ದೀಪ ಪ್ರತಿದಿನ ಹಚ್ಚದೆ ಹೋದಾಗ ಏನಾಗುತ್ತೆ ದೀಪ ಹಚ್ಚುವಾಗ ಈ ತಪ್ಪುಗಳನ್ನು ಮಾಡಿದರೆ ಮನೆಗೆ ಉಂಟಾಗಬಹುದು ದಾರಿದ್ರ್ಯ ಹಾಗೂ ದೀಪ ಹಚ್ಚುವಾಗ ಹೇಳಬೇಕಾದ ಅದೊಂದು ಪ್ರತ್ಯೇಕ ಪದ ಯಾವುದು ಹೌದು ಮನೆಯಲ್ಲಿ ಪ್ರತಿದಿನ ದೀಪ ಹಚ್ಚಬೇಕು, ಸಾಮಾನ್ಯವಾಗಿ ದೇವರ ಆರಾಧನೆಯಲ್ಲಿ ದೀಪ ಹಚ್ಚುವುದು ಪ್ರಮುಖ ಭಾಗವಾಗಿದೆ. ದೀಪ ಹಚ್ಚುವಾಗ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಹೌದು ದೀಪ ಹಚ್ಚುವಾಗ ಮನಸ್ಸು ಏಕಾಗ್ರತೆ ಅಲ್ಲಿರಬೇಕು. ಅಷ್ಟೇ ಅಲ್ಲ ಪ್ರತಿದಿನ ಮನೆಯಲ್ಲಿ ದೀಪ ಉರಿಯುವಾಗ ಅದು ಮನೆಯ ಪಾಪವನ್ನು ಸುಡುತ್ತದೆ, ಆದ್ದರಿಂದಲೇ ಮನೆಯಲ್ಲಿ ಪ್ರತಿದಿನ ದೀಪ ಹಚ್ಚಬೇಕು ಅಂತ ಹೇಳುವುದು.
ದೀಪ ಹಚ್ಚುವ ಸಮಯದಲ್ಲಿ ಮನೆಯಲ್ಲಿರುವ ಕಷ್ಟಗಳನ್ನ ಹೇಳಿಕೊಳ್ಳುತ್ತ, ದೀಪವನ್ನು ಹಚ್ಚಬೇಕು. ಇದರಿಂದ ಮನೆಯಲ್ಲಿರುವ ಸಂಕಷ್ಟಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ ಮತ್ತು ಮನೆಯಲ್ಲಿ ಪ್ರತಿ ದಿನ ದೀಪ ಉರಿಸದೆ ಹೋದಾಗ ನಾವು ಮಾಡುವ ಪಾಪ ಕರ್ಮಗಳು ಹೆಚ್ಚುತ್ತಾ ಹೆಚ್ಚುತ್ತಾ ಮನೇಲಿರುವ ಸಮಸ್ಯೆಗಳು ಹೆಚ್ಚುತ್ತ ಹೋಗುತ್ತದೆ, ಇದು ಮುಂದಿನ ದಿನಗಳಲ್ಲಿ ಮನೆಗೆ ದಾರಿದ್ರ್ಯತನವನ್ನು ತರುತ್ತದೆ ಹಾಗೂ ಮನೆಯ ಸದಸ್ಯರು ಇಂತಹ ಸಮಸ್ಯೆಗಳಿಂದ ಬಳಲುತ್ತಾ ತಾವು ಮಾಡುವ ಕೆಲಸ ಕಾರ್ಯಗಳಲ್ಲಿ ಇದರ ಕೆಟ್ಟ ಪ್ರಭಾವವನ್ನು ಅನುಭವಿಸಬೇಕಾಗುತ್ತೆ ಅಥವಾ ಮನೆಯ ಸದಸ್ಯರು ಆರೋಗ್ಯ ನಷ್ಟ ಮಾಡಿಕೊಳ್ಳುವುದು ಇವೆಲ್ಲ ಸಮಸ್ಯೆಗಳು ಉದ್ಭವವಾಗುತ್ತೆ.
ಹಾಗಾಗಿ ನಮ್ಮ ಪಾಪ ಕರ್ಮಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಮನೆಯಲ್ಲಿ ನಾವು ದೇವರ ಮುಂದೆ ಅಗ್ನಿಯನ್ನು ದೇವನನ್ನು ಉರಿಸುವುದು ಹಾಗೂ ಆ ಸಮಯದಲ್ಲಿ ಅಂದರೆ ದೀಪ ಹಚ್ಚುವಾಗ ಕಷ್ಟಗಳನ್ನ ಹೇಳುತ್ತಾ ದೀಪ ಹಚ್ಚಿದಾಗ ಇರುವ ಸಮಸ್ಯೆಗಳು ದೂರವಾಗುತ್ತವೆ.ದೀಪ ಹಚ್ಚುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಮನಸ್ಸನ್ನು ಬೇರೆ ಕಡೆ ಆಲೋಚನೆ ಮಾಡುವ ಹಾಗೆ ಬಿಟ್ಟುಕೊಳ್ಳಬೇಡಿ ಮತ್ತು ಮನಸ್ಸನ್ನು ಪೂರ್ಣವಾಗಿ ಏಕಾಗ್ರತೆಯಲ್ಲಿ ಇರಿಸಿ.ದೀಪ ಹಚ್ಚುವಾಗ ಇದೊಂದು ಪಾದ ವನ್ನು ಕಡ್ಡಾಯವಾಗಿ ಹೇಳಬೇಕು
ಆ ಪದ ಯಾವುದು ಅಂದರೆ “ದೀಪಂ ಸಮರ್ಪಯಾಮಿ” ಎಂದು ಹೌದು ದೀಪ ಹಚ್ಚುವಾಗ ಪಠಿಸುವುದಕ್ಕೆ ಸಾಕಷ್ಟು ಶ್ಲೋಕಗಳಿವೆ ಆ ಶ್ಲೋಕ ಹೇಳಿಕೊಳ್ಳಲು ಬರುವುದಿಲ್ಲ ಅನ್ನೋರು ಈ ಸಣ್ಣ ಪದವನ್ನು ಹೇಳುತ್ತಾ ದೀಪವನ್ನು ಉರಿಸಿದರೆ, ಅಗ್ನಿದೇವನ ಸಂಪೂರ್ಣ ಅನುಗ್ರಹವನ್ನು ಪಡೆದು ಕೊಳ್ತೀರಾ ಮನೆಯಲ್ಲಿರುವ ಸಂಕಷ್ಟಗಳು ದೂರವಾಗುತ್ತವೆ.ದೀಪ ಹಚ್ಚುವಾಗ ಆಕಳಿಸುವುದು ಅಥವಾ ಕಣ್ಣಲ್ಲಿ ನೀರು ಬರುವುದು ಹೀಗೆ ಮಾಡಬಾರದು ಮತ್ತು ದೇವರ ಆರಾಧನೆ ಮಾಡುವ ಹೆಣ್ಣುಮಕ್ಕಳು ಕೂದಲನ್ನೂ ಕೆದರಿಕೊಂಡು ಅಥವಾ ಕೂದಲನ್ನು ಕಟ್ಟದೇ ಹಾಗೇ ದೇವರ ಮುಂದೆ ಕೂರಬಾರದು ಮತ್ತು ತಲೆಸ್ನಾನ ಮಾಡಿದಾಗ ಕೂದಲಿನಿಂದ ಹಾಗೆ ನೀರು ಹನುಕುತ್ತಿರುವ ಸ್ಥಿತಿಯಲ್ಲಿ ಮನೆಯೆಲ್ಲಾ ಓಡಾಡಬಾರದು, ಹೌದು ಕೂದಲಿಂದ ಬೀಳುವ ಆ ನೀರು ಮನೆಯೊಳಗೆ ಬೀಳಬಾರದು.
ದೀಪವನ್ನು ಹಚ್ಚಿದ ಮೇಲೆ ಸುಗಂಧ ಕಡ್ಡಿಗಳಿಂದ ನಾವು ದೇವರನ್ನು ಪೂಜಿಸುತ್ತೇವೆ ಅದೇ ರೀತಿ ದೀಪಗಳಿಗೂ ಕೂಡ ಧೂಪದೀಪಗಳನ್ನು ತೋರಿಸಿ, ಜ್ಯೋತಿಗೂ ನಮಸ್ಕರಿಸಬೇಕು ನಮ್ಮ ಮನೆಯಲ್ಲಿರುವ ಕಷ್ಟಗಳನ್ನು ದೂರ ಮಾಡಿ ಮನೆಯಲ್ಲಿರುವ ಸದಸ್ಯರ ಬಾಳಿನಲ್ಲಿ ಬೆಳಕು ಬರಲಿ ಎಂದು ಬೇಡಿಕೊಳ್ಳುತ್ತಾ, ದೀಪವನ್ನೂ ಹಚ್ಚಿದ ಮೇಲೆ ದೇವರಿಗೆ ಆರತಿಯನ್ನು ಬೆಳಗಬೇಕು. ಈ ರೀತಿ ಆರತಿ ಬೆಳಗುವಾಗ ಗಂಟೆಯ ನಿನಾದ ದಲ್ಲಿ ದೇವರಿಗೆ ಆರತಿಯನ್ನು ಅರ್ಪಿಸಬೇಕು.ಈ ರೀತಿಯಾಗಿ ದೀಪ ಬೆಳಗುವುದರಿಂದ ಮನೆಯಲ್ಲಿ ಲಾಭಗಳು ಉಂಟಾಗುತ್ತದೆ ಮತ್ತು ಮನೆಯಲ್ಲಿರುವ ಜ್ಯೋತಿ ಮನೆಯನ್ನ ಬೆಳಗುತ್ತೆ ಹಾಗಾಗಿ ಹೆಚ್ಚು ದಿನಗಳವರೆಗೂ ಮನೆಯಲ್ಲಿ ದೀಪ ಹಚ್ಚದೆ ಹಾಗೇ ಇರಬಾರದು ಇಲ್ಲವಾದರೆ ಏನೆಲ್ಲ ತೊಂದರೆಗಳು ಉಂಟಾಗುತ್ತವೆ ಎಂಬುದು ಮೊದಲೇ ಆರಿವಿರಲಿ