ದಿನದಿಂದ ದಿನಕ್ಕೆ ಚುನಾವಣೆಯಲ್ಲಿ ಬಿಸಿ ಎನ್ನುವುದು ಹೆಚ್ಚಾಗುತ್ತದೆ, ಒಬ್ಬರ ಮೇಲೆ ಒಬ್ಬರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ, ಸುಮಲತಾ ಅವರಿಗೆ ಇಡೀ ಚಿತ್ರರಂಗ ಅಂದರೆ ಕನ್ನಡ ಚಿತ್ರರಂಗ ಸಂಪೂರ್ಣವಾದ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಇರುವಂತಹ ಜೆಡಿಎಸ್ ನಾಯಕರಿಗೆ ಸ್ವಲ್ಪ ಇರುಸು ಮುರುಸು ಆಗಿದೆ ಅನ್ಸುತ್ತೆ, ಅದಕ್ಕಾಗಿ ದರ್ಶನ್ ಅವರ ಕುರಿತು ಕೆಲವೊಂದು ಮಾತುಗಳನ್ನು ಜೆಡಿಎಸ್ ನಾಯಕರು ಹೇಳಿದ್ದಾರೆ. ಅವರು ಹೇಳಿದ ಪ್ರಕಾರ ದರ್ಶನ್ ಜೇಬಿನಲ್ಲಿ ದುಡ್ಡು ಇಲ್ಲದೆ ಇರುವ ಸಂದರ್ಭದಲ್ಲಿ ದನದ ಮಾಂಸವನ್ನೂ ತಿನ್ನುತ್ತಿದ್ದರು ಎನ್ನುವ ಮಾತನ್ನು ಹೇಳಿದ್ದಾರೆ. ಇದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತದೆ ಹೇಳಿರುವಂತಹ ಸಂಪೂರ್ಣವಾದ ಮಾಹಿತಿ ಏನು ಎನ್ನುವುದರ ವಿಚಾರ ತಿಳಿಸುತ್ತೇನೆ ಈ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಇಡೀ ಕರ್ನಾಟಕ ಚಿತ್ರರಂಗ ಸುಮಲತಾ ಅವರಿಗೆ ಬೆಂಬಲ ನೀಡುವ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರ ನಾಲಿಗೆ ಹರಿದು ಬಿಡುತ್ತಾ ಇದ್ದಾರೆ ಇದು ನಿಮಗೆ ಗೊತ್ತಿರುವ ವಿಷ್ಯ, ಜೆಡಿಎಸ್ ನಾಯಕರ ಕರ್ನಾಟಕ ಯುವಕ ಘಟಕದ ರಾಜ್ಯಾಧ್ಯಕ್ಷ ಎನ್ ಸಂತೋಷ್ ಅವರು ಹೇಳಿದ್ದಾರೆ. ದರ್ಶನ್ ಹಾಗೂ ಯಶ್ ಅವರು ತಮ್ಮ ಬಳಿ ಯಾವುದೇ ಹಣ ಇಲ್ಲದಿರುವ ಸಂದರ್ಭದಲ್ಲಿ ಜನರ ಹತ್ತಿರ ಬರುತ್ತಿದ್ದರೂ, ಅವರು ಜನರಿಗೆ ಒಂದು ಒಳ್ಳೆಯ ಸಂದೇಶವನ್ನು ಕೊಡಬೇಕಿತ್ತು ಆದರೆ ಅವರು ಒಳ್ಳೆಯ ಸಂದೇಶವನ್ನು ಕೊಡುತ್ತಿಲ್ಲ. ಮಂಡ್ಯದಲ್ಲಿ ಮೆಡಿಕಲ್ ಕಾಲೇಜ್ ಬಂದಿರುವುದು ಕೇವಲ ಅಂಬರೀಶ್ ಅವರ ಪ್ರಯತ್ನದಿಂದ ಮಾತ್ರ ಅಲ್ಲ ಇದು ಐದು ಜನರಗಳು ಪ್ರಯತ್ನದಿಂದ ಮಂಡ್ಯಕ್ಕೆ ಮೆಡಿಕಲ್ ಕಾಲೇಜು ಬಂದಿದೆ.
ದರ್ಶನ್ ಜೇಬಿನಲ್ಲಿ ದುಡ್ಡು ಇಲ್ಲದೆ ಇರುವ ಸಂದರ್ಭದಲ್ಲಿ ಜನರ ಹತ್ತಿರ ಬಂದು ತಿನ್ನುತ್ತಿದ್ದ ಅವರಿಗೆ, ಸಿನಿಮಾವನ್ನು ಮಾಡುವುದಕ್ಕಾಗಿ ದುಡ್ಡು ಕೊಟ್ಟಿದ್ದು ನಾವು, ದರ್ಶನ್ ಅವರು ಅಂದು ಏನು ಕೆಲಸ ಮಾಡುತ್ತಿದ್ದರು ಹಾಗೂ ದನದ ಮಾಂಸ ತಿಂದಿದ್ದರು ಎನ್ನುವ ಮಾತನ್ನು ಕೂಡ ಹೇಳಿದ್ದಾರೆ. ಅದಲ್ಲದೇ ಅವರು ಸಿನಿಮಾ ಚಿತ್ರರಂಗದಲ್ಲಿ ಮೇಲೆ ಬರುವುದಕ್ಕಾಗಿ ಯಾರು ಯಾರಿಗೆ ಟೀ ಕಾಫಿಯನ್ನು ಸಪ್ಲೈ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತು ಎಂದಿದ್ದಾರೆ ಎಂ ಸಂತೋಷ್ ಅವರು. ಆದ್ರೆ ಒಬ್ಬ ವ್ಯಕ್ತಿಗೆ ನಿಜಕ್ಕೂ ತನ್ನ ವೈಯಕ್ತಿಕ ವಿಷಯಗಳನ್ನು ಇಟ್ಟುಕೊಂಡು ಹೀಗೆ ಮಾತನಾಡುವುದು ತಪ್ಪು. ಆದರೆ ಕೆಲವು ಜನರು ಹಿಂದೆ ಮುಂದೆ ನೋಡದೆ ಮಾತನಾಡುತ್ತಾರೆ.
ರವೀಂದ್ರ ಶ್ರೀಕಂಠಯ್ಯ ಎನ್ನುವ ಅವರು ಮಾತನಾಡಿ ಅಂಬರೀಶ್ ಅವರು ಮಂಡ್ಯ ಜಿಲ್ಲೆಗೆ ಏನು ಮಾಡಿಲ್ಲ , ಕೇವಲ ಮಂಡ್ಯ ಜಿಲ್ಲೆಗೆ ಮೆಡಿಕಲ್ ಕಾಲೇಜ್ ಅನ್ನು ಮಾಡಿಸಿ ಕೊಟ್ಟಿದ್ದಾರೆ ಎನ್ನುವ ಮಾತನ್ನು ಎಲ್ಲಾ ಕಡೆ ಹೇಳುತ್ತಿದ್ದಾರೆ, ಆದರೆ ಇದು ಕೇವಲ ಅಂಬರೀಶ್ ಅವರ ಪ್ರಯತ್ನ ಅಲ್ಲ ಅದು ಐದು ಜನರ ಪ್ರಯತ್ನ. ದಯವಿಟ್ಟು ಜನರನ್ನು ಯಾವುದೇ ಕಾರಣಕ್ಕೂ ಮೂರ್ಖರನ್ನಾಗಿ ಮಾಡಬೇಡಿ ಎನ್ನುವ ಮಾತನ್ನು ಅವರು ಹೇಳಿದ್ದಾರೆ.
ಎಲೆಕ್ಷನ್ ಅಂದರೆ ಈ ರೀತಿಯಾಗಿ ಮಾತನಾಡುವುದು ಸರ್ವೇ ಸಾಮಾನ್ಯ ಆದರೆ ಜನರೇ ಪ್ರಭುಗಳು ಜನರಿಗೆ ಇಷ್ಟ ವಾದಂತಹ ಅಭ್ಯರ್ಥಿಯನ್ನು ಅವರೇ ಆಯ್ಕೆ ಮಾಡುತ್ತಾರೆ, ಅದಕ್ಕೆ ಇವಾಗ ಕಣ ಸಿದ್ಧವಾಗಿದೆ ಜನರಿಗೆ ಯಾರು ಇಷ್ಟವೋ ಹಾಗೂ ಯಾರು ತಮ್ಮ ಕ್ಷೇತ್ರಕ್ಕೆ ಒಳ್ಳೆಯ ಅಂತಹ ಕೆಲಸವನ್ನು ಮಾಡುತ್ತಾರೋ ಅವರೇ ಆರಿಸುತ್ತಾರೆ, ಹಾಗಾದರೆ ಏಪ್ರಿಲ್ ನಲ್ಲಿ ಆಗುವಂತಹ ಚುನಾವಣೆಯ ನಾವು ನೋಡಲೇ ಬೇಕು. ಈ ಲೇಖನವನ್ನು ನಿಮಗೆ ಏನಾದರೂ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಲೈಕ್ ಮಾಡುವುದಾಗಲಿ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ.