ಕೆಮ್ಮಿಗೆ ಮೂಲ ನೀವು ಕುಡಿಯುವ ನೀರು. ಅಂದಹಾಗೆ ನಿವೇನಾದರೂ ಹೊರಗೆ ಹೋಟೆಲ್ ಅಥವಾ ಬೇರೆಡೆ ನೀರನ್ನು ಕುಡಿಯುವುದರಿಂದ ಸಾಮಾನ್ಯವಾಗಿ ನಿಮಗೆ ಗಂಟಲು ನೋವು ಕಾಣಿಸಿ ಕೊಳ್ಳುತ್ತದೆ ನಂತರ ನಾಗದಿ ಅಥವಾ ಕೆಮ್ಮು ಶುರುವಾಗುವುದು ಸಾಮಾನ್ಯ, ಅಂತಹ ಸಮಯದ್ಲಲಿ ನೀವು ನಿಮ್ಮ ಮನೆಯಲ್ಲೇ ದೊರೆಯುವ ಈ ಕೆಲವು ಪಾದಾರ್ಥಗಳನ್ನ ಬಳಸಿ ನಿಮ್ಮ ಕೆಮ್ಮನ್ನು ಹೇಗೆ ಗುಣ ಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಇಂದು ತಿಳಿಸುತ್ತೇವೆ.
ನಿಮ್ಮ ಅಡುಗೆಮನೆಯಲ್ಲಿ ಕರಿ ಮೆಣಸಿಗೆ ತಪ್ಪದೆ ಸ್ಥಳವಂತೂ ಇರುತ್ತದೆ, ಏಕೆಂದರೆ ಕರಿಮೆಣಸು ಅತಿಮುಖ್ಯ ಮಸಾಲೆ ಪದಾರ್ಥಗಳಲ್ಲಿ ಒಂದು, ಈ ಕರಿಮೆಣಸನ್ನ ಪುಡಿ ಮಾಡಿ ಕಾಯಿಸಿದ ಹಾಲಲ್ಲಿ ಅಥವಾ ನೀರಿನಲ್ಲಿ ಮಿಶ್ರಣ ಮಾಡಿ ಕುಡಿದರೆ ನಿಮ್ಮ ಕೆಮ್ಮು ಹಾಗು ಗಂಟಲು ನೋವು ಮಂಗಮಾಯವಾಗುತ್ತದೆ.
ಒಂದು ಪಕ್ಷ ಕರಿ ಮೆಣಸು ತಕ್ಷಣಕ್ಕೆ ದೊರೆಯದಿದ್ದರೆ ಚಿಂತಿಸ ಬೇಡಿ, ಖಾಲಿ ಹೊಟ್ಟೆಯಲ್ಲಿ ಕೇವಲ ಬಿಸಿ ನೀರನ್ನ ಕುಡಿಯುವುದರಿಂದ ನಿಮಗೆ ಕೆಮ್ಮಿನಿಂದ ತಕ್ಷಣಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು.
ಬೇವಿನ ಮರದ ಕಡ್ಡಿಯನ್ನು ಬಳಸಿ ನೀವು ಹಲ್ಲನ್ನು ಹುಜ್ಜಿದರೆ ಸಾಕು ಕೆಮ್ಮು ಹಾಗು ಗಂಟಲು ನೋವು ದೂರವಾಗುವ ಸಾಧ್ಯತೆಗಳು ಹೆಚ್ಚು.
ಕೆಮ್ಮು ಇದ್ದವರು ಮಧ್ಯಪಾನ ಹಾಗು ಧೂಮಪಾನವನ್ನ ಕೆಲವುದಿನಗಳ ವರೆಗೂ ತ್ಯಜಿಸುವುದು ಒಳ್ಳೆಯದು, ಜೊತೆಯಲ್ಲಿ ಸಿಹಿ ತಿಂಡಿಗಳು, ಕೂಲ್ ಡ್ರಿಂಕ್ಸ್ ಗಳನ್ನೂ ತೆಗೆದು ಕೊಳ್ಳಬೇಡಿ, ಇವು ನಿಮ್ಮ ನಿಮ್ಮ ಕೆಮ್ಮಣ್ಣ ಜಾಸ್ತಿ ಮಾಡುತ್ತದೆ.
ಮನೆಯ ಮುಂದಿರುವ ತುಳಸಿ ಎಳೆಯನ್ನ ತಿಂದರು ಕೆಮ್ಮಿಗೆ ಒಳ್ಳೆಯ ಮದ್ದು, ಪುದೀನಾ ಟಿ ಸೇವನೆ ಮಾಡಿ ಅಥವಾ ನಿಂಬೆ ಹಣ್ಣಿನ ರಸವನ್ನ ಬಿಸಿ ನೀರಿನಲ್ಲಿ ಸಕ್ಕರೆ ಬಳಸದೆ ಮಿಶ್ರಣ ಮಾಡಿ ಕುಡಿದರೆ ಬೇಗನೆ ಗುಣ ಕಂಡು ಬರುತ್ತದೆ.
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.