ಸಾಮಾನ್ಯವಾಗಿ ಲೈಂಗಿಕ ತೊಂದರೆಗಳು ಕಂಡು ಬಂದಾಗ ನಾವು ವೈದ್ಯರನ್ನು ಸಂಪರ್ಕಿಸಲು ಸಂಕೋಚಕೊಳ್ಳುತ್ತೇವೆ, ಸಂತಾನ ಭಾಗ್ಯ ಲಭಿಸದೆ ಇರಲು ಕಾರಣ ವೀರ್ಯದಲ್ಲಿ ಕಂಡುಬರುವ ನಿಶ್ಯಕ್ತತೆ ಅಥವಾ ಬೇರೆ ಕಾರಣಗಳು ಇರಬಹುದು, ಲೈಂಗಿಕ ತೊಂದರೆಗಳನ್ನು ನಿವಾರಿಸಿಕೊಂಡರೆ ವೀರ್ಯವು ತನ್ನಷ್ಟಕ್ಕೆ ತಾನೆ ವೃದ್ಧಿಯಾಗುತ್ತದೆ, ಅಂತಹ ವಿಷಯವನ್ನು ನಾವು ನಮ್ಮ ಮನೆಯಲ್ಲಿ ದೊರಕುವ ಪದಾರ್ಥಗಳಿಂದ ನಿವಾರಣೆ ಮಾಡಿಕೊಳ್ಳಬಹುದು.
ಹಿಂದಿನ ಕಾಲದಲ್ಲಿ ಈರುಳ್ಳಿಯನ್ನು ಕಾಮಪ್ರಚೋದಕ ಎಂದು ಕರೆಯುತ್ತಿದ್ದರು, ಆದರೆ ಆಧುನಿಕ ಯುಗದಲ್ಲಿ ಈರುಳ್ಳಿಯನ್ನು ಆರೋಗ್ಯ ಪ್ರದಾಯಕ ಎಂದು ಕರೆಯುತ್ತಿದ್ದಾರೆ, ಈರುಳ್ಳಿಯ ಸೇವನೆಯಿಂದ ಹಸಿವು ಹೆಚ್ಚುವುದು, ಆರೋಗ್ಯ ಲಭಿಸುವುದು, ಸ್ನಾಯುಮಂಡಲ ಚೈತನ್ಯ ಗೊಳ್ಳುವುದು, ಕಾಲರಾ ಕ್ರೀಮ್ಗಳನ್ನು ದೇಹದಿಂದ ನಾಶಗೊಳಿಸುವುದು, ಲೈಂಗಿಕ ತೊಂದರೆಗಳನ್ನು ನಿವಾರಿಸಿ ವೀರ್ಯವನ್ನು ವೃದ್ಧಿಸುವುದು.
ವೀರ್ಯ ವೃದ್ಧಿ ಕೊಳ್ಳಬೇಕಾದರೆ ಹುರಿದ ಉದ್ದಿನಬೇಳೆಯನ್ನು ಹಿಟ್ಟಿನ ಜೊತೆ ಬೆರೆಸಿ ತಿನ್ನಬೇಕು.
ನಿಮ್ಮಲ್ಲಿ ಯಾರಿಗಾದರೂ ಶೀಘ್ರ ಸ್ಖಲನದ ಸಮಸ್ಯೆ ಇದ್ದರೆ ಅಂಥವರು ಜೇನುತುಪ್ಪವನ್ನು ಪ್ರತಿನಿತ್ಯ ಸೇವಿಸಬೇಕು ಆಗ ಶೀಘ್ರ ಸ್ಖಲನದ ಸಮಸ್ಯೆ ನಿವಾರಣೆಯಾಗಿ ಸುಖ ಸಂತೃಪ್ತಿ ಸಂಭೋಗವನ್ನು ನಡೆಸಬಹುದು, ಜೇನುತುಪ್ಪ ಶರೀರವನ್ನು ಲವಲವಿಕೆಯಿಂದ ಕೂಡಿರುವಂತೆ ಮಾಡಬಲ್ಲದು.
ಕಾದ ಹಾಲಿಗೆ ಏಲಕ್ಕಿ ಪುಡಿ ಕಲ್ಲುಸಕ್ಕರೆಪುಡಿ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಲೈಂಗಿಕ ಆಸಕ್ತಿ ಹೆಚ್ಚುವುದು, ಹೀಗೆ ಮಾಡುವುದರಿಂದ ಉರಿ ಮೂತ್ರ ರೋಗ ದೂರವಾಗುವುದು.
ಲೈಂಗಿಕ ನಿರಾಸಕ್ತಿಗೆ ನರಗಳ ದೌರ್ಬಲ್ಯ ಒಂದು ಕಾರಣ ನರಗಳ ಶಕ್ತಿಯನ್ನು ವೃದ್ಧಿ ಪಡಿಸಿಕೊಳ್ಳಬೇಕು ಒಂದು ಬಟ್ಟಲು ಎಳ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಬೇಕು, ಆಗ ನರಗಳು ಚೈತನ್ಯ ಗೊಳ್ಳುತ್ತವೆ.
ಬೆಳ್ಳುಳ್ಳಿಯ ಸೇವನೆಯಿಂದ ಜೀರ್ಣಶಕ್ತಿ ವೃದ್ಧಿಸುವುದು ನಂತರ ವೀರ್ಯ ವೃದ್ಧಿಯಾಗುವುದು ಲೈಂಗಿಕ ಆಸಕ್ತಿಯು ಹೆಚ್ಚುವುದು.
ಲೈಂಗಿಕ ಸಾಮರ್ಥ್ಯ ಕಡಿಮೆ ಇರುವವರು ಬಿಳಿ ಈರುಳ್ಳಿ ರಸವನ್ನು ಹಸುವಿನ ತುಪ್ಪದ ಜೊತೆ ಕೋಳಿ ಮೊಟ್ಟೆ ಸೇರಿಸಿ ಸೇವಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
ಬಾಳೆಹಣ್ಣಿನ ಸೇವನೆಯಿಂದ ವೀರ್ಯ ವೃದ್ಧಿಯಾಗುವುದು.
ಕಬ್ಬಿನ ರಸವನ್ನು ಸೇವಿಸಿದರೆ ವೀರ್ಯ ವೃದ್ಧಿಯಾಗುವುದು.
ಹಸುವಿನ ಹಾಲನ್ನು ಕಾಯಿಸಿ ಕುಡಿದರೆ ವೀರ್ಯವು ವೃದ್ಧಿಗೊಳ್ಳುತ್ತದೆ.
ಸಂಭೋಗ ಶಕ್ತಿಯು ಹೆಚ್ಚಲು ಕೆಂಪು ಮೂಲಂಗಿಯ ಪಲ್ಯವನ್ನು ಸೇವಿಸಬೇಕು ಆಗ ವೀರ್ಯ ವೃದ್ಧಿಯಾಗುವುದು.
ವೀರ್ಯಾಣುಗಳ ಕೊರತೆ ಯಿಂದ ನರಳುವವರು ಮೊಸರಿಗೆ ಉಪ್ಪು ಸೇರಿಸಿ ಪ್ರತಿದಿನ ಕುಡಿಯುವುದರಿಂದ ಲೈಂಗಿಕ ಶಕ್ತಿ ಹೆಚ್ಚುವುದು ವೀರ್ಯಾಣುಗಳು ವೃದ್ಧಿಯಾಗುತ್ತವೆ ಹೀಗೆ ಲೈಂಗಿಕ ಸಾಮರ್ಥ್ಯ ಹೆಚ್ಚುವುದು.
ಲೈಂಗಿಕ ಬಲಹೀನತೆ ನಿವಾರಿಸಿಕೊಳ್ಳಲು ಒಣದ್ರಾಕ್ಷಿಯನ್ನು ಸೇವಿಸಬೇಕು ಹಾಗೂ ಲೈಂಗಿಕ ಆಸಕ್ತಿ ಹೆಚ್ಚಾಗುವುದು.