Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಒಂದು ಶಕ್ತಿಶಾಲಿಯಾದ ಮಂತ್ರವನ್ನು ಏಳು ಸೋಮವಾರ 21 ಬಾರಿ ಹೇಳಿದರೆ ಸಾಕು ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ ನಿವಾರಣೆಯಾಗುತ್ತವೆ

ಏಳು ಸೋಮವಾರಗಳ ಕಾಲ 21 ಬಾರಿ ಮಂತ್ರವನ್ನು ಹೇಳಿದ್ರೆ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳು ದೂರವಾಗುತ್ತವೆ.ಹಾಯ್ ಸ್ನೇಹಿತರೆ ಹೌದು ಈ ಒಂದು ಮಂತ್ರವನ್ನು ನೀವು 7 ಸೋಮವಾರ 21 ಬಾರಿ ಹೇಳಬೇಕು ಈ ರೀತಿಯಾಗಿ ಮಾಡಿದರೆ ನೀವು ಅಂದುಕೊಂಡ ಕಾರ್ಯಗಳೆಲ್ಲ ಯಶಸ್ವಿಯಾಗುತ್ತವೆ ನಿಮ್ಮ ಕನಸುಗಳು ನೆರವೇರುತ್ತವೆ ಹಾಗಾದರೆ ಬನ್ನಿ ನೋಡೋಣ ಈ ಒಂದು ಮಂತ್ರದ ಶಕ್ತಿ ಹೇಗಿದೆ ಎಂದು ತಿಳಿಯಲು ನೀವು ಕೂಡ ಒಂದು ಬಾರಿ ಈ ಪ್ರಯೋಗ ಮಾಡಿ ನೋಡಿ. ಸೋಮವಾರ ವಾರದ ಆರಂಭದ ದಿನ. ಸೋಮವಾರದ ದಿನ ಶಿವನನ್ನು ಆರಾಧಿಸುತ್ತಾರೆ. ಶಿವಧ್ಯಾನ ಮಾಡಿದವರಿಗೆ ಕೈಲಾಸ ಸಿಗುತ್ತದೆ ಎಂದು ಹೇಳುತ್ತಾರೆ.

ಶಿವನು ಭಕ್ತರ ಆಸೆ ಕನಸುಗಳನ್ನು ಬೇಗ ನೆರವೇರಿಸುತ್ತಾನೆ ಎನ್ನುವ ನಂಬಿಕೆ ಕೂಡ ಇದೆ ಭಕ್ತರ ಮಾತಿಗೆ ಕಟ್ಟುಬೀಳುವ ದೇವರು ಎಂದರೆ ಶಿವ ಒಬ್ಬನೇ. ವಿಶೇಷವಾಗಿ ಶಿವನನ್ನು ಶಿವರಾತ್ರಿಯ ದಿನದಂದು ಆರಾಧಿಸುತ್ತಾರೆ ಶಿವರಾತ್ರಿಯ ದಿನ ಉಪವಾಸ ಮಾಡಿ ರಾತ್ರಿಪೂರ್ತಿ ಶಿವ ಭಜನೆ ಮಾಡಿದರೆ ಸತ್ತ ಮೇಲೆ ನಾವು ಕೈಲಾಸದಲ್ಲಿ ಇರುತ್ತೇವೆ ಎನ್ನುವ ನಂಬಿಕೆ ಇದೆ. ಇಡೀ ಲೋಕದಲ್ಲಿ ಶಿವನನ್ನು ಪೂಜಿಸದವರಾರು ಇಲ್ಲ. ಶಿವ ದೇವರನ್ನು ಹಲವಾರು ನಾಮಗಳಿಂದ ಕರೆಯುತ್ತಾರೆ ಅದರಲ್ಲಿ ಪರಮಾತ್ಮ ನೀಲಕಂಠ ವಿಷಕಂಠ ಹರ ಮಹಾದೇವ ಕೈಲಾಸವಾಸಿ ಹೀಗೆ ನಾನಾ ತರಹದ ಹೆಸರಿನಿಂದ ಕರೆಯುತ್ತಾರೆ. ಶಿವನನ್ನು ಪ್ರತಿ ಸೋಮವಾರ ಪೂಜಿಸುತ್ತಾ ನಮ್ಮ ಹರಕೆಗಳನ್ನು ಕೇಳಿಕೊಂಡರೆ ಖಂಡಿತವಾಗಿಯೂ ಅದಕ್ಕೆ ಪ್ರತಿಫಲ ಸಿಕ್ಕೆ ಸಿಗುತ್ತದೆ.

ಆದರೆ ನಾನು ಈಗ ಹೇಳುವ ಈ ಒಂದು ಮಂತ್ರವನ್ನು ನೀವು ಏಳು ಸೋಮವಾರ 21 ಬಾರಿ ಹೇಳಿದರೆ ನಿಮ್ಮ ಜೀವನದಲ್ಲಿ ತುಂಬಾ ಬದಲಾವಣೆ ಆಗುತ್ತದೆ. ಎಲ್ಲರ ಮನೆಯಲ್ಲೂ ಸಾಕಷ್ಟು ನೋವುಗಳು ಇರುತ್ತದೆ ಅದರಲ್ಲೂ ಮನೆಯ ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯದ ಪರಿಸ್ಥಿತಿ ಅಂತಹ ತೊಂದರೆಗಳು ಹೆಚ್ಚಾಗಿ ಎಲ್ಲರ ಮನೆಯಲ್ಲಿ ಇರುತ್ತವೆ. ಇನ್ನೊಬ್ಬರು ಎಷ್ಟೇ ದುಡಿದರೂ ಬಂದ ದುಡ್ಡೆಲ್ಲ ನೀರಿನಂತೆ ಖರ್ಚಾಗಿ ಹೋಗುತ್ತದೆ. ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಇದ್ದಾಗ ಮತ್ತು ಮನೆಯಲ್ಲಿ ಸಂತೋಷ ಸುಖ ನೆಮ್ಮದಿ ಇಲ್ಲದೆ ಹೋದರೆ ಇಂತಹ ಯಾವುದೇ ತೊಂದರೆಗಳಿದ್ದರೂ ನೀವು ಪೂಜೆ ಮಾಡಿದ ನಂತರ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ.

ಈ ಒಂದು ಮಂತ್ರ ತುಂಬಾ ಶಕ್ತಿಯಿಂದ ಕೂಡಿದೆ ಇದನ್ನು ನೀವು ಯಾವಾಗ ಬೇಕಾದರೂ ಪ್ರಾರಂಭ ಮಾಡಬಹುದು. ಏಳು ಸೋಮವಾರ 21 ಬಾರಿ ಈ ಮಂತ್ರವನ್ನು ಹೇಳಬೇಕು ಈ ಮಂತ್ರ ಹೀಗಿದೆ ನಮೋ ಭವಾಯ ಶರವಾಯ ರುದ್ರಾಯ ವರದಾಯಚ ಪಶು ನಾಮ್ ಪತಹೆ ನಿತ್ಯಂ ರುದ್ರಾಯ ಕಪರ್ದಿನಿ ಈ ಮಂತ್ರವನ್ನು ಶಿವನ ಆರಾಧನೆ ಮಾಡುವಾಗ 21 ಬಾರಿ ಹೇಳಬೇಕು. ಭಕ್ತರ ಆಸೆ ಕನಸುಗಳನ್ನು ಬೇಗ ನೆರವೇರಿಸುವ ಶಿವನು ಎಲ್ಲರಿಗೂ ಬೇಗ ಒಲಿಯುವನು. ಮಂತ್ರವನ್ನು ನೀವು ಪ್ರಯೋಗ ಮಾಡಿ ನೋಡಿ ನಿಮ್ಮ ಜೀವನದಲ್ಲಿ ನೋವುಗಳ ದೂರವಾಗಿ ಸಾಕಷ್ಟು ನೆಮ್ಮದಿ ಸಿಗುತ್ತದೆ.

ಸ್ನೇಹಿತರೆ ಯಾವುದೇ ಪೂಜೆಯನ್ನು ಪ್ರಾರಂಭ ಮಾಡುವ ಮುನ್ನ ಪೂರ್ತಿಯಾದ ಭಕ್ತಿ ನಂಬಿಕೆ ಇರಬೇಕು ಇಲ್ಲವಾದರೆ ಪೂಜೆ ಮಾಡಲು ಮನಸ್ಸಿಲ್ಲದೆ ಹೋದರೆ ಮಾಡಬಾರದು. ಅರ್ಧಂಬರ್ಧ ಮನಸ್ಸಿನಿಂದ ಮಾಡಿದ ಪೂಜೆಗೆ ಯಾವುದೇ ಪ್ರತಿಫಲ ಸಿಗುವುದಿಲ್ಲ ಸ್ನೇಹಿತರೆ ಈ ಮಾಹಿತಿಯನ್ನು ನೀವು ಕೂಡ ಪೂರ್ತಿಯಾಗಿ ಓದಿ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ