Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕಬ್ಬಿಣದ ಬಾಣಲಿಯಲ್ಲಿ ಇವನ್ನು ಹಾಕಿ ಹುರಿದರೆ ಸಾಕು ನಿಮಗೆ ಎಷ್ಟೇ ಕೆಟ್ಟ ಶತ್ರುಗಳು ಇದ್ದರೂ ಕೂಡ ಸರ್ವನಾಶವಾಗಿ ಹೋಗುತ್ತಾರೆ …!!!

ಭಾನುವಾರದಂದು ಒಂದು ಕಬ್ಬಿಣದ ಬಾಣಲಿಯಲ್ಲಿ ಇವುಗಳನ್ನು ಹುರಿದರೆ ನಿಮಗೆ ಯಾರ ಶತ್ರು ಕಾಟ ಇರುವುದಿಲ್ಲ.ಹಾಯ್ ಸ್ನೇಹಿತರೆ ಏನೇ ಆದರೂ ನಗು ನಗುತ್ತಾ ಜೀವನವನ್ನು ಸಾಗಿಸಬೇಕು. ಜೀವನದಲ್ಲಿ ನಮಗೆ ಎಷ್ಟು ಒಳ್ಳೆಯವರು ಸಿಗುತ್ತಾರೋ ಅಷ್ಟೇ ನಮಗೆ ಕೆಟ್ಟದ್ದನ್ನು ಬಯಸುವವರು ಸಿಗುತ್ತಾರೆ. ಇವರು ಕೆಟ್ಟವರು ಎನ್ನುವುದಕ್ಕಿಂತ ಹೊಟ್ಟೆಕಿಚ್ಚಿನಿಂದ ಇಂತಹ ಕೆಲಸಗಳನ್ನು ಮಾಡುತ್ತಿರುತ್ತಾರೆ. ನಮ್ಮ ಮೇಲೆ ವಶೀಕರಣ ಮಾಡುವುದು ಹಾಗೂ ನಮಗೆ ಮಾಟ ಮಂತ್ರ ಮಾಡಿಸುವುದು ಮತ್ತು ಪ್ರತಿನಿತ್ಯ ಬಂದು ಯಾವುದಾದರೂ ಒಂದು ವಿಷಯಕ್ಕೆ ಜಗಳವಾಡುವುದು ಮತ್ತು ಸಾಲ ಕೊಟ್ಟವರು ಹಾಗೂ ಸಾಲ ತೆಗೆದುಕೊಂಡವರು ಯಾರಿಂದಲಾದರೂ ನಿಮಗೆ ಮೇಲಿಂದ ಮೇಲೆ ತೊಂದರೆಗಳು ಆಗುತ್ತಿದ್ದರೆ ಈ ಒಂದು ಪರಿಹಾರವನ್ನು ಮಾಡಿ.

ಸ್ನೇಹಿತರೆ ಈ ಒಂದು ಪರಿಹಾರ ಅವರನ್ನು ನಾಶ ಮಾಡುವುದಿಲ್ಲ ಆದರೆ ಅವರಿಂದ ನಿಮಗೆ ತೊಂದರೆ ಆಗುವುದನ್ನು ಮಾತ್ರ ತಪ್ಪಿಸುತ್ತದೆ. ಏನೇ ಆದರೂ ಅವರು ಕೂಡ ಮನುಷ್ಯರು ಅವರಿಗೂ ಬುದ್ಧಿ ಬರುವವರೆಗೂ ಇಂತಹ ಕೆಲಸಗಳನ್ನು ಮಾಡುತ್ತಾರೆ ಅದಕ್ಕಾಗಿ ನಾವು ಅವರ ದಾರಿಯನ್ನೇ ಹಿಡಿಯಬಾರದು ಆದರೆ ಅವರಿಂದ ನಾವು ಮಾತ್ರ ದೂರ ಇರಬೇಕು ಹಾಗಾದರೆ ಈ ಒಂದು ಪರಿಹಾರವನ್ನು ನೀವು ಮನೆಯಲ್ಲೇ ಮಾಡಿ. ಭಾನುವಾರದಂದು ಈ ಪರಿಹಾರವನ್ನು ಮಾಡಬೇಕು. ಯಾವುದೇ ಭಾನುವಾರ ಆಗಲಿ 4ರಿಂದ 6 ಗಂಟೆಯವರೆಗೆ ರಾಹುಕಾಲ ಇರುತ್ತದೆ. ಈ ಸಮಯದಲ್ಲಿ ನೀವು ಈ ಪರಿಹಾರವನ್ನು ಮಾಡಬೇಕು. ಇದಕ್ಕೆ ಸಾಸುವೆಕಾಳು ಅಂದರೆ ಕಪ್ಪು ಸಾಸುವೆಕಾಳುಗಳು ಅಡುಗೆಗೆ ಬಳಸುವ ಸಾಸುವೆಕಾಳುಗಳು ಬೇಕು.

ಏಳು ಅಂಗಡಿಗಳಲ್ಲಿ 50 ಗ್ರಾಂ ಸಾಸಿವೆ ಕಾಳುಗಳನ್ನು ತರಬೇಕು ಏಳು ಏರಿಯಾದಿಂದ ತಂದರು ತುಂಬಾ ಒಳ್ಳೆಯದು. ಏಳು ಎನ್ನುವುದು ರಾಹುವಿನ ಸಂಖ್ಯೆಯಾಗಿದೆ 7*50 ಮಾಡಿದರೆ 350 ಆಗುತ್ತದೆ ಇದರಲ್ಲಿ 3 ಮತ್ತು 5 ಕೊಡಿಸಿದರೆ 8 ಸಿಗುತ್ತದೆ ಈ ಎಂಟು ಎನ್ನುವ ಸಂಖ್ಯೆ ಶನಿ ಗ್ರಹದ ಸಂಖ್ಯೆಯಾಗಿದೆ ಹಾಗಾಗಿ ನಮಗೆ ಇರುವ ಎಲ್ಲಾ ದೋಷಗಳು ನಿವಾರಣೆಯಾಗುತ್ತವೆ. ನಂತರ ಸ್ವಲ್ಪ ಎಳ್ಳೆಣ್ಣೆಯನ್ನು ತೆಗೆದುಕೊಳ್ಳಬೇಕು ಈಗ ಒಂದು ಕಬ್ಬಿಣದ ಬಾಳಿಗೆಯಲ್ಲಿ ಎಳ್ಳೆಣ್ಣೆಯನ್ನು ಹಾಕಿ ನಂತರ ಸಾಸುವೆ ಗಳನ್ನು ಹಾಕಿ ಚೆನ್ನಾಗಿ ಹುರಿಯಬೇಕು ಹುರಿಯುವಾಗ ನಿಮಗೆ ಯಾವ ಶತ್ರು ಇಂದ ನಷ್ಟ ಆಗುತ್ತಿದೆ ಹಾಗೂ ಕಷ್ಟಗಳು ಬರುತ್ತಿವೆ ಎಂದು ಅವರನ್ನು ಮನದಲ್ಲಿ ನೆನೆಸಿಕೊಳ್ಳಿ ಹಾಗೂ ನಿಮಗೆ ಮಾಡಿರುವ ಅನ್ಯಾಯವನ್ನು ಹೇಳಿಕೊಳ್ಳಿ

ಅವರಿಂದ ನಿಮಗೆ ತೊಂದರೆಯಾಗದಂತೆ ಬೇಡಿಕೊಳ್ಳಿ ಮೊದಲು ಗಣೇಶ ಮಂತ್ರವನ್ನು ಹೇಳಬೇಕು ಓಂ ಶ್ರೀಂ ರೀಂ ಕ್ಲೀಂ ಗೌಂ ಗಂ ಗಣಪತಿಯೇ ವರ ವರದ ಸರ್ವ ಜನಂ ಮೇ ವಶಮಾನಯ ಸ್ವಾಹ ಎಂದು ಹೇಳಿಕೊಳ್ಳಬೇಕು. ನಂತರ ಈ ಒಂದು ಮಂತ್ರವನ್ನು ಹೇಳಬೇಕು ಓಂ ಶ್ರೀಂ ರೀಂ ಶ್ಶ್ರೌಂ ದಮ್ ಜ್ವಾಲಾ ಜ್ವಾಲಾ ಶೋಲಿನಿ ದುಷ್ಟ ಗ್ರಹಂ ಹೂಂ ಫಟ್ ಸ್ವಾಹಾ ಎನ್ನಬೇಕು. ನಂತರ ಕೊನೆಯದಾಗಿ ಇನ್ನೊಂದು ಮಂತ್ರವನ್ನು ಹೇಳಬೇಕು. ಓಂ ಕೇಂ ಕಾಂ ಫಟ್ ಪ್ರಾಣಗ್ರಹಾಸಿ ಪ್ರಾಣಗ್ರಹಾಸಿ ಹೂಂ ಫಟ್ ಸರ್ವ ಶತ್ರು ಸಂಹಾರಣಾಯ ಶರಭ ಶಾಳುವಾಯ ಪಕ್ಷಿರಾಜಾಯ ಹೂಂ ಫಟ್ ಸ್ವಾಹ ಎಂದು ನಿಮಗೆ ಎಷ್ಟು ಸಲ ಸಾಧ್ಯವೋ ಅಷ್ಟು ಸಲ ಹೇಳಬೇಕು.

ಸ್ನೇಹಿತರೆ ಈ ರೀತಿಯಾಗಿ ಮಾಡಿ ಸಾಸುವೆ ಗಳನ್ನು ನಿಮ್ಮ ಮನೆಯ ಮುಂದೆ ಹಾಗೂ ಆಫೀಸಿನ ಮುಂದೆ ಅಥವಾ ನಿಮಗೆ ಎಲ್ಲಿ ತೊಂದರೆ ಬರುತ್ತಿದೆ ಅಲ್ಲಿ ಅವುಗಳನ್ನು ಸ್ವಲ್ಪ ಸ್ವಲ್ಪ ಹಾಕಬೇಕು. ಈ ರೀತಿಯಾಗಿ ಮಾಡಿದಮೇಲೆ ಅವರು ನಿಮ್ಮ ಸುದ್ದಿಗೆ ಬರುವುದಿಲ್ಲ ಹಾಗೂ ನಿಮ್ಮಿಂದ ಅವರು ಏನನ್ನೂ ಬಯಸುವುದಿಲ್ಲ ನೀವು ಕೂಡ ಅವರಿಂದ ದೂರವಿದ್ದು ಸಮಾಧಾನವಾಗಿ ನೆಮ್ಮದಿಯಿಂದ ಇರಬಹುದು. ಸ್ನೇಹಿತರೆ ಹಿತಶತ್ರುಗಳು ಆಗಿದ್ದರು ಅಥವಾ ಬೇರೆ ಯಾರು ಆಗಿದ್ದರೆ ಇಂಥವರಿಗೆ ಈ ಒಂದು ಪರಿಹಾರ ತುಂಬಾ ಸುಲಭವಾಗಿ ಹಾಗೂ ಒಳ್ಳೆಯದಾಗಿದೆ ಇದನ್ನು ನೀವು ಕೂಡ ಒಂದು ಸಲ ಮಾಡಿ ನೋಡಿ ನಿಮಗೆ ಒಳ್ಳೆಯ ಫಲಿತಾಂಶ ಸಿಕ್ಕರೆ ನಿಮ್ಮ ಕುಟುಂಬದವರಿಗೂ ಹಾಗೂ ಸ್ನೇಹಿತರಿಗೂ ತಿಳಿಸಿ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ