ಭಾನುವಾರ ಮರೆಯದೆ ಕುಂಕುಮ ನೀರಿನಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿನ ಸಮಸ್ಯೆಗಳು ದೂರವಾಗಿ ನೆಮ್ಮದಿ ಇರುತ್ತದೆ.ಹಾಯ್ ಸ್ನೇಹಿತರೆ ಒಂದು ಸಲ ನೀವು ಊಹಿಸಿಕೊಳ್ಳಿ ಮನೆಯಲ್ಲಿ ಬರೀ ನಷ್ಟ ಅನಾರೋಗ್ಯ ಹಾಗೂ ಮೇಲಿಂದ ಮೇಲೆ ಖರ್ಚು ಅಶಾಂತಿ ಅಸಮಾಧಾನ ಹಾಗೂ ಮನೆಯಲ್ಲಿ ಆರ್ಥಿಕವಾಗಿ ತೊಂದರೆ ಹೀಗೆ ಎಲ್ಲಾ ಸಮಸ್ಯೆಗಳು ಮೇಲಿಂದ ಮೇಲೆ ಬಂದರೆ ಮನುಷ್ಯನಿಗೆ ಯಾವ ರೀತಿಯಾಗಿ ಕಷ್ಟವಾಗುತ್ತದೆ ಎಂದು ಒಂದು ಸಲ ವಿಚಾರಿಸಿ ನೋಡಿ. ಸ್ನೇಹಿತರೆ ಹಾಗಾದರೆ ಇಂತಹ ಎಲ್ಲಾ ಸಮಸ್ಯೆಗಳಿಗೆ ನಾವು ಮನೆಯಲ್ಲಿ ಸುಮ್ಮನೆ ಕುಳಿತು ಯೋಚನೆ ಮಾಡಿದರೆ ಯಾವ ಲಾಭವೂ ನಮಗೆ ಸಿಗುವುದಿಲ್ಲ ಬದಲಾಗಿ ನಾವು ದೇವರ ಮೊರೆ ಹೋಗಬೇಕು ಇಲ್ಲವಾದರೆ ಇಂತಹ ಪ್ರಯೋಗಗಳನ್ನು ಮಾಡಬೇಕು.
ಸ್ನೇಹಿತರೇ ನೀವು ಯಾವುದೇ ಪ್ರಯೋಗವನ್ನು ಮಾಡಿದರು ಭಕ್ತಿಯಿಂದ ಹಾಗೂ ನಂಬಿಕೆಯಿಂದ ಮಾಡಬೇಕು. ನಿಮ್ಮ ಮನಸ್ಸಿನಲ್ಲಿ ಭಕ್ತಿ ಹಾಗೂ ನಂಬಿಕೆ ಇದ್ದರೆ ಯಾವ ಪ್ರಯೋಗವು ಕೂಡ ಸುಳ್ಳಾಗುವುದಿಲ್ಲ. ಜೀವನದಲ್ಲಿ ಬರಿ ನೋವು ಹಾಗೂ ಹಣಕಾಸಿನ ತೊಂದರೆ ಆದಾಗ ಮತ್ತು ನಾವು ಏನೇ ವ್ಯಾಪಾರ ಮಾಡಿದರು ಲಾಭ ಇಲ್ಲ ಕೆಲಸದಲ್ಲಿ ತೊಂದರೆ ಹಾಗೂ ನಷ್ಟ ಆದರೆ ಈ ಪ್ರಯೋಗವನ್ನು ಒಂದು ಸಲ ಮಾಡಿ ನೋಡಿ. ಸ್ನೇಹಿತರೇ ನಮಗೆ ಆರೋಗ್ಯ ತುಂಬಾ ಮುಖ್ಯವಾಗಿದೆ ಆದರೆ ಮನೆಯಲ್ಲಿರುವವರಿಗೆ ಬರೀ ಮೇಲಿಂದ ಮೇಲೆ ಆರೋಗ್ಯದ ಸಮಸ್ಯೆ ಕಾಡುತ್ತಿದ್ದರೆ ತುಂಬಾ ಕಷ್ಟ ಆಗುತ್ತದೆ ಎಷ್ಟೇ ಖರ್ಚು ಮಾಡಿದರು ಯಾರಿಗೂ ಆರೋಗ್ಯ ಸಿಗದೆ ಬರೀ ಅನಾರೋಗ್ಯವನ್ನು ಅನುಭವಿಸುತ್ತಾರೆ. ಹಾಗಾದರೆ ಸ್ನೇಹಿತರೇ ಇಂತಹ ಎಲ್ಲಾ ಸಮಸ್ಯೆಗಳಿಗೆ ಮನೆಯಲ್ಲಿ ಏನೋ ಒಂದು ನಕಾರಾತ್ಮಕ ಶಕ್ತಿ ನಮ್ಮ ಮನೆಯಲ್ಲಿ ಇದೆ ಎಂದು ತಿಳಿದುಕೊಳ್ಳಬೇಕು.
ಈ ನಕಾರಾತ್ಮಕ ಶಕ್ತಿಗಳು ಮನೆಗೆ ಬರುವುದು ನಮಗೆ ತಿಳಿಯುವುದಿಲ್ಲ ಯಾವುದಾದರೂ ಒಂದು ಮುಖಾಂತರ ದಿಂದ ನಕಾರಾತ್ಮಕ ಶಕ್ತಿಗಳು ಮನೆಗೆ ಬಂದರೆ ಇಂತಹ ಸಮಸ್ಯೆಗಳು ಬರುತ್ತವೆ ಹಾಗಾಗಿ ಮನೆಯಲ್ಲಿ ಲಕ್ಷ್ಮೀದೇವಿಯು ಇರುವುದಿಲ್ಲ. ಹಾಗೆ ಮನೆಯಲ್ಲಿ ಶಾಂತಿ ಅಸಮಾಧಾನ ಇರುತ್ತದೆ. ಇಂತಹ ಎಲ್ಲಾ ಸಮಸ್ಯೆಗಳಿಗೆ ಈಗ ನಾನು ಹೇಳುವ ಈ ಪ್ರಯೋಗವನ್ನು ಮಾಡಿ ನೋಡಿ. ಈ ಪ್ರಯೋಗಕ್ಕೆ ತುಂಬಾ ಖರ್ಚು ಏನಿಲ್ಲ ಬರೀ ಒಂದು ಗ್ಲಾಸ್ ನೀರು ಹಾಗೂ 1 ಸ್ಪೂನ್ ಕುಂಕುಮದಿಂದ ಇದನ್ನು ಮಾಡಿಕೊಳ್ಳಬಹುದು. ಸ್ನೇಹಿತರೆ ಈ ಪ್ರಯೋಗವನ್ನು ನೀವು ರವಿವಾರ ದಿನದಂದು ಮಾತ್ರ ಮಾಡಬೇಕು. ಮೂರು ರವಿವಾರ ಈ ಪ್ರಯೋಗವನ್ನು ಮಾಡಿದರೆ ನೀವು ಸಾಕಷ್ಟು ಲಾಭವನ್ನು ಪಡೆದುಕೊಳ್ಳುತ್ತಿರಿ.
ಪ್ರತಿದಿನದಂತೆ ಭಾನುವಾರದಂದು ಮನೆಯಲ್ಲಿ ಪೂಜೆಯನ್ನು ಮಾಡಿ ನಿಮಗೆ ಇಷ್ಟವಾದ ದೇವರನ್ನು ಸ್ಮರಿಸಿಕೊಂಡು ಒಂದು ಗಾಜಿನ ಗ್ಲಾಸಿನಲ್ಲಿ ಶುದ್ಧವಾದ ನೀರನ್ನು ಹಾಕಿ ಅದರೊಳಗೆ ಚಿಟಿಕೆಯಷ್ಟು ಅಥವಾ 1 ಸ್ಪೂನ್ ಕುಂಕುಮವನ್ನು ಹಾಕಬೇಕು. ಈ ನೀರನ್ನು ಮನೆಯೊಳಗೆ ಚೆಲ್ಲದಂತೆ ನೋಡಿಕೊಳ್ಳಬೇಕು. ಸಂಜೆ 6:00 ಗಂಟೆಯಲ್ಲಿ ಈ ನೀರಿನಿಂದ ಮನೆಯನ್ನು ನಿವಾಳಿಸಬೇಕು. ನಂತರ ಇದನ್ನು ಮನೆಯ ಹಿತ್ತಲಿನಲ್ಲಿ ಅಂದರೆ ಯಾರೂ ತುಳಿಯದ ಸ್ಥಳದಲ್ಲಿ ಈ ನೀರನ್ನು ಹಾಕಬೇಕು. ಸ್ನೇಹಿತರೆ ಈ ಸರಳವಾದ ಒಂದು ಪರಿಹಾರವನ್ನು ನೀವು ಮೂರು ರವಿವಾರ ಮಾಡಿನೋಡಿ. ನಿಮ್ಮ ಮನೆಯಲ್ಲಿರುವ ಆರೋಗ್ಯದ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆ ಎಲ್ಲವೂ ದೂರವಾಗುತ್ತವೆ. ವ್ಯಾಪಾರದಲ್ಲಿ ನಿಮಗೆ ಲಾಭ ಕೂಡ ಸಿಗುತ್ತದೆ.
ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ದೂರ ಮಾಡಿ ನಿಮ್ಮ ಮನೆಯಲ್ಲಿರುವ ಎಲ್ಲಾ ದೋಷಗಳನ್ನು ಸಂಪೂರ್ಣವಾಗಿ ನಿವಾರಿಸುವಂತೆ ದೇವಿ ನಿಮಗೆ ಆಶೀರ್ವದಿಸುತ್ತಾಳೆ ಈ ಕುಂಕುಮದ ನೀರಿಗೆ ತುಂಬಾ ಶಕ್ತಿ ಇರುವುದರಿಂದ ನಿಮ್ಮ ಮನೆಯಲ್ಲಿ ಸಮಸ್ಯೆಗಳು ದೂರವಾಗಿ ಒಳ್ಳೆಯದಾಗುತ್ತದೆ. ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ಸದಾ ನೆಲೆಸುತ್ತಾಳೆ. ಹಾಗೆ ಲಕ್ಷ್ಮಿಕಟಾಕ್ಷ ನಿಮಗೆ ಇದ್ದೇ ಇರುತ್ತದೆ. ಈ ತರ ಒಂದು ಸರಳವಾದ ಪ್ರಯೋಗವನ್ನು ನೀವು ನಂಬಿಕೆಯಿಂದ ಮಾಡಿ ಲಾಭವನ್ನು ನೀವೇ ನೋಡಿ. ಜೀವನದಲ್ಲಿ ಇಂತಹ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಮುಂದೆ ಬರುವ ಕಷ್ಟಗಳನ್ನು ನೀವು ತಡೆಯಬಹುದು. ಹಾಗಾದರೆ ಸ್ನೇಹಿತರು ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ