ನಿಮ್ಮ ಮನೆಯಲ್ಲಿ ಏಳಿಗೆ ಎನ್ನುವುದು ಆಗುತ್ತಿಲ್ಲ, ಮಾಟಮಂತ್ರದ ಪ್ರಯೋಗ ನಡೆದಿದ್ದರೆ, ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗುತ್ತಿದ್ದರೆ, ಇನ್ನು ನಿಮ್ಮ ಮನೆಯಲ್ಲಿ ಆರೋಗ್ಯ ಸಮಸ್ಯೆಯಿದ್ದರೆ, ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಸಮಸ್ಯೆ ಎದುರಾಗುತ್ತಿದ್ದರೆ, ಈ ಒಂದು ತಂತ್ರವನ್ನು ನಿಮ್ಮ ಮನೆಯಲ್ಲಿ ಒಮ್ಮೆ ಮಾಡಿ ನೋಡಿ, ವಿಶೇಷವಾದ ಪಾಸಿಟಿವ್ ಶಕ್ತಿ ಎನ್ನುವುದು ನಿಮ್ಮ ಮನೆಯಲ್ಲಿ ವೃದ್ಧಿಯಾಗುತ್ತದೆ. ನಿಮ್ಮ ಮನೆಯ ಎಲ್ಲಾ ಕಷ್ಟಗಳು ನಿವಾರಣೆಯಾಗಿ ನಿಮ್ಮ ಮನೆಯವರಿಗೆ ದೈವ ಬಲ ಹೆಚ್ಚಾಗುತ್ತದೆ. ಇನ್ನು ಈ ಪ್ರಯೋಗವನ್ನು ಯಾವ ರೀತಿ ಮಾಡಬೇಕು, ಹಾಗೂ ಹೇಗೆ ಮಾಡಬೇಕು ಎನ್ನುವುದನ್ನು ಸಂಪೂರ್ಣವಾಗಿ ನೋಡೋಣ ಬನ್ನಿ…
ಈ ಒಂದು ತಂತ್ರವನ್ನು ಮಾಡೋದಕ್ಕೆ ಅದ್ಭುತವಾದಂತಹ ಲಾವಂಚದ ಬೇರು ಬೇಕಾಗುತ್ತದೆ. ಈ ಲಾವಂಚದ ಬೇರನ್ನು ತೆಗೆದುಕೊಂಡು ಬಂದು ಈ ಪ್ರಯೋಗವನ್ನು ಮಂಗಳವಾರ ಮಾಡಬೇಕಾಗುತ್ತದೆ. ಈ ಪ್ರಯೋಗವನ್ನು ಮಾಡುವ ಮೊದಲು ಸ್ನಾನ ಮಾಡಿ ದೇವರ ಪೂಜೆ ಮುಗಿಸಿದ ನಂತರ ಈ ಪ್ರಯೋಗವನ್ನು ಮಾಡಬೇಕು. ಇನ್ನು ಮೊದಲು ಒಂದು ಗಾಜಿನ ಲೋಟದಲ್ಲಿ ನೀರನ್ನು ತಗೆದುಕೊಳ್ಳಬೇಕು. ಇನ್ನು ಈ ಗಾಜಿನ ಲೋಟಕ್ಕೆ ನೀರು ತುಂಬಿಸಿದ ನಂತರ ಇದಕ್ಕೆ ಕೊಂಚ ಕಲ್ಲುಪ್ಪನ್ನು ಹಾಕಬೇಕು. ನಾವು ಕಲ್ಲುಪ್ಪನ್ನು ಸಾಕಷ್ಟು ಬಾರಿ ದೃಷ್ಟಿ ತೆಗೆಯಲು ಬಳಸುತ್ತೇವೆ.
ಯಾವುದೇ ನೆಗಟಿವ್ ಎನರ್ಜಿಯನ್ನು ತೆಗೆಯುವ ಶಕ್ತಿ ಆ ಕಲ್ಲುಪಿಗೆ ಇರುತ್ತದೆ. ತದನಂತರ ದೇವರ ಕೊನೆಯಲ್ಲಿ ಇಟ್ಟಿರುವಂಥಹ ಹರಿಶಿಣವನ್ನು ತಗೆದುಕೊಂಡು ಅದನ್ನು ನೀರಿಗೆ ಸೇರಿಸಬೇಕು. ಎರಡು ಚಿಟಿಕೆ ಹರಶಿಣವನ್ನು ನೀರಿಗೆ ಹಾಕಿದ ನಂತರ, ಲಾವಂಚದ ಬೇರನ್ನು ತೆಗೆದುಕೊಂಡು ನಿಮ್ಮ ಮನೆ ದೇವರ ಹೆಸರಿನ ಜೊತೆಗೆ ತಾಯಿ ಚಾಮುಂಡೇಶ್ವರಿ ದೇವಿಯ ಹೆಸರನ್ನು ನೆನೆದು ನೀರಿಗೆ ಹಾಕಬೇಕು. ಇನ್ನು ಇದೆ ರೀತಿ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ನಮ್ಮ ಮನೆಯ ಎಲ್ಲಾ ದೃಷ್ಟಿ ದೋಷ ಹಾಗೂ ಎಲ್ಲಾ ಮಾಟ ಮಂತ್ರ ಪ್ರಭಾವಗಳು ನಿವಾರಣೆ ಆಗಬೇಕು ಎಂದು ನಿಮ್ಮ ಮನೆ ದೇವರ ಜೊತೆಗೆ ತಾಯಿ ದುರ್ಗಾ ದೇವಿಯ ಹೆಸರನ್ನು ಪ್ರಾರ್ಥಿಸಿಕೊಂಡು, ಈ ನಿಂಬೆ ಹಣ್ಣನ್ನು ನೀರಿಗೆ ಹಾಕಬೇಕು.
ಈ ನಿಂಬೆ ಹಣ್ಣು ಆ ಗಾಜಿನ ಲೋಟದಲ್ಲಿ ತೇಲುತ್ತಿರಬೇಕು, ಇನ್ನು ನಿಂಬೆ ಹಣ್ಣು ಪದೇ ಪದೇ ನೀರಿನಲ್ಲಿ ಮುಳುಗುತ್ತಿದ್ದರೆ, ನಿಮ್ಮ ಮನೆಗೆ ದೃಷ್ಟಿ ದೋಷವಾಗಿದೆ ಎಂದರ್ಥ. ಈ ಒಂದು ತಂತ್ರವನ್ನು ನೀವು ಮಂಗಳವಾರ ಶುರು ಮಾಡಬೇಕು. ಇನ್ನು ಮುಂದಿನ ಸೋಮವಾರ ಬೆಳ್ಳಿಗೆ ಅಥವಾ ಸಂಜೆ ಈ ಲೋಟದ ಪ್ರತಿಯೊಂದು ವಸ್ತುವನ್ನು ನೀವು ಬದಲಾಯಿಸಬೇಕು. ಇನ್ನು ಈ ಒಂದು ತಂತ್ರವನ್ನು ನೀವು ಮಾಡಿದ ಬಳಿಕ ನೀವು ಇದನ್ನು ಅಡುಗೆ ಮನೆ, ಮಲಗುವ ಕೋಣೆ ಹಾಗೂ ದೇವರ ಕೋಣೆ ಹೊರತು ಪಡಿಸಿ ಬೇರೆ ಎಲ್ಲಿ ಬೇಕಾದರೂ ಇಡಬಹುದು.
ಇನ್ನು ಈ ರೀತಿಯ ಪ್ರಯೋಗವನ್ನು ನೀವು ಪ್ರತಿ ವಾರ ಮಾಡುವುದರಿಂದ ನಿಮ್ಮ ಮನೆಯ ಮೇಲಿನ ಎಲ್ಲಾ ದೃಷ್ಟಿ ದೋಷಗಳು ಹಾಗೂ ಎಲ್ಲಾ ಮಾಟ ಮಂತ್ರ ಪ್ರಯೋಗಗಳು ನಿವಾರಣೆಯಾಗುತ್ತದೆ. ಇನ್ನು ನಿಮ್ಮ ಮನೆಗೆ ಯಾರೇ ಸಂಬಂಧಿಗಳು, ಶತ್ರುಗಳು ಅಥವಾ ಅಕ್ಕ ಪಕ್ಕದ ಮನೆಯವರು ಬಂದರೆ, ಅವರು ನಿಮ್ಮ ಮೇಲೆ ಕೆಟ್ಟ ಯೋಚನೆ ಇಟ್ಟುಕೊಂಡಿದ್ದರೆ, ಆ ನಿಂಬೆ ಹಣ್ಣು ಮುಳುಗಿ ಹೋಗಿ ನಿಮಗೆ ಸೂಚನೆ ಕೊಡುತ್ತದೆ. ಇನ್ನು ಈ ನಿಂಬೆ ಹಣ್ಣು ಮುಳುಗಿದ ನಂತರ ತಕ್ಷಣ ಇದನ್ನು ಬದಲಿಸಿಬೇಕು. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..