ತಲೆನೋವು ಉಷ್ಣ ಹಾಗೂ ಪಿತ್ತ ದಿಂದ ಬರುವುದು, ತಲೆಸುತ್ತು ಸಹ ಪಿತ್ತ ದಿಂದ ಬರುವುದು, ತಲೆನೋವಿಗೆ ಅನೇಕ ಕಾರಣಗಳು ಇವೆ, ತಲೆ ನೋವು ಮತ್ತು ತಲೆ ಸುತ್ತು ಬರದಂತೆ ತಡೆಯಲು ಹಲವಾರು ಸೂಚನೆಗಳನ್ನು ನೀಡಲಾಗಿದೆ.ದೊಡ್ಡಪತ್ರೆ ಸೊಪ್ಪು ಮತ್ತು ಒಂದೆರಡು ಹರಳು ಉಪ್ಪು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತಲೆಸುತ್ತು ದೂರವಾಗುವುದು.
ಹಣೆಗೆ ಶ್ರೀಗಂಧವನ್ನು ತೇಯ್ದು ಪಟ್ಟು ಹಾಕುವುದರಿಂದ ತಲೆನೋವು ಸಮಾನ ಗೊಳ್ಳುತ್ತದೆ.ಬೆಳ್ಳಿಯ ರಸದಿಂದ ಹಣೆಗೆ ಪಟ್ಟು ಹಾಕುವುದರಿಂದ ತಲೆನೋವು ಸಮಾನ ಗೊಳ್ಳುತ್ತದೆ.ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಪ್ರತಿದಿನ ಕುಡಿಯುವುದರಿಂದ ತಲೆಸುತ್ತು ದೂರವಾಗುವುದು.
ಈರುಳ್ಳಿಯನ್ನು ನಿರಂತರವಾಗಿ ಸೇವಿಸುವುದರಿಂದ ತಲೆನೋವನ್ನೂ ದೂರ ಮಾಡಬಹುದು.ದಾಲ್ಚಿನ್ನಿ ಚಕ್ಕೆ ಯನ್ನು ಅರೆದು ನಿಂಬೆರಸ ಬೆರೆಸಿ ಹಣೆಗೆ ಹಚ್ಚುವುದರಿಂದ ತಲೆನೋವು ದೂರವಾಗುವುದು.ನುಗ್ಗೆ ಸೊಪ್ಪು ಅರೆದು ಒಂದೆರಡು ಮೆಣಸನ್ನು ಸೇರಿಸಿ ಪುನಃ ಅರೆದು ಹಣೆಗೆ ಹಚ್ಚುವುದರಿಂದ ತಲೆನೋವು ದೂರವಾಗುವುದು, ನುಗ್ಗೆ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು ತಲೆನೋವನ್ನು ಸಮಾನ ಗೊಳಿಸುವುದು.
ಮೊಲೆ ಹಾಲನ್ನು ಹರಳೆಣ್ಣೆಯ ಜೊತೆ ಬೆರೆಸಿ ಹಣೆಯ ಹಚ್ಚುವುದರಿಂದ ತಲೆನೋವು ದೂರವಾಗುವುದು.ಹಸಿ ಶುಂಠಿಯನ್ನು ಅರೆದು ಹಣೆಗೆ ಹಚ್ಚುವುದರಿಂದ ತಲೆನೋವು ದೂರವಾಗುವುದು.ತಲೆನೋವಿನಲ್ಲಿ ಅರೆ ತಲೆನೋವು ಎಂಬ ಕಾಯಿಲೆ ಉಂಟು, ಅದನ್ನು ಹೋಗಲಾಡಿಸಲು ಹಸುವಿನ ಮೊಸರಿನ ಜೊತೆ ಕೆಂಪಕ್ಕಿ ಅನ್ನವನ್ನು ಸೂರ್ಯನು ಉದಯಿಸುವ ಮೊದಲೇ ತಿನ್ನಬೇಕು, ಹಾಗೆ ಹದಿನೈದು ದಿನಗಳ ಕಾಲ ಮಾಡಿದರೆ ಅರೆತಲೆನೋವು ದೂರವಾಗುವುದು.
ವಾಂತಿ ಆಗುತ್ತಿದ್ದರೆ ನಿಂಬೆರಸಕ್ಕೆ ಏಲಕ್ಕಿ ಪುಡಿ ಸಕ್ಕರೆ ನೀರು ಸೇರಿಸಿ ಶರಬತ್ತು ಮಾಡಿ ಕುಡಿದರೆ ತಲೆಸುತ್ತು ವಾಂತಿ ನಿಲ್ಲುವುದು.ಒಂದೇ ಕಡೆ ತಲೆ ನೋವು ಬರುತ್ತಿದ್ದರೆ ಸೇಬಿನ ಹಣ್ಣನ್ನು ಹೆಚ್ಚಿ ಸ್ವಲ್ಪ ಉಪ್ಪು ಬೆರೆಸಿಕೊಂಡು ತಿಂದರೆ ಸಾಕು ತಲೆನೋವು ಮಂಗಮಾಯ ಆಗುವುದು.ತಲೆಸುತ್ತು ಇರುವಾಗ ಬೇಯಿಸಿದ ನುಗ್ಗೆ ಸೊಪ್ಪು ನಿಂಬೆರಸ ಉಪ್ಪು ಸೇರಿಸಿ ತಿನ್ನುವುದರಿಂದ ಉಪಶಮನವಾಗುವುದು.
ಹಸುವಿನ ಹಾಲಿಗೆ ಜೇನು ತುಪ್ಪ ಬೆರೆಸಿ ಸೇವಿಸುವುದರಿಂದ ತಲೆನೋವು ದೂರವಾಗುವುದು.ಪಿತ್ತದಿಂದ ತಲೆಸುತ್ತು ಬರುವುದು ಜೀರಿಗೆ ಕಷಾಯ ಕೆ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ತಲೆ ಸುತ್ತು ಶಮನಗೊಳ್ಳುತ್ತದೆ.ನರಗಳ ಶಕ್ತಿ ವರ್ಧನೆಗೆ ಸಮತೋಲನ ಆಹಾರ ಸೊಪ್ಪು ತರಕಾರಿಗಳು ತಾಜಾ ಹಣ್ಣುಗಳು ಮೊಟ್ಟೆ ಹಾಲು ಸೇವಿಸಬೇಕು, ನರಗಳ ದೌರ್ಬಲ್ಯದಿಂದ ತಲೆನೋವು ಬರುವುದು, ನರಗಳ ದೌರ್ಬಲ್ಯದಿಂದ ಕಣ್ಣಿಗೆ ತೊಂದರೆ ಆಗುವುದು, ಕಣ್ಣುಗಳನ್ನು ಸರಿಯಾಗಿ ಸಂರಕ್ಷಿಸಿದರೆ ತಲೆನೋವು ದೂರವಾಗುವುದು.
ಗಮನಿಸಿ : ತಲೆನೋವಿಗೆ ನರಗಳ ದೌರ್ಬಲ್ಯ ಕಾರಣವಾಗುತ್ತದೆ, ನರಗಳ ದೌರ್ಬಲ್ಯ ತಲೆದೋರದಂತೆ ನೋಡಿಕೊಳ್ಳಬೇಕು, ಜೀವಸತ್ವಗಳ ಕೊರತೆಯಿಂದ ತಲೆನೋವು ಬರುವುದು, ಹೀಗಾಗದಂತೆ ನೋಡಿಕೊಂಡರೆ ತಲೆನೋವಿನಿಂದ ದೂರ ಇರಬಹುದು.ಬಿಡದೆ ಕಾಡುವ ಅತಿಯಾದ ತಲೆನೋವಿಗೆ 15 ಕ್ಕೂ ಹೆಚ್ಚಿನ ಮನೆಯ ಔಷಧ ಗಳು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.