ಸಪೋಟ ಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ ಒಂದು ವೇಳೆ ಗೊತ್ತಿಲ್ಲ ಅಂದರು ಚಿಕ್ಕಿ ಹಣ್ಣು ಎಂದಕೂಡಲೇ ಗೊತ್ತಾಗಿಬಿಡುತ್ತದೆ, ಈ ಹಣ್ಣಿನ ಮೂಲ ಮೆಕ್ಸಿಕೋ ಹಾಗು ವೆಸ್ಟ್ ಇಂಡೀಸ್, ಇನ್ನು ನಮ್ಮ ಕರ್ನಾಕಟದ ಕರಾವಳಿ ಹಾಗು ಒಳ ನಾಡುಗಳಲ್ಲಿ ಅತಿ ಹೆಚ್ಚು ಬೆಳೆಯುತ್ತಾರೆ, ಇತಿಹಾಸದ ಪ್ರಕಾರ ಪೋರ್ಚುಗೀಸರು ಭಾರತಕ್ಕೆ ಬಂದಾಗ ಹಲವಾರು ತರಕಾರಿ ಹಣ್ಣುಗಳ ಬೀಜಗಳನ್ನು ತಂದು ನೆಟ್ಟರಂತೆ ಅದರಲ್ಲಿ ಒಂದು ಹಣ್ಣು ಈ ರುಚಿಯಾದ ಸಪೋಟ ಹಣ್ಣು.
ಅರೋಗ್ಯ ಉಪಯೋಗಗಳು.
ದೃಷ್ಟಿ ದೋಷ ನಿವಾರಣೆ : ವಯಸ್ಸಾದವರಿ ಕಣ್ಣಿನಲ್ಲಿ ದೃಷ್ಟಿ ಕಡಿಮೆಯಾಗಲು ಮುಖ್ಯ ಕಾರಣ ಅವರ ಕಣ್ಣಿನಲ್ಲಿ ವಿಟಮಿನ್ ಎ ಕೊರೆತೆ ಇರುತ್ತದೆ, ಸಪೋಟ ಹಣ್ಣಿನಲ್ಲಿ ವಿಟಮಿನ್ ಎ ಅಧಿಕವಾಗಿದ್ದು ಈ ಹುಣ್ಣನ್ನು ದಿನಕ್ಕೆ ಒಂದರಂತೆ ತಿಂದರೆ ದೃಷ್ಟಿ ದೋಷ ನಿವಾರಣೆ ಖಂಡಿತ.
ಅಪಾರ ಶಕ್ತಿ : ಸಪೋಟ ಹಣ್ಣು ಸಿಹಿಯಾಗಿರುವುದರ ಜೊತೆಯಲ್ಲಿ ಗ್ಲುಕೋಸ್ ಶಕ್ತಿಯ ಅಂಶವನ್ನು ಅಧಿಕವಾಗಿ ಒಂದಿದೆ, ನಿಶಕ್ತಿ ಸಮಸ್ಯೆ ಇದ್ದವರು ಹಾಗು ಕ್ರೀಡಾಪಟುಗಳಿಗೆ ವೈದ್ಯರು ಈ ಹಣ್ಣನ್ನು ತಿನ್ನಲು ಸಲಹೆ ನೀಡುವುದು ಇದೆ ಕಾರಣಕ್ಕೆ.
ಉರಿಯೂತ ನಿರೋಧಕ : ಸಪೋಟದಲ್ಲಿ ಟ್ಯಾನಿನ್ ಅಂಶ ಹೆಚ್ಚಿದ ಇದರಿಂದ ಅನ್ನನಾಳ ಉರಿಯೂತ, ಕರುಳಿನ ಉರಿಯೂತ, ಜಠರ ಉರಿಯೂತಗಳನ್ನೂ ಶಮನಗೊಳಿಸಿ ಜೀರ್ಣಾಂಗ ವೆವಸ್ತೆಯನ್ನು ಉತ್ತಮಗೊಳಿಸುತ್ತದೆ, ಯಾವುದೇ ದೇಹದ ಉರಿಯೂತ ಸಮಸ್ಯೆಗೆ ಸಪೋಟ ಒಂದು ಒಳ್ಳೆ ಮನೆಮದ್ದು.
Originally posted on September 15, 2018 @ 2:06 am