Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕಾಗೆ ಬಂದು ಮನೆಯ ಮುಂದೆ ಹೀಗೆ ಮಾಡುತ್ತಿದ್ದರೆ ನಿಮಗೆ ಹಾಗೂ ನಿಮ್ಮ ಮನೆಗೆ ಅದೃಷ್ಟದ ಮೇಲೆ ಅದೃಷ್ಟ ಬರುತ್ತೆ …!!!

ನಮ್ಮ ಹಿಂದಿನವರು ಯಾವುದೇ ಒಂದು ಸಂಪ್ರದಾಯಗಳನ್ನು ಮಾಡಿದ್ದಾರೆ ಎಂದರೆ ಅಥವಾ ಯಾವುದೇ ಒಂದು ಶಕುನವನ್ನು ನಂಬುತ್ತಾರೆ. ಎಂದರೆ ಅದರ ಹಿಂದೆ ಒಂದು ಘಟನೆಯೇ ಇದೆ ಎಂಬುದು ಸತ್ಯ ಆದರೆ ಅದರ ಅರಿವು ನಮಗಿರುವುದಿಲ್ಲ.ಯಾವುದೇ ಒಂದು ವಿಷಯದ ಬಗ್ಗೆ ಪೂರ್ವ ವಿಷಯ ತಿಳಿಯದೆ ಆ ವಿಷಯದ ಬಗ್ಗೆ ನಾವು ತಪ್ಪಾಗಿ ಮಾತನಾಡಬಾರದು ಅಂಥದ್ದೇ ಒಂದು ವಿಷಯದ ಬಗ್ಗೆ ಮತ್ತು ಸತ್ಯದ ಬಗ್ಗೆ ತಿಳಿಸಿಕೊಡುತ್ತೇವೆ .ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಕಾಗೆ ಗೊತ್ತು ಪ್ರತಿನಿತ್ಯ ನಾವು ಎದ್ದ ತಕ್ಷಣ ಅಥವಾ ಮನೆಯಿಂದ ಹೊರಗೆ ಹೋಗುವಾಗ ಕಾಗೆ ಅರಚುವುದನ್ನು ನಾವು ಕೇಳಿರುತ್ತೇವೆ

ಕಾಗೆಯೂ ಕಾಕಾ ಎಂದರೆ ಕೆಲವೊಬ್ಬರು ಶುಭಶಕುನ ಎನ್ನುತ್ತಾರೆ ಕೆಲವೊಬ್ಬರು ಅಪಶಕುನ ಎನ್ನುತ್ತಾರೆ ಆದರೆ ಯಾವ ಸಂದರ್ಭದಲ್ಲಿ ಕಾಗೆ ನಮ್ಮ ಎದುರಿಗೆ ಬಂದರೆ ಮತ್ತು ಯಾವ ಸಂದರ್ಭದಲ್ಲಿ ಕಾಕಾ ಎಂದರೆ ಒಳ್ಳೆಯದು ಅಥವಾ ಕೆಟ್ಟದ್ದು ಎಂಬ ಅರಿವು ನಮಗಿರುವುದಿಲ್ಲ ಆದರೆ ನಾವು ಈ ದಿನ ಅದಕ್ಕೆ ಪೂರಕವಾಗಿ ಕಾಗೆಯ ಶಕುನ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ .ಒಂದು ವಿಶೇಷವಾದ ಅಂಶವನ್ನು ನಾವಿಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು

ಕಾಗೆ ಶನಿದೇವನ ವಾಹನ ಶನಿದೇವರನ್ನು ಎಲ್ಲರೂ ದೇವರು ಎಂದು ಪೂಜೆ ಮಾಡುತ್ತಾರೆ ಅದೇ ರೀತಿಯಲ್ಲಿ ಅವರ ವಾಹನ ಕಾಕ ರಾಜ ಆಗಿರುವುದರಿಂದ ಅದು ಕೂಡ ದೇವರ ಲೆಕ್ಕವೇ ಯಾವುದೂ ಕೂಡ ಅಪಶಕುನ .ಶುಭಶಕುನ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವ ಮೊದಲು ನಾವು ಮಾಡುವ ಕೆಲಸ ಒಳ್ಳೆಯದಾಗಿರಬೇಕು ಅಷ್ಟೇ .ಸ್ನೇಹಿತರೇ ಕಾಗೆ ಸಾಮಾನ್ಯವಾಗಿ ಪ್ರತಿನಿತ್ಯ ನಮ್ಮ ಮನೆಯ ಹೊರಗಡೆ ಇರುವುದನ್ನು ಗಮನಿಸಿರುತ್ತೇವೆ ಆದರೆ ಅದು ಯಾಕೆ ಕೂತಿದೆ ಎಂದು ಕೆಲವೊಬ್ಬರಿಗೆ ತಿಳಿದಿರುವುದಿಲ್ಲ.

ಆದರೆ ಹಿಂದಿನವರು ಅದನ್ನು ತಮ್ಮ ಪೂರ್ವಜರು ಎಂದು ಭಾವಿಸಿರುತ್ತಾರೆ ಅಂದರೆ ತಮ್ಮ ಪಿತೃಗಳು ಅಂದರೆ ಸತ್ತಿರುವವರು ಅನ್ನಕ್ಕಾಗಿ ಬಂದಿದ್ದಾರೆ ಎಂಬ ಅರ್ಥವನ್ನು ಹಿಂದಿನವರು ಹೇಳುತ್ತಿದ್ದರು .ಅದೇ ರೀತಿಯಲ್ಲಿ ಅವರು ಊಟ ಮಾಡುವಾಗ ಅವರು ಊಟವನ್ನು ಆರಂಭಿಸುವ ಮೊದಲು ಒಂದು ತುತ್ತನ್ನು ಪೂರ್ವಜರಿಗಾಗಿ ಎತ್ತಿಡುತ್ತಿದ್ದರು ಆ ತುತ್ತನ್ನು ಕಾಗೆಗೆ ಹಾಕುತ್ತಿದ್ದನ್ನು ಗಮನಿಸಬಹುದಾಗಿದೆ ಅದು ಎಂದು ಕೆಟ್ಟದ್ದಲ್ಲ ಕೆಲವೊಬ್ಬರು ಪೂರ್ವಜರ ರೀತಿಯಲ್ಲಿ ಹಾಕಿದರೆ ಕೆಲವೊಬ್ಬರು ಪಕ್ಷಿ ಎನ್ನುವ ರೀತಿಯಲ್ಲಿ ಹಾಕುತ್ತಾರೆ .

ಸಾಮಾನ್ಯವಾಗಿ ಕಾಗೆ ರೊಟ್ಟಿ ಅಥವಾ ಬ್ರೆಡ್ಡನ್ನು ಕಚ್ಚಿಕೊಂಡು ಹೋಗುವುದನ್ನು ನೋಡಿದರೆ ನಮಗೆ ಯಾವುದೋ ಹಣ ಸಿಗುವ ಸಾಧ್ಯತೆ ಇರುತ್ತದೆ ಎಂಬ ಅರ್ಥ ಅದೇ ಕಾಗೆಯು ಮಾಂಸವನ್ನು ಕಚ್ಚಿಕೊಂಡು ಹೋಗುತ್ತಿರುವುದನ್ನು ನಾವು ನೋಡಿದರೆಂದರೆ ನಮ್ಮ ಜೀವನದಲ್ಲಿ ಕಷ್ಟ ಆರಂಭವಾಗುತ್ತದೆ ಎಂಬ ಅರ್ಥವನ್ನು ಅದು ಸೂಚಿಸುತ್ತದೆ .ಕಾಗೆಯೂ ತುಂಬಿದ ಕೊಡದಲ್ಲಿ ನೀರನ್ನು ಕುಡಿಯುತ್ತಿರುವ ಸಂದರ್ಭದಲ್ಲಿ ನಾವು ಹೊರಗೆ ಹೋರಟೆವೆಂದರೆ ಅಥವಾ ನಾವು ಹೋಗುವ ದಾರಿಯಲ್ಲಿ ಕಾಗೆ ನೀರನ್ನು ಕುಡಿಯುತ್ತಿದೆ ಎಂದರೆ ನಮ್ಮ ಜೀವನದಲ್ಲಿ ಎಲ್ಲ ಕಷ್ಟಗಳು ಅಂದಿಗೆ ಮುಗಿಯಿತು ಎಂಬ ಅರ್ಥವನ್ನು ನಾವು ಗಮನಿಸಬಹುದಾಗಿದೆ.

ಕಾಗೆಯೂ ದಕ್ಷಿಣ ದಿಕ್ಕಿಗೆ ಮುಖ ಹಾಕಿಕೊಂಡು ಕುಳಿತಿರುವುದನ್ನು ನೋಡಿದರೆ ಶುಭಶಕುನ ಆರಂಭವಾಗುತ್ತದೆ ಅದರ ಜೊತೆಯಲ್ಲಿ ಕಾಗೆಯ ಶಬ್ದವು ಪೂರ್ವ ಮತ್ತು ನಿಮ್ಮ ಉತ್ತರ ದಿಕ್ಕಿನಿಂದ ನಿಮಗೆ ಕೇಳಿಸುವ ರೀತಿ ಆದರೆ ತುಂಬಾ ಒಳ್ಳೆಯದಾಗುತ್ತದೆ .ಸಾಮಾನ್ಯವಾಗಿ ಕೆಲವೊಬ್ಬರು ಹೇಳುತ್ತಾರೆ ಕಾಗೆ ಬೆಳಗ್ಗೆ ಎದ್ದ ತಕ್ಷಣ ಅಥವಾ ದಿನವೆಲ್ಲಾ ಮನೆಯ ಮುಂದೆ ಅಥವಾ ಮನೆಯ ಮೇಲೆ ಕುಳಿತು ಶಬ್ದ ಮಾಡಿದರೆ ಪೂರ್ವಜರು ಅನ್ನಕ್ಕಾಗಿ ಬಂದಿದ್ದಾರೆ ಅಥವಾ ಹಬ್ಬಗಳು ಹತ್ತಿರ ಬಂದಿತು ಎಂದು ನಮ್ಮ ಹಿರಿಯರು ನಂಬುತ್ತಿದ್ದರು

ಇವೆಲ್ಲ ನಮ್ಮ ನಂಬಿಕೆಗೆ ಬಿಟ್ಟಿದ್ದು ಆದರೆ ಯಾವುದೇ ಪ್ರಾಣಿ ಅಥವಾ ಪಕ್ಷಿ ಯಾವ ಸಂದರ್ಭದಲ್ಲೂ ಕೂಡ ನಮಗೆ ಕೆಟ್ಟದ್ದನ್ನು ಮಾಡುವುದನ್ನು ನಾವು ಕಾಣಲಾಗುವುದಿಲ್ಲ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ