ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಮ್ಮೆಲ್ಲರಿಗೂ ಕೂಡ ಲಕ್ಷ್ಮಿಯ ವರ ಬೇಕಿರುತ್ತದೆ ಹಾಗಾಗಿ ಎಲ್ಲರೂ ಕೂಡ ಲಕ್ಷ್ಮಿಯನ್ನು ಬಹಳವಾಗಿ ಬಯಸುತ್ತೇವೆ ಮತ್ತು ಲಕ್ಷ್ಮಿ ದೇವಿ ಒಲಿದರೆ ನಮ್ಮೆಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯು ಇದೆ ಮತ್ತು ಲಕ್ಷ್ಮಿ ಇಲ್ಲದೆ ನಮ್ಮ ದೈನಂದಿನ ಜೀವನದ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಎಲ್ಲರಿಗೂ ತಿಳಿದು ಇದೆ ಹಾಗಾಗಿ ಲಕ್ಷ್ಮಿ ಎಂದರೆ ಎಲ್ಲರಿಗೂ ಬಹಳ ಇಷ್ಟ ಆದರೆ ಲಕ್ಷ್ಮಿ ಮಾತ್ರ ಚಂಚಲೆ ಆಕೆ ಯಾರನ್ನು ಒಲೆಯುತ್ತಾಳೆ, ಯಾವ ಸಮಯದಲ್ಲಿ ಬಂದು ಸೇರುತ್ತಾಳೆ ಯಾವಾಗ ಬಿಟ್ಟು ಹೋಗುತ್ತಾಳೆ ಯಾವುದು ತಿಳಿದಿರುವುದಿಲ್ಲ ಹಾಗಾಗಿ ಆಕೆಯನ್ನು ಸರಿಯಾಗಿ ನೋಡಿಕೊಳ್ಳುವ ,
ಮತ್ತು ಆಕೆಯನ್ನು ನಮ್ಮನ್ನು ಬಿಟ್ಟು ಹೋಗದ ರೀತಿಯಲ್ಲಿ ಮಾಡಿಕೊಳ್ಳುವ ಅನೇಕ ರೀತಿಯಾದಂತಹ ಉಪಾಯಗಳು ಮತ್ತು ವಿಧಾನಗಳು ಇವೆ. ಹಾಗಾದರೆ ಅಂತ ಉಪಾಯಗಳು ಮತ್ತು ವಿಧಾನಗಳು ಯಾವುದು ಎಂದು ನಾವು ತಿಳಿದುಕೊಳ್ಳೋಣ ಬನ್ನಿ ನಮಗೆ ಗೊತ್ತಿರುವಂತೆ ಹೆಣ್ಣು ಮಕ್ಕಳು ಯಾವಾಗಲೂ ಲಕ್ಷ್ಮಿಗೆ ಬಹಳ ಪ್ರಿಯವಾಗಿದ್ದು ಅವರು ಬೇಗನೆ ಲಕ್ಷ್ಮಿಗೆ ಇಷ್ಟವಾಗಿ ಬಿಡುತ್ತಾರೆ ಹಾಗಾಗಿ ಲಕ್ಷ್ಮಿ ಎಂದರೆ ಹೆಣ್ಣು ಮಕ್ಕಳ ರೂಪದಲ್ಲಿ ನಾವು ಕಾಣಬಹುದಾಗಿದೆ ಮತ್ತು ಲಕ್ಷ್ಮಿಯನ್ನು ನಾವು ಒಲಿಸಿಕೊಳ್ಳುವಾಗ ಆಕೆಯನ್ನು ಸರಿಯಾದ ರೀತಿಯಲ್ಲಿ ಒಲಿಸಿಕೊಂಡಾಗ ಮಾತ್ರ ಆಕೆ ನಮ್ಮಲ್ಲಿ ನೆಲೆಸುತ್ತಾಳೆ ಮತ್ತು ನಮಗೆ ಬೇಕಾದ ವರಗಳನ್ನು ಕೂಡ ಕೊಡುತ್ತಾಳೆ.
ಮತ್ತು ಲಕ್ಷ್ಮಿ ಹೋಲಿಸಿಕೊಳ್ಳುವುದಕ್ಕೆ ಅನೇಕ ಹೆಣ್ಣು ಮಕ್ಕಳು ಪ್ರತಿದಿನ ಬೆಳಗ್ಗೆ ಉಸ್ತಿಲನ ತೊಳೆದು ಮತ್ತು ಅವರ ಮನೆಯ ಬಾಗಿಲಿನ ಸಿಂಹದಮರವನ್ನು ಕೂಡ ತೊಳೆದು ಬಿಡುತ್ತಾರೆ ಮತ್ತು ಅದಕ್ಕೆ ಅರಿಶಿನ ಕುಂಕುಮ ಎಲ್ಲವನ್ನು ಪ್ರತಿದಿನ ಇಟ್ಟು ಪೂಜೆ ಮಾಡುವ ಅಭ್ಯಾಸಗಳನ್ನು ಕೂಡ ಮಾಡಿಕೊಂಡಿರುತ್ತಾರೆ ಈ ರೀತಿ ಮಾಡುವುದರಿಂದ ಲಕ್ಷ್ಮಿ ನಮಗೆ ಬೇಗನೆ ಒಲಿಯುತ್ತಾಳೆ ಎಂದು ಎಲ್ಲರಿಗೂ ತಿಳಿದಿದೆ ಆದರೆ ಇನ್ನೂ ಕೆಲವೊಬ್ಬರು ಬೇರೆ ರೀತಿಯಾದಂತಹ ಉಪಾಯವನ್ನು ಮಾಡುತ್ತಾರೆ ಮತ್ತು ನಮ್ಮ ಬಳಿ ಬಂಗಾರದ ಆಕರ್ಷಣೆ ಬೇಗನೆ ಆಗಬೇಕಾದರೆ ಈ ರೀತಿಯಾದಂತಹ ಇನ್ನೊಂದು ಉಪಾಯ ಬಹಳ ಉಪಯೋಗ.
ಅದೇನೆಂದರೆ ನಾವು ಪ್ರತಿದಿನವೂ ಕೂಡ ಅಡುಗೆ ಮನೆಯಲ್ಲಿ ಬಳಸುವಂತಹ ಒಂದು ಅರಿಶಿಣದ ಕೊಂಬನ್ನು ಅಂದರೆ ಬರಿ ಒಂದು ಇಂಚು ಇರುವಂತಹ ಅರಿಶಿನದ ಕೊಂಬೆ ಸಾಕಾಗಿರುತ್ತದೆ ಆರೀತಿಯಾದಂತಹ ಒಂದು ಅರಿಶಿಣ ಕೊಂಬನ್ನು ತೆಗೆದುಕೊಳ್ಳಬೇಕು ಮೊದಲಿಗೆ ನಂತರ ಅದಕ್ಕೆ ಅರಿಶಿನದ ದಾರವನ್ನು ಮಾಡಿಕೊಳ್ಳಬೇಕಾಗುತ್ತದೆ ಅದು ನಾವೇ ಮಾಡಿಕೊಳ್ಳಬೇಕು. ಯಾರು ಕೂಡ ಅದನ್ನು ತೆಗೆದುಕೊಂಡು ಬರುವುದಾಗಲಿ ಅಥವಾ ಅದನ್ನು ಬೇರೆಯವರಿಂದ ಪಡೆದುಕೊಳ್ಳುವುದಾಗಲಿ ಮಾಡಬಾರದು ಆ ರೀತಿಯಾಗಿ ಮಾಡದೆ ನಾವೇ ಸ್ವತಹ ಮನೆಯಲ್ಲಿ ತಯಾರಿಸಿದಂತಹ ಅರಿಶಿನದ ದಾರವನ್ನು ತೆಗೆದುಕೊಳ್ಳಬೇಕು.
ನಂತರ ಹಳದಿ ಹೂವನ್ನು ಅಂದರೆ ನಮಗೆ ಹಲವು ರೀತಿಯಾದಂತಹ ಹಳದಿ ಹೂವು ಸಿಗುತ್ತದೆ ಆದರೆ ಸಂಪೂರ್ಣವಾಗಿ ಹಳದಿ ಇರುವಂತಹ ಹೂವನ್ನು ತೆಗೆದುಕೊಳ್ಳುವುದು ಬಹಳ ಉಪಯೋಗ ಬೇರೆಬೇರೆ ಹೂವುಗಳು ಇದ್ದರೂ ಕೂಡ ಹಳದಿ ಎಂಬುದು ದೇವರಿಗೆ ಅತಿಪ್ರಿಯವಾಗಿರುವಂತಹ ಬಣ್ಣವಾಗಿದೆ ಹಾಗಾಗಿ ಹಳದಿ ಹೂವನ್ನು ತೆಗೆದುಕೊಂಡು ಪೂಜೆಗೆ ಸಮರ್ಪಿಸುವುದು ಇನ್ನೂ ಉತ್ತಮ. ಇನ್ನು ಮೊದಲಿಗೆ ಹಳದಿ ದಾರವನ್ನು ಹಳದಿ ಹೂವಿನೊಂದಿಗೆ ಪೂಜೆ ಮಾಡಿ ಅದನ್ನು ಕಟ್ಟಬೇಕು ಕಟ್ಟಿದ ನಂತರ ಅದನ್ನು ಮತ್ತು ಅದರ ಜೊತೆಗಿರುವಂತಹ ಅರಿಶಿಣ ಕೊಂಬನ್ನು ತೆಗೆದುಕೊಂಡು ಅದನ್ನು ದೇವರಿಗೆ ಪೂಜೆ ಮಾಡಲು ಇಡಬೇಕು.
ಇದಾದ ಬಳಿಕ ಹಳದಿ ಹೂವನ್ನು ಮತ್ತು ಅರಿಶಿಣದ ಕೊಂಬನ್ನು ಎರಡನ್ನು ತೆಗೆದುಕೊಂಡು ಒಟ್ಟಾಗಿ ಸೇರಿಸಿ ಕಟ್ಟಿ ಅದನ್ನು ಮಂಗಳಸೂತ್ರದ ರೀತಿಯಲ್ಲಿ ನಮ್ಮ ಕತ್ತಿನಲ್ಲಿ ಧರಿಸಬೇಕು ಹೀಗೆ ಧರಿಸುವುದರಿಂದ ನಮ್ಮಲ್ಲಿ ಲಕ್ಷ್ಮಿಯ ಜೊತೆ ಇರುವಂತಹ ಸಂಬಂಧ ಹೆಚ್ಚಾಗುತ್ತದೆ ಮತ್ತು ಲಕ್ಷ್ಮಿ ನಮ್ಮಲ್ಲಿ ಯಾವಾಗಲೂ ನಿಲ್ಲಿಸುತ್ತಾಳೆ ಇದನ್ನು ನಾವು ಪೂಜೆ ಮಾಡುವುದ ಕೂಡ ಒಳ್ಳೆಯದು. ಈ ರೀತಿಯಾಗಿ ಪೂಜೆ ಮಾಡಿ ಧರಿಸಿದ ನಂತರ ಅದನ್ನು ಜೋಪಾನವಾಗಿ ನೋಡಿಕೊಂಡು ಅದರ ನಿಮಿತ್ತವಾಗಿ ಲಕ್ಷ್ಮಿಯನ್ನು ಆಕರ್ಷಿಸಬಹುದು ಹೀಗೆ ಮಾಡುವುದರಿಂದ ನಮ್ಮಲ್ಲಿರುವಂತಹ ದನದ ಅಭಿವೃದ್ಧಿ ಹೆಚ್ಚಾಗುತ್ತದೆ ಮತ್ತು ನಮಗೆ ಒಳ್ಳೆಯ ಕಾರ್ಯಗಳು ಸಿದ್ದಿಗೆ ಬರುತ್ತದೆ.