ಮನೆ ಮನೆಗೆ ಮಧ್ಯ ರವಾನೆ ಹೊಸ ಯೋಜನೆ ತಂದ ಸರ್ಕಾರ..!!

NewsDesk

ಕರ್ನಾಟಕದ ಮಧ್ಯ ಪ್ರಿಯರು ಅತಿ ಸಂತೋಷ ಪಡುವುದು ಬೇಡ ಕಾರಣ ಈ ಯೋಜನೆಯನ್ನು ಜಾರಿ ತರುತ್ತಿರುವುದು ಕರ್ನಾಕಟಕ ಸರ್ಕಾರವಲ್ಲೂ ಬದಲಿಗೆ ಮಹಾರಾಷ್ಟ್ರ ಸರ್ಕಾರ, ಪ್ರತಿ ಮನೆಗಳಿಗೂ ನೇರವಾಗಿ ಮದ್ಯ ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ಇಂಥ ವ್ಯವಸ್ಥೆಯನ್ನು ಆರಂಭಿಸುವ ಭಾರತದ ಮೊಟ್ಟಮೊದಲ ರಾಜ್ಯ ಎಂಬ ಖ್ಯಾತಿ ಮಹಾರಾಷ್ಟ್ರ ಪಾಲಾಗಿದೆ.

ಸಚಿವ ಚಂದ್ರಶೇಖರ ಭವಾನ್‌ಕುಲೆ ( ಮಹಾರಾಷ್ಟ್ರದ ಅಬ್ಕಾರಿ ಖಾತೆ ರಾಜ್ಯ ಸಚಿವರು ) ಈ ವಿಷಯವನ್ನು ತಿಳಿಸಿದ್ದು ಇದು ಮಧ್ಯ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಲಿದೆ ಹಾಗು ಕುಡಿದು ವಾಹನ ಚಲಾಯಿಸುವುದರಿಂದ ನಡೆಯುವ ಅಪಘಾತದ ಪ್ರಕರಣಗಳನ್ನು ಇದರಿಂದ ತಡೆಯ ಬಹುದಾಗಿದೆ ಎಂದು, ಈ ಯೋಜನೆಯ ಮೂಲಕ ನಾವು ಅಪಘಾತದಿಂದ ಸಾಯುವವರ ಪ್ರಾಣಗಳು ಉಳಿಯುತ್ತವೆ ಎಂದು ವಿಶ್ಲೇಷಣೆ ಮಾಡಿದರು.

ದಿನಸಿ ಹಾಗು ತರಕಾರಿ ದೊರೆಯುವ ರೀತಿಯಲ್ಲೇ ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮಾದರಿಯ ಪ್ಲಾಟ್‌ಫಾರಂ ಮೂಲಕ ಮದ್ಯ ಸರಬರಾಜು ಮಾಡಲು ಉದ್ದೇಶಿಸ ಲಾಗಿದೆಯಂತೆ. ಇನ್ನು ಯೋಜನೆ ನಮ್ಮ ಕರ್ನಾಟಕದಲ್ಲೂ ಬೇಕಾ ದಯಮಾಡಿ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ ತಿಳಿಸಿ.

ಜೊತೆಯಲ್ಲಿ ಇದನ್ನು ಓದಿ ಪುರುಷರ ಒಳ ಉಡುಪು ಅವರ ವೀರ್ಯದ ಮೇಲೆ ಪರಿಣಾಮ ಬೀರುತ್ತಾ.

ಆಹಾರದ ಪೌಷ್ಟಿಕಾಂಶದ ಕೊರೆತೆಯಿಂದ ಪುರುಷರ ವೀರ್ಯದಲ್ಲಿ ಶಕ್ತಿ ಕಡಿಮೆ ಯಾಗುತ್ತಿದೆ ಮತ್ತು ವೀರ್ಯದ ಪ್ರಮಾಣವು ಕಡಿಮೆಯಾಗುತ್ತಿರುವುದು ಸಧ್ಯದ ಸಮಸ್ಯೆಯಾಗಿದೆ ಆದರೆ ಇಲ್ಲೊಂದು ಅಧ್ಯನ ಒಂದು ಶಾಕಿಂಗ್ ವಿಷಯ ಒಂದನ್ನ ಬಹಿರಂಗ ಪಡಿಸಿದೆ, ಪುರುಷರ ಒಳ ಉಡುಪು ಸಹ ಅವರ ವೀರ್ಯದ ಮೇಲೆ ಪ್ರಬಾವ ಬೀರುವುದಂತೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ನಡೆಸಿದ್ದು ಪುರುಷರು ಬಿಗಿಯಾದ ಒಳ ಉಡುಪು ಧರಿಸುವದರಿಂದ ಅವರ ವೀರ್ಯ ಉತ್ಪಾದನೆ ಮೇಲೆ ಬಹಳಷ್ಟು ಪರಿಣಾಮ ಅಬೀರುತ್ತದೆ ಎಂಬ ವರದಿಯನ್ನ ಬಹಿರಂಗ ಪಡಿಸಿದೆ.

ಈ ಸಂಶೋಧನೆಗಾಗಿ ಫರ್ಟಿಲಿಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32-39 ವಯಸ್ಸಿನ ಸುಮಾರು 656 ಪುರುಷರಿಂದ ವೀರ್ಯದ ಸ್ಯಾಂಪಲ್ ಗಳನ್ನು ಪಡೆಯಲಾಗಿದೆ ಅವರು ಧರಿಸುವ ಒಳ ಉಡುಪಿನ ಬಗ್ಗೆಯೂ ಸಮೀಕ್ಷೆ ನಡೆಸಲಾಗಿದ್ದು, ಬಾಕ್ಸರ್, ಜಾಕಿ, ಬಿಕಿನಿ, ಬ್ರೀಫ್ ಗಳ ಬಗ್ಗೆಯೂ ಪ್ರಶ್ನಿಸಲಾಗಿದೆ ಬಾಕ್ಸರ್ ಗಳನ್ನು ಧರಿಸುವ ಪುರುಷರಲ್ಲಿ ಚಲನಶೀಲ ಆರೋಗ್ಯಕರ ವೀರ್ಯ ಹೆಚ್ಚಿರುವುದು ಕಂಡುಬಂದಿದೆ.

ಬಾಕ್ಸರ್ ಗಳನ್ನು ಹೆಚ್ಚು ಧರಿಸುವುದರಿಂದ ಸರಾಗವಾಗಿ ಗಾಳಿಯಾಡುತ್ತದೆ ಇದರಿಂದ ಉಷ್ಣತೆ ಕಡಿಮೆಯಾಗಿ ಆರೋಗ್ಯಕರ ವೀರ್ಯಕ್ಕೆ ಅನುಕೂಲವಾದ ವಾತಾವರಣ ನಿರ್ಮಾಣವಾಗುತ್ತದೆ ಈ ಹಿನ್ನೆಲೆಯಲ್ಲಿ ಪುರುಷರಲ್ಲಿ ಆರೋಗ್ಯಕರ ವೀರ್ಯ ಉತ್ಪತ್ತಿಗೆ ಬಾಕ್ಸರ್ ಗಳೇ ಬೆಸ್ಟ್ ಎನ್ನುತ್ತಿದೆ ಹಾರ್ವರ್ಡ್ ವಿವಿ ಸಂಶೋಧನೆ.

ಹಾಗಾಗಿ ಬೇರೆ ಶೈಲಿಯ ಒಳ ಉಡುಪಿಗಿಂತಲೂ ಬಾಕ್ಸರ್ ಒಳ ಉಡುಪುಗಳು ಸಡಿಲವಾಗಿದ್ದು ಇದನ್ನು ಧರಿಸಿದರೆ ಉಷ್ಣತೆಯ ಪ್ರಮಾಣದ ವ್ಯತ್ಯಾಸವಾಗದೆ ವೀರ್ಯದ ಗುಣ ಮಟ್ಟ ಕಾಯ್ದು ಕೊಳ್ಳುವಲ್ಲಿ ಸಹಕರಿಸುತ್ತದೆ ಎಂದು ಹಾರ್ವರ್ಡ್ ವಿವಿ ಸಂಶೋಧಕರ ಅಭಿಪ್ರಾಯ.

Leave a Reply

Your email address will not be published. Required fields are marked *