ಶಕುನ ಶಾಸ್ತ್ರದ ಪ್ರಕಾರ ನಾಯಿಗಳ ಈ ವರ್ತನೆಯು ತಿಳಿಸುತ್ತದೆ ಅನೇಕ ಸೂಚನೆಗಳು. ಹಾಗಾದರೆ ನಮ್ಮ ಸಂಸ್ಕೃತಿಯಲ್ಲಿ ಈ ನಾಯಿಯನ್ನು ನಾರಾಯಣ ಮತ್ತು ಈಶ್ವರ ಅಂತ ಕೂಡ ಹೇಳುತ್ತಾರೆ .ಹಾಗೆ ಕೆಲವರು ಕಾಲಭೈರವೇಶ್ವರನ ಪ್ರತೀಕ ಅಂತ ಕೂಡ ಹೇಳಲಾಗಿದ್ದು ವೈಜ್ಞಾನಿಕವಾಗಿಯೂ ಕೂಡ ನಾಯಿಗಳು ಕೆಲವೊಂದು ಸೂಚನೆಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ .ಯಾಕೆ ಅಂದರೆ ನಾಯಿಗಳ ಕಣ್ಣುಗಳು ಬಹಳಾನೇ ಚುರುಕಾಗಿದ್ದು ಇವುಗಳಿಗೆ ಸೂಕ್ಷ್ಮ ವಿಚಾರಗಳು ಬೇಗಾನೆ ತಿಳಿಯುತ್ತದೆ
ಹಾಗೆ ಪ್ರಕೃತಿಯಲ್ಲಿ ನಡೆಯುವ ಅನೇಕ ಸಂಗತಿಗಳ ಬಗ್ಗೆ ಮುಂಚೆಯೇ ತಿಳಿದುಕೊಳ್ಳುವ ಶಕ್ತಿ ಈ ಶ್ವಾನಕ್ಕೆ ಇದೆ ಅಂತ ಹೇಳಬಹುದಾಗಿದೆ.ಹಾಗಾದರೆ ನಾಯಿಗಳ ಕೆಲವೊಂದು ವರ್ತನೆಗಳು ಹೇಗೆ ಮನುಷ್ಯನಿಗೆ ಸೂಚನೆಯನ್ನು ನೀಡುತ್ತದೆ ಎಂಬುದನ್ನು ತಿಳಿಸುತ್ತೇನೆ. ಈ ಒಂದು ವಿಚಾರವನ್ನು ತಿಳಿದು ನಿಮಗೂ ಕೂಡ ಈ ವಿಚಾರವೂ ಆಸಕ್ತಿಕರವಾಗಿದ್ದರೆ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೆ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯದಿರಿ.ಹೌದು ಶಕುನ ಶಾಸ್ತ್ರ ತಿಳಿಸುತ್ತದೆ
ಯಾವುದಾದರೂ ನಾಯಿ ರಂಗೋಲಿಯನ್ನು ಇರುವ ಮನೆಯ ಮುಂದೆ ಕೂಗುತ್ತಿದ್ದರೆ ,ಆ ಮನೆಗೆ ಲಕ್ಷ್ಮೀಯ ಆಶೀರ್ವಾದ ದೊರೆಯಲಿದೆ ಅಥವಾ ಲಕ್ಷ್ಮಿ ಆಗಮಿಸುತ್ತಾಳೆ ಎಂಬ ಸೂಚನೆಯನ್ನು ಈ ರೀತಿ ನಾಯಿಗಳು ತಿಳಿಸುತ್ತಿರುತ್ತದೆ ಯಂತೆ.ಸಾಮಾನ್ಯವಾಗಿ ಹೆಚ್ಚು ಜನರು ನಾಯಿಗಳಿಗೆ ಊಟ ಹಾಕುವ ಪದ್ಧತಿಯನ್ನು ಬೆಳೆಸಿಕೊಂಡಿರುತ್ತಾರೆ .ನಿಮ್ಮ ಮನೆಯ ಮುಂದೆ ಯಾವುದಾದರೂ ನಾಯಿಗಳಿಗೆ ಊಟವನ್ನು ನೀವು ಹಾಕಿದಾಗ ಆ ನಾಯಿ ತನ್ನ ಬಲಗಡೆ ತಿರುಗಿ ತೆರೆದುಕೊಂಡರೆ ಅದು ನಿಮಗೆ ಶುಭ ಸೂಚನೆಯಾದರೆ, ಎಡಗಡೆ ತಿರುಗಿ ಕರೆದುಕೊಂಡರೆ ನಿಮಗೆ ಅಶುಭದ ಸೂಚನೆಯನ್ನು ನೀಡುತ್ತದೆಯಂತೆ.
ನೀವು ಯಾವುದಾದರೂ ಕೆಲಸಕ್ಕೆಂದು ಆಚೆ ಹೋಗುವಾಗ ಅಥವಾ ಶುಭ ಕಾರ್ಯಗಳಿಗೆ ಹೋಗುವಾಗ ನಾಯಿ ತನ್ನ ಬಾಯಿಯಲ್ಲಿ ಮಾಂಸ ಪದಾರ್ಥವನ್ನು ಕಚ್ಚಿಕೊಂಡು ಹೋಗುತ್ತಿದ್ದರೆ ನಿಮಗೆ ಅಶುಭ ಜರುಗಬಹುದು ಅಥವಾ ಪ್ರಾಣ ಹಾನಿಯಾಗಬಹುದು ಎಂಬುದನ್ನು ಈ ರೀತಿ ನಾಯಿಗಳು ಸೂಚಿಸುತ್ತಿರುತ್ತದೆ.ನಾಯಿಗಳು ತನ್ನ ಬಾಯಿಯಲ್ಲಿ ಏನನ್ನಾದರೂ ವಸ್ತುವನ್ನು ಕಚ್ಚಿಕೊಂಡು ಹೋಗುವಂತಹ ದೃಶ್ಯವನ್ನು ನೀವು ಕಂಡರೆ ನಿಮಗೆ ಕಳ್ಳರಿಂದ ತೊಂದರೆಯಾಗಬಹುದೆಂದು ಇದು ಸೂಚಿಸುತ್ತಿರುತ್ತದೆ.
ನಾಯಿಗಳು ನಿಮ್ಮ ಮನೆಯ ಮುಂದೆ ಯಾರಾದರೂ ಬೇರೆಯವರ ಚಪ್ಪಲಿಗಳನ್ನು ಕಚ್ಚಿ ತಂದು ನಿಮ್ಮ ಮನೆಯ ಮುಂದೆ ಹಾಕಿದರೆ ಅಥವಾ ನಿಮ್ಮ ಮನೆಯ ಚಪ್ಪಲಿಗಳನ್ನು ಬೇರೆ ಮನೆಯವರ ಮುಂದೆ ಹೋಗಿ ಹಾಕಿದರೆ ನಿಮ್ಮ ಮನೆಗೆ ಕಳ್ಳರು ನುಗ್ಗಬಹುದು ಎಂಬುದನ್ನು ಇದು ಸೂಚಿಸುತ್ತಾ ಇರುತ್ತದೆ.ರಾತ್ರಿ ಸಮಯದಲ್ಲಿ ನಾಯಿ ಅಥವಾ ನಾಯಿಗಳ ಗುಂಪು ನಿಮ್ಮ ಮನೆಯ ಮುಂದೆ ಅಥವಾ ನಿಮ್ಮ ಮನೆಯ ಬೀದಿಯಲ್ಲಿ ಜೋರಾಗಿ ಅಳುತ್ತಿದ್ದರೆ ಅಥವಾ ಕಿರುಚುತ್ತಿದ್ದರೆ,ಆ ಮನೆಗೆ ಅಥವಾ ಆ ಬೀದಿಯಲ್ಲಿ ಯಾರಿಗಾದರೂ ಸಂಕಷ್ಟ ಎದುರಾಗಬಹುದು .
ಅಥವಾ ಆ ಮನೆಯಲ್ಲಿ ಸಾವು ಜರುಗಬಹುದು ಎಂಬುದನ್ನು ಇದು ಸೂಚಿಸುತ್ತಾ ಇರುತ್ತದೆ.ಈ ರೀತಿಯಾಗಿ ನಾಯಿಗಳು ಕೂಡ ಕೆಲವೊಂದು ಸೂಕ್ಷ್ಮಗಳನ್ನು ಅರಿತು ಮನುಷ್ಯನಿಗೆ ಅವರ ಮುಂದಿನ ಜೀವನದಲ್ಲಿಯೇ ನಡೆಯುವುದರ ಬಗ್ಗೆ ಸೂಚನೆಯನ್ನು ನೀಡುತ್ತ ಇರುತ್ತದೆ ಎಂದು ಶಕುನ ಶಾಸ್ತ್ರವು ತಿಳಿಸಿ ಹೇಳುತ್ತಿದೆ.ಈ ಒಂದು ಮಾಹಿತಿ ಅನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಹಾಗೆ ಪ್ರತಿಯೊಬ್ಬರಿಗೂ ಮಾಹಿತಿ ಅನ್ನು ಶೇರ್ ಮಾಡಿ ಶುಭ ದಿನ ಧನ್ಯವಾದ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ