ಮೀಟು ಅನ್ನುವ ಈ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನ ಪಡೆಯುತ್ತಲೇ ಇದೆ ಇಂದು ನಟಿ ಶ್ರುತಿ ಹರಿಹರನ್ ರವರು ಸರ್ಜಾ ಅವರ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ, ಇದರಿಂದ ಅರ್ಜುನ್ ಸರ್ಜಾ ಅವರಿಗೆ ಬಂಧನ ಭೀತಿ ಎದುರಾಗಿದೆ ಅಂದರೆ ತಪ್ಪಾಗಲಾರದು.
ಶ್ರುತಿ ಹರಿ ಹರನ್ ನೇರವಾಗಿ ನಟ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ, ಹಾಗು ಐಪಿಸಿ ಸೆಕ್ಷನ್ 354, 354ಎ, 506, 509 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
IPC ಸೆಕ್ಷನ್ 354 – ಮಹಿಳೆ ಘನತೆಗೆ ಧಕ್ಕೆ ತರುವ ರೀತಿ ದೌರ್ಜನ್ಯ.
IPC ಸೆಕ್ಷನ್ 354ಎ – ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ.
IPC ಸೆಕ್ಷನ್ 506 – ಅಪರಾಧ ಮಾಡುವ ಉದ್ದೇಶದ ಒಳಸಂಚು.
IPC ಸೆಕ್ಷನ್ 509 – ಮಹಿಳೆ ಘನತೆಗೆ ಧಕ್ಕೆ ತರುವ ರೀತಿ ನಡವಳಿಕೆ.
ಇನ್ನು ನಟಿ ಶ್ರುತಿ ಹರಿಹರನ್ ನೀಡಿರುವ ದೂರಿನಲ್ಲಿ ಏನಿದೆ.
2015ರಲ್ಲಿ ವಿಸ್ಮಯ ಚಿತ್ರೀಕರಣ ನಡೆಯುವ ವೇಳೆ ನಟ ಅರ್ಜುನ್ ಸರ್ಜಾ ಅಸಭ್ಯ ವರ್ತನೆ ತೋರಿ, ಲೈಂಗಿಕ ಕಿರುಕುಳ ನೀಡಿದ್ರು, ದೇವನಹಳ್ಳಿ ಬಳಿ ಆಸ್ಪತ್ರೆಯಲ್ಲಿ ಚಿತ್ರೀಕರಣ ನಡೆಯುವಾಗ ಶೂಟಿಂಗ್ ನಂತ್ರ ಖಾಸಗಿ ಸ್ಥಳದಲ್ಲಿ ಸಿಗಲು ಪೀಡಿಸಿದ್ರು, ಈ ಮೂಲಕ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನ ಮಾಡಿದ್ರು, ದೇವನಹಳ್ಳಿ ಸಿಗ್ನಲ್ ಬಳಿ ಕಾರನ್ನು ತಡೆದು ರೆಸಾರ್ಟ್ಗೆ ಕರೆದ್ರು, ಒಟ್ಟಿಗೆ ಕಾಲ ಕಳೆಯೋಣ ಎಂದು ಕರೆದಿದ್ದರು, ನನ್ನ ರೆಸಾರ್ಟ್ನಲ್ಲಿ ಯಾರೂ ಇಲ್ಲ ಬಾ ಎಂದು ಪೀಡಿಸಿದ್ರು. ಈ ವೇಳೆ ಸರ್ಜಾ ಮಾತು ಕೇಳಿ ಕಣ್ಣೀರಿಟ್ಟೆ, ಅವ್ರು ಹೊರಟು ಹೋದ್ರು.
ಜುಲೈ 2016ರಲ್ಲಿ ಚಿತ್ರದ ಚಿತ್ರೀಕರಣಕ್ಕೆ ಯುಬಿ ಸಿಟಿಗೆ ಹೋಗಿದ್ದೆ, ಈ ವೇಳೆ ಅರ್ಜುನ್ ಸರ್ಜಾ ನನ್ನ ಹಿಪ್ ಟಚ್ ಮಾಡಿ ಅಸಭ್ಯ ವರ್ತನೆ ತೋರಿಸಿದ್ರು. ಯಾಕೆ ಒಬ್ಬಳೇ ಕಾಯುತ್ತಿದ್ದೀಯಾ ಎಂದು ಪ್ರಶ್ನಿಸಿದ ಅವ್ರು, ನಾನು ಒಬ್ಬನೇ ಇದ್ದೇನೆ ಒಂದಷ್ಟು ಕಾಲ ಸಂತೋಷವಾಗಿ ಕಾಲಕಳೆಯೋಣ ಅಂದ್ರು, ಅರ್ಜುನ್ ಮಾತು ಕೇಳಿ ನಾನು ಗಾಬರಿ ಬಿದ್ದೆ, ಭಯಗೊಂಡೆ ಇವರ ಮಾತುಗಳಿಂದ ನನಗೆ ಅವರ ಲೈಂಗಿಕ ಉದ್ದೇಶ ಗೊತ್ತಾಯ್ತು ಎಂದಿದ್ದಾರೆ ಹಾಗಾಗಿ ನಾನು ಅವರ ರೂಮ್ಗೆ ತೆರಳಲು ನಿರಾಕರಿಸಿದೆ ಎಂದಿದ್ದಾರೆ.
ಹೆಬ್ಬಾಳದ ಬಂಗಲೆಯಲ್ಲಿ ತಬ್ಬಿಕೊಂಡು ಡೈಲಾಗ್ ಹೇಳುವ ಸೀನ್ ಇತ್ತು, ಈ ಸೀನ್ಗಾಗಿ ನಿರ್ದೇಶಕರು ರಿಹಾರ್ಸಲ್ ಮಾಡಲು ಸೂಚಿಸಿದ್ರು, ಈ ವೇಳೆ ಅವರು ನನ್ನ ಕಾಲು ಮಂದಿಯಿಂದ ಎದೆಯವರೆಗೂ ಮುಟ್ಟಿದರು, ಕಥೆಯಲ್ಲಿ ಇರುವುದಕ್ಕಿಂತ ಬೇರೆಯಾಗಿ ಅರ್ಜುನ್ ಸರ್ಜಾ ವರ್ತಿಸಿದ್ರು, ನಾನು ಕನ್ನಡ ಇಂಡಸ್ಟ್ರಿಗೆ ಹೊಸಬಳಾಗಿದ್ದೆ ಹಾಗಾಗಿ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ ಅವ್ರು ಕನ್ನಡ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಹಾಗೂ ಹಿರಿಯ ನಟ. ಹಾಗಾಗಿ, ಆ ವೇಳೆ ನನಗೆ ಪ್ರತಿಕ್ರಿಯಿಸಲು ಧೈರ್ಯ ಬರಲಿಲ್ಲ ನಾನು ಪ್ರತಿಕ್ರಿಯೆ ನೀಡುವ ವೇಳೆಗೆ ಮತ್ತೊಮ್ಮೆ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ರು ಈ ಸೀನ್ ಅನ್ನು ಇನ್ನೂ ಉತ್ತಮಗೊಳಿಸಬಹುದೇ ಎಂದು ಕೇಳಿದ್ರು ನಾನು ನಿರ್ದೇಶಕರ ಬಳಿ ತೆರಳಿ ಈ ರೀತಿಯ ಸೀನ್ ಮಾಡಲು ಇಷ್ಟವಿಲ್ಲ ಎಂದಿದ್ದೆ, ಈ ಬೆಳವಣಿಗಗಳನ್ನು ಸಹಿಸಿಕೊಳ್ಳಲಾಗದೆ ನಾನು ಕಣ್ಣೀರಿಟ್ಟೆ ನನ್ನ ಸಹಾಯಕರಾದ ಬೋರೇಗೌಡ ಮತ್ತು ಕಿರಣ್ ನನ್ನನ್ನು ಸಮಾಧಾನಪಡಿಸಿದ್ರು ಚಿತ್ರದಲ್ಲಿ ಹಾಸಿಗೆ ಮೇಲೆ ಒಟ್ಟಿಗೆ ಮಲಗುವ ದೃಶ್ಯ ಇತ್ತು ಇದನ್ನು ದುರುಪಯೋಗಪಡಿಸಿಕೊಂಡ್ರು ನನ್ನ ಕೈ ಹಿಡಿದು ಎಳೆದು, ಹತ್ತಿರ ಬರುವಂತೆ, ತಬ್ಬಿಕೊಳ್ಳುವಂತೆ ಒತ್ತಾಯಿಸಿದ್ರು ಎಂದಿದ್ದಾರೆ.