ನೀವೇನಾದರೂ ಹಸಿ ಈರುಳ್ಳಿ ತಿನ್ನುತ್ತಿರಾ..? ಹಾಗಾದರೆ ಇಲ್ಲಿ ಒಮ್ಮೆ ಓದಿ.

159

ಹಸಿ ಈರುಳ್ಳಿಯಲ್ಲಿ ನೀವು ತಿಳಿಯದ ಹಲವು ಆರೋಗ್ಯಕಾರಿ ಲಾಭಗಳಿವೆ, ಪ್ರತಿ ದಿನ ಒಂದು ಹಸಿ ಈರುಳ್ಳಿ ಸೇವನೆ ಮಾಡಿದರೆ ಈ ಆರೋಗ್ಯಕಾರಿ ಲಾಭಗಳು ನಿಮ್ಮದಾಗುತ್ತವೆ, ಹಾಗಾದರೆ ಯಾವೆಲ್ಲ ರೀತಿಯಲ್ಲಿ ನಮ್ಮ ದೇಹಕ್ಕೆ ಹಸಿ ಈರುಳ್ಳಿ ಸಹಾಯಕವಾಗಿದೆ ಅನ್ನೋದನ್ನ ತಿಳಿಯೋಣ ಬನ್ನಿ.

ಮೊದಲನೆಯದಾಗಿ ಹಸಿ ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎನ್ನುವ ರಾಸಾಯನಿಕ ಇರುತ್ತದೆ, ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಯುದ್ಧಮಾಡಿ ಹೊರಡುವಷ್ಟು ಶಕ್ತಿಶಾಲಿ, ವಿಜ್ಞಾನಿಗಳು ಹಸಿ ಈರುಳ್ಳಿಯನ್ನು ತಿನ್ನುವ ಅಭ್ಯಾಸ ಇರುವವರಿಗೆ ಕ್ಯಾನ್ಸರ್ ಕಾಡುವ ಸಂದರ್ಭಗಳು ಕಡಿಮೆ ಎಂದಿದ್ದಾರೆ, ಅಲ್ಲದೆ ಹಸಿ ಈರುಳ್ಳಿ ದೇಹದ ಆರೋಗ್ಯಕ್ಕೆ ಶಕ್ತಿ ಕೊಡುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.

ಬೇಯಿಸಿದ ಅಥವಾ ಹುರಿದ ಈರುಳ್ಳಿಗಿಂತ ಹಸಿ ಈರುಳ್ಳಿಯಲ್ಲಿ ಆರ್ಗಾನಿಕ್ ಸಲ್ಫರ್ ಪ್ರಮಾಣ ಜಾಸ್ತಿ ಇರುತ್ತದೆ, ಅಲ್ಲದೇ ಯಾವುದೇ ಕ್ಯಾಲರಿ ಇಲ್ಲದೇ ಇರೋದ್ರಿಂದ ಎಲ್ಲಾ ವಯಸ್ಸಿನವರುಗೂ ಹಾಗೂ ಎಲ್ಲ ಬಗೆಯ ಜನರಿಗೂ ಇದು ಸೂಕ್ತವಾಗಿದೆ, ಹಸಿ ಈರುಳ್ಳಿಯನ್ನು ಪ್ರತಿದಿನ ಊಟದ ಜೊತೆ ತಿನ್ನುವ ಅಭ್ಯಾಸವಿರುವ ಅನೇಕರಿಗೆ ಬೊಜ್ಜಿನ ಸಮಸ್ಯೆ ಇರುವುದಿಲ್ಲ.

ಈರುಳ್ಳಿ ನಮ್ಮ ದೇಹದ ಆರೋಗ್ಯಕ್ಕೆ ಮಾತ್ರವನ್ನ ನಮ್ಮ ತ್ವಚೆಯ ಸೌಂದರ್ಯ ಹಾಗೂ ಕೂದಲ ಸೌಂದರ್ಯಕ್ಕೂ ಬಹಳ ಸಹಾಯಕ, ಹಸಿ ಈರುಳ್ಳಿಯಲ್ಲಿರುವ ಸತ್ವಾಂಶಗಳು ರಕ್ತನಾಳದಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತವೆ, ಹಾಗಾಗಿ ಹೃದ್ರೋಗದಿಂದ ದೂರ ಇರಿಸುವಲ್ಲಿ ಇವುಗಳ ಪಾತ್ರ ನಿಜಕ್ಕೂ ದೊಡ್ಡದೇ, ಇನ್ನು ದೇಹದ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಬಲಪಡಿಸುವುದರಿಂದ ಸಣ್ಣ ಪುಟ್ಟ ಸೋಂಕುಗಳು ದೇಹದ ಹತ್ತಿರವೂ ಸುಳಿಯದಂತೆ ಈರುಳ್ಳಿಯ ಗುಣಗಳು ದೇಹವನ್ನು ಸುರಕ್ಷಿತವಾಗಿಡುತ್ತದೆ.

LEAVE A REPLY

Please enter your comment!
Please enter your name here