ಬರೀ ಐದು ಏಲಕ್ಕಿ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ.ಶ್ರೀ ಮಹಾಲಕ್ಷ್ಮಿಯ ಕೃಪೆ ನಿಮಗೆ ಸದಾ ಇರುತ್ತದೆ. ಹಾಗಾದ್ರೆ ನಾನಿವಾಗ ಈ ಪೂಜೆ ಹೇಗೆ ಮಾಡಬೇಕೆಂದು ಹೇಳುತ್ತೇನೆ.ಹೌದು ಸ್ನೇಹಿತರೆ ಏಲಕ್ಕಿ,ಕೆಂಪು ದಾರ ಮತ್ತು ಕೆಂಪು ಬಟ್ಟೆ ತೆಗೆದುಕೊಂಡು ಹೀಗೆ ಮಾಡಿದರೆ ಶ್ರೀ ಮಹಾಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ, ಹಾಗೂ ನಿಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಬದಲಾಗುತ್ತದೆ. ನಿಮ್ಮ ಮನೆಯಲ್ಲಿ ಎಲ್ಲದಕ್ಕೂ ತುಂಬಾ ಖರ್ಚು ಇದ್ದರೆ ಹಾಗೂ ನೀವು ಮಾಡಿದ ಕೆಲಸಗಳಲ್ಲಿ ನಷ್ಟವಾಗುತ್ತಿದ್ದರೆ ಈ ಪರಿಹಾರವನ್ನು ಮಾಡಿಕೊಳ್ಳಿ.
ಬೆಳಗಾದರೆ ಪ್ರತಿಯೊಂದು ವಸ್ತುವಿಗೂ ದುಡ್ಡೇ ಮುಖ್ಯ. ದುಡ್ಡು ಇಲ್ಲದೆ ಜೀವನ ನಡೆಸುವುದೇ ಕಷ್ಟ. ಹಿಂದೂ ಧರ್ಮದಲ್ಲಿ ಶ್ರೀ ಮಹಾಲಕ್ಷ್ಮಿ ಸಂಪತ್ತಿಗೆ ಅಧಿದೇವತೆ ಎಂದು ಪರಿಗಣಿಸುತ್ತಾರೆ. ಶ್ರೀ ಮಹಾಲಕ್ಷ್ಮಿ ಸಂಪತ್ತು ಹಾಗೂ ಸಮೃದ್ಧಿಯ ಪ್ರತೀಕವಾಗಿದ್ದಾಳೆ. ಎಲ್ಲರ ಮನೆಯಲ್ಲೂ ಕೂಡ ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಲಕ್ಷ್ಮೀದೇವಿಯನ್ನು ನಿತ್ಯವೂ ಪೂಜಿಸಬಹುದು ಆದರೆ ಶುಕ್ರವಾರ ಶ್ರೀ ಮಹಾಲಕ್ಷ್ಮಿಗೆ ವಿಶೇಷವಾದದ್ದು. ಲಕ್ಷ್ಮೀದೇವಿಯನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.ಉದಾಹರಣೆಗೆ ಪದ್ಮಪ್ರಿಯ, ಪದ್ಮಾವತಿ,ಪದ್ಮಮುಖಿ, ಪದ್ಮ ಸುಂದರಿ ಹಾಗೂ ಪದ್ಮಾಕ್ಷಿ ಎಂದು ಕರೆಯುವರು.
ಶ್ರೇಷ್ಠವಾದ ಕಮಲದ ಹೂವೆ ಮಹಾಲಕ್ಷ್ಮಿಗೆ ಆಸನ. ವಿಶೇಷವಾದ ದಿನ ಅಂದರೆ ಶುಕ್ರವಾರ ಮಹಾಲಕ್ಷ್ಮಿ ಪೂಜಿಸಿದರೆ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಅದು ನಿಜವೂ ಕೂಡ. ಮಹಾಲಕ್ಷ್ಮಿ ಅದೃಷ್ಟದ ದೇವತೆ. ಲಕ್ಷ್ಮಿಗೆ ವಿವಿಧ ರೀತಿಯ ಮಂತ್ರಗಳು ಹಾಗೂ ಪೂಜೆಗಳು ಇರುವವು.ಅದರಲ್ಲಿ ಈ ಪೂಜೆಯು ಸಹ ಒಂದು. ವಿಷ್ಣುವಿನ ಪತ್ನಿಯಾದ ಶ್ರೀ ಮಹಾಲಕ್ಷ್ಮಿ ನಾನು ನಿಮಗೆ ಶಿರಸಾ ನಮಸ್ಕರಿಸುತ್ತೇನೆ ಬುದ್ಧಿವಂತಿಕೆ, ಸಂಪತ್ತು, ಸಮೃದ್ಧಿಯನ್ನು ಆಶೀರ್ವದಿಸು ಎನ್ನುತ್ತಾ ಈ ಪೂಜೆಯನ್ನು ಮಾಡುವುದಾಗಿ ಸಂಕಲ್ಪಿಸಿಕೊಳ್ಳಿ. ತಾಯಿ ಮಹಾಲಕ್ಷ್ಮಿ ನಮ್ಮ ಎಲ್ಲ ಕಷ್ಟಗಳನ್ನು ಮುಕ್ತಿಗೊಳಿಸು ಎಂದು ಮನಸ್ಸಿಂದ ಪ್ರಾರ್ಥಿಸಿ ಬೇಡಿಕೊಳ್ಳಿ.
ಸಾಲದ ಬಾಧೆಯಿಂದ ಕೂಡ ನನ್ನನ್ನು ಮುಕ್ತಗೊಳಿಸು, ಹಣವನ್ನು ಕರುಣಿಸು ಎಂದು ಕೈ ಮುಗಿಯಬೇಕು. ನಿಮ್ಮ ಜೀವನದಲ್ಲಿ ಹಣಕ್ಕಾಗಿ ನೀವು ತುಂಬಾ ಸಾಲ ಮಾಡುವ ಪರಿಸ್ಥಿತಿ ಕೂಡ ಎದುರಾಗಬಹುದು ಜೀವನ ಹಣವಿಲ್ಲದೆ ನಡೆಯುವುದಿಲ್ಲ. ಹಣವನ್ನು ಗಳಿಸಬೇಕಾದರೆ ತುಂಬಾ ಪರಿಶ್ರಮ ಬೇಕು ಆದರೆ ಕೆಲವೊಂದು ಸಲ ನಾವು ದುಡಿದ ಹಣವೆಲ್ಲ ನೀರಿನಂತೆ ಹೋಗುತ್ತದೆ ಅಂತಹ ಸಮಯದಲ್ಲಿ ನಾವು ಇಂತಹ ಪರಿಹಾರಗಳನ್ನು ಮಾಡಿಕೊಳ್ಳಬೇಕು. ನಾವು ಬೇರೊಬ್ಬರ ಮುಂದೆ ಕೈಚಾಚದೆ ನಮ್ಮ ದುಡಿಮೆಯಿಂದ ನಾವು ಹಣವನ್ನು ಜೀವನಕ್ಕೆ ಆಗುವಷ್ಟು ಕೂಡಿಡಬೇಕು.
ಸ್ನೇಹಿತರೇ ಈ ಪೂಜೆ ಮಾಡಲು 5 ಏಲಕ್ಕಿ ಕಾಯಿ ಹಾಗೂ ಕೆಂಪು ವಸ್ತ್ರ ಕೆಂಪು ದಾರವನ್ನು ತೆಗೆದುಕೊಳ್ಳಿ ಪೂಜೆ ಮಾಡುವ ಮುನ್ನ ಸ್ನಾನ ಮಾಡುವ ನೀರಿಗೆ ಏಲಕ್ಕಿ ಪುಡಿಯನ್ನು ಬೆರೆಸಿಕೊಳ್ಳಿ. ಪೂಜೆ ಮಾಡುವಾಗ ದೇವರಕೋಣೆ ಶುಭ್ರವಾಗಿರಲಿ. ಪೂಜೆಯನ್ನು ಮಾಡಿದನಂತರ ಲಕ್ಷ್ಮಿಗೆ ನೀವು ಏನನ್ನಾದರೂ ಸಹ ಎಡೆ ಹಿಡಿಯಬಹುದು.ಹಾಗಾದ್ರೆ ಸ್ನೇಹಿತರೆ ಈ 5 ಏಲಕ್ಕಿಗಳನ್ನು ಪೂಜೆ ಮಾಡಿ ಅದಕ್ಕೆ ಕೆಂಪು ದಾರದಿಂದ ಒಂದೊಂದೇ ಏಲಕ್ಕಿಗೆ ಮೂರು ಗಂಟುಗಳನ್ನು ಹಾಕಿ ಕೆಂಪು ವಸ್ತ್ರದ ಮೇಲೆ ಇಟ್ಟು ದೀಪ ದೂಪಗಳಿಂದ ಅವುಗಳನ್ನು ಪೂಜಿಸಿ ಆ ಕೆಂಪುವಸ್ತ್ರದಿಂದ ಗಂಟನ್ನು ಕಟ್ಟಬೇಕು.
ಈ ಪೂಜೆಮಾಡಿದ ಗಂಟನ್ನು ಮರುದಿನ ಬೀರಿನಲ್ಲಿ ದುಡ್ಡು ಇಡುವ ಜಾಗದಲ್ಲಿ ಇಡಿ. ಪ್ರತಿ ಶುಕ್ರವಾರ ಈ ಗಂಟನ್ನು ಪೂಜಿಸಿ ಇಡಬೇಕು. ಒಂದು ವೇಳೆ ಏಲಕ್ಕಿ ಗಳು ಕೆಟ್ಟುಹೋದರೆ ಬೇರೆ ಏಲಕ್ಕಿಗಳನ್ನು ಇಟ್ಟು ಪೂಜಿಸಿ ಇಡಬೇಕು. ಹೀಗೆ ಪ್ರತಿ ಶುಕ್ರವಾರ ಮಾಡುವುದರಿಂದ ನಿಮ್ಮ ಮನೆಯ ಸಂಕಷ್ಟಗಳು ನಾಶವಾಗುತ್ತವೆ ಹಾಗೂ ಮಾಡುವ ಕೆಲಸದಲ್ಲಿ ಅಪಾರ ಯಶಸ್ಸು ದೊರಕುವುದು.ನಂಬಿಕೆಯಿಂದ ಈ ಪೂಜೆಯನ್ನು ಮಾಡಿ ಶ್ರೀ ಮಹಾಲಕ್ಷ್ಮಿಯ ಆಶೀರ್ವಾದ ಪಡೆದುಕೊಳ್ಳಿ. ಸಾಲ ಹಿಂತಿರುಗಿ ಕೊಡದವರು ಕೂಡ ಈ ಪೂಜೆ ಮಾಡಿದ ನಂತರ ಸಾಲವನ್ನು ವಾಪಸ್ಸು ಮಾಡುತ್ತಾರೆ.
ಎಲ್ಲಾ ಪೂಜೆಗೂ ಪ್ರತಿಫಲ ಇದ್ದೇ ಇರುತ್ತದೆ ಎಂಬುದನ್ನು ಮರೆಯದಿರಿ. ದೇವರನ್ನು ನಂಬುವುದೇ ನಿಜ ಎಂದರೆ ಈ ಪೂಜೆ ಮಾಡಿ ಶ್ರೀ ಮಹಾಲಕ್ಷ್ಮಿಯ ಆಶೀರ್ವಾದಕ್ಕೆ ಪಾತ್ರರಾಗಿರಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ