ದೀಪಾವಳಿಯು ಹತ್ತಿರ ಬರುತ್ತಿದೆ ಎಲ್ಲರಿಗೂ ಸಂತೋಷದ ಸಮಯ, ಕೆಲವರಿಗೆ ದೀಪಾವಳಿ ಹಬ್ಬದಂದು ಮನೆಯಲ್ಲಿ ಮಾಡುವ ಸಿಹಿ ತಿಂಡಿಗಳ ಮೇಲೆ ಆಸೆ ಇದ್ದರೆ, ಇನ್ನೂ ಕೆಲವರಿಗೆ ದೀಪಾವಳಿ ಎಂದ ಕೂಡಲೇ ನೆನಪಾಗುವುದು ಲಕ್ಷ್ಮಿ ಪಟಾಕಿ, ಆನೆ ಪಟಾಕಿ, ಚಿನ್ನ ಚಿನಕುರಳಿ, ಸರ ಪಟಾಕಿ ಇನ್ನು ಮುಂತಾದುವುಗಳು, ಇನ್ನು ಮಕ್ಕಳಿಗೆ ಹಾಗೂ ಹೆಂಗಸರಿಗೆ ಫ್ಲವರ್ ಪಾಟ್, ಸುರ್ ಸುರ್ ಬತ್ತಿ, ಭೂಚಕ್ರ ಮುಂತಾದವುಗಳು, ಹೀಗೆ ಮನೆಮಂದಿಯಲ್ಲಾ ಒಂದುಗೂಡಿ ಸಡಗರದಿಂದ ಸಂತೋಷದಿಂದ ಆಚರಿಸುವ ಒಂದು ಸಂತಸದ ಹಬ್ಬ.
ಪ್ರತಿವರ್ಷ ನೀವು ದೀಪಾವಳಿ ಹಬ್ಬ ಶುರುವಾಗಲು ಎರಡು ದಿನ ಮೊದಲೇ ಪಟಾಕಿ ಹೊಡೆಯಲು ಶುರು ಮಾಡುತ್ತೀರಿ ಹಾಗೂ ದೀಪಾವಳಿ ಮುಗಿದ ನಂತರ ಪಟಾಕಿ ಹೊಡೆಯುತ್ತಿರುತ್ತದೆ, ಆದರೆ ಈ ವರ್ಷ ನಿಮ್ಮ ಆಸೆಗೆ ತಣ್ಣೀರು, ಯಾಕೆಂದರೆ ದೀಪಾವಳಿ ಹಬ್ಬದಂದು ಸಹ ನಿಮಗೆ ಯಾವಾಗ ಬೇಕೋ ಆವಾಗ ಪಟಾಕಿ ಹೊಡೆಯುವಂತಿಲ್ಲ, ಕಾರಣ ಕರ್ನಾಟಕ ಪೊಲೀಸ್ ಇಲಾಖೆ ದೀಪಾವಳಿ ಹಬ್ಬದಂದು ಎಷ್ಟು ಹೊತ್ತಿಗೆ ಪಟಾಕಿ ಹೊಡೆಯಲು ಶುರು ಮಾಡಬೇಕು ಎಂದು ಸಮಯ ನಿಗಧಿಪಡಿಸಿದೆ.
ಇನ್ನು ಪೊಲೀಸ್ ಆದೇಶದಲ್ಲಿ ಇರುವಂತೆ ನವೆಂಬರ್ 5 6 7ನೇ ತಾರೀಖಿನಂದು ರಾತ್ರಿ 8 ಗಂಟೆಯಿಂದ 10 ಗಂಟೆಗಳ ವರೆಗೆ ಮಾತ್ರ ಪಟಾಕಿ ಹೊಡೆಯ ಬೇಕಾಗಿ ಆದೇಶವನ್ನು ಹೊರಡಿಸಿದೆ, ಈ ಆದೇಶವನ್ನು ಮೀರಿ ಬೇರೆ ಸಮಯದಲ್ಲಿ ನೀವು ಪಟಾಕಿ ಹೊಡೆದರೆ ಅದು ಕಾನೂನುಬಾಹಿರ ಅಪರಾಧ, ಇನ್ನು ಪರವಾನಗಿ ಇಲ್ಲದೆ ಪಟಾಕಿ ಮಾಡುತ್ತಿರುವವರಿಗೂ ಪೊಲೀಸ್ ಇಲಾಖೆಯ ಎಚ್ಚರಿಕೆಯನ್ನು ನೀಡಿದ್ದು ಪರವಾನಗಿ ಇದ್ದವರು ಮಾತ್ರ ಪಟಾಕಿಯನ್ನು ವ್ಯಾಪಾರ ಮಾಡಬೇಕು ಇಲ್ಲವಾದರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.
ಪೊಲೀಸರ ಈ ನಿರ್ಣಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಹಾಗೆಯೇ ಎಲ್ಲರೂ ಈ ಮಾಹಿತಿಯ ಬಗ್ಗೆ ತಿಳಿದು ಎಚ್ಚರ ವಾಗಿರಲಿ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಶೇರ್ ಮಾಡಿ.