ಗುಲ್ಕನ್ ಇದು ಗುಲಾಬಿ ಹೂವಿನ ಎಸಳುಗಳಿಂದ ಮಾಡಿದ ಒಂದು ಆರೋಗ್ಯದಾಯಕ ಜಾಮ್ ಗುಲ್ಕನ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಉತ್ತಮ ಪ್ರಯೋಜನ ಪಡೆಯಬಹುದು, ತಾಜಾ ಗುಲಾಬಿ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಬೆಲ್ಲ ಇಲ್ಲವೇ ಸಕ್ಕರೆ ಸೇರಿಸಿ ತಯಾರಿಸುವ ಗುಲ್ಕನ್‌ಗೆ ಶುಂಠಿಯನ್ನು ಬಳಸಲಾಗುತ್ತದೆ.
ಗುಲ್ಕನ್ ದೇಹದ ರಕ್ತವನ್ನು ಶುದ್ದೀಕರಿಸುತ್ತದೆ, ನಿಶಕ್ತಿ ದೂರ ಮಾಡುವ ಗುಣ ಹೊಂದಿರುವ ಗುಲ್ಕನ್ ದೇಹದಲ್ಲಿನ ಅನಗತ್ಯ ಅಂಶಗಳನ್ನು ಹೊರಹಾಕುತ್ತದೆ.
ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆನೋವನ್ನು ಶಮನ ಮಾಡುತ್ತದೆ, ಗರ್ಭಿಣಿಯರು ಗುಲ್ಕನ್ ಸೇವಿಸಿದರೆ ಹೆಚ್ಚು ಉತ್ತಮ.
ಗುಲ್ಕಂದ್ ದೇಹಕ್ಕೆ ತಂಪು ನೀಡುವುದಲ್ಲದೇ ದೇಹದಲ್ಲಿನ ನರಗಳ ಮೇಲೆ ಬೀಳುವ ಒತ್ತಡವನ್ನು ನಿವಾರಿಸಿ ಪೋಷಿಸುತ್ತದೆ.
ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಮಕ್ಕಳಲ್ಲಿ ಮೂಗಿನಲ್ಲಿ ರಕ್ತ ಬರುವ ಸಮಸ್ಯೆ ಕಾಣಿಸುತ್ತದೆ, ನಿಯಮಿತವಾಗಿ ಗುಲ್ಕಂದ್ ಸೇವನೆಯಿಂದ ಈ ಸಮಸ್ಯೆಯನ್ನು ತಡೆಯಬಹುದು.
ಫೈಬರ್ ಅಂಶ ಹೆಚ್ಚು ಪ್ರಮಾಣದಲ್ಲಿ ಹೊಂದಿರುವ ಗುಲ್ಕನ್ ಅನ್ನು ಮಕ್ಕಳಿಗೆ ಪ್ರತಿನಿತ್ಯ ನೀಡುವುದರಿಂದ ಮಲಬದ್ಧತೆ ದೂರಾಗುತ್ತದೆ, ಒಟ್ಟಿನಲ್ಲಿ ದೇಹವನ್ನು ತಂಪಾಗಿಡುವ ಗುಲ್ಕನ್ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಯೋಗವಾಗಿದೆ.
ಓದಿದ್ದು ನೆನಪಿನಲ್ಲಿ ಇರಬೇಕು ಅಂದ್ರೆ ಹೀಗೆ ಮಾಡಿ, ಉಪಯುಕ್ತ ಮಾಹಿತಿ.
ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಅವರ ಮಕ್ಕಳು ಹೆಚ್ಚಿನ ಅಂಕಗಳನ್ನ ಗಳಿಸ ಬೇಕು ಎಂಬುದಷ್ಟೇ ತಲೆಯಲ್ಲಿರುತ್ತದೆ, ಇಂತಹ ಒತ್ತಡವನ್ನ ಮಕ್ಕಳ ಮೇಲೆ ಹೇರಿದರೆ ಮಕ್ಕಳ ಮನಸ್ಥಿತಿ ಏನಾಗುತ್ತದೆ ಎಂದು ಯಾರು ಸಹ ಯೋಚಿಸುವುದಿಲ್ಲ, ಮಕ್ಕಳು ಕಷ್ಟ ಪಟ್ಟು ಓದಿದರೂ ತಲೆಯಲ್ಲಿರುವುದಿಲ್ಲ ಎಂದು ಹಲವು ಪೋಷಕರು ಕೊರಗುತ್ತಿರುತ್ತಾರೆ, ಅಂತಹ ಪೋಷಕರಿಗೆ ಇಲ್ಲಿದೆ ನೋಡಿ ಒಂದು ಕಿವಿ ಮಾತು.
ಹೆಚ್ಚಾಗಿ ಮಕ್ಕಳ ಮನಸ್ಸಿನಲ್ಲಿ ಎಕ್ಸಾಮ್ ಬಗ್ಗೆ ಹೆಚ್ಚು ಪ್ರೆಶರ್ ಇರುತ್ತದೆ, ಈ ಭಯದಿಂದಾಗಿ ಮಕ್ಕಳು ಎಲ್ಲಾ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ, ಆದರೆ ಅದೆ ವಿಷಯವನ್ನು ಅವರು ಸ್ವಲ್ಪ ಜೋರಾಗಿ ಓದಿದರೆ ಅವರ ಕಂಠವು ಸ್ಪಷ್ಟವಾಗುತ್ತದೆ ಜೊತೆಗೆ ಅವರಿಗೆ ವಿಷಯಗಳು ನೆನಪಿನಲ್ಲಿ ಉಳಿಯಲು ಸಹ ಸಹಾಯಕವಾಗುತ್ತದೆ, ಸಂಶೋಧನೆಯಲ್ಲಿ ತಿಳಿಸಿದಂತೆ ಮಾತನಾಡುವುದು ಹಾಗೂ ಆ ಮಾತನ್ನು ತಾನಾಗಿ ಕೇಳುವುದು ಯಾವುದೇ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಈ ಪ್ರಕ್ರಿಯೆಯನ್ನು ಪ್ರೊಡಕ್ಷನ್ ಇಫೆಕ್ಟ್ ಎಂದು ಕರೆಯಲಾಗುತ್ತದೆ, ಇದು ಮೆದುಳಿನ ಆರೋಗ್ಯಕ್ಕೆ ಮುಖ್ಯವಾಗಿದೆ ಎಂದು ಹೇಳಲಾಗುತ್ತದೆ, ಈ ಪ್ರೊಡಕ್ಷನ್ ಇಫೆಕ್ಟ್‌ನ ಪರಿಣಾಮ ಪ್ರಭಾವಶಾಲಿಯಾಗಿರುತ್ತದೆ, ಯಾಕೆಂದರೆ ತಾವು ಹೇಳಿದ ಶಬ್ಧಗಳನ್ನು ಮತ್ತೆ ಕೇಳಿದಾಗ ಮೆದುಳು ಇನ್ನಷ್ಟು ಚುರುಕಾಗುತ್ತದೆ, ನಂತರ ಅದು ಮೆದುಳಿನಲ್ಲಿ ಹೇಗಾದರು ಫೀಡ್ ಆಗುತ್ತದೆ, ಕೆನಡಾ ಯುನಿವರ್ಸಿಟಿ ಆಫ್ ವಾಟರಲುನ ಪ್ರೊಫೇಸರ್ ಕೊಲಿನ್ ಎಂ ಮೆಕ್‌ಲಾಯ್ಡ್ ಹೇಳುವಂತೆ ನಾವು ಯಾವುದೆ ಶಬ್ಧದಲ್ಲಿ ಕ್ರಿಯೆಯನ್ನು ಸೇರಿಸಿದರೆ ಅದನ್ನು ನಮ್ಮ ಮೆದುಳು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ, ಇದರಿಂದ ಆ ಶಬ್ಧಗಳು ತುಂಬಾ ಸಮಯದವರೆಗೂ ನೆನಪಿನಲ್ಲಿರುತ್ತವೆ.