ರಾಮಾಯಣದಲ್ಲಿ ಉಲ್ಲೇಖಿಸಿದಂತೆ ವ್ಯಾಸರಾಜರು ಚಕ್ರ ತೀರ್ಥ ಅನ್ನುವ ಪ್ರದೇಶದಲ್ಲಿ ತಪಸ್ಸು ಮಾಡುತ್ತಿರುವ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಆಂಜನೇಯನ ಚಿತ್ರವನ್ನು ಕಲ್ಲಿನ ಮೇಲೆ ಕೆತ್ತಿದ ರಂತೆ. ಅದರ ಫಲವಾಗಿ ಇವತ್ತು ದೊಡ್ಡ ಪ್ರಮಾಣದಲ್ಲಿ ಆಂಜನೇಯ ಮೂರ್ತಿ ಆ ಬಂಡೆಯ ಮೇಲೆ ಎದ್ದು ನಿಂತಿದೆ.
ಹಂಪಿಯು ಒಂದು ಪುಣ್ಯಕ್ಷೇತ್ರ ಇಲ್ಲಿ ಹಲವಾರು ರೀತಿಯ ದೇವಸ್ಥಾನಗಳನ್ನು ನೋಡಬಹುದು. ಹಾಗೆ ಹಾಗೆಯೇ ಎಲ್ಲಾ ಸುಂದರ ಶಿಲ್ಪಿಯ ಕೆತ್ತನೆಯನ್ನು ಕೂಡ ನೋಡಬಹುದಾಗಿದೆ. ಹಂಪಿಯನ್ನು ಪಂಪ ಎಂದು ಹಳೆ ಕಾಲದಲ್ಲಿ ಕರೆಯುತಿದ್ದರು. ಈ ಕ್ಷೇತ್ರವು ರಾಮಾಯಣ ಕಾಲದಿಂದಲೂ ಪ್ರಸಿದ್ಧಿ ಹೊಂದಿದ್ದು ರಾಮ ಮತ್ತು ಹನುಮಂತನ ಮೊದಲನೇ ಸಮಾಗಮ ಆಗಿರುವ ಕ್ಷೇತ್ರ ಅಂದು ಕೂಡ ಕೆಲವರು ಹೇಳುತ್ತಾರೆ. ಇಂಥ ಪುಣ್ಯಕ್ಷೇತ್ರದಲ್ಲಿ ಆಂಜನೇಯನ ನೆಲೆಸಿದ್ದಾನೆ .
ವಿಜಯನಗರ ಸಾಮ್ರಾಜ್ಯದಲ್ಲಿ ಮಹಾ ಗುರುಗಳ ಆದಂತಹ ವ್ಯಾಸರಾಜರು ಕೃಷ್ಣ ದೇವರಾಜರ ಆಡಳಿತವನ್ನು ಸುಗಮವಾಗಿ ಸಾಗಿಸಲು ಸದಾಕಾಲ ಹನುಮಂತನನ್ನು ಪೂಜಿಸುತ್ತಿದ್ದರು. ಕೃಷ್ಣ ದೇವರಾಜರ ಕಾರ್ಯದಕ್ಷತೆ ಯುವ ಸುಗಮವಾಗಿ ನಡೆಯಲು ಹಾಗೂ ವಿಜಯ್ ಸಾಮ್ರಾಜ್ಯ ಯಾವಾಗಲೂ ಸಂಪತ್ತಿನಿಂದ ಕೂಡಿರಲು ವ್ಯಾಸರಾಜರು ಹನುಮಂತನನ್ನು ಎಂದ ಇಂದ ಬಂಧಿಸಿ ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಗೊಳಿಸಿದ್ದಾರೆ. ಪುರಾಣದ ಪ್ರಕಾರ ಇಲ್ಲಿ ಹನುಮಂತನು ಯಾವುದೇ ಬೇಡಿಕೆ ಇಟ್ಟರು ಕೂಡ ಇಲ್ಲಿ ಬಂದಂತಹ ಜನಗಳಿಗೆ ಕಷ್ಟವನ್ನು ದೂರಮಾಡು ತಾನೆ.
ಇಲ್ಲಿ ಹರಿ ವಂತಹ ತುಂಗಭದ್ರ ನದಿ ಪೂರ್ವಾಭಿಮುಖವಾಗಿ ಹರಿದು ಉತ್ತರ ದಿಕ್ಕಿಗೆ ಬದಲಾಯಿಸಿಕೊಳ್ಳುತ್ತದೆ ಸ್ಥಳವೇ ಚಕ್ರತೀರ್ಥ , ಈ ನದಿ ಹರಿಯುವ ಪುಣ್ಯ ಸ್ಥಳದಲ್ಲಿ ಬೆಟ್ಟವೂ ಕೂಡ ಸ್ವರ್ಗದ ಮಡಿಲಲ್ಲಿ ಕೂಡಿಕೊಂಡಿದೆ ಆ ಕ್ಷೇತ್ರವೇ ಚಕ್ರತೀರ್ಥ ಇಲ್ಲಿ ನೀವು ಆಂಜನೇಯ ಸ್ವಾಮಿಯನ್ನು ಕಾಣಬಹುದಾಗಿದೆ.
ಚಕ್ರತೀರ್ಥ ಎನ್ನುವ ಒಂದು ಪುಣ್ಯಕ್ಷೇತ್ರ ಹೇಗೆ ಬೆಳೆದು ಬಂದಿದೆ?
ನಾನು ಉಲ್ಲೇಖಿಸಿದ ಹಾಗೆ ವ್ಯಾಸರಾಜರು ಚಕ್ರತೀರ್ಥ ಬಳಿಯಲ್ಲಿ ಇರುವಂತಹ ಬೆಟ್ಟದಲ್ಲಿ ಕುಳಿತುಕೊಂಡು ತಪಸ್ಸು ಮಾಡುತ್ತಿರುವ ಸಂದರ್ಭದಲ್ಲಿ ದೊಡ್ಡದಾಗಿ ಒಲೆಯ ಇಜ್ಜಿಲು ದೊಡ್ಡ ಗಾತ್ರದಲ್ಲಿ ಆಂಜನೇಯನ ಚಿತ್ರವನ್ನು ದೊಡ್ಡ ಬಂಡೆಯ ಮೇಲೆ ಬಿಡಿಸಿದ್ದರಂತೆ . ಆದರೆ ಕ್ಷಣಾರ್ಧದಲ್ಲಿ ಈ ಬಿಡಿಸಿದ ಚಿತ್ರವು ದೊಡ್ಡದಾಗಿ ಆಂಜನೇಯ ಮೂರ್ತಿ ಆಗಿ ಪರಿವರ್ತನೆ ಆಗಿಬಿಟ್ಟಿತು. ಇದಾದ ನಂತರ ವ್ಯಾಸರಾಜರು ಮತ್ತೆ ಇನ್ನೊಂದು ಬಂಡೆಯ ಮೇಲೆ ಚಿತ್ರ ಬರೆದರಂತೆ ಆ ಬಂಡೆಯು ಕೂಡ ಮೂರ್ತಿಯಾಗಿ ಪರಿವರ್ತನೆಯಾಯಿತು. ಇದನ್ನು ನೋಡಿ ಆಶ್ಚರ್ಯ ಚಕಿತ ಕೊಂಡು 12 ಬಾರಿ ಇದೇ ತರದ ಪ್ರಯತ್ನವನ್ನು ಮಾಡಿದರು. ಆದರೆ ಎಲ್ಲಾ ಪ್ರದೇಶದಲ್ಲೂ ಕೂಡ ಚಿತ್ರವು ಮೂರ್ತಿಯಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ವ್ಯಾಸರಾಜರು ಆಂಜನೇಯ ಸ್ವಾಮಿಯ ಈ ತರದ ಚಮತ್ಕಾರಗಳನ್ನು ಮಾಡುತ್ತಿದ್ದಾನೆ ಎಂದು ಗಮನಿಸಿ ಚಕ್ರದಲ್ಲಿ ಆತನನ್ನು ಬಂಧಿಸಬೇಕು ಎಂದು ಆ ಬಂಡೆಯ ಮೇಲೆ ಷಟ್ಕೋನ ಚಕ್ರವನ್ನು ಬರೆದು ಯಂತ್ರ ಬೀಜಾಕ್ಷರ ಗಳಿಂದ ಆಂಜನೇಯ ಸ್ವಾಮಿಯನ್ನು ಬಂಧಿಸಿ ಬಿಟ್ಟರು. ಬಂಧಿಸಿದರೆ ಇದರಿಂದ ಪುಣ್ಯಕ್ಷೇತ್ರ ಪುಣ್ಯಕ್ಷೇತ್ರದಲ್ಲಿ ಆಂಜನೇಯ ಅವರು ಕೂಡ ನೆಲೆಸಿದ್ದಾನೆ ಅನ್ನುವ ಪ್ರತೀತಿ ಇದೆ.
ಇದಾದ ನಂತರ ಈ ಕ್ಷೇತ್ರವು ಹೆಚ್ಚು ಪ್ರಸಿದ್ಧಿ ಆಗಿಬಿಟ್ಟಿತ್ತು. ಪುರಂದರದಾಸರು ವಿಜಯದಾಸರು ತುಂಬಾ ಜನಗಳು ಇಲ್ಲಿ ಬಂದು ಹೋಗಿ ಬಂಡೆಯ ಮೇಲೆ ಹಾಡಿ ಹೊಗಳಿದ್ದಾರೆ. ಹಾಗೆಯೇ ತುಂಬಾ ಸೋತ್ರಗಳು ಹಾಗೆ ಹಾಡುಗಳು ಈ ಚಕ್ರತೀರ್ಥ ಆಂಜನೇಯ ಸ್ವಾಮಿಯ ಮೇಲೆ ಬರೆದಿದ್ದಾರೆ. ಇದೊಂದು ವ್ಯಾಸರಾಜರು ಕೊಟ್ಟಿರುವಂತಹ ಒಂದು ಅಪರೂಪದ ಕೊಡುಗೆ ಕರ್ನಾಟಕ ರಾಜ್ಯಕ್ಕೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು.