ರೇಷನ್ ಕಾರ್ಡ್ : ಜನಸಾಮಾನ್ಯರಿಗೆ ಆಹಾರ ಇಲಾಖೆ ನೀಡಿದೆ ಗುಡ್ ನ್ಯೂಸ್..!!

199

ನಮ್ಮ ರಾಜ್ಯದ ಜನರಿಗೆ ಸಿಹಿ ಸುದ್ದಿ, ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ಎಲ್ಲಾ ಜನರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ, ನಮ್ಮ ಮುಖ್ಯಮಂತ್ರಿಯವರು ನೀಡಿರುವ ಆ ಸಿಹಿ ಸುದ್ದಿ ಆದರೂ ಏನು ಅಂತೀರಾ ಆರು ತಿಂಗಳಿಂದ ರೇಷನ್ ಕಾರ್ಡ್ ಅಪ್ಲೈ ಮಾಡಿದವರಿಗೆ ರೇಷನ್ ಕಾರ್ಡ್ ಬಂದಿರಲಿಲ್ಲ, ರೇಷನ್ ಕಾರ್ಡ್ ಗಾಗಿ apply ಮಾಡಿದ ಜನಸಾಮಾನ್ಯರು ತಮ್ಮ ರೇಷನ್ ಕಾರ್ಡ್ ಇವತ್ತು ಬರುತ್ತೆ ನಾಳೆ ಬರುತ್ತೆ ಅಂತ ಕಾಯುತ್ತಲೇ ಇದ್ದಾರೆ, ಆದರೂ ಸಹ ರೇಷನ್ ಕಾರ್ಡ್ ಯಾರಿಗೂ ಸಿಕ್ಕಿರಲಿಲ್ಲ.

ಇನ್ನು ನೀವು ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದರೆ ನಿಮಗೆ ಅಂತಹ ಸಮಸ್ಯೆಗಳು ಇನ್ನೂ ಇರುವುದಿಲ್ಲ ರಾಜ್ಯ ಸರ್ಕಾರ 2017 ನೇ ಸಮಯದಲ್ಲಿ ಆನ್ಲೈನ್ ಮುಖಾಂತರ ರೇಷನ್ ಕಾರ್ಡ್ ಅನ್ನು ಪಡೆಯುವ ಅವಕಾಶವನ್ನು ಮಾಡಿಕೊಟ್ಟಿತ್ತು ಆದರೆ 2018 ರ ಮಾರ್ಚ್ ತಿಂಗಳಿನಿಂದ ರಾಜ್ಯ ವಿಧಾನಸಭೆಯ ಚುನಾವಣೆಯ ಸಲುವಾಗಿ ನೀತಿ ಸಂಹಿತೆ ಜಾರಿ ಗೊಂಡ ಸಲುವಾಗಿ ರೇಷನ್ ಕಾರ್ಡ್ ನೀಡುವುದನ್ನು ನಿಲ್ಲಿಸಲಾಗಿತ್ತು.

ಆದರೆ ದಿನಗಳಿಂದ ಅಂದರೆ ಸರಿ ಸುಮಾರು 8.30 ಲಕ್ಷ ಅರ್ಜಿಗಳಿಗೆ ರೇಷನ್ ಕಾರ್ಡ್ ನೀಡಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನಿರ್ಧಾರ ಮಾಡಿದೆ ಇಷ್ಟು ದಿನ ರಾಜ್ಯದ ಜನರು ತಮ್ಮ ರೇಶನ್ ಕಾರ್ಡ್ ಬಂದಿಲ್ಲ ನಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡೋಕೆ ಆಗಲ್ಲ ಮತ್ತು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಮಾಡಲು ಆಗಲ್ಲ ಎಂದು ತಲೆಕೆಡಿಸಿಕೊಂಡಿದ್ದರು ಆದರೆ ಇವತ್ತಿನಿಂದ ನೀವು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಬಹುದು ಮತ್ತು ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಮಾಡಬಹುದು.

ಈಗಾಗಲೇ ಅರ್ಜಿ ಹಾಕಿದವರಿಗೆ ಆದಷ್ಟು ಬೇಗ ನಿಮ್ಮ ರೇಷನ್ ಕಾರ್ಡ್ ನಿಮ್ಮ ಕೈಗೆ ಬಂದು ತಲುಪಲಿದೆ ಇನ್ನು ಮುಂದೆ ಬಡವರು ಯಾವುದೇ ರೀತಿಯ ಚಿಂತೆಯನ್ನು ಮಾಡಬೇಕಿಲ್ಲ ಯಾಕೆಂದರೆ ಸರಕಾರವು ಎಲ್ಲ ಬಡಜನರಿಗೆ ಅಂದರೆ ರೇಷನ್ ಕಾರ್ಡ್ ಇಲ್ಲದವರಿಗೆ ಮಾಡಿಸಿಕೊಳ್ಳಲು ಅವಕಾಶವನ್ನು ನೀಡಿದೆ

ಈ ಮಾಹತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here