ರಸ್ತೆಯಲ್ಲಿ ನೀವು ಹೋಗುವಾಗ ಈ ವಸ್ತುಗಳು ಸಿಕ್ಕರೆ ಮನೆಗೆ ತೆಗೆದುಕೊಂಡು ಹೋಗಬೇಡಿ ನಿಮ್ಮ ಮನೆಯಲ್ಲಿ ಧನ ನಾಶವಾಗುವುದು ಖಂಡಿತ.ಹಾಯ್ ಸ್ನೇಹಿತರೆ ಯಾರಾದರೂ ರಸ್ತೆಯಲ್ಲಿ ಏನನ್ನಾದರೂ ಬಿಳಿಸಿಕೊಂಡು ಹೋದರೆ ಅದು ಬೇರೆಯವರ ಕೈಗೆ ಸಿಗುತ್ತದೆ. ಇದು ಸಿಕ್ಕ ತಕ್ಷಣ ಎಲ್ಲರೂ ಖುಷಿಯಾಗುವುದು ಸಹಜ ಆದರೆ ಸ್ನೇಹಿತರೆ ಈ ರೀತಿಯಾಗಿ ರಸ್ತೆಯಲ್ಲಿ ಸಿಕ್ಕ ವಸ್ತುಗಳನ್ನು ದಯವಿಟ್ಟು ಮನೆಗೆ ತೆಗೆದುಕೊಂಡು ಹೋಗಬೇಡಿ ಇದರಿಂದ ನಿಮ್ಮ ಮನೆಯಲ್ಲಿರುವ ಲಕ್ಷ್ಮಿ ಹಾಗೂ ಧನ ನಾಶವಾಗುವುದು ಖಂಡಿತ. ಬೇರೆಯವರು ಕಳೆದುಕೊಂಡ ಚಿನ್ನ ಏನಾದರೂ ರಸ್ತೆಯಲ್ಲಿ ಬಿದ್ದಿದ್ದರೆ ನೀವು ಅದನ್ನು ಮನೆಗೆ ತೆಗೆದುಕೊಂಡು ಹೋಗಬಾರದು ಏಕೆಂದರೆ ಆ ಚಿನ್ನ ಕಳೆದುಕೊಂಡವರ ದರಿದ್ರ ಆಗಿರುತ್ತದೆ
ಅದನ್ನು ನೀವು ತೆಗೆದುಕೊಂಡು ಹೋಗುವುದರಿಂದ ನೀವು ಮನೆಗೆ ದರಿದ್ರಲಕ್ಷ್ಮಿ ತೆಗೆದುಕೊಂಡಂತೆ ಆಗುತ್ತದೆ. ಈ ದರಿದ್ರ ಲಕ್ಷ್ಮಿ ಪ್ರವೇಶದಿಂದ ಮನೆಯಲ್ಲಿರುವ ಅಂದರೆ ನೀವು ಕಷ್ಟಪಟ್ಟು ಮಾಡಿಸಿಕೊಂಡ ಚಿನ್ನವು ಅಂದರೆ ಸ್ಥಿರ ಲಕ್ಷ್ಮಿ ಮನೆಯಿಂದ ದೂರ ಆಗುವ ಸಾಧ್ಯತೆ ಇರುತ್ತದೆ. ನೀವು ಮನೆಯಲ್ಲಿ ದರಿದ್ರ ಲಕ್ಷ್ಮಿಯನ್ನು ಆಹ್ವಾನ ಮಾಡುವುದರಿಂದ ಮನೆಯಲ್ಲಿ ಎಲ್ಲರಿಗೂ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾಗುತ್ತವೆ ಆರೋಗ್ಯದಲ್ಲಿ ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಕಡೆ ಇನ್ನೊಂದು ವಿಷಯ ಏನೆಂದರೆ ಎಲ್ಲಾ ರಾಶಿಯವರಿಗೆ ಎಲ್ಲಾ ಲೋಹಗಳು ಆಗಿ ಬರುವುದಿಲ್ಲ. ಎಲ್ಲರಿಗೂ ಎಲ್ಲಾ ಲೋಹವು ಅದೃಷ್ಟವನ್ನು ತಂದುಕೊಡುವುದಿಲ್ಲ ಕೆಲವೊಬ್ಬರಿಗೆ ಅದು ದುರಾದೃಷ್ಟ ಆಗಿರುತ್ತದೆ.
ಇನ್ನೂ ಒಬ್ಬೊಬ್ಬರಿಗೆ ದುರಾದೃಷ್ಟ ಎಂಬುದು ಪಕ್ಕಕ್ಕೆ ಇರುತ್ತದೆ ಹಾಗೆ ಒಬ್ಬೊಬ್ಬರಿಗೆ ಅದೃಷ್ಟ ಎನ್ನುವುದು ಮುಂದೆ ಬಂದಿರುತ್ತದೆ. ಬಂಗಾರ ಎಂದರೆ ಮಹಾಲಕ್ಷ್ಮಿಯ ಸಂಕೇತ ಆಗಿದೆ. ಆದರೆ ಬೇರೆಯವರಿಂದ ನಮಗೆ ಸಿಕ್ಕ ಬಂಗಾರ ನಮಗೆ ದರಿದ್ರಲಕ್ಷ್ಮಿ ಆಗಿರುತ್ತದೆ. ಈ ರೀತಿಯಾಗಿ ಸಿಕ್ಕ ಚಿನ್ನವನ್ನು ನೀವು ಮನೆಗೆ ತೆಗೆದುಕೊಂಡು ಹೋಗಲೇಬಾರದು ಇದನ್ನು ಅಲ್ಲಿಂದಲೇ ಬೇರೆ ಕೆಲಸಕ್ಕೆ ಅಥವಾ ದಾನ ಮಾಡಲು ಅಥವಾ ದೇವಸ್ಥಾನದ ಹುಂಡಿಗೆ ಹಾಕಲು ಬಳಸಬೇಕು ಈ ರೀತಿಯಾಗಿ ಮಾಡುವುದರಿಂದ ನಿಮಗೆ ಅಂಟಿರುವ ದರಿದ್ರ ದೂರವಾಗುತ್ತದೆ. ಸಿಕ್ಕ ಬಂಗಾರವನ್ನು ಮನೆಗೆ ತೆಗೆದುಕೊಂಡು ಬಂದರೆ ದಾಂಪತ್ಯದಲ್ಲಿ ವಿರಸ ಹೆಚ್ಚಾಗುತ್ತದೆ ಮನೆಯಲ್ಲಿ ಸುಖ-ಶಾಂತಿ-ನೆಮ್ಮದಿ ಎಂಬುದು ಕಳೆದುಹೋಗುತ್ತದೆ.
ಸ್ನೇಹಿತರೆ ಸಿಕ್ಕರೆ ಬೆಳ್ಳಿ ಸಿಗಬೇಕು ಕಳೆದರೆ ಬಂಗಾರ ಕಳೆಯಬೇಕು ಎಂದು ಹಿರಿಯರು ಹೇಳುತ್ತಾರೆ. ನಿಮಗೇನಾದರೂ ರಸ್ತೆಯಲ್ಲಿ ಬೆಳ್ಳಿ ಸಿಕ್ಕರೆ ನೀವು ಅದೃಷ್ಟ ಎಂದು ತಿಳಿದುಕೊಳ್ಳಿ ಇದರಿಂದ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಹಾಗೆ ಲಗ್ನ ಆಗದವರಿಗೆ ಲಗ್ನ ಆಗುವ ಸಾಧ್ಯತೆ ಇರುತ್ತದೆ ಇನ್ನು ಮದುವೆಯಾದವರಲ್ಲಿ ಹೊಸ ಹೊಸ ವಿಷಯಗಳು ಅಂದರೆ ತಾಯಿ ಆಗುವ ಸಾಧ್ಯತೆ ಇರುತ್ತದೆ. ಆದರೆ ಬೆಳ್ಳಿ ಅಥವಾ ಬಂಗಾರವನ್ನು ಮನೆಗೆ ತೆಗೆದುಕೊಂಡು ಬರುವುದಕ್ಕಿಂತ ಶಿವನ ದೇವಸ್ಥಾನಕ್ಕೆ ಹಾಕುವುದು ತುಂಬಾ ಒಳ್ಳೆಯದು. ಸ್ನೇಹಿತರೆ ಯಾರದೋ ಚಿನ್ನ ಅಥವಾ ಬೆಳ್ಳಿಯಿಂದ ನಿಮಗೆ ತಿಳಿದಿದ್ದರೆ ತಕ್ಷಣ ಅವರಿಗೆ ಕೊಟ್ಟುಬಿಡಿ ಆದರೆ ನಿಮಗೆ ತಿಳಿಯದೇ ಹೋದರೆ ಅದನ್ನು ನೀವು ಬಳಸಿ ಅವರ ದರವನ್ನು ನೀವು ತೆಗೆದುಕೊಳ್ಳಬೇಡಿ.
ಇದರಿಂದ ನಿಮ್ಮ ಮನೆಯಲ್ಲಿರುವ ಸ್ಥಿರ ಲಕ್ಷ್ಮಿ ಹೊರಗೆ ಹೋಗುತ್ತಾಳೆ. ಚಿನ್ನವನ್ನು ನೀನು ಚೆನ್ನಾಗಿದ್ದರೆ ಅದಕ್ಕಿಂತ ನೂರು ಪಟ್ಟು ಹೆಚ್ಚು ಮಾಡಿಸಿಕೊಳ್ಳಬಹುದು. ಸ್ನೇಹಿತರೆ ಚಿನ್ನ ಅಥವಾ ಬೆಳ್ಳಿಯನ್ನು ಅದೇ ಬೇರೆ ಯಾವುದೇ ವಸ್ತು ನಿಮಗೆ ಸಿಕ್ಕರೆ ಉಪಯೋಗಿಸಬೇಡಿ ಪರರ ವಸ್ತುವನ್ನು ಉಪಯೋಗಿಸುವುದು ಎಂದಿಗೂ ನಿಮಗೆ ಶುಭವನ್ನು ತರುವುದಿಲ್ಲ. ನಾವು ಕಷ್ಟಪಟ್ಟ ಗಳಿಸಿಕೊಂಡ ವಸ್ತುಗಳು ಮಾತ್ರ ನಮ್ಮದಾಗಿರುತ್ತದೆ. ಸ್ನೇಹಿತರೆ ಇಂತಹ ಮಾಹಿತಿಗಳು ತುಂಬಾ ಎಲ್ಲರಿಗೂ ಉಪಯುಕ್ತವಾಗಿರುತ್ತದೆ ಇಂತಹ ವಿಷಯಗಳು ಎಲ್ಲರಿಗೂ ತಿಳಿದರು ಮುಂದೆ ಆಗುವ ಸಮಸ್ಯೆಯನ್ನು ನಾವು ತಡೆದು ನಿಲ್ಲಿಸಬಹುದು. ಅದರಲ್ಲೂ ನಮ್ಮ ಮುಂದಿನ ಪೀಳಿಗೆಗೆ ಇಂತಹ ವಿಷಯಗಳನ್ನು ತಿಳಿಸುವುದು ತುಂಬಾ ಮುಖ್ಯವಾಗಿದೆ.
ಸ್ನೇಹಿತರೆ ಯಾವುದೇ ವಸ್ತು ಸಿಕ್ಕರೆ ನೀವು ಖುಷಿ ಪಡುವುದಕ್ಕಿಂತ ಹೆಚ್ಚು ಅದನ್ನು ಎಲ್ಲಿದೆ ಸೇರಿಸಬೇಕು ಎಂಬ ಜವಾಬ್ದಾರಿ ತೆಗೆದುಕೊಳ್ಳಬೇಕು. ಹಾಗಾದರೆ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ