Categories
ಉಪಯುಕ್ತ ಮಾಹಿತಿ

ಲಾಫಿಂಗ್ ಬುದ್ಧ ಮನೆಯಲ್ಲಿ ಇಟ್ಟರೆ ಏನು ಲಾಭ ಅಂತ ಗೊತ್ತಾ..!!

ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಾಗು ಶಾಂತಿ ನೆಲೆಸಲು ನಾವು ಹಲವಾರು ಪೂಜೆಗಳನ್ನು ಹೋಮಗಳನ್ನು ಮಾಡಿಸುತ್ತೇವೆ ಅದು ಒಳ್ಳೆಯದೇ ಆದರೆ ಅಷ್ಟೇ ಮಾಡಿಸಿದರೆ ಸಾಲದು ನಾವು ವಾಸ್ತು ಶಾಸ್ತ್ರದ ಕೆಲವು ಆಚರಣೆಗಳನ್ನು ಮಾಡಬೇಕಾಗುತ್ತದೆ, ವಾಸ್ತು ಶಾಸ್ತ್ರ ನಮ್ಮ ಹೆಮ್ಮೆಯ ಭಾರತದ ಶಾಸ್ತ್ರ ಇದು ಮನೆಯಲ್ಲಿನ ಕೆಟ್ಟ ಶಕ್ತಿಯನ್ನ ತೊಲಗಿಸಲು ಹಾಗು ದೈವಿಕ ಶಕ್ತಿಯನ್ನ ಮನೆಗೆ ಬರಮಾಡಿಕೊಳ್ಳಲು ಹಲವು ಉಪಾಯಗಳನ್ನ ನೀಡುತ್ತದೆ.

ಇನ್ನು ವಾಸ್ತು ಶಾಸ್ತ್ರ ಮನೆಯಲ್ಲಿ ಒಂದು ಲಾಫಿಂಗ್ ಬುದ್ಧನನ್ನ ಇಡಲು ಹೇಳುತ್ತದೆ, ಏಕೆ ಎಂದು ವಿಶ್ಲೇಷಣೆಯನ್ನು ನೀಡುತ್ತದೆ ಅದನ್ನು ನಾವು ನಿಮಗೆ ಇಂದು ತಿಳಿಸುತ್ತೇವೆ.

ಶಾಂತಿ ಮತ್ತು ಸೌಹಾರ್ದತೆ ನೆಲೆಸಲು : ಮನೆಯ ಪೂರ್ವ ದಿಕ್ಕಿನಲ್ಲಿ ಲಾಫಿಂಗ್ ಬುದ್ದನನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ನೆಡೆಯುವ ಜಗಳಗಳು, ಅಶಾಂತಿ, ಮನಸ್ತಾಪಗಳು ನಿಂತು ಮನೆಯಲ್ಲಿ ಉತ್ತಮ ನಂಬಿಕೆ ಸೌಹಾರ್ದತೆ ಮೂಡುತ್ತದೆ.

ಕೆಲಸ ಸಿಗದೆ ಪರದಾಡುತ್ತಿದ್ದರೆ : ಇನ್ನು ಇದೆ ಲಾಫಿಂಗ್ ಬುದ್ದನನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಎಷ್ಟೇ ಕಷ್ಟ ಪಟ್ಟರು ಕೆಲಸ ಸಿಗದೇ ಇರುವ ನಿಮ್ಮ ಮನೆಯ ಸದಸ್ಯರಿಗೆ ಉತ್ತಮ ಉದ್ಯೋಗ ಭಾಗ್ಯ ಸಿಗುತ್ತದೆ.

ವೃತ್ತಿ ಜೀವನ ಉತ್ತಮವಾಗಿರಲು : ನಿಮ್ಮ ವೃತ್ತಿ ಜೀವನ ಅಂದರೆ ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಅಪನಂಬಿಕೆ ಅಥವಾ ಅಶಾಂತಿಯ ಸಮಸ್ಯೆ ಕಾಡುತ್ತಿದ್ದರೆ ಅದನ್ನೆಲ್ಲಾ ಮೀರಿ ಜೀವನದಲ್ಲಿ ಯಶಸ್ಸು ಕಾಣಲು ಲಾಫಿಂಗ್ ಬುದ್ದನನ್ನು ನಿಮ್ಮ ಮನೆಗೆ ಬರುವ ಎಲ್ಲ ಅಥಿತಿಗಳಿಗೆ ಕಾಣುವಂತೆ ಇಡಬೇಕು, ಇದರಿಂದ ನಿಮ್ಮ ಮೆನೆಯ ಕೆಟ್ಟ ಶಕ್ತಿ ಹೊರಹೋಗುತ್ತದೆ.

ನೆನಪಿಡಿ ಕೈ ಮೇಲೆತ್ತಿರುವ ಲಾಫಿಂಗ್ ಬುದ್ದನನ್ನು ಮಾತ್ರ ನೀವು ಬಹುಮಾನವಾಗಿ ಪಡೆಯತಕ್ಕದು ಹಾಗು ಹಣ ಪಾವತಿ ಮಾಡಿ ತರುವುದಕ್ಕಿಂತ, ಉಡುಗೊರೆ ರೂಪದಲ್ಲಿ ಬಂದರೆ ಒಳ್ಳೆಯದು.

ದಿನಕೊಂದು ಕಿತ್ತಳೆ ತಿನ್ನುವ ಅಭ್ಯಾಸ ವಿದ್ದರೆ ಏನಾಗುತ್ತೆ ಗೊತ್ತಾ.

ಕಿತ್ತಳೆ ಹಣ್ಣುಗಳು ಸರ್ವಶ್ರೇಷ್ಠ, ಈ ಇಹಣ್ಣನ್ನು ಸೇವಿಸುವುದರಿಂದ ಆಯಾಸ ಪರಿಹಾರ ಆಗುವುದು, ಬಾಯಾರಿಕೆ ನೀಗುವುದು, ಹಸಿವು ಕಾಣಿಸಿ ಕೊಳ್ಳುವುದು, ರಕ್ತ ವೃದ್ಧಿಯಾಗುವುದು, ಈ ಹಣ್ಣಿನ ರಸವನ್ನು ಎಲ್ಲಾ ವಯಸ್ಸಿನ ಜನರಿಗೂ ಯಾವುದೇ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೂ ನಿರಂತರವಾಗಿ ಕೊಡಬಹುದು.

ವಿಷಮ ಶೀತ ಜ್ವರ ಮತ್ತು ಕ್ಷಯ ರೋಗ ಪೀಡಿತದವರಿಗೆ ಕಿತ್ತಳೆ ಹಣ್ಣಿನ ರಸವನ್ನು ಅಗತ್ಯವಾಗಿ ಕೊಡಬೇಕು, ಇದು ದ್ರವ ರೂಪದ ಆಹಾರ, ಇದರ ಸೇವನೆ ಇಂದ ರೋಗ ನಿರೋಧಕ ಶಕ್ತಿ ಎಚ್ಚುವುದು.

ಹೃದಯ ದೌರ್ಬಲ್ಯ ಉಳ್ಳವರು ಈ ಹಣ್ಣನ್ನು ವಿಶೇಷವಾಗಿ ತಿನ್ನಬೇಕು, ಹೃದ್ರೋಗಿಗಳು ಜೇನುತುಪ್ಪದೊಂದಿಗೆ ಕಿತ್ತಳೆ ರಸ ಸೇವಿಸುವುದು ಉತ್ತಮ.

ಗರ್ಭಿಣಿಯರಿಗೆ ಕಿತ್ತಳೆ ಹಣ್ಣಿ ರಸ ಕೊಡುತ್ತಿದ್ದರೆ ಹೆರಿಗೆ ಸುಲಭವಾಗಿ ಆಗುವುದು, ತಾಯಿ ಮತ್ತು ಮಗು ಹೆಚ್ಚು ರೋಗ ನಿರೋಧಕ ಶಕ್ತಿ ಪಡೆಯುವರು.

ದಿನಕೊಂದು ಕಿತ್ತಳೆ ಹಣ್ಣು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ನಾಗದಿ ಬರುವುದಿಲ್ಲ, ನಿತ್ಯ ಜೀವನದಲ್ಲಿ ಲವಲವಿಕೆ ಬರುವುದು, ನೆಗಡಿ, ಕೆಮ್ಮು, ದಮ್ಮು ರೋಗಿಗಳಿಗೆ ಒಂದು ಬಟ್ಟಲು ಹಣ್ಣಿನ ರಸಕ್ಕೆ ಒಂದು ಚಿಟಿಕೆ ಉಪ್ಪು ಮತ್ತು ಒಂದು ಊಟದ ಚಮಚ ಜೇನು ತುಪ್ಪ ಮಿಶ್ರ ಮಾಡಿ ಕೊಟ್ಟರೆ ಹೆಚ್ಚು ಪರಿಣಾಮ ಕಾರಿಯಾಗುವುದು.

ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ರುಚಿಯಾದ ಗೊಜ್ಜು ತಯಾರಿಸುವರು, ಸಣ್ಣ ಗಾತ್ರದ ವಿಶೇಷ ಜಾತಿಯ ಕಿತ್ತಳೆಹಣ್ಣನ್ನು ಉಪ್ಪಿನಕಾಯಿ ತಯಾರಿಕಲ್ಲು ಬಳಸ ಬಹುದು.

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮೃದುವಾಗಿ ಹಿಚುಕಿದಾಗ ಸುಗಂಧ ಯುಕ್ತವಾದ ದ್ರವ ಶ್ರವಿಸುವುದು, ಈ ಸಿಪ್ಪೆಯಿಂದ ಮುಖದ ಮೇಲೆ ಉಜ್ಜುತ್ತಿದ್ದರೆ ಮದುವೆಗಳು ಮಾಯವಾಗುತ್ತದೆ, ಕಪ್ಪು ಕಲೆಗಳು ಅದೃಶ್ಯವಾಗುತ್ತವೆ, ಚರ್ಮವ್ಯಾದಿಗಳಲ್ಲೂ ಇದು ಗುಣಕಾರಿ ಎಂದು ಕಂಡು ಬಂದಿದೆ.

Originally posted on October 21, 2018 @ 7:42 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ