ಈ ವಸ್ತುಗಳನ್ನು ದಾನ ಮಾಡುವುದರಿಂದ ನಿಮ್ಮ ಪಾಪಗಳೆಲ್ಲ ದೂರವಾಗುತ್ತದೆ ನೀವು ಅದೃಷ್ಟವನ್ನು ಪಡೆಯುತ್ತೀರಿ.ಹಾಯ್ ಸ್ನೇಹಿತರೆ ದಾನ ಎಂದರೆ ನಮಗೆ ಮೊದಲು ನೆನಪು ಬರುವುದು ಕರ್ಣ. ಮಹಾಭಾರತದಲ್ಲಿ ಕರ್ಣನ ಪಾತ್ರ ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಗೂ ಕರ್ಣ ದಾನಕ್ಕೆ ಹೆಸರಾಗಿರುವ ಮಹಾದಾನಿ ಎಂದು ಹೇಳುತ್ತಾರೆ. ಕೊಟ್ಟರೆ ಕರ್ಣನಂತೆ ಅಂದರೆ ಕರ್ಣ ಹೇಗೆ ಮನಃಸ್ಪೂರ್ತಿಯಾಗಿ ದಾನ ಮಾಡುತ್ತಿದ್ದನು ಅವರಿಗಾಗಿ ನಾವು ಕೂಡ ದಾನವನ್ನು ಮಾಡಬೇಕು. ಅರ್ಧಂಬರ್ಧ ಕೊಡುವುದರಿಂದ ಅದು ಕೊಡುವವರಿಗೆ ಪೂರ್ತಿಯಾಗಿ ತಲುಪುವುದಿಲ್ಲ ಹಾಗೆ ಅಂತಹ ದಾನವನ್ನು ದಾನ ಎನ್ನಲಾಗುವುದಿಲ್ಲ. ಕಲಿಯುಗದಲ್ಲಿ ನಾವು ಮಾಡಿರುವ ಪಾಪಗಳು ದೂರ ಆಗಬೇಕೆಂದರೆ ನಾವು ದಾನಮಾಡಬೇಕು
ಇದರಿಂದ ನಮ್ಮ ಪಾಪಗಳು ದೂರವಾಗಿ ನಮಗೆ ಒಳ್ಳೆಯ ಆರೋಗ್ಯ ಜೀವನ ಸಿಗುತ್ತದೆ. ಹಾಗಾದರೆ ಯಾವ ಯಾವ ವಸ್ತುಗಳನ್ನು ದಾನ ಮಾಡಬೇಕು ಯಾವುದನ್ನು ದಾನ ಎಂದು ಹೇಳುತ್ತಾರೆ ಎಂದು ಈ ಮಾಹಿತಿಯಲ್ಲಿ ತಿಳಿಯೋಣ. ದಾನ ಎಂದರೆ ಬೇರೆಯವರಿಗೆ ಅವಶ್ಯಕತೆ ಇರುವ ಹಾಗೂ ಇಷ್ಟ ಆಗಿರುವ ವಸ್ತು ಮತ್ತು ನೀವು ಮನಃಸ್ಪೂರ್ತಿಯಾಗಿ ಕೊಡುವ ವಸ್ತು ಆಗಿರಬೇಕು ಅಂದಾಗ ಮಾತ್ರ ದಾನಕ್ಕೆ ಒಂದು ಬೆಲೆ ಸಿಗುತ್ತದೆ. ದಾನದಲ್ಲಿ ನೂರಾರು ವಿಧಗಳಿವೆ ನೇತ್ರದಾನ ಅನ್ನದಾನ ವಸ್ತ್ರದಾನ ಗೋದಾನ ಧಾನ್ಯದಾನ ಹೀಗೆ ಸುಮಾರು ದಾನಗಳಿವೆ. ಸ್ನೇಹಿತರೇ ಹಾಗಾದರೆ ಈ ಮಾಹಿತಿಯಲ್ಲಿ ದಾನದ ಬಗ್ಗೆ ಸ್ವಲ್ಪ ತಿಳಿಯೋಣ. ಮೊದಲನೆಯದಾಗಿ ಮನೋ ದಾನ.
ಮನೋದಾನ ಎಂದರೆ ಬೇರೆಯವರು ನಿಮ್ಮ ವಸ್ತುಗಳನ್ನು ಇಷ್ಟಪಟ್ಟು ಕೇಳಿದರೆ ನೀವು ತಕ್ಷಣ ಕೊಡುವುದು ಇದನ್ನು ಮನೋದಾನ ಎನ್ನುತ್ತಾರೆ. ದಾನವನ್ನು ಯಾವಾಗಲೂ ಭಕ್ತಿ ಹಾಗೂ ವಿನಯದಿಂದ ಮಾಡಬೇಕು. ನೀವು ಮಾಡಿದ ದಾನವನ್ನು ರಹಸ್ಯವಾಗಿ ಇಟ್ಟುಕೊಳ್ಳಬೇಕು ಹಾಗೂ ಯಾವುದೇ ಪ್ರತಿಫಲವನ್ನು ಬಯಸದೆ ದಾನ ಮಾಡಬೇಕು ಇದನ್ನು ನಿಜವಾದ ದಾನ ಎಂದು ಕರೆಯುತ್ತಾರೆ. ಇನ್ನು ಎರಡನೆಯ ದಾನ ಯಾವುದು ಎಂದರೇನು ರೂಡಿ ದಾನ. ರೂಢಿ ದಾನ ಎಂದರೇನು ಹಿಂದೆ ಮಾಡುತ್ತಿದ್ದ ಎಲ್ಲ ಪದ್ಧತಿಗಳನ್ನು ನಡೆಸಿಕೊಂಡು ಅಂದರೆ ದಾನಮಾಡುವ ಪದ್ಧತಿಗಳನ್ನು ಮುಂದಿನ ಪೀಳಿಗೆಯು ನಡೆಸಿಕೊಂಡು ಹೋಗುವುದು ರೂಡಿ ದಾನ.
ಇನ್ನು ಮೂರನೆಯದಾಗಿ ಗೋಚರ ದಾನ ಅಂದರೆ ಅವರು ಇದ್ದಾಗಲೇ ಅನ್ನ ಬಟ್ಟೆ ದಾನ ಮಾಡುವುದು. ಅಗೋಚರ ದಾನ ಅಂದರೆ ಯಾರಾದರೂ ಸತ್ತಮೇಲೆ ಅವರ ಹೆಸರಿನಲ್ಲಿ ದಾನ ಮಾಡುವುದನ್ನು ಅಗೋಚರ ದಾನ ಎನ್ನುತ್ತಾರೆ. ನಾವು ಅವಶ್ಯಕತೆ ಇರುವವರಿಗೆ ದಾನವನ್ನು ಈ ಜನ್ಮದಲ್ಲಿ ಮಾಡುವುದರಿಂದ ಪಾಪಗಳನ್ನು ತೊಳೆದುಕೊಂಡಂತೆ ಆಗುತ್ತದೆ ಹಾಗೂ ನಾವು ಪುಣ್ಯದ ಕೆಲಸವನ್ನು ಮಾಡಿದಂತೆ ಆಗುತ್ತದೆ. ವಸ್ತುಗಳನ್ನು ದಾನ ಮಾಡಿದಾಗ ಅವರಿಗೆ ಆಗುವ ಖುಷಿ ನಮ್ಮ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಇನ್ನು ದೇವಸ್ಥಾನಗಳಲ್ಲಿ ದಾನಗಳನ್ನು ಹೆಚ್ಚಾಗಿ ಮಾಡುತ್ತಾರೆ ಎಂದರೆ ಅವರ ಶಕ್ತಿಗೆ ಅನುಸಾರವಾಗಿ ದೇವಸ್ಥಾನಗಳಿಗೆ ದಾನವನ್ನು ಕೊಡುವುದರಿಂದ ಪಾಪ ಕಳೆದು ಹೋಗುತ್ತದೆ ಹಾಗೂ ಪುಣ್ಯ ಸಿಗುತ್ತದೆ ಎನ್ನುವ ನಂಬಿಕೆ ಇದೆ.
ಇನ್ನು ದೇವಸ್ಥಾನಗಳಿಗೆ ಶಂಕು ದಾನಮಾಡುವುದರಿಂದ ಮಹಾವಿಷ್ಣುವಿನ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ಮುಂದಿನ ಜನ್ಮದಲ್ಲಿ ನೀವು ಕೀರ್ತಿಯನ್ನು ಪಡೆಯುವ ಹಾಗೆ ಉತ್ತಮ ಆಸ್ಥಾನಕ್ಕೆ ಬೆಳೆಯುತ್ತಿರಿ ಎಂದು ಹೇಳುತ್ತಾರೆ. ಇನ್ನು ಗೆಜ್ಜೆಯನ್ನು ದೇವರಿಗೆ ದಾನ ಮಾಡುವುದರಿಂದ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಿಕೆ ಇದೆ. ಹಾಗೂ ದೇವರಿಗೆ ಹಿಂದೂಧರ್ಮ ಇರುವ ಕೇಸರಿ ಬಟ್ಟೆಯ ಮೇಲೆ ಓಂ ಎಂದು ಬರೆದಿರುವ ಬಟ್ಟೆಯನ್ನು ದಾನಮಾಡುವುದರಿಂದ ಕಷ್ಟಗಳೆಲ್ಲ ದೂರವಾಗಿ ನೀವು ಆರೋಗ್ಯದಿಂದ ಇರುತ್ತೀರಿ. ಇನ್ನೂ ದೇವರಿಗೆ ನಾಲ್ಕು ಕಳಸಗಳನ್ನು ದಾನಮಾಡುವುದರಿಂದ ನೀವು ನಾಲ್ಕು ಸಮುದ್ರದಲ್ಲಿ ಪಾಪಗಳನ್ನು ತೊಳೆದುಕೊಂಡಂತೆ ಎಂದು ಹೇಳಲಾಗುತ್ತದೆ.
ಇನ್ನೂ ದೇವಸ್ಥಾನಕ್ಕೆ ಚಾಮರವನ್ನು ದಾನಮಾಡುವುದರಿಂದ ಸರ್ವ ಕಾರ್ಯಗಳು ಸಿದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಇನ್ನು ದೇವಸ್ಥಾನಕ್ಕೆ ಯಾರು ಗೋದಾನ ಮಾಡುತ್ತಾರೆ ಅವರಿಗೆ ಪುಣ್ಯಫಲ ಸಿಗುತ್ತದೆ ಮತ್ತು ಅವರಿಗೆ ಇಲ್ಲ ಪಾಪಗಳು ದೂರ ಆಗುತ್ತದೆ. ಇನ್ನೂ ದೇವರಿಗೆ ಅರಿಶಿಣ ಕುಂಕುಮ ಪೂಜೆಯ ಸಾಮಗ್ರಿಗಳನ್ನು ಕೊಡಿಸುವುದರಿಂದ ಅಂದರೆ ದಾನಮಾಡುವುದರಿಂದ ಅವರಿಗೆ ಸರ್ವ ಕಾಯ ಯಜ್ಞಗಳನ್ನು ಮಾಡಿದಷ್ಟು ಪುಣ್ಯ ಫಲ ಸಿಗುತ್ತದೆ ಎಂದು ನಂಬಿಕೆ ಇದೆ. ಸ್ನೇಹಿತರೆ ನೀವು ಕೂಡ ಅವಶ್ಯಕತೆ ಇದ್ದವರಿಗೆ ದಾನವನ್ನು ಮಾಡಿ ದಾನವನ್ನು ಮಾಡುವಾಗ ಪೂರ್ತಿಯಾದ ಮನಸ್ಸಿನಿಂದ ಹಾಗೂ ಯಾವುದೇ ಪ್ರತಿಫಲವನ್ನು ಬಯಸದೆ ದಾನ ಮಾಡಬೇಕು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.