾನೆ ಅದಕ್ಕಾಗಿ ನರಸಿಂಹನ ಈ ಮಂತ್ರವನ್ನು 108 ಬಾರಿ ಪಠಿಸಬೇಕು

ಆ ಮಂತ್ರ ಹೀಗಿದೆ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯೊಮೃತ್ಯುಂ ನಮಾಮ್ಯಹಂ ಈ ಒಂದು ಮಂತ್ರವನ್ನು ಉಗ್ರನರಸಿಂಹನನ್ನು ನೆನೆದು ಪಠಿಸಿದರೆ ಖಂಡಿತವಾಗಿಯೂ ನೀವು ಭೂತಪ್ರೇತ ಪಿಶಾಚಿಗಳಿಂದ ದೂರ ಇರುತ್ತಿರ ಹಾಗಾದರೆ ಈ ಮಾಹಿತಿ ಇಷ್ಟವಾಗಿದ್ದರೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ