ಈ ಚಿಕ್ಕ ಊರಿನಲ್ಲಿ ಪ್ರತಿಯೊಂದು ಮನೆಯಲ್ಲೂ ಸೈನಿಕರಿದ್ದಾರೆ … ಆದರೆ ಊರು ಯಾವುದು!

ನಮ್ಮ ದೇಶದಲ್ಲಿ ಇರುವಂತಹ ಈ ಊರಿನಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಸೈನಿಕರು ಇದ್ದಾರಂತೆ ಇದನ್ನು ಕೇಳಿದರೆ ನೀವು ನಿಜವಾಗಲೂ ಒಂದು ಸಾರಿ ಬೆಚ್ಚಿ ಬಿಳ್ತೀರಾ ಯಾಕೆಂದರೆ, ಕೆಲವೊಂದು ಮನೆಯಲ್ಲಿ ತಮ್ಮ ಮಕ್ಕಳನ್ನು ಸೈನಕ್ಕೆ ಕಳುಹಿಸುವುದು ಸ್ವಲ್ಪ ಜನಕ್ಕೆ ಇಷ್ಟ ಇರುವುದಿಲ್ಲ ಯಾಕೆಂದರೆ ಸೈನ್ಯಕ್ಕೆ ಒಂದು ಸಾರಿ ಹೋದರೆ ಅಲ್ಲಿಂದ ವಾಪಸ್ಸು ಬರ್ತರ ಇಲ್ವಾ ಎನ್ನುವಂತಹ ಮಾತು ಇದೆ. ಆದ್ರೆ ಸೈನ್ಯದಲ್ಲಿ ಕೆಲಸ ಸಿಕ್ಕಿ ದೇಶಕ್ಕಾಗಿ ಸಾವು ಬಂದರೆ ಅದರಂತಹ ಪುಣ್ಯದ ಕೆಲಸ ಮತ್ತೊಂದು ಇಲ್ಲ ಬಿಡಿ.  ನಮಗೂ ನಿಮಗೂ ಗೊತ್ತಿರುವಂತಹ ವಿಚಾರ ಹಾಗಾದರೆ ಈ ಊರಿನಲ್ಲಿ ಯಾಕೆ ಪ್ರತಿಯೊಬ್ಬರ ಮನೆಯಲ್ಲೂ ಸೈನಿಕರಿದ್ದಾರೆ ಎನ್ನುವಂತಹ ಕುತೂಹಲ ನಿಮಗೆ ಬರಬಹುದು. ಹಾಗಾದರೆ ಇನ್ನೇಕೆ ತಡ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಹಾಗೂ ಯಾವ ಊರಿನಲ್ಲಿ ಈ ರೀತಿಯಾದ ಒಂದು ವ್ಯವಸ್ಥಿತವಾದ ಸಂಪ್ರದಾಯ ಇದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ನಮ್ಮ ದೇಶದಲ್ಲಿ ಪ್ರಸ್ತುತವಾಗಿಯೇ ದೇಶದ ಗೌರವ ಹಾಗೂ ದೇಶದ ಬಗ್ಗೆ ಕಳಕಳಿಯಿರುವ ಅಂತಹ ಜನರು ಮಾಡುವುದು ಕೇವಲ ಮನೆಯ ಮುಂದೆ ಒಂದು ಧ್ವಜವನ್ನು ಹಾರಿಸುವ ಅಥವಾ ಶಾಲೆಯಲ್ಲಿ ಗಂಟೆಗಟ್ಟಲೆ ಭಾಷಣ ಬಿಗಿಯುತ್ತಾರೆ, ಹಾಗೆಯೇ ದೊಡ್ಡ ಶ್ರೀಮಂತರು ಕೂಡ ಇದೇ ರೀತಿ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ ಆದರೆ ದೊಡ್ಡ ಜನರ ಮನೆ ಮಕ್ಕಳು ಯಾವುದೇ ಕಾರಣಕ್ಕೂ ಅವರ ಮಕ್ಕಳನ್ನು ಸೈನ್ಯಕ್ಕೆ ಕಳಸೋದಿಲ್ಲ ಬಿಡಿ. ಆದ್ರೆ  ಇವತ್ತು ನಾವು ಈ ಊರಿನ ಬಗ್ಗೆ ನಮಗೆ ಒಂದು ವಿಚಾರವನ್ನು ಹೇಳಲು ಹೊರಟಿದ್ದೇವೆ ಎಂಬುದು ನಮ್ಮ ನೆರೆ ರಾಜ್ಯ ವಾದಂತಹ ಆಂಧ್ರಪ್ರದೇಶ್.

ಆಂಧ್ರಪ್ರದೇಶದಲ್ಲಿ ಇರುವಂತಹ ಗೋದಾವರಿ ಅನುವ ಪ್ರದೇಶದ ಹತ್ತಿರ ಬರುವಂತಹ ಮದರಂ ಎನ್ನುವ ಊರಿನಲ್ಲಿ ಒಂದು ಆಚರಣೆ ಇದೆ. ಅಷ್ಟೇ ಅಲ್ಲದೆ ಈ ಊರಿನಲ್ಲಿ ಎಲ್ಲರ ಮನೆಯಲ್ಲೂ ಕೂಡ ಒಬ್ಬ ಸೈನಿಕರು ಇದ್ದಾರಂತೆ ಸೈನಿಕರ ಪ್ರಕಾರ ಕಾರ್ಗಿಲ್ ಯುದ್ಧದಲ್ಲಿ ಹಾಗೂ ಒಂದನೇ ವಿಶ್ವಯುದ್ಧ ಹಾಗೂ ಎರಡನೇ ಮಹಾಯುದ್ಧ ಹಾಗೂ ಇಂಡೋ ಚೀನಾ ವಾರ್ ಕೂಡ ಇವರ ಒಂದು ಕೊಡುಗೆ ತುಂಬಾ ಚೆನ್ನಾಗಿ ಇದೆ ಎನ್ನುತ್ತಾರೆ ಅಲ್ಲಿನ ಜನಗಳು. ಅದಲ್ಲದೆ ಇಂಡಿಯಾ ಪಾಕಿಸ್ತಾನ ವಾರ್ ನಲ್ಲಿ ಕೂಡ ಇವರ ಕೊಡುಗೆ ತುಂಬಾ ಇದೆ ಎನ್ನುತ್ತಾರೆ ಅಲ್ಲಿನ ಜನಗಳು.

ಅಲ್ಲಿನ ಮಹಿಳೆಯರು ಹಾಗೂ ಅವರ ಹೆಂಡತಿಯರು ಹಾಗೂ ಅವರ ಮನೆಯಲ್ಲಿ ಇರುವಂತಹ ಗಂಡಸರಿಗೆ ಹಾಗೂ ಅವರ ಮಕ್ಕಳಿಗೆ ಸೈನ್ಯಕ್ಕೆ ಹೋಗಿ ಬಂದು ನಮ್ಮ ದೇಶವನ್ನು ಕಾಪಾಡಿ ಎನ್ನುವಂತಹ ಒಂದು ಆಶೀರ್ವಾದವನ್ನು ಕೊಟ್ಟು ಕಳಿಸುತ್ತಾರೆ ಅಂತ ಇದು ಒಂದು ವಿಚಿತ್ರವಾದ ಸಂಗತಿ ಅಲ್ವಾ ಸ್ನೇಹಿತರೆ. ಹಾಗೆಯೇ ಯುದ್ಧಭೂಮಿಯಲ್ಲಿ ವೀರ ಮರಣವನ್ನು ಬಂದರೆ ಯಾವುದೇ ಕಾರಣಕ್ಕೂ ಅಳದೆ ಹೆಮ್ಮೆ ಕೊಡುತ್ತಾರಂತೆ ಈ ಊರಿನಲ್ಲಿ ಇರುವಂತಹ ಹೆಣ್ಣು ಮಕ್ಕಳು. ಈ ಲೇಖನ ದಿನ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ಯಾವುದೇ ಕಾರಣಕ್ಕೂ ನಮ್ಮ ಪೇಜನ್ನು ಲೈಕ್ ಮಾಡುವುದು ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *