ನಮ್ಮ ದೈನಂದಿನ ಜೀವನದಲ್ಲಿ ನಮಗೆ ಪೂಜೆ ಪುನಸ್ಕಾರಗಳು ದೇವಸ್ಥಾನಗಳಿಗೆ ಅರ್ಚನೆ ಮತ್ತು ದೇವಸ್ಥಾನಗಳ ಭೇಟಿ ಈ ರೀತಿಯಾಗಿ ಅನೇಕ ವಿಧವಾದ ಅಂತಹ ಒಳ್ಳೆಯ ವಿಚಾರಗಳನ್ನು ನಾವು ರೂಡಿಸಿಕೊಂಡಿರುತ್ತೇವೆ ಹಾಗಾಗಿ ಇಂತಹ ಒಳ್ಳೆಯ ವಿಚಾರಗಳನ್ನು ನಾವು ನಮ್ಮ ಮಕ್ಕಳಿಗೂ ಸಹ ತಿಳಿಸಿಕೊಡಬೇಕು ಆಗ ಮಾತ್ರ ಅವರು ಕೂಡ ಒಳ್ಳೆಯ ಶುಭಗಳನ್ನು ಪ್ರಾಪ್ತಿ ಪಡೆಯುತ್ತಾರೆ. ಹಾಗಾಗಿ ಎಲ್ಲ ವಿಚಾರಗಳ ಬಗ್ಗೆ ನಮಗೆ ಸೂಕ್ತವಾದಂತಹ ಮಾಹಿತಿ ಸೂಕ್ತವಾದಂತ ಎಚ್ಚರಿಕೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನೀಡುವಂತಹ ಸೂಚನೆಗಳನ್ನು ನಾವು ಹೊಂದಿರಬೇಕು.
ನಾವು ಯಾವಾಗಲೂ ಕೂಡ ಪೂಜೆ ಪುನಸ್ಕಾರಗಳನ್ನು ಮಾಡುವ ವೇಳೆಗೆ ಒಳ್ಳೆಯ ವಿಚಾರದ ಮೂಲಕವೇ ಪೂಜೆ ಮಾಡುವಾಗ ನಮಗೆ ಒಳ್ಳೆಯದು ಬೇಗನೆ ನಡೆಯುತ್ತದೆ . ಇನ್ನು ಕೆಲವೊಬ್ಬರು ತಮ್ಮ ಸಂಕಷ್ಟಗಳನ್ನು ನೀಗಿಸಿಕೊಳ್ಳಲು ವಿವಿಧ ರೀತಿಯಾದಂತಹ ಪೂಜೆಯನ್ನು ಮಾಡುತ್ತಾರೆ ಅದರಲ್ಲಿ ಸಾಲದ ಸಮಸ್ಯೆಯನ್ನು ನೀಗಿಸಿಕೊಳ್ಳಲು ಮತ್ತು ಮನೆಯಲ್ಲಿ ಶುದ್ಧತ್ವವನ್ನು ಕಾಪಾಡಲು ಅಂದರೆ ಮನೆಯಲ್ಲಿ ಯಾವುದೇ ರೀತಿಯಾದಂತಹ ನಕಾರಾತ್ಮಕ ಪ್ರವೇಶ ಇಲ್ಲದಂತೆ ಮನೆಯನ್ನು ರಕ್ಷಿಸುವಂತೆ ಮಾಡುವಂತಹ ಪೂಜೆ ಎಂದರೆ ಅದು ತುಳಸಿ ಪೂಜೆ ಯಾಗಿರುತ್ತದೆ. ತುಳಸಿ ಪೂಜಾ ಬಹಳ ಉತ್ತಮ ವಾದಂತಹ ಪೂಜೆಯ ವಿಧಾನವಾಗಿದೆ.
ತುಳಸಿ ಪೂಜೆ ಮಾಡುವುದರಿಂದ ಅನೇಕ ವಿಧವಾದ ಅಂತಹ ಶುಭಗಳು ಪ್ರಾಪ್ತಿಯಾಗುತ್ತದೆ ಮತ್ತು ನಕಾರಾತ್ಮಕ ಕ್ರಿಯೆಗಳು ನಮ್ಮನ್ನು ತಾಕುವುದಿಲ್ಲ ತುಳಸಿ ಎಂಬುದು ದೇವರಿಗೆ ಇಷ್ಟವಾದಂತಹ ಸುವಾಸನೆ ಬೀರುವಂತಹ ಒಂದು ಸಸ್ಯ ಆಗಿದೆ ಹಾಗಾಗಿ ತುಳಸಿ ಗಿಡದಲ್ಲಿ ನಮಗೆ ಹಲವಾರು ಔಷಧಿಯ ಗುಣಗಳು ಇದೆ ಇಲ್ಲಿ ದೇವರು ಅದನ್ನು ಬಹಳವಾಗಿ ಆಶೀರ್ವದಿಸಿದ್ದಾರೆ ಎಂಬ ನಂಬಿಕೆಯು ಕೂಡ ಇದೆ ಹಾಗಾಗಿ ತುಳಸಿ ಎಂಬುದು ಬರೀ ಶಕುನ ಮಾತ್ರವಲ್ಲ ಅದು ಒಳ್ಳೆಯ ಆರೋಗ್ಯವನ್ನು ತರುವಂತಹ ಔಷಧಿಯು ಆಗಿದೆ ಮತ್ತು ತುಳಸಿ ಪೂಜೆಯನ್ನು ಮಾಡುವ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದು ಆಗೇ ಆಗುತ್ತದೆ.
ತುಳಸಿ ಗಿಡದ ಮುಂದೆ ನಿಂತು, ಈ 8 ಮಾತುಗಳನ್ನು ಹೇಳಿಕೊಂಡರೆ ಸಾಕು, ನಿಮ್ಮ ಮನೆಯ ಎಲ್ಲಾ ದುರಾದೃಷ್ಟಗಳು ತೊಲಗಿ ಅದೃಷ್ಟ ಎನ್ನುವುದು ನಿಮ್ಮ ಬೆನ್ನೇರುತ್ತದೆ. ಇನ್ನು ನೀವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಕೂಡ ಅದೃಷ್ಟ ಹಾಗೂ ದೈವ ಭಲ ಎನ್ನುವುದು ಹೆಚ್ಚಾಗುತ್ತದೆ. ಇನ್ನು ತುಳಸಿ ಗಿಡದ ಮುಂದೆ ಯಾವ ರೀತಿಯಾಗಿ ಆ 8 ಹೆಸರುಗಳನ್ನು, ಆ 8 ನಾಮಗಳನ್ನು ಹೇಳಿಕೊಳ್ಳಬೇಕು, ಅದನ್ನು ಹೇಗೆ ಹಾಗೂ ಯಾವ ದಿನ ಹೇಳಬೇಕು. ಇದರಿಂದ ಯಾವ ರೀತಿಯಾದಂತಹ ಫಲಗಳು ನಮಗೆ ಲಭಿಸುತ್ತದೆ. ಯಾವ ರೀತಿಯ ಏಳಿಗೆ ಎನ್ನುವುದು ನಿಮ್ಮ ಮನೆಗೆ ಆಗುತ್ತದೆ ಎನ್ನುವುದನ್ನು ತಿಳಿಸುತ್ತೇವೆ ಬನ್ನಿ…
ಯಾರ ಮನೆಯಲ್ಲಿ ತುಳಸಿ ಗಿಡ ಎನ್ನುವುದು ಇರುತ್ತೋ ಅವರ ಮನೆಯ ಮೇಲೆ ಸಂಪೂರ್ಣ ರಕ್ಷಣೆ ಎನ್ನುವುದು ಇದ್ದೆ ಇರುತ್ತದೆ. ತುಳಸಿ ದೇವಿಯೂ ಮನೆಗೆ ರಕ್ಷಣೆಯನ್ನು ನೀಡುತ್ತಾ, ನಿಮ್ಮ ಮನೆಗೆ ವಿಶೇಷವಾದ ದೈವಭಲವನ್ನು ಕರುಣಿಸುತ್ತಾಳೆ. ಇನ್ನು ಇಂತಹ ತುಳಸಿ ಗಿಡದ ಮುಂದೆ ನಿಂತು ನೀವು ನೀರು ಹಾಕುವಾಗ ಅಥವಾ ಪೂಜೆ ಮಾಡುವಾಗ ನಾವು ಹೇಳಿಕೊಟ್ಟಂತೆ, ಈ 8 ನಾಮಗಳನ್ನು ಹೇಳಿ, ಸಂಕಲ್ಪವನ್ನು ಮಾಡಿಕೊಂಡರೆ, ನಿಮ್ಮ ಎಲ್ಲಾ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಆ 8 ನಾಮಗಳು ಯಾವುದು ಎಂದರೆ, ಬೃಂದಾ, ಬೃಂದಾವನಿ, ವಿಶ್ವಪೂಜಿತಾ, ವಿಶ್ವಪಾವನಿ, ಪುಷ್ಪಸಾರ, ನಂದಿನಿ, ತುಳಸಿ, ಕೃಷ್ಣ ಜೀವನಿ ಎಂದು ಈ ರೀತಿಯಾದಂತಹ 8 ಹೆಸರುಗಳನ್ನು ಹೇಳಿಕೊಳ್ಳುತ್ತಾ, ನನ್ನ ಹಾಗೂ ನನ್ನ ಕುಟುಂಬದ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸು ತಾಯಿ ಎಂದು ಸಂಕಲ್ಪ ಮಾಡಿಕೊಂಡರೆ. ಆದಷ್ಟು ಬೇಗ ನಿಮ್ಮ ಎಲ್ಲಾ ಸಮಸ್ಯೆಗಳು ತೀರಿ ಹೋಗಿ ನಿವು ನೆಮ್ಮದಿಯ ಜೀವನ ನಡೆಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ….