ನಮ್ಮ ಸಂಪ್ರದಾಯದಲ್ಲಿ ಗೃಹಿಣಿಗೆ ಎಂತಹ ಮಹತ್ವವನ್ನು ನೀಡಿದ್ದಾರೆ ಹೌದು ಮನೆಯ ಗೃಹಿಣಿ ಅಂದರೆ ಅವಳನ್ನು ಲಕ್ಷ್ಮೀದೇವಿಗೆ ಹೋಲಿಸುತ್ತಾರೆ. ಮನೆಯ ಲಕ್ಷ್ಮಿ ಸ್ವರೂಪವಾಗಿರುವ ಗೃಹಿಣಿ ಕಪ್ಪು ಬೊಟ್ಟನ್ನು ಇಡಬಾರದು ಆದರೆ ಕಪ್ಪು ಬಣ್ಣದ ಕರಿಮಣಿಯನ್ನು ಧರಿಸಬಹುದು. ಹಾಗಾದರೆ ಏನಿದರ ಅರ್ಥ ಗೃಹಿಣಿಯಾದವಳು ಯಾಕೆ ಕಪ್ಪು ಬೊಟ್ಟನ್ನು ಇಡಬಾರದು ಮತ್ತು ಗೃಹಿಣಿಯಾದವಳು ಪಾಲಿಸಬೇಕಾಗಿರುವ ಕೆಲವೊಂದು ಕಟ್ಟುನಿಟ್ಟಿನ ಪದ್ಧತಿಯೇನೂ ಎಂಬುದನ್ನು ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ವಿಚಾರವನ್ನು ತಿಳಿದು ತಪ್ಪದೆ ಮನೆಯ ಗೃಹಿಣಿಯಾದವಳು
ಈ ಕೆಲವೊಂದು ವಿಚಾರವನ್ನ ತಪ್ಪದೆ ಪಾಲಿಸಿ ಮತ್ತು ಗಂಡನ ಏಳಿಗೆಗೆ ಈ ಕೆಲವೊಂದು ಪದ್ದತಿಯನ್ನು ಪಾಲಿಸುವುದು ಅವಶ್ಯಕವಾಗಿ ಇರುತ್ತದೆ.ಮೃತರಿಗೆ ಗೃಹಿಣಿಯಾದವಳು ಕಪ್ಪುಬಣ್ಣದ ಬೊಟ್ಟನ್ನು ಯಾಕೆ ಇಡಬಾರದು ಮತ್ತು ಮದುವೆಯಾದ ಹೆಣ್ಣು ಮಕ್ಕಳು ತಪ್ಪದೆ ಹಣೆಬೊಟ್ಟನ್ನು ಇಡಲೇಬೇಕು ಯಾಕೆ ಅಂತ ತಿಳಿಯೋಣ ಶಾಸ್ತ್ರ ಹೇಳುತ್ತದೆ ಗೃಹಿಣಿಯಾದವಳು ಹಣೆಗೆ ಕುಂಕುಮ ಮತ್ತು ಕತ್ತಿಗೆ ತಾಳಿಯನ್ನು ಧರಿಸಿರಲೇಬೇಕು.ಯಾಕೆ ಅಂದರೆ ಹಣೆಗೆ ಕುಂಕುಮವನ್ನು ಇಡುವುದರಿಂದ ಆ ಹಣೆಯ ಭಾಗದಲ್ಲಿ ಕುಂಕುಮ ಇಡುವ ಭಾಗ ಆತ್ಮ ಇರುವ ಭಾಗ ಅಂತ ಕೆಲವರು ನಂಬುತ್ತಾರೆ.
ಇನ್ನೂ ಆ ಭಾಗದಲ್ಲಿ ಇರುವ ನರಗಳ ಪ್ರಚೋದನೆಗಾಗಿ ಗೃಹಿಣಿಯಾದವಳು ಹಣೆಗೆ ಕುಂಕುಮವನ್ನು ಇಡಬೇಕು ಅಂತ ಹೇಳುತ್ತದೆ ವಿಜ್ಞಾನ ಕೂಡ.ಯಾಕೆ ಅಂದರೆ ಈ ಹಣೆಯ ಭಾಗದಲ್ಲಿರುವ ನರಗಳು ಲೈಂಗಿಕ ಪ್ರಚೋದನೆಗೆ ಸಂಬಂಧಪಟ್ಟ ನರಗಳು ಆಗಿರುತ್ತದೆ. ಆದಕಾರಣ ಆ ಭಾಗದಲ್ಲಿ ನಾವು ಒತ್ತಿ ಕುಂಕುಮವನ್ನ ಇರಿಸಿದಾಗ ಮದುವೆಯಾದ ಮಹಿಳೆಗೆ ಈ ಲೈಂಗಿಕ ವಿಚಾರದಲ್ಲಿ ಪ್ರಚೋದನೆಯನ್ನು ಉಂಟುಮಾಡುವುದಕ್ಕೆ ಸಹಕಾರಿಯಾಗಿರುತ್ತದೆ ಎಂಬುದು ಈ ಪದ್ಧತಿಯ ಹಿಂದಿರುವ ವೈಜ್ಞಾನಿಕ ಕಾರಣ ಆಗಿರುತ್ತದೆ. ಮದುವೆಯಾದ ಹೆಣ್ಣುಮಕ್ಕಳು ಮಂಗಳಸೂತ್ರವನ್ನು ಧರಿಸಬೇಕು ಈ ಮಂಗಳ ಸೂತ್ರದ ಬಗ್ಗೆ ಹೇಳುವುದಾದರೆ ಇದಕ್ಕೂ ಕೂಡಾ ನಮ್ಮ ಶಾಸ್ತ್ರದಲ್ಲಿ ಹೆಚ್ಚಿನ ಮಹತ್ವವಿದೆ.
ಶಾಸ್ತ್ರವನ್ನು ಬದಿಗಿಟ್ಟು ವೈಜ್ಞಾನಿಕವಾಗಿ ಯೋಚಿಸುವುದಾದರೆ ಮದುವೆಯಾದ ಹೆಣ್ಣುಮಕ್ಕಳು ಕರಿಮಣಿಯನ್ನು ಧರಿಸುವುದರಿಂದ ಅದು ಎದೆಯ ಮಧ್ಯಭಾಗದಲ್ಲಿ ಇರುತ್ತದೆ ಇದರಿಂದ ದೇಹವನ್ನ ಸಮತೋಲನದಲ್ಲಿ ಇರಿಸುವುದಕ್ಕೆ ಕಾಪಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಹಿಂದೆಲ್ಲ ಈ ಕರಿಮಣಿ ಸೂತ್ರವನ್ನು ಮಣ್ಣಿನಿಂದ ಮಾಡುತ್ತಿದ್ದರು. ಈ ಮಣ್ಣಿನಿಂದ ಮಾಡಿದ ಕರಿಮಣಿಯು ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿಡಲು ಸಹಕಾರಿಯಾಗುತ್ತಿತ್ತು.ಹಾಗೆ ಆರೋಗ್ಯವನ್ನು ಕೂಡ ಕಾಪಾಡುತ್ತಿತ್ತು. ಆದರೆ ಇಂದಿನ ದಿವಸಗಳಲ್ಲಿ ಗೃಹಿಣಿಯರು ಈ ತಾಳಿಯನ್ನು ಹಲವಾರು ವಿನ್ಯಾಸಗಳಿಂದ ಮಾಡಿಸಿಕೊಂಡು ಅದನ್ನು ಧರಿಸುತ್ತಾರೆ.
ಆದರೆ ಈ ಕರಿಮಣಿಯಿಂದ ಮಾಡಿದ ಮಂಳಗಳಸೂತ್ರವನ್ನು ಧರಿಸುವುದರಿಂದ ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಮಹಿಳೆಯರ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂಬುದೆ ಈ ಪದ್ದತಿಯ ಹಿಂದಿನ ಅರ್ಥ ಆಗಿರುತ್ತದೆ.ಕಪ್ಪು ಬೊಟ್ಟನ್ನು ಯಾಕೆ ಮಹಿಳೆಯರು ಇಡಬಾರದು ಅಂದರೆ ಕಪ್ಪು ಶನಿಯ ಸಂಕೇತ ಆಗಿರುತ್ತದೆ. ಆದಕಾರಣ ಕಪ್ಪು ಬೊಟ್ಟನ್ನು ಹೆಣ್ಣುಮಕ್ಕಳು ಇಟ್ಟರೆ ಶನಿಯ ವಕ್ರ ದೃಷ್ಟಿಗೆ ಪಾತ್ರರಾಗಬೇಕಾಗುತ್ತದೆ
ಎಂಬ ಕಾರಣ ದಿಂದಾಗಿ ಹೆಣ್ಣುಮಕ್ಕಳು ಕಪ್ಪು ಬೊಟ್ಟನ್ನು ಹಣೆಗೆ ಇಡಬಾರದು ಅಥವಾ ಕಪ್ಪು ಸ್ಟಿಕ್ಕರನ್ನು ಕೂಡ ಇರಬಾರದು ಕುಂಕುಮವನ್ನು ಇಡುವುದರಿಂದ ಅಥವಾ ಗಂಧವನ್ನು ಇಡುವುದರಿಂದ ಒಳ್ಳೆಯದು ಎಂದು ಹೇಳಲಾಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ