ಸಾಧಾರಣವಾಗಿ ಬಹಳಷ್ಟು ಭಾರತೀಯರ ಮನೆ ಅಂಗಳದಲ್ಲಿ ಕೊನೆ ಪಕ್ಷ ಸಣ್ಣ ಕುಂಡಗಳಲ್ಲಿ ಇಡುವುದನ್ನು ಕಾಣುತ್ತೇವೆ, ಸೆಕ್ಸ್ ಗೃಹಿಣಿಯು ಇದಕ್ಕೆ ನೀರುಣಿಸಿ, ನಿತ್ಯ ಪೂಜೆಗೈದು ಪ್ರದಕ್ಷಿಣೆ ಮಾಡುವಳು, ಇದರ ಬೇರು, ಎಲೆ ಎಲ್ಲವೂ ಪವಿತ್ರವೇ, ದೇವರಿಗೆ ನೈವೇದ್ಯ ಅರ್ಪಿಸುವಾಗ ಸಹ ಅದರಲ್ಲಿ ತುಳಸಿ ಎಲೆ ಇರುತ್ತದೆ, ಅದರಲ್ಲಿಯೂ ವಿಶೇಷವಾಗಿ ಭಗವಾನ್ ವಿಷ್ಣು, ಆಂಜನೇಯ ಮತ್ತು ಶನಿ ಪರಮಾತ್ಮನಿಗೆ ವಿಶೇಷವಾಗಿ ಅರ್ಪಿಸುತ್ತಾರೆ, ಸಂಸ್ಕೃತದಲ್ಲಿ ತುಲನಾ ನಾಸ್ತಿ ಅಥವಾ ತುಳಸಿ ಎನ್ನುವರು, ಅಂದರೆ ಭಾರತೀಯರಿಗೆ ಇದೊಂದು ಪವಿತ್ರ ಸಸ್ಯ.
ಕರಿ ಮೆಣಸು ಬೆಲ್ಲ ಮಿಶ್ರಿತವಾಗಿ ತುಳಸಿ ಎಲೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಹಿತಕಾರಿ, ಶರೀರಕ್ಕೆ ತಗಲುವ ಪಿತ್ತ, ಕಫ, ಹೃದ್ರೋಗ ಮತ್ತು ಜ್ವರಗಳಿಗೆ ಇದರ ಸೇವನೆ ಒಳ್ಳೆಯದು, ದೀರ್ಘ ಕಾಯಿಲೆಗಳಾದ ಸಿಹಿ ಮೂತ್ರ, ಕ್ಯಾನ್ಸರ್, ಹಸ್ತಮ, ತೊನ್ನು ಇತ್ಯಾದಿಗಳಿಗೆ ಮದ್ದಾಗಿದೆ, ವೈದ್ಯರು ಕೊಡುವ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ತಯಾರಿಸಿದ ಮಾತ್ರೆಗಿಂತ ಈ ತುಳಸಿ ಎಲೆಗಳ ಸೇವನೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ, ಹಿಂದಿನ ಋಷಿಗಳು ಕೂಡ ಸೇವನೆ ಮಾಡುತ್ತಿದ್ದರು.
ಅರ್ಥ ಶಾಸ್ತ್ರದಲ್ಲಿ ತುಳಸಿಯನ್ನು ಅಮೃತಮಯ ಗಿಡ ಎಂದು ತಿಳಿಸಿದೆ, ರೋಗಕಾರಕ ಕ್ರಿಮಿಗಳು ತುಳಸಿಯ ಗಾಳಿ ಬರುವಷ್ಟು ದೂರ ಓಡಿ ಹೋಗುತ್ತವೆ, ಹಾವು ಚೇಳುಗಳು ಸಹ ಬರುವುದಿಲ್ಲ ಇಂಥ ತುಳಸಿ ಮನೆಯ ಮುಂದೆ ಇದ್ದರೆ ಆ ಮನೆಗೆ ದರಿದ್ರ ದೇವತೆ ಬರುವುದಿಲ್ಲವೆಂದು ನಂಬಿಕೆಯೂ ಇದೆ, ಹಾಗೂ ಪೂಜಿಸುವ ಗೃಹಿಣಿಗೆ ಚಿರಸೌಭಾಗ್ಯ ಇರುವುದೆಂದು ಮತ್ತು ಆಯುರಾರೋಗ್ಯ ಲಭಿಸುತ್ತವೆ ಎಂದು ನಂಬಿಕೆ ಇದೆ, ಜಾತಿ ಮತ ಬೇಧವಿಲ್ಲದೆ ತುಳಸಿಯನ್ನು ಬೆಳೆಸಬಹುದು.
ಈ ಉಪಯುಕ್ತ ಮಾಹಿತಿ ಯು ನಿಮಗೆ ಇಷ್ಟವಾದಲ್ಲಿ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಏಕೆಂದರೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಷಯ.