ಕೆಲವರಿಗಂತೂ ಶೂ ಧರಿಸಿದರೆ ದುರ್ವಾಸನೆ ಬೀರುತ್ತದೆ ಎಂದು ಚಪ್ಪಲಿ ಧರಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿರುವುದಿಲ್ಲ. ಆದರೆ ಕೆಲವೊಂದು ಟ್ರಿಕ್ಸ್ ಪಾಲಿಸಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಅದು ಹೇಗೆ ಎಂದು ನೋಡೋಣ ಬನ್ನಿ.
ಟೀ ಬ್ಯಾಗ್ ಟ್ರಕ್ಸ್ : ಸಂಜೆ ಮನೆಗೆ ಬಂದಾಗ ಒಂದು ಗ್ಲಾಸ್ ನೀರಿಗೆ ಎರಡು ಟೀ ಬ್ಯಾಗ್ ಹಾಕಿ ಚೆನ್ನಾಗಿ ಕುದಿಸಿ, ನಂತರ ಆ ನೀರನ್ನು ಬಕೆಟ್‌ಗೆ ಸುರಿದು, ಅದಕ್ಕೆ ಎರಡು ಮಗ್ ತಣ್ಣೀರು ಸೇರಿಸಿ, ನಂತರ ಕಾಲುಗಳನ್ನು ಅದರಲ್ಲಿ ನೆನೆಸಿ ಇಪ್ಪತ್ತು ನಿಮಿಷ ಇಡಿ. ಈ ರೀತಿ ಒಂದು ವಾರದವರೆಗೆ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ವಿನಿಗರ್ : ಸ್ನಾನ ಮಾಡುವಾಗ ಕೊನೆಯ ಮಗ್ ನೀರು ಮೈಮೇಲೆ ಸುರಿಯುವಾಗ ಅದಕ್ಕೆ ಸ್ವಲ್ಪ ವಿನಿಗರ್ ಸೇರಿಸಿ ಮೈಗೆ ನೀರು ಹಾಕಿ, ನಂತರ ಮೈ ಒರೆಸಿ, ಈ ರೀತಿ ವಾರದವರೆಗೆ ಮಾಡಿದರೆ ಬೆವರಿನ ದುರ್ವಾಸನೆ ಸಮಸ್ಯೆ ಕಾಡುವುದಿಲ್ಲ.
ದುರ್ವಾಸನೆ ತಡೆಯುವ ಮದ್ಯ : ಹೌದು ಕಾಲುಗಳನ್ನು ಚೆನ್ನಾಗಿ ತೊಳೆದ ಬಳಿಕ ಕಾಲನ್ನು ಒರೆಸಿ, ನಂತರ ಸ್ವಲ್ಪ ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದಕ್ಕೆ ಮದ್ಯ ಹಾಕಿ ಪಾದಕ್ಕೆ ಉಜ್ಜುವುದರಿಂದ ದುರ್ವಾಸನೆ ತಡೆಯಬಹುದು.
ಮೌತ್ ವಾಶ್ : ಟೀ ಬ್ಯಾಗ್ ಟ್ರೀಟ್‌ಮೆಂಟ್ ರೀತಿಯಲ್ಲೇ ಸ್ವಲ್ಪ ಮೌತ್ ವಾಶ್ ತೆಗೆದು ಅದನ್ನು ಹದ ಬಿಸಿ ನೀರಿಗೆ ಹಾಕಿ, ಅದರಲ್ಲಿ ಕಾಲನ್ನು 20 ನಿಮಿಷ ನೆನಸಿ ಇಡುವುದರಿಂದಲೂ ಕಾಲು ಬೆವರಿನ ದುರ್ವಾಸನೆ ಬೀರುವುದನ್ನು ತಡೆಯಬಹುದು.
ಜೊತೆಯಲ್ಲಿ ಇದನ್ನು ಒಮ್ಮೆ ಓದಿ ಅರಿಶಿನದ ಮಹತ್ವ.
ಅರಿಶಿಣಕ್ಕೆ ಸನಾತನ ಸಂಪ್ರದಾಯದಲ್ಲಿ ಬಹಳ ಮಹತ್ವವಿದೆ, ಮಂಗಳ ಕಾರ್ಯಗಳಲ್ಲಿ ಅರಿಶಿಣವೇ ಪ್ರಧಾನ, ಇದು ಗ್ರಹಗಳಲ್ಲಿ ಗುರುವಿಗೆ ಸಂಬಂಧಿಸಿದ್ದು, ಇಡೀ ಕುಂಡಲಿಯಲ್ಲಿ ಯೋಗ ಪ್ರಾಪ್ತಿಯನ್ನೂ, ದುರ್ಯೋಗ ನಿವಾರಣೆಯನ್ನೂ ಮಾಡುವವನೇ ಗುರುಗ್ರಹ, ಇವನು ಹಳದಿ ಬಣ್ಣದ ಕಾರಕ ಅಂದರೆ ಹಳದಿಯು ಜ್ಞಾನ ಎಂದರ್ಥ. ವೈಜ್ಞಾನಿಕವಾಗಿಯೂ, ವೈದ್ಯಕೀಯವಾಗಿಯೂ ಮಹತ್ವ ಪಡೆದಿದೆ ಅಂದರೆ ಒಟ್ಟಿನಲ್ಲಿ ಮಾನಸಿಕ ಉದ್ವೇಗಗಳನ್ನು ನಿಂತ್ರಿಸುತ್ತದೆ.
ವಿವಾಹಗಳಲ್ಲಿ ಇದರ ಉಪಯೋಗಕ್ಕೆ ಬಹಳ ಮಹತ್ವವಿದೆ, ಅರಿಶಿಣಕ್ಕೆ ಸೋಂಕು ನಿವಾರಕ ಶಕ್ತಿಗಳಿವೆ, ಪೃಥ್ವಿಯ ಮೇಲೆ ಅನೇಕ ಲಹರಿ ಚಲಿಸುತ್ತಾ ಇರುತ್ತದೆ, ಆಧುನಿಕ ವಿಜ್ಞಾನಕ್ಕೂ ನಿಲುಕದ ಲಹರಿಗಳಿವು, ಇದು ಕೆಲವೊಮ್ಮೆ ದುಷ್ಪರಿಣಾಮವನ್ನೂ ಬೀರಬಹುದು, ಅದನ್ನು ನಿಂತ್ರಿಸಲು ಈ ಅರಿಶಿಣ ಕೊಂಬು(ಗಿಣ್ನು)ಗಳು ತುಂಬಾ ಸಹಕರಿಸುತ್ತದೆ, ಸಮಾನ್ಯವಾಗಿ ಅಪರೇಷನ್ ಥಿಯೇಟರ್ ಗಳಲ್ಲಿ ಅಪರೇಷನ್ ಸರ್ಜರಿ ಮಾಡುವಾಗ ಹಳದಿ ಬೆಳಕನ್ನು ಉರಿಸಿ ಪ್ರಜ್ಞೆ ತಪ್ಪಿಸುವ ವಿಧಾನಗಳಿತ್ತು.
ಇದರಿಂದ ನೋವಿನ ಅನುಭವ ಬರಬಾರದೆಂದು ಈ ವಿಧಾನವನ್ನು ಬಳಸಲಾಗಿತ್ತು, ಇಲ್ಲಿ ಕೂಡಾ ಬಾಹ್ಯದಿಂದ ಬರುವ ಕೆಲ ಉಗ್ರಸ್ವರೂಪದ ಶಕ್ತಿಗಳಿಂದುಂಟಾಗುವ ನೋವುಗಳು ತಗಲದಿರಲಿ ಎಂಬ ಒಂದು ವಿಧಾನ, ಇದೊಂದು ರೋಗನಿರೋಧಕ ಎಂದರೂ ತಪ್ಪಾಗದು ಮದುವೆಗೆ ಮುಂಚಿತವಾಗಿ ಪಂಚಗವ್ಯ ಕಲಶಾದಿಗಳೆಲ್ಲಾ ಒಂದೆಡೆ ಸಂಸ್ಕಾರ ಎಂದಾದರೆ ಇನ್ನೊಂದೆಡೆ ಚಿಕಿತ್ಸೆಯೂ ಆಗುತ್ತದೆ, ಕಲಶಗಳಲ್ಲಿ ಹಾಕುವ ತುಳಸಿ, ಅಶ್ವತ್ತದ ಚಿಗುರು, ಮಾವಿನ ತುದಿಗಳು ದ್ರವ ಆಮ್ಲಜನಕಗಳನ್ನು ಉತ್ಪತ್ತಿ ಮಾಡುವಂತದ್ದಾಗಿದೆ.