ಹುಳುಕಡ್ಡಿ, ಇಸಬು, ಕರಪಾಣಿ ಇತ್ಯಾದಿ ಚರ್ಮ ರೋಗಗಳಿಗೆ ರಾಮಬಾಣ ಈ ಕಾಯಿ..!!

236

ಜಾಪತ್ರೆ ಮತ್ತು ಜಾಯಿಕಾಯಿಗಳನ್ನು ಅಡಿಕೆಪುಡಿಯೊಂದಿಗೆ ಸೇರಿಸಿ ಬಳಸುವರು ಇದು ಲೈಂಗಿಕ ಕ್ರಿಯೆಯನ್ನು ಪ್ರಚೋದಿಸುವುದು ಜೀರ್ಣಶಕ್ತಿ ಹೆಚ್ಚಿಸುವುದು.

ದೇಹಾಲಸ್ಯದಿಂದ ಅಳುಗರೆಯುವ ಮಗುವಿಗೆ ಜೇನುತುಪ್ಪದಲ್ಲಿ ಜಾಯಿಕಾಯಿ ತೇದು ಸ್ವಲ್ಪ ಗಂಧವನ್ನು ನೆಕ್ಕಿಸಿದರೆ ಮಗು ಚೆನ್ನಾಗಿ ನಿದ್ರಿಸುವುದು.

ರೋಗಿಯ ಜೊಲ್ಲು ರಸದಲ್ಲಾಗಲಿ ಮೂತ್ರದಲ್ಲಾಗಲಿ ಜಾಯಿಕಾಯಿ ತೇದು ಆ ಗಂಧ ಹಚ್ಚಿದರೆ ಹುಳುಕಡ್ಡಿ ಇಸಬು ಕರಪಾಣಿ ಇತ್ಯಾದಿ ಚರ್ಮ ರೋಗಗಳು ಗುಣವಾಗುತ್ತವೆ.

ಅಂಗಸುಖ ಅನುಭವಿಸುವುದಕ್ಕೆ ಒಂದು ಗಂಟೆ ಮುಂಚೆ ಜೇನುತುಪ್ಪದಲ್ಲಿ ಕಲಸಿದ ಜಾಯಿಕಾಯಿ ಚೂರ್ಣ ಸೇವಿಸಿದರೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಉಲ್ಲಾಸ ಕಂಡುಬರುವುದು ಮತ್ತು ವೀರ್ಯ ವಿಸರ್ಜನೆ ತಡವಾಗಿ ಆಗುವುದು.

ಜಾಯಿಕಾಯಿ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ಸೇವಿಸಿದರೆ ಅಜೀರ್ಣದ ದೆಸೆಯಿಂದ ತಲೆದೋರುವ ಭೇದಿ ನಿಲ್ಲುವುದು.

ಒಂದು ಊಟದ ಚಮಚ ನೆಲ್ಲಿಕಾಯಿ ರಸದಲ್ಲಿ 1 ಚಿಟಿಕೆ ಜಾಯಿಕಾಯಿ ಚೂರ್ಣ ಸೇರಿಸಿ ದಿನಕ್ಕೆ ಮೂರಾವರ್ತಿಯಂತೆ ಸೇವಿಸುತ್ತಿದರೆ ಅಜೀರ್ಣ ದೈನಂದಿನ ಚಟುವಟಿಕೆಗಳಲ್ಲಿ ಅನಾಸಕ್ತಿ ಮಾನಸಿಕ ಉದ್ವೇಗ ಬಿಕ್ಕಳಿಕೆ ಮೆರಗುಳಿತನ ಈ ಲಕ್ಷಣಗಳುಳ್ಳ ರೋಗಿಗಳಲ್ಲಿ ಕ್ರಮೇಣ ಸುಧಾರಣೆ ಕಂಡುಬರುವುದು ಆದರೆ ಜಾಯಿಪತ್ರೆಯನ್ನಾಗಲಿ ಜಾಯಿಕಾಯಿಯನ್ನಾಗಲಿ ಅವಶ್ಯಕತೆಗಿಂತ ಹೆಚ್ಚು ಪ್ರಮಾಣದಲ್ಲಿ ಬಳಸಿದ್ದೇ ಆದಲ್ಲಿ ದೇಹಕ್ಕೆ ಹಾನಿಉಂಟಾಗುವುದು.

ಜಾಯಿಕಾಯಿಯನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ ಎಣ್ಣೆಯಲ್ಲಿ ಬೇಯಿಸಿಈ ಎಣ್ಣೆ ತಿಕ್ಕುವುದರಿಂದ ತಲೆಶೂಲೆ ಕೀಲು ನೋವು ಬಿಟ್ಟು ಹೋಗುವುದು ದೀರ್ಘಕಾಲದಿಂದ ಗುಣವಾಗದಿರುವ ವ್ರಣಗಳಿಗೂ ಈ ತೈಲ ಹಚ್ಚಬಹುದು.

LEAVE A REPLY

Please enter your comment!
Please enter your name here