ನೀವು ಕೇಳದೆಲೇ ವರವನ್ನು ಕೊಡುತ್ತಾಳೆ ಮಾಡಾಳು ಗೌರಮ್ಮ  ತಾಯಿ ಯಾವುದೇ ದುಡ್ಡು ಕಾಸು ಪಡೆಯದೆ ಜನರ ಇಷ್ಟಾರ್ಥಗಳನ್ನು ಬರಿಸುವಂತಹ ದೇವಿ ಇವಳು … ಹಾಗಾದರೆ ಬನ್ನಿ ಈ ಪುಣ್ಯ ಕ್ಷೇತ್ರ ಇರುವುದಾದರೂ ಎಲ್ಲಿ ಏನು ಅದರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ನಮ್ಮ ಕರ್ನಾಟಕ ರಾಜ್ಯ ಎಂದರೆ ಒಂದು ಅಪರೂಪ ರಾಜ್ಯ ಅಂತ ನಾವು ಹೇಳಬಹುದು ಯಾಕೆಂದರೆ ಹಲವಾರು ಶಕ್ತಿ ದೇವಸ್ಥಾನಗಳನ್ನು ಹೊಂದಿರುವಂತಹ ದೇವಾಲಯಗಳ ಒಂದು ಗೂಡು ಅಂತ ನಾವು ಕರೆಯಬಹುದು, ಯಾಕೆಂದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಕೆಲವೊಂದು ದೇವಸ್ಥಾನಗಳ ದರ್ಶನಕ್ಕಾಗಿ ಹಲವಾರು ರಾಜ್ಯಗಳಿಂದ ಹಾಗೂ ಹಲವಾರು ದೇಶಗಳ ಜನರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಹಾಗೆ ಹೀಗೆ ಬಂದಂತಹ ಭಕ್ತರಿಗೆ ಯಾವುದೇ ನಿರಾಸೆ ಆಗದಂತೆ ನಮ್ಮಲ್ಲಿರುವಂತಹ ದೇವಾನುದೇವತೆಗಳು ಅವರಿಗೆ ವರವನ್ನು ಕೊಡುತ್ತಾ ಇದ್ದಾರೆ ಹಾಗೂ ಅವರ ಕಷ್ಟಗಳಿಗೆ ಸ್ಪಂದನೆಯನ್ನು ನೀಡುತ್ತಿದ್ದಾರೆ. ಇದೇ ರೀತಿಯಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ಅಂತಹ ಹಾಗೂ ನೀವು ಕೇಳಿದ ವರವನ್ನು ಕೊಡುವಂತಹ ಒಂದು ತಾಯಿ ಇಲ್ಲಿ ಇದ್ದಾಳೆ.

ಹಾಗಾದರೆ ಬನ್ನಿ ಈ ತಾಯಿಯ ಮಹತ್ವ ಈ ತಾಯಿಯ ಪವಾಡಗಳನ್ನು ಕೆಲವೊಂದು ಚರ್ಚೆ ಮಾಡೋಣ ಹಾಗೂ ಅದರ ಬಗ್ಗೆ ಕೆಲವೊಂದು ಮಾಹಿತಿಯನ್ನು ಕಲೆ ಹಾಕೋಣ. ಪ್ರಸ್ತುತ ವಿದ್ಯಮಾನಗಳನ್ನು ನಾವು ನೋಡಿದರೆ ಹಲವಾರು ದೇವಸ್ಥಾನಗಳಲ್ಲಿ ಅರ್ಚಕರು ಹಣಕ್ಕಾಗಿ ಈ ದೇವಸ್ಥಾನಗಳನ್ನು ಬಳಕೆ ಮಾಡುತ್ತಾರೆ, ದೇವಸ್ಥಾನಗಳೆಂದರೆ ಒಂದು ಬಿಜಿನೆಸ್ ಪಾಯಿಂಟ್ ಕೂಡ ಆಗಿಬಿಟ್ಟಿದೆ. ಆದರೆ ಈ ದೇವಸ್ಥಾನದಲ್ಲಿ ಯಾವುದೇ ರೀತಿಯಾದಂತಹ ಹಣವನ್ನು ಪಡೆಯದೇ ಜನರ ಇಷ್ಟಾರ್ಥಗಳನ್ನು ಬರಿಸುವಂತಹ ಈ ತಾಯಿಯ ನಿಜವಾಗಲೂ ಬಡಬಗ್ಗರಿಗೆ ದೇವತೆ ಅಂತನೇ ಹೇಳಬಹುದು.

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವಂತಹ ಪ್ರಶ್ನೆಗೆ ಉತ್ತರ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ಶ್ರೀ ಸ್ವರ್ಣ ಗೌರಮ್ಮ. ಇಲ್ಲಿರುವಂತಹ ದೇವಿ ಯಾವುದೇ ತರಹದ  ಹಣವನ್ನು ಬಯಸುವುದಿಲ್ಲ ಆದರೆ ಈ ದೇವಸ್ಥಾನದಲ್ಲಿ ಇರುವಂತಹ ಈ ದೇವಿಗೆ ಕರ್ಪೂರ ಎಂದರೆ ತುಂಬಾ ಪ್ರೀತಿ. ಇಲ್ಲಿಗೆ ಬರುವಂತಹ ಜನರು ಈ ದೇವಿಯ ಇಷ್ಟವಾದ ಅಂತಹ ಒಂದು ವಸ್ತು ಕರ್ಪೂರವನ್ನು ಹಿಡಿದುಕೊಂಡು ಬರುತ್ತಾರೆ, ಅದಲ್ಲದೆ ಈ ದೇವಿಯ ಮಡಿಲಿಗೆ ಅಕ್ಕಿಯನ್ನು ಹಾಕಿ ತಮಗೆ ಇರುವಂತಹ ಕಷ್ಟಗಳು ಹೇಳಿಕೊಂಡು ಹೋಗುತ್ತಾರೆ.

ಭಕ್ತರ ಏನೇ ಕಷ್ಟ ಬಂದರೂ ಕೂಡ ಅವರನ್ನು ಬಗ್ಗೆ ಇರುವಂತಹ ಶಕ್ತಿ ಈ ದೇವಿಗೆ ಇದೆ ಎನ್ನುತ್ತಾರೆ ಅಲ್ಲಿನ ಸ್ಥಳೀಯ ಜನರು, ಅದಲ್ಲದೆ ಗಣಪತಿ ಹಬ್ಬದ ದಿವಸ ಈ ದೇವಿಗೆ ಶೃಂಗಾರವನ್ನು ಮಾಡಿ ಹಾಗೂ ಅರಿಶಿಣದಿಂದ ದಿವ್ಯ ಅಲಂಕಾರವನ್ನು ಮಾಡಿದಾಗ ದೇವಿಯ ಆಹಾವನ ಆಗುತ್ತದೆ. ಆ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ಆಗಿ ದೇವಿಯನ್ನು ಆರಾಧನೆ ಮಾಡಲಾಗುತ್ತದೆ. ಆದ ನಂತರ ಕಲ್ಯಾಣಿಯಲ್ಲಿ ಈ ದೇವಿಯನ್ನು ವಿಸರ್ಜನೆ ಮಾಡಲಾಗುತ್ತದೆ. ಈ ದೇವಿಗೆ ಕರ್ಪೂರ ಹಾಗೂ ಅಕ್ಕಿ ಅಂದರೆ ತುಂಬಾ ಇಷ್ಟ ಆಗಿರುವುದರಿಂದ ಒಂದು ಕುಂಡಲಿ  ಮಾಡಿ ಅದರಲ್ಲಿ ಅಕ್ಕಿ ಹಾಗೂ ಕರ್ಪೂರ ವನ್ನು ಇಟ್ಟು ಬೆಂಕಿ ಹಚ್ಚಲಾಗುತ್ತದೆ. ಆ ಸಂದರ್ಭದಲ್ಲಿ ಜನರಿಗೆ ದೇವಿಯನ್ನು ನೋಡುವಂತಹ ಒಂದು ಅವಕಾಶವನ್ನು ಕೂಡ ರಾತ್ರಿ ಹನ್ನೊಂದು ಗಂಟೆಯವರೆಗೂ ಕೂಡ ಮಾಡಿಕೊಳ್ಳಲಾಗುತ್ತದೆ .

ಈ ದೇವಸ್ಥಾನಕ್ಕೆ ನೀವು ಹೋಗಬೇಕಾದರೆ ನಾವು ಹೇಳುವಂತಹ ದಾರಿಯನ್ನು ನೀವು ಅನುಸರಿಸಬಹುದು, ನೀವು ಅರಸೀಕೆರೆ ಗೆ ಹೋಗಿ ಅಲ್ಲಿಂದ ನೀವು 29 ಕಿಲೋಮೀಟರ್ ಕ್ರಮಿಸಿದರೆ ನಿಮಗೆ ಈ ದೇವಸ್ಥಾನ ದೊರಕುತ್ತದೆ ಅದಲ್ಲದೆ ನೀವು ಹಾಸನದಲ್ಲಿ ಯಾರನ್ನು ಬೇಕಾದರೂ ಕೇಳಿದರೂ ಕೂಡ ಈ ದೇವಸ್ಥಾನದ ಬಗ್ಗೆ ನಿಮಗೆ ಮಾಹಿತಿಯನ್ನು ಕೊಡುತ್ತಾರೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 9886835333

Leave a Reply

Your email address will not be published. Required fields are marked *

%d bloggers like this: