ನಮ್ಮ ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ನಾನಾ ತರಹದ ತೊಂದರೆಗಳನ್ನ ನಾವು ಎದುರಿಸಬೇಕಾಗುತ್ತದೆ ಆದರೆ ಕೇವಲ ಆರೋಗ್ಯ ವೃದ್ಧಿಸಿ ಕೊಳ್ಳುವುದಕ್ಕೆ ಮಾತ್ರ ಯೋಚಿಸುವುದಿಲ್ಲವೇ ನಮ್ಮ ದೇಹವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರಲ್ಲಿ ಕೂಡ ನಾವು ಸಾಕಷ್ಟು ಗಮನವನ್ನು ವಹಿಸಬೇಕಾಗುತ್ತದೆ .ಆದ್ದರಿಂದಲೇ ವೈಜ್ಞಾನಿಕವಾಗಿಯೂ ಹೇಳಲಾಗುತ್ತದೆ ಪ್ರತಿದಿನ ಸ್ನಾನ ಮಾಡಬೇಕು ನಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು , ನಾವು ನಮ್ಮ ದೇಹವನ್ನು ಪ್ರತಿದಿನ ಸ್ವಚ್ಛ ಮಾಡದೇ ಇದ್ದರೆ ಚರ್ಮರೋಗ ಸಮಸ್ಯೆಗಳು ಎದುರಾಗುತ್ತವೆ .ನಾನು ಈ ಮೇಲೆ ತಿಳಿಸಿದ ಹಾಗೆಯೇ ನಾವು ಸ್ವಚ್ಛವಾಗಿಲ್ಲವಾದರೆ ನಾನಾ ತರಹದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಎಂದು , ಈ ಚರ್ಮರೋಗ ಸಮಸ್ಯೆ ಬಂದರೂ ಕೂಡ ಅನೇಕ ತರಹದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ . ಈ ಚರ್ಮರೋಗ ಸಮಸ್ಯೆಯಿಂದ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ನಮ್ಮನ್ನು ಕಾಡಲು ಶುರುವಾಗುತ್ತದೆ ,ಇಂತಹ ಸಮಸ್ಯೆಗಳನ್ನು ಚಿಕ್ಕದಿದ್ದಾಗಲೇ ಪರಿಹರಿಸಿಕೊಂಡರೆ ಆ ಸಮಸ್ಯೆ ದೊಡ್ಡದಾಗುವುದು ಇಲ್ಲ ಹಾಗೂ ಆ ಸಮಸ್ಯೆಗಾಗಿ ನಾವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿರುವುದಿಲ್ಲ .ಪ್ರಿಕಾಶನ್ ಈಸ್ ಬೆಟರ್ ದೇನ್ ಕ್ಯೂರ್ ಎಂಬ ಮಾತಿನಂತೆ ನಾವು ಸಮಸ್ಯೆಗಳು ನಮ್ಮೆಡೆ ಬರುವ ಮೊದಲೇ ನಾವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ ಆದ್ದರಿಂದಲೇ ಇಂತಹ ಚರ್ಮರೋಗ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳುವುದಕ್ಕಾಗಿ ನಾವು ಪ್ರತಿದಿನ ಸ್ನಾನ ಮಾಡಬೇಕು ಸ್ವಚ್ಛವಾಗಿರಬೇಕು ಹಾಗೂ ಆಚೆ ಹೋಗಿ ಬಂದ ಕೂಡಲೇ ಕೈ ಕಾಲುಗಳನ್ನು ಸ್ವಚ್ಛ ಪಡಿಸಿಕೊಳ್ಳಬೇಕು .
ಇದೀಗ ನಮ್ಮ ದೇಹದಲ್ಲಿ ಒಂದು ಮುಖ್ಯವಾದ ಅಂಗವಾಗಿರುವ ತಹ ಕಾಲುಗಳು ಪಾದಗಳ ಬಗ್ಗೆ ತಿಳಿದುಕೊಳ್ಳೋಣ ಈ ಪಾದಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಹಾಳೆಗಳು ವಾಸನೆ ಬರದೇ ಇರುವ ಹಾಗೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ .ನಮ್ಮ ದೇಹದಲ್ಲಿ ಮತ್ತೊಂದು ಮುಖ್ಯವಾದ ಅಂಗವೆಂದರೆ ಅದು ಕಾಲುಗಳು , ನಾವು ಓಡಾಡುವುದಕ್ಕಾಗಿ ಸಹಾಯ ಮಾಡುವಂತಹ ಈ ಕಾಳುಗಳು ಪಾದಗಳು ಸ್ವಚ್ಛವಾಗಿಟ್ಟುಕೊಳ್ಳಬೇಕು ಈ ಪಾದಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದರೆ ಏನು ಮಾಡಬೇಕು .ನಾವು ಓಡಾಡುವುದರಿಂದ ನಮ್ಮ ಪಾದಗಳಿಗೆ ಸಾವಿರಾರು ಬ್ಯಾಕ್ಟೀರಿಯಾಗಳು ಸೋಂಕಿರುತ್ತವೆ ಈ ಸೋಂಕಿನ ಬ್ಯಾಕ್ಟೀರಿಯಾದಿಂದಾಗಿ ಪಾದಗಳಲ್ಲಿ ವಾಸನೆ ಕೂಡ ಬರುತ್ತಿರುತ್ತದೆ .
ವಾಸನೆ ಬರುವ ಪಾದಗಳಿಂದ ಮುಕ್ತಿ ಪಡೆದುಕೊಳ್ಳಬೇಕು ಅಂದರೆ ಏನು ಮಾಡಬೇಕು ಎಂಬುದನ್ನು ನಾವು ಎದುರಿನ ಮಾಹಿತಿಯಲ್ಲಿ ತಿಳಿಯೋಣ ಈ ಮಾಹಿತಿ ನಿಮಗೆ ತುಂಬಾನೇ ಉಪಯುಕ್ತವಾಗಿರುತ್ತದೆ ಆದ್ದರಿಂದ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ .
ಮೊದಲಿಗೆ ಪಾದಗಳು ವಾಸನೆ ಬರುವುದಕ್ಕೆ ಕಾರಣವೇನು ಎಂದು ತಿಳಿಯುವುದಾದರೆ ಕೆಲವರು ಆಚೆ ಹೋಗುವುದಕ್ಕಾಗಿ ಪಾದಗಳಿಗೆ ಶೂಸ್ ಅನ್ನು ಬಳಸುತ್ತಾರೆ ಇನ್ನು ಕೆಲವರು ಚಪ್ಪಲಿಗಳನ್ನು ಬಳಸುತ್ತಾರೆ .
ಇಂತಹ ಶೂ ಮತ್ತು ಚಪ್ಪಲಿಗಳನ್ನು ಹಾಕಿದಾಗ ಪಾದಗಳಲ್ಲಿ ವಾಸನೆ ಬರುತ್ತದೆ ಯಾಕೆ ಅಂದರೆ ಶೂಸ್ಗಳನ್ನು ಹಾಕಿದಾಗ ಕಾಲುಗಳಿಗೆ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ಸಿಗುವುದಿಲ್ಲ ಇದಕ್ಕಾಗಿ ಪಾದಗಳು ವಾಸನೆ ಬರುತ್ತವೆ .
ಈ ಸಮಸ್ಯೆಯನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಯಾವ ಕ್ರೀಮ್ಗಳನ್ನು ಬಳಸಿದರೂ ಶಾಶ್ವತ ಪರಿಹಾರವಂತು ದೊರೆಯುವುದಿಲ್ಲ ಇದಕ್ಕಾಗಿ ನೀವು ಶುಂಠಿಯನ್ನು ಬಳಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ .
ಶುಂಠಿಯನ್ನು ಬಿಸಿ ನೀರಿನಲ್ಲಿ ಕುದಿಸಿ ಸ್ವಲ್ಪ ಬೆಚ್ಚಗೆ ಆದ ಮೇಲೆ ಆ ನೀರಿಗೆ ಕಾಲುಗಳನ್ನು ಇಟ್ಟು ಸ್ವಲ್ಪ ಸಮಯ ಹಾಗೇ ಬಿಡಬೇಕು ಈ ರೀತಿ ಮಾಡುವುದರಿಂದ ಪಾದಗಳಲ್ಲಿರುವ ಬ್ಯಾಕ್ಟೀರಿಯಾ ಸತ್ತು ಹೋಗುತ್ತವೆ ಜೊತೆಗೆ ಪಾದಗಳಿಂದ ಬರುತ್ತಿರುವಂತಹ ದುರ್ವಾಸನೆ ಕೂಡ ದೂರವಾಗುತ್ತದೆ . ಈ ರೀತಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಪಾದಗಳ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಪಾದಗಳು ವಾಸನೆ ಕೂಡ ಬರುವುದಿಲ್ಲ .