ನಮಸ್ಕಾರ ಸ್ನೇಹಿತರೇ,ಸಾಮಾನ್ಯವಾಗಿ ವಯಸ್ಸು ಹೆಚ್ಚಾದಂತೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಹಾಗಾಗಿ ನಾವು ಬಹಳ ಜಾಗೂರಕರಾಗಿರಬೇಕು. ಹೌದು ಸ್ನೇಹಿತರೇ ವಯಸ್ಸಾದ ಹಾಗೆ ಬರುವ ಸಾಮಾನ್ಯ ಅರೋಗ್ಯ ಸಮಸ್ಯೆ ಎಂದರೆ ಅದು ಮಂಡಿ ನೋವು ಮತ್ತು ಕೀಲು ನೋವು ಸಮಸ್ಯೆ.ಈ ಸಮಸ್ಯೆ ಬಂದರಂತೂ ಜೀವನವೇ ಬೇಡ ಅನ್ನಿಸಿಬಿಡುತ್ತದೆ.ಎಷ್ಟೇ ಮಾರುಕಟ್ಟೆಯಲ್ಲಿ ಸಿಗುವ ಎಣ್ಣೆಗಳನ್ನು ಹಚ್ಚಿದರೂ ಕೂಡ ವಾಸಿಯಾಗುವುದಿಲ್ಲ ಹಾಗೆಯೆ ಎಷ್ಟೇ ವೈದ್ಯರ ಸಲಹೆ ತೆಗೆದುಕೊಂಡರೂ ಕೂಡ ಗುಣವಾಗುದಿಲ್ಲ ಹಾಗಾಗಿ ಇಂದು ನಾವು ಹೇಳುವ ಈ ಒಂದು ಎಣ್ಣೆಯನ್ನು ನೋವು ಬರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿದರೆ ಸಾಕು ನಿಮಗೆ ತಕ್ಷಣವೇ ಆ ನೋವಿನಿಂದ ಮುಕ್ತಿ ಸಿಗುತ್ತೆ ಹಾಗಾದ್ರೆ ಆ ಎಣ್ಣೆ ಯಾವುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಸ್ನೇಹಿತರೇ
ನಿಮಗೇನಾದರೂ ಮಂಡಿ ನೋವಿನ ಸಮಸ್ಯೆ ಹೆಚ್ಚಾಗಿದೆಯಾ ಈ ಮಂಡಿ ನೋವಿನ ಸಮಸ್ಯೆಗೆ ಏನೆಲ್ಲಾ ಪರಿಹಾರ ಮಾಡಿದರೂ ಫಲಿತಾಂಶ ಮಾತ್ರ ದೊರೆತಿಲ್ಲವ, ಹಾಗಾದರೆ ಈ ದಿನ ನಾವು ಹೇಳುವಂತಹ ಈ ಒಂದು ಮನೆ ಮದ್ದನ್ನು ನೀವು ಪಾಲಿಸುತ್ತಾ ಬನ್ನಿ ಸಾಕು ನೋಡಿ ಸ್ನೇಹಿತರೇ ನೀವು ಈ ಕೀಲು ನೋವಿನ ಸಮಸ್ಯೆಗೆ ಅಥವಾ ಮಂಡಿ ನೋವಿನ ಸಮಸ್ಯೆಗೆ ಎಷ್ಟೇ ಚಿಕಿತ್ಸೆಯನ್ನು ಪಡೆದುಕೊಂಡರೂ, ಅದು ನಿಮಗೆ ಬೇಗನೆ ನೋವನ್ನ ಶಮನ ಮಾಡುವುದಿಲ್ಲ, ಹಾಗೆ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆಯೇ ಹೊರತು ನಿಮಗೆ ಬೇಕಾಗಿರುವಂತಹ ಯಾವುದೇ ತರಹದ ಪರಿಹಾರವನ್ನು ಆಗಲಿ ಫಲಿತಾಂಶವನ್ನೆ ಆಗಲಿ ಈ ಮಾತ್ರೆಗಳು ನಿಮಗೆ ನೀಡುವುದಿಲ್ಲ.
ಈ ಮಂಡಿ ನೋವು ಬರುವುದು ಯಾವಾಗ ಅಂದರೆ ತೂಕ ಹೆಚ್ಚಾದಾಗ ಹೌದು ಯಾವಾಗ ತೂಕ ಹೆಚ್ಚುತ್ತದೆಯೊ, ಆಗ ನಮ್ಮ ಇಡೀ ದೇಹದ ತೂಕ ಮಂಡಿಗಳ ಮೇಲೆ ಪಾದಗಳ ಮೇಲೆ ಹೆಚ್ಚಾಗಿ ಬೀಳುತ್ತದೆ , ಈ ತೂಕವನ್ನು ಹೊತ್ತು ಮಂಡಿಗಳು ಸವೆತ ಆಗಿರುತ್ತದೆ, ಪಾದಗಳು ಕೂಡ ನೋವು ಬರುತ್ತದೆ.ಈ ಒಂದು ಮಂಡಿ ನೋವಿನ ಸಮಸ್ಯೆಗೆ ಪರಿಹಾರವಾಗಿ ನೀವು ಒಂದು ಮಸಾಜ್ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿ ಮಾಡಿಕೊಳ್ಳಬಹುದು ಇದನ್ನು ಮಾಡುವ ವಿಧಾನವು ಹೇಗೆ ಅಂದರೆ ಮೊದಲಿಗೆ ನೀವು ಎಳ್ಳೆಣ್ಣೆಯನ್ನು ತೆಗೆದುಕೊಳ್ಳಬೇಕು,ಈ ಎಳ್ಳೆಣ್ಣೆಯನ್ನು ಸ್ವಲ್ಪ ಸಮಯ ಬಿಸಿ ಮಾಡಿ ನಂತರ ಏಳರಿಂದ ಎಂಟು ಬೆಳ್ಳುಳ್ಳಿಯ ಎಸಳುಗಳನ್ನು ತೆಗೆದುಕೊಂಡು ಇದರ ಸಿಪ್ಪೆ ಸುಲಿದು ಸಣ್ಣದಾಗಿ ಬೆಳ್ಳುಳ್ಳಿಯನ್ನು ಕತ್ತರಿಸಿಕೊಳ್ಳಬೇಕು.
ಎಳ್ಳೆಣ್ಣೆ ಬಿಸಿಯಾದ ಮೇಲೆ ಈ ಸಣ್ಣದಾಗಿ ಕತ್ತರಿಸಿದ ಬೆಳ್ಳುಳ್ಳಿ ಎಸಳುಗಳನ್ನು ಎಣ್ಣೆಯೊಳಗೆ ಹಾಕಿ ಎಣ್ಣೆ ಬಿಸಿ ಮಾಡಬೇಕು ಎಷ್ಟು ಸಮಯ ಈ ಎಣ್ಣೆಯನ್ನು ಬಿಸಿ ಮಾಡಬೇಕು ಅಂದರೆ, ಎಳ್ಳೆಣ್ಣೆ ಒಳಗೆ ಹಾಕಿರುವಂತಹ ಬೆಳ್ಳುಳ್ಳಿ ಎಸಳುಗಳು ಸಂಪೂರ್ಣವಾಗಿ ಬಣ್ಣ ಬದಲಾಗಬೇಕು, ಅಂದರೆ ಕಪ್ಪು ಬಣ್ಣಕ್ಕೆ ಬದಲಾದ ನಂತರ ಈ ಎಣ್ಣೆಯನ್ನು ಬಿಸಿ ಮಾಡುವುದನ್ನು ನಿಲ್ಲಿಸಿ ಇದೀಗ ಈ ಎಣ್ಣೆಯನ್ನು ಶೋಧಿಸಿ ಕೊಳ್ಳಿ ಉಳಿದ ಬೆಳ್ಳುಳ್ಳಿಯನ್ನು ಮಂಡಿ ನೋವು ಆದ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ.
ಇದನ್ನು ನೀವು ವಾರದವರೆಗೂ ಹದಿನೈದು ದಿನಗಳವರೆಗೂ ಶೇಖರಣೆ ಮಾಡಿ ಇಟ್ಟುಕೊಳ್ಳಬಹುದು ಈ ಎಣ್ಣೆಯನ್ನು ಹೇಗೆ ಮಸಾಜ್ ಮಾಡಿಕೊಳ್ಳಬೇಕು ಅಂದರೆ ನೀವು ಸ್ನಾನಕ್ಕೆ ಹೋಗುವ ಒಂದು ಗಂಟೆಯ ಮುನ್ನ ಈ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಇದೀಗ ಈ ಬಿಸಿ ಮಾಡಿಕೊಂಡ ಎಣ್ಣೆ ಅನ್ನು ಮಂಡಿಯ ಮೇಲೆ ಹಾಕಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು.ಮಸಾಜ್ ಮಾಡಿಕೊಂಡು ಹತ್ತು ನಿಮಿಷಗಳ ಬಳಿಕ ಈ ಮಂಡಿಗಳಿಗೆ ಅಂದರೆ ನೋವು ಇರುವ ಭಾಗಕ್ಕೆ ಶಾಖವನ್ನು ಕೊಡಬೇಕು, ಈ ರೀತಿ ಮಾಡುವುದರಿಂದ ಒಂದು ಪರಿಹಾರ ಕ್ರಮೇಣವಾಗಿ ಮಂಡಿ ನೋವಿನ ಸಮಸ್ಯೆಯನ್ನು ದೂರ ಮಾಡುತ್ತದೆ.
ಅಷ್ಟೇ ಅಲ್ಲ ನೀವು ಈ ಪರಿಹಾರದೊಂದಿಗೆ ಒಂದಿಷ್ಟು ವಿಚಾರಗಳನ್ನು ಕೂಡ ತಿಳಿದುಕೊಳ್ಳಬೇಕು ತಣ್ಣನೆ ನೀರನ್ನು ಆದಷ್ಟು ಕುಡಿಯುವುದನ್ನು ಕಡಿಮೆ ಮಾಡಿ ಮತ್ತು ಫ್ರಿಡ್ಜ್ ನಲ್ಲಿ ಇಟ್ಟ ಪದಾರ್ಥಗಳನ್ನು ಕೂಡ ಬಳಸುವುದನ್ನು ಆದಷ್ಟು ಕಡಿಮೆ ಮಾಡಿ, ಹಾಗೆ ತೂಕವನ್ನು ಇಳಿಸಿಕೊಳ್ಳಿ. ಈ ರೀತಿ ನೀವು ಮನೆ ಅಲ್ಲಿಯೆ ಮಂಡಿ ನೋವಿನ ಸಮಸ್ಯೆಗೆ ಪರಿಹಾರವನ್ನು ಮಾಡಿಕೊಳ್ಳುವುದರಿಂದ, ಒಂದೊಳ್ಳೆ ಪರಿಹಾರ ಫಲಿತಾಂಶ ನಿಮಗೆ ದೊರೆಯುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ