ದ್ರಾಕ್ಷಿ ೩-೪ ಬಗೆಯಲ್ಲಿರುತ್ತವೆ ಈ ಪತಿ ಕರಿಯ ಬಣ್ಣದ ದ್ರಾಕ್ಷಿ ದೇಹರೋಗ್ಯಕ್ಕೆ ಹಿತಕರವಾದುದು.
ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತವೃದ್ಧಿ ಮತ್ತು ನರದೌರ್ಬಲ್ಯ ಶಮಾನವಾಗುತ್ತದೆ.
ಬಿಳಿ ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ರಕ್ತ ವೃದ್ದಿಯಾಗುತ್ತದೆ ನರಗಳಲ್ಲಿ ಹೊಸ ಚೈತನ್ಯ ತುಂಬಿಕೊಳ್ಳುತ್ತದೆ.
ದ್ರಾಕ್ಷಿ ಹಣ್ಣಿನ ರಸವನ್ನು ಸಿಹಿಮೂತ್ರ ರೋಗಿಗಳಿಗೆ ಸಕ್ಕರೆ ಹಾಕದೆ ಕೊಟ್ಟರೆ ಗುಣವಾಗುತ್ತದೆ.
ಬೆಳ್ಳಿ ದ್ರಾಕ್ಷಿಯನ್ನು ಆಗಾಗ್ಗೆ ತಿನ್ನುತ್ತಿದ್ದರೆ ಹೊಟ್ಟೆ ಹುಣ್ಣು ಗುಣವಾಗುವುದು ಅಲ್ಲದೆ ಶರೀರದಲ್ಲಿ ರಕ್ತಶುದ್ದಿಗೊಳ್ಳುವುದು.
ಒಣದ್ರಾಕ್ಷಿಯನ್ನು ಕ್ರಮವಾಗಿ ಸೇವಿಸುತ್ತಿದ್ದರೆ ಶುದ್ದರಕ್ತ ವೃದ್ಧಿಯಾಗುವುದು.
ಕರಿಯ ಹುಳಿ ದ್ರಾಕ್ಷಿಹಣ್ಣು ತಿಂದರೆ ಹೊಟ್ಟೆಉಬ್ಬರ ಹುಳಿತೇಗು ಅಜೀರ್ಣ ಮತ್ತು ಮಲಬದ್ದತೆಯು ನಿವಾರಣೆಯಾಗುವುದು.
ಈ ಹಣ್ಣುಗಳು ಸಿಹಿಯಾಗೆ ಇದ್ದರು ಇದರಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆ ಆದ್ದರಿಂದ ಆರಾಮಾಗಿ ಎಲ್ಲರು ಸೇವಿಸಬಹುದು.
ಸಂಜೆಯಾದರೆ ಸಾಕು ನಾಲಿಗೆ ಚಪಲ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಸುಮ್ಮನೆ ಒಂದು ಸುತ್ತು ಆಚೆ ಸುತ್ತಾಡೊ ನೆಪದಲ್ಲಿ ಹೊರಗೆ ಸಿಗುವ ಪಾನಿಪುರಿ, ಗೋಬಿ ಮಂಚೂರಿ ಅಂತ ಹಲವು ಬಗೆ ತಿನಿಸನ್ನ ತಿಂದೆ ಮರಳಿ ಮನೆಗೆ ಬರ್ತೀವಿ ಇದು ಆರೋಗ್ಯಕ್ಕೆಷ್ಟು ಉತ್ತಮ ಹಾಗು ನಿಮ್ಮ ವಾಕಿಂಗ್ ಲಾಭವಾದರೂ ಏನು ? ಸುಮ್ಮನೆ ಏನೇನೋ ಸೇವಿಸಿ ಅರೋಗ್ಯ ಕೆಡಿಸಿಕೊಳ್ಳುವ ಬದಲು ನೀವು ಸೇವಿಸಬಹುದಾದ ಸಕ್ಕರೆ ಕಡಿಮೆ ಇರುವ ಹಣ್ಣುಗಳನ್ನು ಸೇವಿಸಿ ಮತ್ತು ನಿಮ್ಮ ಸಕ್ಕರೆಯ ಮಟ್ಟವನ್ನು ಮಿತಿಯಲ್ಲಿ ಇರಿಸಿಕೊಳ್ಳಿ.
ಕಿವಿ ಹಣ್ಣು : ಈ ಹಣ್ಣು ನಮ್ಮ ದೇಶದಲ್ಲ ವಿದೇಶದ್ದು ಆದರೇನಂತೆ ಇದರಲ್ಲಿ ಸಕ್ಕರೆ ಅಂಶಗಳು ತುಂಬಾ ಕಡಿಮೆ ಇರುತ್ತದೆ, ಪ್ರತಿ ಕಿವಿ ಹಣ್ಣು 6 ಗ್ರಾಂ ಸಕ್ಕರೆಯನ್ನು ಮಾತ್ರ ಹೊಂದಿರುತ್ತವೆ, ಇದಕ್ಕಿಂತ ಹೆಚ್ಚಾಗಿ ಇವುಗಳಲ್ಲಿ ನಾರಿನಂಶ ಹಾಗೂ ವಿಟಮಿನ್ ಸಿ ಸಹ ಇದ್ದು, ನಿಮ್ಮ ದಿನ ನಿತ್ಯದ ಅಗತ್ಯವನ್ನು ಪೂರೈಸುತ್ತವೆ.
ಕಲ್ಲಗಂಡಿ ಹಣ್ಣು : ಬೇಸಿಗೆಯ ಸಮಯದಲ್ಲಿ ನಿಮ್ಮ ದಾಹ ತೀರಿಸಲೆಂದೇ ಸಿಗುವ ಈ ಹಣ್ಣಿನಲ್ಲಿ 100 ಗ್ರಾಂ ಹಣ್ಣಿನಲ್ಲಿ ಕೇವಲ 6 ಗ್ರಾಂ. ನಷ್ಟು ಮಾತ್ರ ಸಕ್ಕರೆ ಅಂಶ ಇರುತ್ತದೆ, ಇದರಲ್ಲಿ ಅಧಿಕವಾಗಿರುವ ನೀರಿನಂಶವು ಕ್ಯಾಲೋರಿಯ ಅಂಶಗಳು ಕಡಿಮೆ ಇರುತ್ತವೆ, ಹಾಗಾಗಿ ಇದನ್ನು ನಿಶ್ಚಿಂತೆಯಾಗಿ ತಪ್ಪದೆ ಸೇವಿಸಿ.
ಕಿತ್ತಳೆ ಹಣ್ಣು : ತಾಜಾ ಒಂದು ಕಿತ್ತಳೆ ಹಣ್ಣಿನಲ್ಲಿ 12 ಗ್ರಾಂ.ನಷ್ಟು ಮಾತ್ರ ಸಕ್ಕರೆ ಅಂಶ ಇರುತ್ತದೆ ಹಾಗೂ ಸಮೃದ್ಧವಾದ ವಿಟಮಿನ್ ಸಿ ಸಹ ಇರುತ್ತದೆ, ತಂಪು ಪಾನೀಯಗಳು ಹಾಗೂ ಇನ್ನಿತರ ಕಾರ್ಬೊನೇಟೆಡ್ ಜ್ಯೂಸ್‌ಗಳನ್ನು ಸೇವಿಸುವ ಬದಲಿಗೆ ಈ ಹಣ್ಣನ್ನು ಪ್ರತಿದಿನ ಮಿತವಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯವು ಸುಧಾರಿಸುತ್ತದೆ.
ಸ್ಟ್ರಾಬೆರ್ರಿ ಹಣ್ಣು : ಮಕ್ಕಳು ತುಂಬಾ ಇಷ್ಟ ಪಡುವ ಹಣ್ಣುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಈ ಹಣ್ಣು ಯಾವ ಹಠವಿಲ್ಲದೆ ಸಲೀಸಾಗಿ ತಿನ್ನುತ್ತಾರೆ, ಈ ಹಣ್ಣಿನಲ್ಲಿ ಪ್ರತಿ 100 ಗ್ರಾಂ ಹಣ್ಣಿಗೆ ಕೇವಲ 5 ಗ್ರಾಂ ನಷ್ಟು ಮಾತ್ರ ಸಕ್ಕರೆ ಅಂಶವನ್ನು ಇವು ಹೊಂದಿರುತ್ತವೆ, ಇದರ ಜೊತೆಗೆ ಸ್ಟ್ರಾಬೆರ್ರಿಗಳಲ್ಲಿ ನಾರಿನಂಶ, ಖನಿಜಾಂಶ ಮತ್ತು ವಿಟಮಿನ್‌ಗಳು ಸಹ ಹೆಚ್ಚುವರಿಯಾಗಿ ಇರುತ್ತವೆ, ಇವು ನಿಮಗೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತವೆ.