ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಅನ್ನು ಪಡೆದರು ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಧೂಳ್ ಎಬ್ಬಿಸುತ್ತಿದೆ, ಚಿತ್ರದ ಕಲೆಕ್ಷನ್ ಭರದಿಂದ ಸಾಗಿದೆ, ಬಿಡುಗಡೆಯಾದ ಒಂದೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೂ ಹಾಗೂ ಕನ್ನಡಿಗರ ಹೆಮ್ಮೆ ಗೂ ಕಾರಣವಾಗಿದೆ, ಹೊರರಾಜ್ಯಗಳಲ್ಲಿ ಕನ್ನಡ ಚಿತ್ರಗಳಿಗೆ ಯಾವುದೇ ಬೆಲೆಯಿಲ್ಲ ಕನ್ನಡ ಸಿನಿಮಾಗಳನ್ನು ಯಾರೂ ನೋಡುವುದಿಲ್ಲ ಎಂಬ ಮಾತು ಗಾಂಧಿನಗರದಲ್ಲಿ ತುಂಬಾ ದಿನಗಳಿಂದ ಕೇಳಿ ಬರುತ್ತಿತ್ತು.
ಆದರೆ ದಿ ವಿಲನ್ ಸಿನಿಮಾ ಹೊರರಾಜ್ಯಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುವುದರ ಮುಖಾಂತರ ಕನ್ನಡಿಗರ ಬಾವುಟವನ್ನು ಅಲ್ಲಿ ನಡುವಲ್ಲಿ ಯಶಸ್ವಿಯಾಗಿದೆ, ಹೊರರಾಜ್ಯದ ಸಿನಿಮಾ ದಿಗ್ಗಜರು ಗಳು ಈ ಕನ್ನಡ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ, ಅದರಲ್ಲಿ ಸೌತ್ ಇಂಡಿಯನ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಸಹ ದಿ ವಿಲನ್ ಬಗ್ಗೆ ಮಾತನಾಡಿರುವುದು ಅಲ್ಲಿಯ ಮಾಧ್ಯಮ ಒಂದು ಪ್ರಕಟಮಾಡಿದೆ.
ಮಹೇಶ್ ಬಾಬು ಅವರ ಇಂಟರ್ವ್ಯೂ ಮಾಡಬೇಕಾದರೆ ನೀವು ಇತ್ತೀಚಿಗೆ ನೋಡಿದ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಮಹೇಶ್ ಬಾಬು ಅವರು ಸಿನಿಮಾ ಬಿಸಿಯಲ್ಲಿ ಇದ್ದುದ್ದರಿಂದ ಸದ್ಯ ಯಾವುದೇ ಸಿನಿಮಾ ನೋಡಲು ಸಾಧ್ಯವಾಗಿಲ್ಲ ಆದರೆ ಕನ್ನಡದ ದಿ ವಿಲನ್ ಸಿನಿಮಾದ ಬಗ್ಗೆ ಒಳ್ಳೆಯ ಪ್ರಶಂಸೆಗಳು ಕೇಳಿ ಬರುತ್ತಿದ್ದು ಖಂಡಿತವಾಗಿಯೂ ಬಿಡುವು ಮಾಡಿಕೊಂಡು ದಿ ವಿಲನ್ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ಕನ್ನಡ ಸಿನಿಮಾ ಬಗ್ಗೆ ಹೊರ ರಾಜ್ಯಗಳಲ್ಲೂ ಒಳ್ಳೆಯ ಪ್ರಶಂಸೆ ವ್ಯಕ್ತವಾಗಿರುವುದು ತುಂಬಾ ಒಳ್ಳೆಯ ವಿಚಾರ ಇನ್ನಷ್ಟು ಕನ್ನಡ ಸಿನಿಮಾಗಳು ಹೊರ ರಾಜ್ಯಗಳಲ್ಲೂ ಅತಿ ಹೆಚ್ಚು ಸದ್ದು ಮಾಡಲಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಎಂಬುದೇ ನಮ್ಮ ಆಶಯ, ಇನ್ನು ದಿ ವಿಲನ್ ಸಿನಿಮಾದಲ್ಲಿ ನಿಮಗಿಷ್ಟವಾದ ಒಂದು ಸಂದರ್ಭವನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ ಹಾಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹೆಚ್ಚಿನ ತಾಜಾ ಸುದ್ದಿಗಾಗಿ ಮಾಡಿ ನಮ್ಮ ಪೇಜ್ ಲೈಕ್ ಮಾಡಿ.