ಕುಬೇರ ಜಲ ದೀಪ ಇದರ ಬಗ್ಗೆ ಅಷ್ಟಾಗಿ ಜನರಿಗೆ ಮಾಹಿತಿ ಇರುವುದಿಲ್ಲ ಆದರೆ ಈ ಕುಬೇರ ಜಲ ದೀಪವನ್ನು ಹೇಗೆ ಹಚ್ಚಬೇಕು ಯಾವ ದಿನ ಹಚ್ಚಬೇಕು ಮತ್ತು ಈ ಕುಬೇರ ಜಲ ದೀಪವನ್ನು ಹಚ್ಚುವಾಗ ನಾವು ಯಾವ ವಿಧಾನವನ್ನು ಪಾಲಿಸಬೇಕುಪ್ರತಿ ಮಾಹಿತಿಯನ್ನು ಇಂದಿನ ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಹೌದು ಕುಬೇರ ಜಲ ದೀಪವನ್ನು ಹಚ್ಚುವುದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತದೆ ಯಾವ ಲಾಭವನ್ನು ಪಡೆದುಕೊಳ್ಳಬಹುದು ಅನ್ನೋದನ್ನು ಕೂಡ ತಿಳಿಸುತ್ತೇನೆ. ನೀವು ಕೂಡ ಈ ಕುಬೇರ ಜಲ ದೀಪವನ್ನು ಮನೆಯಲ್ಲಿ ಹಚ್ಚಿ ಇದರ ಲಾಭವನ್ನು ಪಡೆದುಕೊಳ್ಳಿ.ಕುಬೇರ ಜಲ ದೀಪ ಇದೊಂದು ಕುಬೇರನನ್ನು ಒಲಿಸಿಕೊಳ್ಳುವುದಕ್ಕಾಗಿ ಕುಬೇರನ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕಾಗಿ ಹಚ್ಚುವಂತಹ ದೀಪಾ ವಿಧಾನವೂ ಆಗಿರುತ್ತದೆ.
ಈ ಕುಬೇರ ಜಲ ದೀಪವನ್ನು ಹಚ್ಚ ಬೇಕಾಗಿರುವ ದಿವಸ ಯಾವುದು ಅಂದರೆ, ಮಂಗಳವಾರ ಅಥವಾ ಶುಕ್ರವಾರ, ಈ ದಿನಗಳಂದು ಕುಬೇರ ಜಲ ದೀಪವನ್ನು ಮನೆಯಲ್ಲಿ ಹಚ್ಚಬೇಕಾಗುತ್ತದೆ.ಈ ದೀಪದ ಲಾಭಗಳನ್ನು ನೀವು ಪಡೆದುಕೊಳ್ಳಬೇಕು ಅಂದರೆ ಸುಮಾರು ಇಪ್ಪತ್ತು ಒಂದು ಮಂಗಳವಾರ ಗಳು ಹೌದು ಇಪ್ಪತ್ತ್ ಒಂದು ವಾರ ಈ ದೀಪವನ್ನು ಮನೆಯಲ್ಲಿ ಹಚ್ಚಬೇಕು ಅದು ಶುಕ್ರವಾರವೇ ಆಗಿರಲಿ ಮಂಗಳವಾರವೆ ಆಗಿರಲಿ, ನೀವು ಯಾವುದಾದರೂ ದಿನಗಳಂದು ಈ ದೀಪವನ್ನು ಮನೆಯಲ್ಲಿ ಹಚ್ಚಬಹುದು.ಇದೀಗ ಈ ಪೂಜಾ ವಿಧಾನವನ್ನು ತಿಳಿದುಕೊಳ್ಳೋಣ ಮೊದಲಿಗೆ ಒಂದು ಹಿತ್ತಾಳೆ ತಟ್ಟೆಯನ್ನು ತೆಗೆದುಕೊಳ್ಳಬೇಕು ಇದಕ್ಕೆ ಪ್ರತಿ ಮೂಲೆಗೂ ಅರಿಶಿನ ಕುಂಕುಮವನ್ನು ಮತ್ತು ಗಂಧವನ್ನು ಹಚ್ಚಬೇಕು ಮೊದಲು ಗಂಧವನ್ನು ಹಚ್ಚಿ ನಂತರ ಅರಿಶಿಣ ಕುಂಕುಮವನ್ನು ಹಚ್ಚಿ ನಂತರ ಒಂದು ಚಿಕ್ಕ ಗಾಜಿನ ಬಟ್ಟಲನ್ನು ತೆಗೆದುಕೊಳ್ಳಿ.
ನೆನಪಿನಲ್ಲಿಡಿ ನೀವು ಗಾಜಿನ ಬಟ್ಟಲನ್ನು ತೆಗೆದುಕೊಳ್ಳಬೇಕು ಇದಕ್ಕೂ ಕೂಡ ತಳಭಾಗಕ್ಕೆ ಶ್ರೀಗಂಧವನ್ನು ಲೇಪಿಸಿ ಅರಿಶಿನ ಕುಂಕುಮವನ್ನು ಹಚ್ಚಬೇಕು ನಂತರ ಈ ಗಾಜಿನ ಬಟ್ಟಲಿಗೆ ಕೂಡ ಅರಿಶಿಣ ಕುಂಕುಮವನ್ನು ಹಚ್ಚಿ ಜೊತೆಗೆ ಶ್ರೀಗಂಧವನ್ನು ಕೂಡ ಹಚ್ಚಬೇಕು.ಗಾಜಿನ ಬಟ್ಟಲನ್ನು ಹಿತ್ತಾಳೆ ತಟ್ಟೆಯ ಮೇಲೆ ಇರಿಸಿ ತಟ್ಟೆಯ ಮೇಲೆ ಗಾಜಿನ ಬಟ್ಟಲನ್ನು ತರಿಸುವುದಕ್ಕಿಂತ ಮೊದಲು ಅಕ್ಷತೆ ಕಾಳುಗಳನ್ನು ಹಾಕಿ ನಂತರ ಗಾಜಿನ ಬಟ್ಟಲಿನ ತಳಭಾಗಕ್ಕೆ ಶ್ರೀಗಂಧ ಅರಿಶಿನ ಕುಂಕುಮವನ್ನು ಹಚ್ಚಿ ನಂತರ ಇರಿಸಬೇಕು.ಇದೀಗ ಒಂದು ಲೋಟ ಪರಿಶುದ್ಧವಾದ ನೀರನ್ನು ತೆಗೆದುಕೊಳ್ಳಬೇಕು ನೀವು ಬಳಸಿದ ನೀರನ್ನು ತೆಗೆದುಕೊಳ್ಳಬೇಡಿ ಶುದ್ಧವಾದ ನೀರನ್ನು ತೆಗೆದುಕೊಂಡು ಗಾಜಿನ ಬಟ್ಟಲಿನ ಒಳಗೆ ಹಾಕಿ ನಂತರ ಅದರ ಮೇಲೆ ಒಂದು ದೊಡ್ಡ ವೀಳ್ಯದೆಲೆಯನ್ನು ತೊಟ್ಟನ್ನು ಒಳಮುಖವಾಗಿ ಮತ್ತು ಈ ಎಲೆಯ ತುದಿ ಮೇಲ್ಭಾಗಕ್ಕೆ ಬರುವ ಹಾಗೆ ನೀರುನೊಳಗಿರಿಸಬೇಕು.
ನಂತರ ಹೂವುಗಳನ್ನು ಇಟ್ಟುಕೊಳ್ಳಬೇಕು ಈ ಒಂದು ದೀಪಾರಾಧನೆಗೆ ನೀವು ಮೂರು ಬಣ್ಣದ ಹೂವುಗಳನ್ನು ತೆಗೆದುಕೊಳ್ಳಬೇಕು ಹಳದಿ ಕೆಂಪು ಮತ್ತು ಬಿಳಿ ಬಣ್ಣದ ಹೂವುಗಳನ್ನು.ಗಾಜಿನ ಬಟ್ಟಲಲ್ಲಿ ನೊಳಗೆ ಹೂವನ್ನು ಹಾಕಬಾರದು ಯಾಕೆ ಅಂದರೆ ನೀರಿನೊಳಗೇ ನಾವು ಎಣ್ಣೆಯನ್ನು ಕೂಡ ಹಾಕಬೇಕು ಈ ಹೂವುಗಳ ತಳವನ್ನು ಮಾತ್ರ ಬಳಸಿ ನೀರಿನೊಳಗೆ ಹಾಕಬೇಕು.ಈ ನೀರಿನೊಳಗೆ ಹೂವನ್ನು ಎನಿಸುವುದಕ್ಕಿಂತ ಮೊದಲು ಎಳ್ಳೆಣ್ಣೆಯನ್ನು ನೀರಿನೊಳಗೆ ಹಾಕಬೇಕು ನೀವು ಒಂದು ಚಮಚ ಎಣ್ಣೆಯನ್ನು ಹಾಕಬಾರದು ದೀಪಾರಾಧನೆ ಯನ್ನು ಮಾಡುವುದಕ್ಕಾಗಿ ಎಷ್ಟು ಪ್ರಮಾಣದಲ್ಲಿ ಎಣ್ಣೆಯನ್ನು ತೆಗೆದುಕೊಳ್ಳುತ್ತೀರಾ ಅಷ್ಟು ಪ್ರಮಾಣದಲ್ಲಿ ನೀರಿನೊಳಗೆ ಎಣ್ಣೆಯನ್ನು ಹಾಕಬೇಕು, ನಂತರ ಹೂವಿನ ದಳವನ್ನು ಹಾಕಬೇಕು.
ಇದೀಗ ಹಿತ್ತಾಳೆ ತಟ್ಟೆಗೂ ಕೂಡ ಹೂವುಗಳನ್ನು ಅಲಂಕರಿಸಿ ಹೂವಿಗೂ ಕೂಡ ಶ್ರೀಗಂಧ ಅರಿಶಿಣ ಕುಂಕುಮವನ್ನು ಹಚ್ಚಿ, ಈ ಒಂದು ದೀಪಾರಾಧನೆಯನ್ನು ಲಕ್ಷ್ಮೀದೇವಿಯ ಪಟದ ಮುಂದೆ ಅಥವಾ ವಿಗ್ರಹದ ಮುಂದೆ ಇರಿಸಬೇಕು. ಇದೀಗ ಬತ್ತಿಯನ್ನು ಎಣ್ಣೆಯೊಳಗೆ ಹಾಕಬೇಕು.ಬತ್ತಿ ದಪ್ಪದಾಗಿ ಹಸಿದಿರಬೇಕು ಸ್ವಲ್ಪ ಸಮಯ ಎಣ್ಣೆಯೊಳಗೆ ಅಂದರೆ ಎಳ್ಳೆಣ್ಣೆಯೊಳಗೆ ನೆನೆಸಿಟ್ಟು, ನಂತರ ಈ ಗಾಜಿನ ಬಟ್ಟಲಿನೊಳಗೆ ಇರಿಸಿ, ಎಲೆಯ ಮೇಲೆ ಇಟ್ಟು ಈ ದೀಪವನ್ನು ಹಚ್ಚಬೇಕು.ಲಕ್ಷ್ಮೀ ದೇವಿಯ ಅಷ್ಟೋತ್ತರ ಶತನಾಮಾವಳಿಯನ್ನು ನೀವು ದೀಪಾರಾಧನೆಯ ನಂತರ ಪಠಿಸಬೇಕು ಅಥವಾ ವಿಷ್ಣು ಸಹಸ್ರನಾಮವನ್ನು ಆದರೂ ಪ್ರತಿ ದಿನ ಪಠಿಸಬೇಕು, ಇದರಿಂದ ಮನೆಗೆ ಒಳಿತಾಗುತ್ತದೆ.
ಈ ಒಂದು ದೀಪವನ್ನು ಹಚ್ಚುವುದರಿಂದ ದೊರೆಯುವ ಲಾಭ ಅಂದರೆ ಕೆಲವರಿಗೆ ಮನಸ್ಸಿನಲ್ಲಿ ತುಂಬಾನೇ ತಳಮಳಗಳು ಭಯ ಕಾಡುತ್ತಾ ಇರುತ್ತದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯೆ ಇರುವುದಿಲ್ಲ,ಅಂಥವರು ಈ ದೀಪಾರಾಧನೆಯನ್ನು ಮಾಡಬಹುದು. ಈ ಕುಬೇರ ಜಲ ದೀಪವನ್ನು ನೀವು ಕೂಡ ಇಪ್ಪತ್ತ್ ಒಂದು ವಾರಗಳ ಕಾಲ ಮನೆಯಲ್ಲಿ ಹಚ್ಚಿ, ನಿಮ್ಮಲ್ಲಿ ಆಗುವ ಬದಲಾವಣೆ ಅನ್ನು ನೀವೇ ಕಾಣಬಹುದು.