ಬೇಲದ ಹಣ್ಣು ಇದನ್ನು ಇಂಗ್ಲಿಷ್ ನಲ್ಲಿ ಎಲಿಫ್ಯಾಂಟ್ ಆಪಲ್ ಎಂದು ಕರೆಯುತ್ತಾರೆ, ಈ ಬೇಲದ ಹಣ್ಣನ್ನು ಚಿಕ್ಕ ವಯಸ್ಸಿನಲ್ಲಿ ನಿಮಗೆ ತಿಂದು ಅಭ್ಯಾಸವಿದ್ದರೆ ಇದರ ರುಚಿಯು ನಿಮಗೆ ಗೊತ್ತಿರುತ್ತದೆ, ಭಾಗಶಹ ಈಗಿನ ಮಕ್ಕಳಿಗೆ ಈ ಬೇಲದ ಹಣ್ಣಿನ ಬಗ್ಗೆ ಗೊತ್ತಿರುವುದಿಲ್ಲ, ಈ ಬೇಲದ ಹಣ್ಣುನಲ್ಲಿ ಅನೇಕ ರೋಗ ನಿರೋಧಕ ಶಕ್ತಿಯೂ ಸಾಗರದಂತೆ ಅಡಗಿದೆ, ಪಿತ್ತವಿಕಾರ ವಾದಿ ವ್ಯಾಧಿಗಳಿಗೆ, ಕಫ ನಿವಾರಣೆಗೆ, ಬಾಯಿಂದ ಬರುವ ದುರ್ವಾಸನೆಗೆ ಹಾಗೂ ವಸಡುಗಳ ತೊಂದರೆಗಳಿಂದ ಬಳಲುತ್ತಿದ್ದವರಿಗೆ ಮತ್ತು ಆಮಶಂಕೆ ಬೇದಿ ನಿವಾರಣೆಗಾಗಿ ಬೇಲದ ಹಣ್ಣನ್ನು ನೀವು ಅತ್ಯುತ್ತಮವಾಗಿ ಬಳಸಿಕೊಳ್ಳಬಹುದು.
ಮಾರುಕಟ್ಟೆಯಲ್ಲಿ ಯಾವ ಹಣ್ಣುಗಳು ಯಾವ ಕಾಲದಲ್ಲಾದರೂ ದೊರೆಯುತ್ತವೆ ಆದರೆ ಬೇಲದ ಹಣ್ಣು ತುಂಬ ಅಪರೂಪವಾದದ್ದು, ಪಕ್ವವಾದ ಬೇಲದ ಹಣ್ಣು ದೊರಕಿದರೆ ಅದು ಒಂದು ಭಾಗ್ಯ, ಬೇಲದ ಹಣ್ಣಿನ ಹಲ್ವಾ, ತಿರುಳು, ಪಾನಕ ಇವೆಲ್ಲವೂ ಮೂಲವ್ಯಾಧಿ ಹಾಗೂ ಸಕ್ಕರೆ ಕಾಯಿಲೆಗೆ ದಿವ್ಯವಾದ ಔಷಧಿ.
ಬೆಲ್ಲ, ನೀರು ಮತ್ತು ಬೇಲದ ಹಣ್ಣನ್ನು ಚೆನ್ನಾಗಿ ಕಿವುಚಿ ಪಾನಕ ಮಾಡಿ ಕುಡಿಯುವುದರಿಂದ ಬಾಯಿಯಿಂದ ಹೊರಬರುವ ಕೆಟ್ಟ ವಾಸನೆ ನಿಲ್ಲುವುದು, ಬಾಯಾರಿಕೆ ಹಿಂಗಿ ಹೋಗುವುದು, ಮತ್ತು ಹೊಸ ಡಿ ನಿಂದ ಉಂಟಾಗುವ ರಕ್ತಸ್ರಾವ ನಿಂತು ಹೋಗುವುದು.
ಬೀಜ ತೆಗೆದ ಬೇಲದ ಹಣ್ಣಿನ ತಿರುಳಿಗೆ ಕೆಂಪು ಕಲ್ಲು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ ತಿನ್ನುವುದರಿಂದ ಆಮಶಂಕೆ ಮತ್ತು ಮೂಲವ್ಯಾಧಿ ಗುಣವಾಗುವುದು.
ಬೇಲದ ಹಣ್ಣನ್ನು ಅವರಿಗೆ ಸೇವಿಸುವುದರಿಂದ ಪಿತ್ತವಿಕಾರ ದೂರವಾಗುತ್ತದೆ.
ಬೇಲದ ಹಣ್ಣಿನ ತಿರುಳಿನಲ್ಲಿ ಗೆ ಬೆಲ್ಲ ಸೇರಿಸಿ ಸೇವಿಸುವುದರಿಂದ ಪಿತ್ತ ಶಾಂತಿ ಆಗುವುದು ಮತ್ತು ಕಫ ನಿವಾರಣೆ ಆಗುವುದು.
ಬೇಲದ ಹಣ್ಣಿನ ಅತ್ಯುತ್ತಮ ಆರೋಗ್ಯ ಗುಣಗಳು ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಷಯ.