Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ರೀತಿ ಇರುವ ನಾಣ್ಯವನ್ನು ನೀವು ಮಲಗುವುದಕ್ಕಿಂತ ಮುಂಚೆ ಈ ಜಾಗದಲ್ಲಿ ಇಟ್ಟು ಮಲಗಿದರೆ ಸಾಕು ಅಂದಿನಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಎಷ್ಟೇ ಇದ್ದರು ಕೂಡ ಪರಿಹಾರವಾಗುತ್ತವೆ ..!!!

ಮಲಗುವ ಮುನ್ನ ಇದನ್ನು ಮಾಡಿದರೆ ಸಾಕು ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹೌದು ಬರೀ ಎರಡು ರೂಪಾಯಿ ಇಂದ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವುದು ಹೇಗೆ ತಿಳಿಯಿರಿ.ಎಲ್ಲರ ಮನೆಯಲ್ಲೂ ಕಷ್ಟ ಇದ್ದೇ ಇರುತ್ತದೆ, ಅದರಲ್ಲೂ ಹಣಕಾಸಿನ ತೊಂದರೆ ಎಲ್ಲರ ಮನೆಯಲ್ಲೂ ಸರ್ವೇಸಾಮಾನ್ಯವಾಗಿದೆ. ಏಕೆಂದರೆ ದುಡ್ಡೇ ದೊಡ್ಡಪ್ಪ ಎಂದು ಗಾದೆಯೇ ಇದೆ. ದುಡ್ಡು ಇಲ್ಲದೆ ಜೀವನವು ನಡೆಯುವುದಿಲ್ಲ.ಜೀವನಕ್ಕೆ ಮುಖ್ಯ ಆಧಾರವೇ ಈ ದುಡ್ಡು.ದುಡ್ಡು ಯಾರಿಗೆ ತಾನೇ ಬೇಡ ಮಕ್ಕಳಿಗೆ ಓದಿಸಲು, ಮನೆಯಲ್ಲಿ ಅಡುಗೆ ಮಾಡಬೇಕಾದರೂ ಸಹ ದುಡ್ಡು ಬೇಕು.

ಇಂತಹ ಆರ್ಥಿಕ ಪರಿಸ್ಥಿತಿಗೆ ಬೇಕಾದ ದುಡ್ಡು ನಿಮ್ಮ ಮನೆಯಲ್ಲಿ ಸದಾ ಇರಬೇಕೆಂದರೆ, ಯಾವುದೇ ಅವ್ಯವಸ್ಥೆ ಆಗದೆ ಎಲ್ಲಾ ಕೆಲಸಗಳು ನೆರವೇರಬೇಕಾದರೆ ಬರೀ 2 ನಾಣ್ಯದಿಂದ ಈ ರೀತಿ ಪರಿಹಾರ ಪಡೆದುಕೊಳ್ಳಿ. ಈ ಪರಿಹಾರವನ್ನು ನಂಬಿಕೆಯಿಂದ ಯಾರಿಗೂ ತಿಳಿಸದೆ ಮಾಡಬೇಕು. ಗಂಡು ಮಕ್ಕಳು ಸಹ ಈ ಪೂಜೆಯನ್ನು ಅಥವಾ ಸಂಕಲ್ಪವನ್ನು ಮಾಡಿಕೊಳ್ಳಬಹುದು.ಪೂಜೆಯೆಂದರೆ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಲ್ಲ. ಗಂಡು ಮಕ್ಕಳಿಗೂ ಸಹ ಪೂಜೆ ಅವಶ್ಯವಾಗಿದೆ.ಅದರಲ್ಲೂ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಪೂಜೆ ಗಂಡಸರು ಮಾಡಿದರೆ ತುಂಬಾ ಒಳ್ಳೆಯದು.

ಏಕೆಂದರೆ ಮನೆಯ ವ್ಯವಹಾರ ಗಂಡಸರಿಗೆ ದೊಡ್ಡ ಜವಾಬ್ದಾರಿಯಾಗಿರುತ್ತದೆ.ದುಡ್ಡು ಎಂಬುದು ಮಹಾಲಕ್ಷ್ಮಿಯ ಸ್ವರೂಪ ಇದನ್ನು ಅವಶ್ಯಕತೆಗೆ ಮಾತ್ರ ಬಳಸಿದರೆ ತುಂಬಾ ಒಳ್ಳೆಯದು ಆದರೆ ಈಗಿನ ಕಾಲದಲ್ಲಿ ದುಡ್ಡು ಅವಶ್ಯಕತೆಗಿಂತ ಅನಾವಶ್ಯಕವಾಗಿ ಬಳಕೆಯಾಗುತ್ತಿದೆ. ನಿಮ್ಮ ಅವಶ್ಯಕತೆಗೆ ಬೇಕಾಗಿರುವ ಅಷ್ಟು ದುಡ್ಡು ಹೊಂದಿದ್ದರೆ ಜೀವನದಲ್ಲಿ ಸುಖ ನೆಮ್ಮದಿ ಇರುತ್ತದೆ. ಶ್ರೀ ಮಹಾಲಕ್ಷ್ಮಿಯ ಕೃಪೆಯಿಂದ ನಿಮಗೆ ದುಡ್ಡು ಎಂಬುದು ಅವಶ್ಯಕತೆಗಿಂತ ಹೆಚ್ಚಿದ್ದರೆ ಹಸಿದವರಿಗೆ ಅನ್ನವನ್ನು ಕೊಡಿ, ವಿದ್ಯೆ ಕಲಿಯಲು ಅವಕಾಶವಿಲ್ಲದ ಮಕ್ಕಳಿಗೆ ವಿದ್ಯೆ ಕೊಡಿಸಿ ಇದರಿಂದ ನಿಮಗೆ ಯಾವುದೋ ರೀತಿಯಿಂದ ಒಳ್ಳೆಯದಾಗಬಹುದು ಆ ದೇವರ ಆಶೀರ್ವಾದ ಕೂಡ ನಿಮಗೆ ಸಿಗುವುದು.

ಮಾಡುವ ಕೆಲಸದಲ್ಲಿ ಯಶಸ್ಸು ಇಲ್ಲದೇ ಹೋದರೆ ಮನೆಯ ಪರಿಸ್ಥಿತಿ ತುಂಬಾ ಕಠಿಣವಾಗಿರುತ್ತದೆ. ಜೀವನ ನಡೆಸಲು ಸಹ ಕಷ್ಟವಾಗುತ್ತದೆ. ನೀವು ಏನೇ ಮಾಡಿದರು ನಿಮಗೆ ಒಳ್ಳೆಯದು ಆಗುತ್ತಿರುವುದಿಲ್ಲ, ಇಂತಹ ಎಲ್ಲಾ ಸಂದರ್ಭದಲ್ಲೂ ನೀವು ಸೋತು ಹೋಗದೆ ಪರಿಹಾರವನ್ನು ಕಂಡುಕೊಳ್ಳಬಹುದು ಕೇವಲ ಈ ಎರಡು ರೂಪಾಯಿಯಿಂದ ಹೌದು ಸ್ನೇಹಿತರೆ ಈ ಎರಡು ರೂಪಾಯಿಯ ಪರಿಹಾರವನ್ನು ನೀವು ರಾತ್ರಿ ವೇಳೆ ಮಾಡಬೇಕು. ಯಾವುದೇ ವಾರ ಇದನ್ನು ಮಾಡಬಹುದು ಆದರೆ, ಶುಕ್ರವಾರ ತುಂಬಾ ಶ್ರೇಷ್ಠವಾಗಿರುತ್ತದೆ ಶ್ರೀ ಮಹಾಲಕ್ಷ್ಮಿಗೆ.

ಹಾಗೆಯೇ ಈ ಪೂಜೆಗೆ ತುಂಬಾ ಖರ್ಚು ಸಹ ಇರುವುದಿಲ್ಲ. ಕೇವಲ ಎರಡು ರೂಪಾಯಿ ಹಾಗೆ ನಿಮ್ಮ ನಂಬಿಕೆ ಇರಬೇಕು. ಈ ಪೂಜೆ ಮಾಡುವುದರಿಂದ ನೀವು ಮಾಡುವ ಕೆಲಸದಲ್ಲಿ ಯಶಸ್ಸು ದೊರಕುವುದು ಹಾಗೆಯೇ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ನೀವು ಅಂದುಕೊಳ್ಳುವ ಆಸೆ ಕನಸುಗಳು ನೆರವೇರುವವು ಹಾಗೂ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುವುದು.ಹೌದು ಸ್ನೇಹಿತರೆ ಗಂಡಸರು ಪೂಜೆ ಮಾಡುವುದಾದರೆ ಈ ಎರಡು ರೂಪಾಯಿಯನ್ನು ಬಲಗೈನಲ್ಲಿ, ಹಾಗೂ ಹೆಣ್ಣುಮಕ್ಕಳು ಎಡಗೈನಲ್ಲಿ ಇಟ್ಟುಕೊಂಡು ಸಂಕಲ್ಪ ಮಾಡಿಕೊಳ್ಳಬೇಕು.

ರಾತ್ರಿ ಮಲಗುವಾಗ ಈ ಎರಡು ರೂಪಾಯಿಯನ್ನು ಕೈಯಲ್ಲಿಟ್ಟುಕೊಂಡು ಕಣ್ಣಿಗೆ ಒತ್ತಿ ನಮಸ್ಕರಿಸಿ, ಮನಸ್ಸಿನಲ್ಲಿ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿ ಹಾಗೂ ನಾವು ಮಾಡುವ ಕೆಲಸದಲ್ಲಿ ಯಶಸ್ಸು ಇರಲಿ ಯಾವುದೇ ನಕಾರಾತ್ಮಕ ಶಕ್ತಿ ನಮ್ಮ ಮನೆಗೆ ತಾಕದಿರಲಿ ಎಂದು ಶ್ರೀ ಮಹಾಲಕ್ಷ್ಮಿಯನ್ನು ನೆನೆದು, ಇದನ್ನು ನೀವು ಮಲಗುವ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳಿ. ಹಾಗಾದರೆ ಈ ಸಂಕಲ್ಪ ಮಾಡಿದ ಹಣವನ್ನು ಏನು ಮಾಡಬೇಕು ಎಂಬುದು ನಿಮಗೆ ಪ್ರಶ್ನೆಯಾಗಿರಬಹುದು.

ಹಾಗಾದರೆ ಈ ರೀತಿ ಮಾಡಿ ನೀವು ಮಾಡಿದ ಪೂಜೆಗೆ ಫಲ ಸಿಗಬೇಕೆಂದರೆ ದಾನ ಅತಿ ಮುಖ್ಯವಾಗಿದೆ. ಈ ಹಣವನ್ನು ಹಸಿದವರಿಗೆ ದಾನಮಾಡುವುದರಿಂದ ನಿಮ್ಮ ಪೂಜೆಗೆ ಫಲ ಸಿಗುವುದು. ಚಿಕ್ಕಮಕ್ಕಳಿಗೆ ಹಾಗೂ ವೃದ್ಧರಿಗೆ ಈ ಎರಡು ರೂಪಾಯಿಯನ್ನು ಕೊಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಸ್ನೇಹಿತರೆ ಹಾಗಾದರೆ ಈ ಎರಡು ರೂಪಾಯಿಂದ ಪರಿಹಾರ ಪಡೆದುಕೊಂಡು ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಿ ಹಾಗೆಯೇ ನಿಮ್ಮ ಜೀವನದಲ್ಲಿ ನಂಬಿಕೆ ಇಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ