ಒಣದ್ರಾಕ್ಷಿ ಸೇವಿಸುವುದರಿಂದ ಎಲುಬುಗಳು ಬಲಗೊಳ್ಳುವುದು ರಕ್ತ ವೃದ್ಧಿಯಾಗುವುದು ಇನ್ನು ಅನೇಕ ಉಪಯೋಗಗಳಿಗಾಗಿ ಒಮ್ಮೆ ಓದಿ..!!

266

ಒಣದ್ರಾಕ್ಷಿಯಲ್ಲಿ ಪ್ರತಿಶತ ಎಂಬತರಷ್ಟು ಸಕ್ಕರೆಯ ಅಂಶವಿದೆ ಈ ಸಕ್ಕರೆಯು ದೇಹದೌರ್ಬಲ್ಯವನ್ನು ನಿವಾರಿಸುವುದು ಕ್ಷಯರೋಗಿಗಳು ಒಣ ದ್ರಾಕ್ಷಿ ಸೇವಿಸುವುದರಿಂದ ರಕ್ತ ಸಂಚಯವಾಗುವುದು ಯಾವುದೇ ರೋಗದ ಚಿಕಿತ್ಸೆಯ ಅವಧಿಯಲ್ಲಿ ಒಣದ್ರಾಕ್ಷಿ ಸೇವಿಸುತ್ತಿದ್ದರೆ ರೋಗ ಬೇಗ ಗುಣವಾಗುವುದು.

ಚರಕ ಮುನಿಗಳ ಪ್ರಕಾರ ಫಲಗಳಲ್ಲಿ ಒಣದ್ರಾಕ್ಷಿಯ ಶ್ರೇಷ್ಠ ಒಣದ್ರಾಕ್ಷಿಯನ್ನು ಒಂದೆರಡು ತಿಂಗಳ ಕಾಲ ಆಹಾರವಾಗಿ ಬಳಸುತ್ತಿದ್ದರೆ ಗುಣಪಡಿಸಲಾಗದ ರೋಗಗಳು ಗುಣವಾಗಿರುವ ಸಂದರ್ಭಗಳು ಉಂಟು ಆದರೆ ಈ ಅವಧಿಯಲ್ಲಿ ಮತ್ತಾವ ಆಹಾರವನ್ನು ಸೇವಿಸಬಾರದು.

ರಾತ್ರಿಯ ವೇಳೆ ಒಂದು ಹಿಡಿ ಒಣದ್ರಾಕ್ಷಿಯನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಅಥವಾ ಮೊಸರಿನಲ್ಲಿ ನೆನೆಹಾಕಿ ಮರುದಿನ ಬೆಳಗ್ಗೆ ನೀರು ಅಥವಾ ಹಾಲು ಅಥವಾ ಮೊಸರಿನ ಸಮೇತ ದ್ರಾಕ್ಷಿಯನ್ನು ಸೇವಿಸುವುದು ಉತ್ತಮ ಇದು ಸಂತುಲನ ಭೋಜನಕ್ಕೆ ಸಮ ದ್ರಾಕ್ಷಿಯನ್ನು ಆಹಾರದೊಂದಿಗೆ ಬಳಸುವುದರಿಂದ ನಾವು ಸೇವಿಸುವ ಆಹಾರವು ಅತ್ಯಂತ ರುಚಿಕರವೂ ಪುಷ್ಠಿಕರವೂ ಆಗಿರುವುದು.

ಒಣದ್ರಾಕ್ಷಿ ಸೇವಿಸುವುದರಿಂದ ಮಲಬದ್ಧತೆ ಅಜೀರ್ಣ ಲೈಂಗಿಕ ಅಶಕ್ತತೆ ನಿವಾರಣೆಯಾಗುವುದು ದೇಹದಲ್ಲಿ ಲವಲವಿಕೆ ಉಂಟಾಗುವುದು.

ಒಣದ್ರಾಕ್ಷಿಯಲ್ಲಿ ಕಬ್ಬಿನ ಮತ್ತು ಸುಣ್ಣದ ಅಂಶವಿರುವುದು ಈ ಹಣ್ಣನ್ನು ಸೇವಿಸುವುದರಿಂದ ಎಲುಬುಗಳು ಬಲಗೊಳ್ಳುವುದು ರಕ್ತ ವೃದ್ಧಿಯಾಗುವುದು ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಒಂದು ಹಿಡಿ ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಮರುದಿನ ಬೆಳಿಗ್ಗೆ ಆ ನೀರಿನಲ್ಲಿ ದ್ರಾಕ್ಷಿಯನ್ನು ಚೆನ್ನಾಗಿ ಕಿವುಚಿ ನೀರನ್ನು ಬಸಿಯಿರಿ ಹೀಗೆ ಬಸಿದ ನೀರನ್ನು ಕುಡಿಯುತ್ತಿದ್ದರೆ ಹಳೆಯ ಚರ್ಮ ರೋಗಗಳು ಬೇಗ ಗುಣವಾಗುವುದು.

ಜೊತೆಗೆ ಇದನ್ನು ಓದಿ ನೇರಳೆ ಹಣ್ಣಿನ ರಸ ಜೀರ್ಣಕಾರಕ ಪಿತ್ತ ಶಾಮಕ ಮತ್ತು ದಾಹ ನಾಶಕ ಗುಣವುಳ್ಳದು.

ನೇರಳೆ ಹಣ್ಣನ್ನು ಚೆನ್ನಾಗಿ ಸೇವಿಸುವುದರಿಂದ ಕೆಮ್ಮು ಬರುವುದು ಆದರೆ ಉಪ್ಪು ಮತ್ತು ಕರಿಮೆಣಸಿನ ಪುಡಿಯೊಂದಿಗೆ ನೇರಳೆ ಹಣ್ಣು ತಿಂದರೆ ಯಾವ ಹಾನಿಯೂ ಆಗದು.

ನೇರಳೆ ಹಣ್ಣಿನ ರಸದಿಂದ ಶರಬತ್ತು ತಯಾರಿಸಬಹುದು ಈ ಶರಬತ್ತನ್ನು ಸೇವಿಸುವುದರಿಂದ ನೀರಿನಂತಾಗುವ ಭೇದಿ ನಿಲ್ಲುವುದು.

ಅಂಗಾಲು ಅಂಗೈ ಉರಿ ಕಣ್ಣುರಿ ಮೂಲವ್ಯಾಧಿ ಅಲ್ಪಾಂಶ ಮೂತ್ರ ವಿಸರ್ಜನೆ ಕಣ್ಣಿಗೆ ನಿದ್ದೆ ಹತ್ತದಿರುವುದು ಈ ಸಂದರ್ಭ ಗಳಲ್ಲಿ ಒಂದು ಬಟ್ಟಲು ನೇರಳೆಹಣ್ಣಿನ ಶರಬತ್ತನ್ನು ಒಂದು ಊಟದ ಚಮಚ ಜೇನುತುಪ್ಪದೊಂದಿಗೆ ಸೇವಿಸಿದರೆ ಗುಣ ಉಂಟು.

ಎಳೆ ನೇರಳೆ ಎಲೆಗಳ ಕಷಾಯ ತಯಾರಿಸಿ ನಾಲ್ಕೈದು ಊಟದ ಚಮಚ ಕಷಾಯವನ್ನು ದಿನಕ್ಕೆ ಮೂರಾವರ್ತಿಯಂತೆ ಸೇವಿಸಿದರೆ ಆಮಶಂಕೆ ಮೂಲವ್ಯಾದಿ ಈ ರೋಗಗಳಿಂದನರಳುವವರು ಗುಣಮುಖರಾಗುವರು.

ನೇರಳೆ ಎಲೆಗಳನ್ನು ಅರೆದು ಹಚ್ಚುವುದರಿಂದ ಸುಟ್ಟ ಗಾಯದ ಕಲೆಗಳು ಕ್ರಮೇಣ ಅಳಿಸಿ ಹೋಗುವುದು.

ಎಳೆಯ ನೇರಳೆ ಎಲೆಗಳನ್ನು ಹಲ್ಲುಗಳಿಂದ ಚೆನ್ನಾಗಿ ಅಗಿಯುವುದರಿಂದ ವಸಡು ಮತ್ತು ಹಲ್ಲುಗಳಿಂದ ಆಗುವ ರಕ್ತಸ್ರಾವ ನಿಲ್ಲುವುದು ಹಲ್ಲುಗಳು ಗಟ್ಟಿಯಾಗುವುದು ಬಾಯಿಯಿಂದ ದುರ್ಗಂಧ ಹೊರಡುವುದಿಲ್ಲ.

LEAVE A REPLY

Please enter your comment!
Please enter your name here