ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ಹಸ್ತ ಸಾಮುದ್ರಿಕ ಶಾಸ್ತ್ರದ ಒಂದು ಭಾಗವಾಗಿ ಇರುವ ಮುಖ ಸಾಮುದ್ರಿಕ ಶಾಸ್ತ್ರವು ತಿಳಿಸುವ ಈ ಆಯಸ್ಸಿನ ರೇಖೆಯ ಬಗ್ಗೆ ಮತ್ತು ವ್ಯಕ್ತಿಯಲ್ಲಿ ಆಯಸ್ಸಿನ ಲಕ್ಷಣಗಳನ್ನು ಕುರಿತು ತಿಳಿಯೋಣ ಹಾಗೆ ವ್ಯಕ್ತಿಯ ಒಂದು ಅದೃಷ್ಟ ದುರಾದೃಷ್ಟವನ್ನು ಕುರಿತು ತಿಳಿಸುವಂತಹ ಕೆಲವೊಂದು ಲಕ್ಷಣಗಳನ್ನು ಕೂಡ ತಿಳಿಯೋಣ. ಈ ಮುಖ ಸಾಮುದ್ರಿಕ ಶಾಸ್ತ್ರವು ತಿಳಿಸುತ್ತದೆ ಹಣೆ ವಿಶಾಲವಾಗಿ ಇದ್ದರೆ ಅಥವಾ ವ್ಯಕ್ತಿಯ ಹಣೆಯ ಭಾಗ ಎಷ್ಟು ಅಗಲವಾಗಿ ಇರುತ್ತದೆ ಅಷ್ಟು ಆಯಸ್ಸನ್ನು ಆ ವ್ಯಕ್ತಿ ಪಡೆದಿರುತ್ತಾನೆ ಎಂದು ತಿಳಿಸುತ್ತದೆ.
ಈ ರೀತಿ ಹಣೆ ಅಗಲವಾಗಿದ್ದರೆ ಅದು ಬಹಳ ಒಳ್ಳೆಯದು ಆ ವ್ಯಕ್ತಿ ರಾಜಯೋಗವನ್ನು ಪಡೆದುಕೊಳ್ಳುತ್ತಾನೆ ಅಂತ ತಿಳಿಸುತ್ತದೆ ಇನ್ನು ಈ ಮುಖ ಸಾಮುದ್ರಿಕ ಶಾಸ್ತ್ರವು ಹೇಳುತ್ತದೆ ನೆತ್ತಿಯ ಭಾಗದಲ್ಲಿ ಹುಬ್ಬಿದ್ದರೆ ಅಂತಹ ವ್ಯಕ್ತಿ ಶ್ರೀಮಂತಿಕೆಯನ್ನು ತನ್ನ ಒಂದು ಶ್ರಮದಿಂದ ಪಡೆದುಕೊಳ್ಳುತ್ತಾನೆ.ಅದೇ ಈ ಹಣೆಯ ಭಾಗದಲ್ಲಿ ಹುಬ್ಬಿದ್ದು ನೆತ್ತಿಯ ಭಾಗದಲ್ಲಿ ಚಪ್ಪಟೆ ಇದ್ದರೆ ಅಂತಹ ವ್ಯಕ್ತಿ ತನ್ನ ಇಪ್ಪತ್ತೈದನೆಯ ವಯಸ್ಸಿನಿಂದ ನಲವತ್ತೈದನೇ ವಯಸ್ಸಿನೊಳಗೆ ಹೆಚ್ಚು ಶ್ರೀಮಂತಿಕೆಯನ್ನ ಪಡೆದುಕೊಳ್ಳುತ್ತಾನೆ ಜೀವನದಲ್ಲಿ ಹಣ ಯೋಗವನ್ನು ಪಡೆದುಕೊಳ್ಳುತ್ತಾನೆ ಅಂತಾ ಹೇಳಲಾಗುತ್ತದೆ.
ಈ ತಲೆಯ ಮೇಲೆ ಅರ್ಧ ಚಂದ್ರಾಕಾರದ ಆಕಾರವಿದ್ದರೆ ಈ ನೃತ್ಯಭಾಗದಲ್ಲಿ ಈ ರೀತಿ ಇದ್ದರೆ ಆ ವ್ಯಕ್ತಿ ತುಂಬಾ ತಿಳುವಳಿಕೆ ಹೊಂದಿದ್ದಾನೆ ಬೇರೆಯವರಿಗಿಂತ ಹೆಚ್ಚು ಬುದ್ಧಿವಂತಿಕೆಯನ್ನು ಹೊಂದಿರುತ್ತಾನೆ ಎಂದು ಹೇಳಲಾಗುತ್ತದೆ. ಈ ರೀತಿ ಒಂದು ಆಕಾರವಿದ್ದರೆ ತುಂಬಾ ಒಳ್ಳೆಯದು ಅಂತ ಕೂಡ ಹೇಳ್ತಾರೆ.ಅದೇ ಈ ತಲೆಯ ಮೇಲೆ ಫ್ಲಾಟ್ ಆಗಿ ಹೌದು ಈ ತಲೆಯ ಮೇಲೆ ಚಪ್ಪಟೆಯ ಆಕಾರ ಇದ್ದರೆ ಅಂತಹ ವ್ಯಕ್ತಿ ಹುಟ್ಟಿದಾಗಿನಿಂದಲೇ ಬಡತನವನ್ನು ಎದುರಿಸಬೇಕಾಗುತ್ತದೆ. ಊಟ ಮಾಡುವುದಕ್ಕೂ ಕೂಡ ಕಷ್ಟವಾಗುವ ಒಂದು ಪರಿಸ್ಥಿತಿಯನ್ನು ಅಂತಹ ವ್ಯಕ್ತಿಗಳು ಜೀವನದಲ್ಲಿ ಎದುರಿಸುತ್ತಾರೆ.
ಈ ಭಾಗದ ಕಣ್ಣಿನ ಪಕ್ಕದಲ್ಲಿ ವಿಶಾಲವಾದ ಜಾಗವಿದ್ದರೆ ಅಂತಹ ವ್ಯಕ್ತಿ ತುಂಬಾ ಉತ್ಸಾಹದಾಯಕ ನಾಗಿರುತ್ತಾನೆ ಮತ್ತು ಹೆಚ್ಚು ಹಾಸ್ಯಪ್ರಜ್ಞೆಯನ್ನು ಹೊಂದಿರುವಂತಹ ಮನೋಭವನ ಇಂತಹ ವ್ಯಕ್ತಿಗಳು ಪಡೆದುಕೊಂಡಿರುತ್ತಾರೆ.ಅದೇ ಈ ಹಣೆಯ ಭಾಗದಲ್ಲಿ ಗುಂಡಾಗೆ ಇದ್ದರೆ, ಅವರು ಕಲೆಯ ವಿಚಾರದಲ್ಲಿ ಅಂದರೆ, ಈ ಕಲೆ ಕ್ಷೇತ್ರದಲ್ಲಿ ಹಾಡು ಸಂಗೀತ ನೃತ್ಯ ಇಂತಹ ಕಲೆಗಳಲ್ಲಿ ಹೆಚ್ಚಿನ ಒಲವು ತೋರಿಸುತ್ತಾರೆ ಅಂತ ಹೇಳಲಾಗುತ್ತದೆ.ಯಾವ್ಯಕ್ತಿಗೆ ಹಣೆಯ ಮೇಲೆ ರೇಖೆಗಳು ಇರುತ್ತದೆ
ಹೌದು ಹಣೆಯ ಮೇಲೆ 3ರೇಖೆ ಇದ್ದರೆ ಅಂತಹ ವ್ಯಕ್ತಿಯನ್ನು ಪೂರ್ಣ ಯಶಸ್ಸು ಅಂದರೆ ಆ ವ್ಯಕ್ತಿ ಪೂರ್ಣ ಯಶಸ್ಸನ್ನು ಪಡೆದುಕೊಂಡಿರುತ್ತಾನೆ. ಈ ಹಣೆಯ ಮೇಲೆ 4ರೇಖೆಗಳಿದ್ದರೆ ಅವನು ವಿಶೇಷವಾದ ರಾಜಯೋಗವನ್ನು ಪಡೆದುಕೊಳ್ಳುತ್ತಾನೆ.ಅದೇ ಈ ಹಣೆಯ ಮೇಲೆ ಉದ್ದನೆಯ ರೇಖೆ ಇದ್ದರೆ, ಈ ರೇಖೆಗಳು ಮೂರು ಸಂಖ್ಯೆಯಲ್ಲಿ ಇದ್ದರೆ ಅಂತಹ ವ್ಯಕ್ತಿ ಅದೃಷ್ಟವಂತ ಅಂತ ಹೇಳ್ತಾರೆ. ಅದೇ ಈ ಹಣೆಯ ಮೇಲೆ ಉದ್ದನೆಯ ರೇಖೆಗಳು ಮೂರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿದ್ದರೆ ಅವನನ್ನು ಪರಮಪಾಪಿಷ್ಟ ಅಂತ ಕೂಡ ಹೇಳ್ತಾರೆ.
ಈ ರೀತಿಯಾಗಿ ಹಸ್ತ ಸಾಮುದ್ರಿಕ ಶಾಸ್ತ್ರದ ಭಾಗವಾಗಿ ಇರುವ ಮುಖ ಸಾಮುದ್ರಿಕ ಶಾಸ್ತ್ರವು ವ್ಯಕ್ತಿಯ ಕೆಲವೊಂದು ಜೀವನಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಈ ರೀತಿಯ ಲಕ್ಷಣಗಳಿಂದ ತಿಳಿಸುತ್ತಾ ಇರುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ