ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡುವುದರಿಂದ ಶನಿಕಾಟ ನಿಮಗೆ ತಪ್ಪಿದ್ದಲ್ಲ ಹಾಗಾದರೆ ಆ ತಪ್ಪುಗಳು ಯಾವವು ಎಂಬುದನ್ನು ನೀವೇ ನೋಡಿ.ಸ್ನೇಹಿತರೆ ಮನೆಯಲ್ಲಿ ನಾವು ಮಾಡುವ ಚಿಕ್ಕ ಚಿಕ್ಕ ತಪ್ಪುಗಳಿಂದ ಏಷ್ಟೆಲ್ಲಾ ಸಮಸ್ಯೆಗಳು ಆಗುತ್ತವೆ. ಉದಾಹರಣೆಗೆ ಮನೆಯಲ್ಲಿ ಆರೋಗ್ಯದ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆ ತುಂಬಾನೇ ಹೆಚ್ಚಾಗುತ್ತವೆ. ಶನಿದೇವ ಎಲ್ಲರಿಗೂ ಎಷ್ಟು ಕಷ್ಟ ಕೊಡುವನು ಅಷ್ಟೇ ಆಶೀರ್ವದಿಸುವನು. ಶನಿದೇವನು ಕರ್ಮಫಲದಾತನು ಅಂದರೆ ನಾವು ಮಾಡಿದ ತಪ್ಪಿಗೆ ಶಿಕ್ಷೆ ಕೊಡುವವನು ಹಾಗೂ ಪುಣ್ಯಗಳಿಗೆ ಆಶೀರ್ವದಿಸುವನು.
ಚಿಕ್ಕ ಮಕ್ಕಳಾಗಲಿ ದೊಡ್ಡವರಾಗಲಿ ಇಂತಹ ತಪ್ಪುಗಳನ್ನು ಮಾಡಿದರೆ ಶನಿದೇವನು ನಿಮಗೆ ತುಂಬಾ ಕಾಡುತ್ತಾನೆ. ಹಾಗಾದರೆ ಈ ತಪ್ಪುಗಳನ್ನು ನೀವು ಮಾಡಬೇಡಿ. ಮೊದಲನೆಯದಾಗಿ ಕೆಲವೊಬ್ಬರಿಗೆ ದಿಂಬಿನ ಮೇಲೆ ಕುಳಿತುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಈ ರೀತಿಯಾಗಿ ದಿಂಬಿನ ಮೇಲೆ ಕುಳಿತುಕೊಳ್ಳುವುದು ಒಳ್ಳೆಯದಲ್ಲ ಶನಿದೇವನು ನಿಮಗೆ ತುಂಬಾ ಕಾಡುತ್ತಾನೆ ಯಾವ ರೂಪದಲ್ಲಿ ಎಂದರೆ ನಿಮ್ಮ ಆರೋಗ್ಯ ಪದೇಪದೇ ಹದಗೆಡುತ್ತದೆ. ಹಾಗೆಯೇ ಮುಖದ ಮೇಲೆ ಬಂಗು ಆಗುವ ಸಾಧ್ಯತೆಯಿರುತ್ತದೆ ಮುಖದ ಮೇಲೆ ಹೀಗೆ ಆದರೆ ಐದು ವರ್ಷದವರೆಗೂ ತುಂಬಾ ಕಷ್ಟವನ್ನು ಅನುಭವಿಸುತ್ತಿರಾ.
ಬಹಳಷ್ಟು ಮನೆಯಲ್ಲಿ ಇಂತಹ ತಪ್ಪುಗಳು ಸಾಮಾನ್ಯವಾಗಿ ನಡೆಯುತ್ತವೆ ನೀವು ಕೂಡ ಗಮನಿಸಿ ಅವರಿಗೂ ಇಂತಹದೇ ತೊಂದರೆಗಳು ಉಂಟಾಗಬಹುದು. ಹಾಗಾದರೆ ಈ ಅಭ್ಯಾಸವನ್ನು ಬಿಡುವುದು ನಿಮಗೆ ತುಂಬಾ ಒಳ್ಳೆಯದು ಶನಿದೇವನಿಂದ ನೀವು ಗ್ರಹಚಾರವನ್ನು ತಪ್ಪಿಸಿಕೊಳ್ಳುವ ಹಾಗೆ ಈ ದಿಂಬಿನ ಮೇಲೆ ಕೂರರದಿರುವ ಅಭ್ಯಾಸವು ಮಾಡುತ್ತದೆ. ಹಾಗಾದರೆ ಎರಡನೆಯ ತಪ್ಪು ಯಾವುದೆಂದರೆ ಅಡುಗೆಮನೆಯಲ್ಲಿ ಬಳಕೆಮಾಡುವ ಚಾಕುವನ್ನು ಹಾಗೂ ಸೂಜಿದಾರಗಳನ್ನು ಅಥವಾ ಯಾವುದೇ ಚುಚ್ಚುವಂತಹ ವಸ್ತುಗಳನ್ನು ಕಣ್ಣಿಗೆ ಕಾಣುವ ಹಾಗೆ ಇಡಬಾರದು. ಈ ರೀತಿಯಾಗಿ ವಸ್ತುಗಳನ್ನು ಇಟ್ಟರೆ ಶನಿಯ ಕಾಟ ನಿಮಗೆ ತಪ್ಪಿದ್ದಲ್ಲ.
ನಿಮ್ಮಿಂದ ಯಾವುದೇ ತಪ್ಪುಗಳು ಆಗಬಾರದು ಎಂದರೆ ಈ ಎಲ್ಲಾ ವಸ್ತುಗಳನ್ನು ದೂರವಿಡಿ. ಇದರಿಂದಾಗಿ ನಿಮಗೆ ಹಾಗೂ ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆಗಳಾಗುತ್ತವೆ ಹಾಗೂ ನಿಮ್ಮ ಮನೆಯಲ್ಲಿ ಏಳಿಗೆ ಎಂಬುದು ಆಗುವುದಿಲ್ಲ. ಮೂರನೇ ತಪ್ಪು ಯಾವುದೆಂದರೆ ನಿಮಗಿಂತ ದೊಡ್ಡವರಿಗೆ ಎದುರು ಉತ್ತರ ನೀಡುವುದು ಮತ್ತು ಅಥವಾ ಅವರ ಜೊತೆ ಜಗಳವಾಡುವುದನ್ನು ಮಾಡಿದರೆ ನಿಮಗೆ ಶನಿದೇವನ ಕಾಡುತ್ತಾನೆ. ಹಾಗಾಗಿ ಇಂತಹ ತಪ್ಪುಗಳನ್ನು ಮಾಡಬೇಡಿ. ನಾಲ್ಕನೆಯ ತಪ್ಪು ಯಾವುದೆಂದರೆ ರಸ್ತೆಯಲ್ಲಿ ನೀವು ಹೋಗುತ್ತಿರುವಾಗ ಅಕಸ್ಮಾತಾಗಿ ಯಾವುದೇ ಕಬ್ಬಿಣದ ವಸ್ತುಗಳು ಸಿಕ್ಕರೆ ಮನೆಗೆ ತೆಗೆದುಕೊಂಡು ಹೋಗಬಾರದು ಹೀಗೆ ಮಾಡುವುದರಿಂದ ನಿಮಗೆ ಶನಿಯು ಕಾಡುತ್ತಾನೆ
ಮತ್ತು ನಿಮ್ಮ ಮನೆಗೆ ಒಳ್ಳೆಯದು ಆಗುವುದಿಲ್ಲ ಅವು ಎಂತಹದೇ ವಸ್ತುಗಳಾಗಿ ಇರಲಿ ಎಷ್ಟೇ ಬೆಲೆ ಇದ್ದರು ಅಂತಹ ವಸ್ತುಗಳನ್ನು ನೀವು ಮನೆಗೆ ತೆಗೆದುಕೊಂಡು ಹೋಗಬಾರದು. ಇಂತಹ ಚಿಕ್ಕ ಚಿಕ್ಕ ತಪ್ಪುಗಳು ನಾವು ನಮಗೆ ಮಾಡಿಕೊಳ್ಳುವ ದೊಡ್ಡದೊಡ್ಡ ತೊಂದರೆಗಳಾಗಿ ಕಾಡುತ್ತವೆ ಶನಿದೇವನು ನಮ್ಮ ಮೇಲೆ ಕೋಪಿತನಾಗುತ್ತಾನೆ. ಒಂದು ಸಲ ಶನಿಯ ಗ್ರಹಚಾರಕ್ಕೆ ಸಿಕ್ಕರೆ ಜೀವನದಲ್ಲಿ ತುಂಬಾ ಬದಲಾವಣೆಗಳಾಗುತ್ತವೆ ಮತ್ತು ನೆಮ್ಮದಿಯು ಇರುವುದಿಲ್ಲ. ಹಾಗಾಗಿ ಆಂಜನೇಯನ ಶನಿದೇವನ ಪ್ರಾರ್ಥನೆಯನ್ನು ಮಾಡಿ.
ಇನ್ನೊಂದು ತಪ್ಪು ಯಾವುದೆಂದರೆ ಕಬ್ಬಿಣದ ಮಂಚದ ಮೇಲೆ ಮಲಗುವುದು ಕಬ್ಬಿಣದ ಮಲಗುವುದರಿಂದ ನೀವು ತುಂಬಾ ಅನಾರೋಗ್ಯದಿಂದ ಇರುತ್ತೀರಾ. ಹಾಗೆಯೇ ತುಂಬಾ ಸಮಸ್ಯೆಗಳನ್ನು ನೀವು ನೋಡುತ್ತೀರಾ. ಇನ್ನು ಕೊನೆಯ ತಪ್ಪು ಯಾವುದೆಂದರೆ ಯಾವುದೇ ದೇವಸ್ಥಾನಕ್ಕೆ ಹೋಗುವ ಮೊದಲು ಕೈ ಕಾಲುಗಳನ್ನು ತೊಳಯದೇ ಇರುವುದು. ಹೌದು ಸ್ನೇಹಿತರೆ ಇದು ಕೂಡ ನೀವು ಮಾಡುವ ದೊಡ್ಡ ತಪ್ಪು ಹೀಗೆ ಮಾಡಿದರೆ ಶನಿದೇವನಿಂದ ನೀವು ತುಂಬಾ ತೊಂದರೆಗೆ ಈಡಾಗುತ್ತಿರಾ ದೇವಸ್ಥಾನದ ಒಳಗೆ ಹೋಗುವ ಮೊದಲು ಕಾಲಿನ ಹಿಂಭಾಗವನ್ನು ಅಂದರೆ ಹಿಂಬಡಿಗಳನ್ನು ತೊಳೆದುಕೊಂಡು ಹೋಗಬೇಕು.
ಹಾಗಾದರೆ ಸ್ನೇಹಿತರೇ ಇಂತಹ ತಪ್ಪುಗಳನ್ನು ನೀವು ನಿಮ್ಮ ಜೀವನದಲ್ಲಿ ಮಾಡಬೇಡಿ ಈ ಒಂದು ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಎಲ್ಲರಿಗೂ ತಿಳಿಸಿ ಗೊತ್ತಿರುವ ತಪ್ಪುಗಳನ್ನು ಪದೇಪದೇ ಮಾಡಬೇಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ