ಅದೃಷ್ಟ ಎನ್ನುವುದು ಯಾವ ಸಮಯದಲ್ಲಿ ಯಾರ ರೂಪದಲ್ಲಿ ಬರುತ್ತದೆ ಎನ್ನುವುದನ್ನು ಯಾರಿಂದಲೂ ಸಹ ಊಹಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಕೆಲವೊಮ್ಮೆ ಅದೃಷ್ಟ ಎನ್ನುವುದು ನಮ್ಮ ಸುತ್ತ ಮುತ್ತ ಇದ್ದರೂ ಸಹ ಅದು ನಮಗೆ ತಿಳಿಸಯುವುದಿಲ್ಲ. ಕೆಲವೊಮ್ಮೆ ನಮ್ಮ ಪಕ್ಕದಲ್ಲೇ ಇದ್ದ ವ್ಯಕ್ತಿಯ ಅದೃಷ್ಟ ಬಂದು ಆತ ಯಾರು ಊಹಿಸದ ಸ್ಥಾನಕ್ಕೆ ತಲುಪಿರುವುದನ್ನು ಸಹ ನಾವು ನೋಡಿದ್ದೇವೆ. ಕಡು ಬದವನಾಗಿದ್ದ ಮನುಷ್ಯ ಒಂದೇ ರಾತ್ರಿಯಲ್ಲಿ ದೊಡ್ಡ ಶ್ರೀಮಂತನಾಗಿರುವ ಅದೆಷ್ಟೋ ಉದಾಹರಣೆಗಳನ್ನು ನಾವು ನೀವು ಎಲ್ಲರೂ ನೋಡಿದ್ದೇವೇ.
ಒಬ್ಬ ಮನುಷ್ಯ ಶ್ರೀಮಂತನಾಗುವುದಕ್ಕೆ ಅಥವಾ ಬದವನಾಗುವುದಕ್ಕೆ ಬಹಳ ಸಮಯ ಬೇಕಾಗಿಲ್ಲ. ಏಕೆಂದರೆ ಅದೃಷ್ಟ ಮತ್ತು ದುರಾದೃಷ್ಟ ಎರಡು ನಮ್ಮ ಹಣೆಬರಹದಲ್ಲಿ ಮೊದಲೇ ನಿಶ್ಚಯವಾಗಿರುತ್ತದೆ. ಅದೃಷ್ಟ ಬಂದರೆ ಒಬ್ಬ ಭಿಕ್ಷುಕ ರಾತ್ರೋರಾತ್ರಿ ಶ್ರೀಮಂತನಾಗುತ್ತಾನೆ ಅದೇ ರೀತಿ ದುರಾದೃಷ್ಟ ಬೆನ್ನೆತ್ತಿದ್ದಾರೆ ಒಬ್ಬ ಶ್ರೀಮಂತ ವ್ಯಕ್ತಿ ಬೀದಿಗೆ ಬೀಳಬಹುದು. ಜೀವನದಲ್ಲಿ ಕೆಲವು ಸೂಚನೆಗಳು ನಿಮಗೆ ಮುಂದೆ ದೊಡ್ಡ ಅದೃಷ್ಟ ಬರಲಿದೆ ಎನ್ನುವುದನ್ನು ತಿಳಿಸುತ್ತವೆ. ಹಾಗಾದರೆ ಬನ್ನಿ ಆ ಸೂಚನೆಗಳು ಯಾವುವು ಎನ್ನುವುದನ್ನು ನೋಡೋಣ.
ನೀವು ಬೆಳಗ್ಗೆ ಎದ್ದ ತಕ್ಷಣ ನಿಮಗೆ ಗೋವಿನ ದರ್ಶನವಾದರೆ ಅಥವಾ ಮುತ್ತೈದೆಯರ ದರ್ಶನವಾದರೆ ಅಥವಾ ಇನ್ನು ಯಾರಾದರೂ ನಿರ್ದಿಷ್ಟ ವ್ಯಕ್ತಿಗಳ ದರ್ಶನವಾಗೆ ಆ ದಿನಪೂರ್ತಿ ನಿಮಗೆ ಲಾಭದಾಯಕವಾಗಿರುತ್ತದೆ. ಅದೇ ರೀತಿ ನೀವು ಕೆಲಸದ ವಿಷಯವಾಗಿ ಆಚೆ ಹೋಗುತ್ತಿದ್ದರೆ ನಿಮಗೆ ತುಂಬಿದ ಕೊಡ ಕಂಡರೆ, ಅಥವಾ ಪಾತ್ರೆ ತುಂಬಾ ಹಾಲನ್ನು ಕಂಡರೆ ಆ ದೃಶ್ಯ ಕೂಡ ನಿಮಗೆ ಅದೃಷ್ಟವನ್ನು ತರುವ ಸೂಚನೆಯಾಗಿರುತ್ತದೆ. ಇದೇ ರೀತಿ ನೀವು ಕೆಲವೊಂದು ದೃಶ್ಯಗಳನ್ನು ಕಂಡರೆ ನಿಮಗೆ ಅದೃಷ್ಟ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ರೀತಿ ಮತ್ತೊಂದು ಸೂಚನೆ ಎಂದರೆ ನಿಮ್ಮ ಮನೆ ಮುಂದೆ ಯಾವುದಾದರೂ ಬೇಕು ಮರಿ ಹಾಕಿದ್ದಾರೆ ಅದು ಕೂಡ ನಿಮಗೆ ಅದೃಷ್ಟ ತರುವ ಸೂಚನೆಯಾಗಿರುತ್ತದೆ.
ಇನ್ನು ಕೆಲವೊಮ್ಮೆ ಯಾವುದಾದರು ಪಕ್ಷಿಗಳು ನಿಮ್ಮ ಕಣ್ಣಿಗೆ ಕಾಣಿಸಿಕೊಂಡರೆ ಅದು ಕೂಡ ಅದೃಷ್ಟದ ಸೂಚನೆ. ಇನ್ನು ಕೆಲವೊಮ್ಮೆ ನೀವು ಬೆಳಗ್ಗೆ ಎದ್ದ ತಕ್ಷಣ ನಿಮಗೆ ಒಂದು ರೀತಿಯ ಖುಷಿಯ ಅನುಭವವಾಗುತ್ತಿದ್ದರೆ, ಅದು ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಸಮಯ ಎದುರಾಗಲಿದೆ ಎನ್ನುವ ಸಂಕೇತವಾಗಿದೆ. ಇನ್ನು ಕೆಲವರಿಗೆ ಬೆಳಿಗ್ಗೆ ಹೇಳುತ್ತಿದ್ದಂತಲೇ ಧನಪ್ರಾಪ್ತಿಯಾಗುವುದು ಅಥವಾ ಧನ ಲಭಿಸಿದರೆ, ಇದು ಕೂಡ ಮುಂದಿನ ದಿವಸಗಳಲ್ಲಿ ನಿಮಗೆ ಅದೃಷ್ಟವಲಿಸಿ ಬರುತ್ತದೆ ಎನ್ನುವ ಸೂಚನೆಯಾಗಿರುತ್ತದೆ. ಇದೇ ರೀತಿ ಕೆಲವರಿಗೆ ಒಳ್ಳೆಯ ಸಮಯ ಬರುವ ಮುನ್ನ ಅಥವಾ ಅದೃಷ್ಟ ಬರುವ ಮುನ್ನ ಕೆಲವು ಮುನ್ಸೂಚನೆಗಳು ಸಿಕ್ಕಿರುತ್ತದೆ.
ಇನ್ನು ಇದೆ ರೀತಿ ಕೆಲವು ವಸ್ತುಗಳು ಅದೃಷ್ಟ ಸಂಕೇತವಾಗಿರುತ್ತದೆ ಅಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ನಿರಾಕರಿಸಬಾರದು. ಇಂತಹ ವಸ್ತುಗಳಲ್ಲಿ ಮೊದಲನೆಯದು ಶಿವನ ಪ್ರಸಾದ, ದೇವರ ಪೂಜೆಯ ಸಮಯದಲ್ಲಿ ದೇವರಿಗೆ ನೈವೇದ್ಯವಾಗಿ ಇಟ್ಟಿರುವ ಪ್ರಸಾದವನ್ನು ಯಾರಾದರೂ ನಿಮಗೆ ಕೊಟ್ಟರೆ ಅದನ್ನು ಯಾವುದೇ ಕಾರಣಕ್ಕೂ ನಿರಾಕರಿಸಬಾರದು. ಇನ್ನು ರಸ್ತೆಯಲ್ಲಿ ನಿಮಗೆ ನಾಣ್ಯ ಅಥವಾ ಹಣ ಸಿಕ್ಕರೆ ಅದನ್ನು ತೆಗೆದುಕೊಳ್ಳಬೇಕು. ಏಕೆಂದರೆ ಹಣ ಲಕ್ಷ್ಮಿ ದೇವಿಯ ಸ್ವರೂಪವಾಗಿದ್ದು, ಅದನ್ನು ತೆಗೆದುಕೊಳ್ಳದೆ ಹೋದರೆ ಲಕ್ಷ್ಮಿ ದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ ಎನ್ನಲಾಗುತ್ತದೆ. ಇನ್ನು ಇದೆ ರೀತಿ ನಿಮ್ಮ ಮನೆಯ ಮುಂದೆ ಹಸು ಅಥವಾ ಯಾರಾದರೂ ಸನ್ಯಾಸಿ ಬಂದರೆ ಅವರನ್ನು ಬರಿಗೈಯಲ್ಲಿ ಕಳುಹಿಸಬಾರದು ನಿಮ್ಮ ಕೈಲಾದಷ್ಟು ಬೆಲ್ಲ ಹಾಗೂ ಧಿನಿಸ್ಸುಗಳನ್ನು ಕೊಟ್ಟು ಕಳುಹಿಸಬೇಕು. ಇದೆ ರೀತಿ ಅದೆಷ್ಟೋ ಅದೃಷ್ಟದ ಸಂಕೇತಗಳು ನಮಗೆ ಸಿಗುತ್ತಿರುತ್ತದೆ, ಆದರೆ ಅದ್ಯಾವುದು ನಮ್ಮ ಘಮನಕ್ಕೆ ಬರುವುದಿಲ್ಲ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…