23 ಬಿಳಿ ಸಾಸುವೆಗಳಿಂದ ಹೀಗೆ ಮಾಡಿದರೆ ನಿಮಗೆ ಯಾವ ದಿನವು ಯಾವುದೇ ತೊಂದರೆ ಆಗುವುದಿಲ್ಲ ಹಾಗೂ ದೈವಬಲ ನಿಮ್ಮ ಮೇಲೆ ಸದಾ ಇರುತ್ತದೆ.
ಹಾಯ್ ಸ್ನೇಹಿತರೆ ಜೀವನವನ್ನು ನಡೆಸಲು ನಾವು ವಿಧ ವಿಧವಾದ ವ್ಯಾಪಾರಗಳನ್ನು ಮಾಡುತ್ತೆವೆ ಹಾಗೆ ವ್ಯಾಪಾರಕ್ಕಾಗಿ ಚಲಿಸಬೇಕೆಂದರೆ ನಮಗೆ ವಾಹನದ ಅವಶ್ಯಕತೆ ಇದ್ದೇ ಇದೆ. ಈಗಂತೂ ಎಲ್ಲರ ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬೈಕ್ ಹಾಗೂ ರೈತರಾಗಿದ್ದಾರೆ ಒಂದು ಟ್ರ್ಯಾಕ್ಟರ್ ಹಾಗೂ ಕಾರುಗಳು ಎಲ್ಲರ ಮನೆಯಲ್ಲಿದೆ. ಆಗಿನ ಕಾಲದಲ್ಲಿ ರೈತರು ಚಕ್ಕಡಿಯನ್ನು ಬಳಸುತ್ತಿದ್ದರು ಹಾಗೆಯೇ ಊರಿಂದ ಊರಿಗೆ ಚಲಿಸಲು ಸೈಕಲ್ಲುಗಳನ್ನು ಉಪಯೋಗಿಸುತ್ತಿದ್ದರು ಸ್ನೇಹಿತರೇ ನೀವು ಏನೇ ಹೇಳಿ ಆಗಿನ ಕಾಲದಲ್ಲಿ ಇರುವ ವಾಹನಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದಾಗಿದ್ದು ಹಾಗೂ ಯಾವುದೇ ಹೆಚ್ಚಿನ ಖರ್ಚಿಲ್ಲದೆ ನಾವು ಊರಿಂದ ಊರಿಗೆ ಚಲಿಸುತ್ತಿದ್ದೆವು.
ಹಳ್ಳಿಗಳಲ್ಲಿ ಹೊಲಕ್ಕೆ ಹೋಗುವಾಗ ಚಕ್ಕಡಿಯನ್ನು ಬಳಸುತ್ತಿದ್ದರು ಇದಕ್ಕೆ ಯಾವುದೇ ಪೆಟ್ರೋಲ್-ಡೀಸೆಲ್ ಗಳ ಅವಶ್ಯಕತೆ ಇರಲಿಲ್ಲ ಮನೆಯಲ್ಲಿರುವ ಎತ್ತುಗಳನ್ನು ಬಂಡಿಗೆ ಕಟ್ಟಿ ಹೊಲಕ್ಕೆ ಹೋಗುತ್ತಿದ್ದರು ನಿಮಗೂ ನೆನಪಿರಬಹುದು ಇಂತಹ ಬಂಡಿಗಳಲ್ಲಿ ನಾವು ಎಷ್ಟೊಂದು ಜಾತ್ರೆಗಳಿಗೆ ಹೋಗುತ್ತಿದ್ದೆವು. ಇವುಗಳೆಲ್ಲಾ ತುಂಬಾ ಸಿಹಿ ನೆನಪುಗಳನ್ನು ಕೊಟ್ಟಿವೆ. ಸ್ನೇಹಿತರೆ ಆದರೆ ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳು ಸ್ಕೂಲ್ ಹೋಗಬೇಕೆಂದರೂ ಒಂದು ಬೈಕ್ ಬೇಕಾಗುತ್ತದೆ ಈಗಿನ ಕಾಲಕ್ಕೆ ತಕ್ಕಂತೆ ಎಲ್ಲಾ ಬದಲಾಗಿದೆ. ಗಾಡಿಗಳಲ್ಲಿ ನಾವು ಹೋಗುವಾಗ ತುಂಬಾ ಹುಷಾರಾಗಿರಬೇಕು ಯಾವುದೇ ತೊಂದರೆಗಳಿಲ್ಲದೆ ಮನೆಯನ್ನು ತಲುಪಬೇಕು. ಆದರೆ ಕೆಲವೊಬ್ಬರಿಗೆ ಗಾಡಿಯನ್ನು ತೆಗೆದುಕೊಂಡಮೇಲೆ ಅದರ ಮೇಲೆ ಹೋದಾಗಲೆಲ್ಲ ನಷ್ಟ ಆಗಿರುತ್ತದೆ
ಇನ್ನು ಕೆಲವೊಬ್ಬರಿಗೆ ಮೇಲಿಂದ ಮೇಲೆ ಆಕ್ಸಿಡೆಂಟ್ಗಳು ಆಗುತ್ತಿರುತ್ತವೆ. ಸ್ನೇಹಿತರೆ ಯಾವ ಸಮಯದಲ್ಲಿ ನಮಗೆ ಏನಾಗುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ ಆದರೆ ನಾವು ಸರ್ಕಾರದ ನಿಯಮಗಳಂತೆ ಹೆಲ್ಮೆಟ್ಗಳನ್ನು ಹಾಕಿಕೊಂಡು ಪ್ರಯಾಣ ಮಾಡುವುದು ತುಂಬಾ ಒಳ್ಳೆಯದು. ಯಾವುದೋ ಒಂದು ವ್ಯಾಪಾರಕ್ಕೆ ಹೊರಟಾಗ ಅಥವಾ ಯಾರನ್ನು ಊರಿಗೆ ತಲುಪಿಸಲು ಹೋದಾಗ ಆಕ್ಸಿಡೆಂಟ್ಗಳು ಆದರೆ ಜೀವನವೇ ತುಂಬಾ ದೊಡ್ಡ ಸಮಸ್ಯೆಯಲ್ಲಿ ಸಿಲುಕಿದಂತೆಯಾಗುತ್ತದೆ. ಇಂತಹ ಎಲ್ಲಾ ಸಮಸ್ಯೆಗಳಿಗೆ ಒಂದು ಚಿಕ್ಕ ಪರಿಹಾರವನ್ನು ಬಿಳಿ ಸಾಸುವೆಗಳಿಂದ ಒಂದು ಸಲ ಮಾಡಿ ನೋಡಿ ನಿಮಗೆ ಯಾವುದೇ ತೊಂದರೆಗಳು ಬರದಂತೆ ಮಾಡುತ್ತದೆ. ಚಿಕ್ಕಮಕ್ಕಳಿಗೆ ದೃಷ್ಟಿಯಾದರೆ ಸಾಸುವೆ ಕಾಳುಗಳಿಂದ ಮಗುವನ್ನು ನೀವಳಿಸಿ ದೃಷ್ಟಿಯನ್ನು ತೆಗೆಯುತ್ತಾರೆ.
ಇದು ಆಗಿನ ಕಾಲದಿಂದಲೂ ಬಂದಿರುವ ಪದ್ಧತಿ ಸ್ನೇಹಿತರೆ ಹಿಂದಿನ ದೊಡ್ಡ ಮನುಷ್ಯರು ಅಂದರೆ ಅನುಭವವುಳ್ಳವರು ಮಾಡಿರುವುದೆಲ್ಲ ಒಂದೊಂದು ಕಾರಣಕ್ಕೆ ಆಗಿರುತ್ತದೆ. ಈ ರೀತಿಯಾಗಿ ಮಗುವಿಗೆ ದೃಷ್ಟಿ ತೆಗೆದರೆ ಮಗುವಿಗೆ ಯಾವುದೇ ಅಥವಾ ಯಾರ ವಕ್ರದೃಷ್ಟಿಯು ಬೀಳುವುದಿಲ್ಲ ಎಂದು ನಂಬಿಕೆಯಿದೆ. ಅದೇ ರೀತಿಯಾಗಿ ಈ 23 ಬಿಳಿ ಸಾಸವೆಗಳನ್ನು ತೆಗೆದುಕೊಂಡು ಎಡಗೈಯಲ್ಲಿ ಹಿಡಿದುಕೊಂಡು ರೋಡಿನಲ್ಲಿ ಗಾಡಿಯನ್ನು ನಿಲ್ಲಿಸಿ ದೃಷ್ಟಿಯನ್ನು ತೆಗೆದ ಎಂದರೆ ನಿವಾಳಿಸಿ ಆ ಸಾಸುವೆಕಾಳು ಗಳನ್ನು ರೋಡಿನಲ್ಲಿ ಎಸೆದು ಬರಬೇಕು ಸಾಸುವೆಗಳನ್ನು ನಿವಾಳಿಸುವ ಮುಂಚೆ ಕೈಯಲ್ಲಿ ಹಿಡಿದುಕೊಂಡು ನಿಮಗೆ ಎಷ್ಟು ಬಾರಿ ಸಾಧ್ಯವಾದಷ್ಟು ಬಾರಿ ಗಣೇಶ ಮಂತ್ರವನ್ನು ಪಠಿಸಬೇಕು ವಿಘ್ನೇಶ್ವರನು ನಿಮಗೆ ಯಾವುದೇ ದೋಷ ಗಳಿಲ್ಲದೆ ಆರೋಗ್ಯವಾಗಿರಲು ನಿಮಗೆ ಆಶೀರ್ವದಿಸುತ್ತಾನೆ.
ಗಣಪತಿ ಆರಾಧನೆ ಮಾಡುವುದರಿಂದ ಸರ್ವ ಸಂಕಷ್ಟಗಳು ದೂರ ಆಗುತ್ತವೆ. ಗಣೇಶ ಮಂತ್ರ ಪಠಿಸುವುದರಿಂದ ಯಾವುದೇ ವಿಘ್ನಗಳು ನಿಮಗೆ ಬರುವುದಿಲ್ಲ. ಗಣೇಶ ಮಂತ್ರ ಹೀಗಿದೆ ಓಂ ಶ್ರೀಂ ಹಿಂ ಕ್ಲೀಂ ಗೌಂ ಗಂ ಗಣಪತಯೇ ವರ ವರದ ಸರ್ವ ಜನಂ ಮೇ ವಶಮಾನಯ ಸ್ವಾಹ ಎಂದು ಹೇಳಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ವಾಹನದಿಂದ ನಿಮಗೆ ಯಾವುದೇ ತೊಂದರೆಗಳು ಬರುವುದಿಲ್ಲ ಹಾಗೆ ನಿಮ್ಮ ವ್ಯಾಪಾರದಲ್ಲಿ ಲಾಭ ಕೂಡ ಸಿಗುತ್ತದೆ. ದೈವಬಲ ನಿಮ್ಮ ಮೇಲೆ ಸದಾ ಇರುತ್ತದೆ. ಸ್ನೇಹಿತರೆ ಇಂತಹ ಚಿಕ್ಕ ಪರಿಹಾರಗಳಿಂದ ಮಾಡಿ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ.